ಮುಂಬೈ(ಮಹಾರಾಷ್ಟ್ರ): ಬಲಾಢ್ಯ ಆಸ್ಟ್ರೇಲಿಯಾ ಇಂದು ವಿಶ್ವಕಪ್ ಕ್ರಿಕೆಟ್‌ನ ಮತ್ತೊಂದು ಮಹತ್ವದ ಪಂದ್ಯಕ್ಕೆ ಅಣಿಯಾಗುತ್ತಿದೆ. ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಸೋತು, ಸತತ ಐದು ಪಂದ್ಯಗಳನ್ನು ಗೆದ್ದಿರುವ ಆಸೀಸ್ ಪಾಯಿಂಟ್ ಪಟ್ಟಿಯಲ್ಲಿ ಸದ್ಯ 3ನೇ ಸ್ಥಾನದಲ್ಲಿದೆ. ಇಂದು ಅಫ್ಘಾನಿಸ್ತಾನದ ಸ್ಪಿನ್ ದಾಳಿಯನ್ನು ಹೇಗೆ ಎದುರಿಸುತ್ತದೆ ಎಂಬುದು ಕ್ರಿಕೆಟ್ ಪ್ರೇಮಿಗಳ ಕುತೂಹಲ ಕೆರಳಿಸಿದೆ.
-
Game day in Mumbai!
— Cricket Australia (@CricketAus) November 7, 2023 " class="align-text-top noRightClick twitterSection" data="
Our Aussie men take on Afghanistan live from 7:30pm! 🇦🇺 pic.twitter.com/VNHw9soJVZ
">Game day in Mumbai!
— Cricket Australia (@CricketAus) November 7, 2023
Our Aussie men take on Afghanistan live from 7:30pm! 🇦🇺 pic.twitter.com/VNHw9soJVZGame day in Mumbai!
— Cricket Australia (@CricketAus) November 7, 2023
Our Aussie men take on Afghanistan live from 7:30pm! 🇦🇺 pic.twitter.com/VNHw9soJVZ
ಅಫ್ಘಾನಿಸ್ತಾನದ ನಂತರ ಆಸೀಸ್ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಎರಡರ ಪೈಕಿ ಒಂದನ್ನು ಗೆದ್ದರೂ ಸೆಮಿ ಫೈನಲ್ಗೆ ಪ್ರವೇಶ ಪಕ್ಕಾ. ಹೀಗಾಗಿ ಅಫ್ಘಾನಿಸ್ತಾನ ವಿರುದ್ಧ ಜಯಿಸಿ ಸೆಮಿಸ್ಗೆ ಲಗ್ಗೆಯಿಡಲು ಆಸೀಸ್ ಹವಣಿಸುತ್ತಿದೆ.
ಸತತ ಗೆಲುವಿನಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡರೂ ಆಸೀಸ್ ಮಧ್ಯಮ ಕ್ರಮಾಂಕದ ಪ್ರದರ್ಶನ ಅಷ್ಟೊಂದು ತೃಪ್ತಿಕರವಾಗಿರಲಿಲ್ಲ. ಮತ್ತೊಂದೆಡೆ, ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡಿರುವ ಅಫ್ಘಾನಿಸ್ತಾನ ಆಸ್ಟ್ರೇಲಿಯಾಕ್ಕೆ ಯಾವ ರೀತಿಯ ಪೈಪೋಟಿ ನೀಡಲಿದೆ ಎಂಬುದನ್ನು ಕಾದುನೋಡಬೇಕು.
-
📹: Glimpses from last night's practice session as @HamidHassanHH oversees the fast bowlers preparing for today's game against @CricketAus 👍#AfghanAtalan | #CWC23 | #AFGvAUS | #WarzaMaidanGata pic.twitter.com/POmGCx42D2
— Afghanistan Cricket Board (@ACBofficials) November 7, 2023 " class="align-text-top noRightClick twitterSection" data="
">📹: Glimpses from last night's practice session as @HamidHassanHH oversees the fast bowlers preparing for today's game against @CricketAus 👍#AfghanAtalan | #CWC23 | #AFGvAUS | #WarzaMaidanGata pic.twitter.com/POmGCx42D2
— Afghanistan Cricket Board (@ACBofficials) November 7, 2023📹: Glimpses from last night's practice session as @HamidHassanHH oversees the fast bowlers preparing for today's game against @CricketAus 👍#AfghanAtalan | #CWC23 | #AFGvAUS | #WarzaMaidanGata pic.twitter.com/POmGCx42D2
— Afghanistan Cricket Board (@ACBofficials) November 7, 2023
ಭಾರತ, ದಕ್ಷಿಣ ಆಫ್ರಿಕಾ ಸೋಲಿಸುವುದು ಕಷ್ಟ ಎಂದ ಸ್ಮಿತ್: ವಿಶ್ವಕಪ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಸೋಲಿಸುವುದು ಕಷ್ಟ ಎಂದು ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಸ್ಟೀವ್ ಸ್ಮಿತ್ ಹೇಳಿದ್ದಾರೆ. ಇಂದಿನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಸೆಮಿಫೈನಲ್ ಪ್ರವೇಶ ಪಡೆಯುತ್ತೇವೆ. ಅಫ್ಘಾನಿಸ್ತಾನ ಹೋರಾಡುವ ತಂಡ. ವಿಶ್ವಕಪ್‌ನಲ್ಲಿ ಕೆಲವು ಉತ್ತಮ ತಂಡಗಳನ್ನು ಅವರು ಸೋಲಿಸಿದ್ದಾರೆ. ಟೂರ್ನಿಯಲ್ಲಿ ನಿರ್ಣಾಯಕ ಸಮಯದಲ್ಲಿ ನಾವು ಪುಟಿದೆದ್ದೆವು. ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದರೂ ಸತತ ಗೆಲುವು ಸಾಧಿಸುತ್ತಿದ್ದೇವೆ. ಮುಂದೆ ದೊಡ್ಡ ಸವಾಲು ಎದುರಾಗಿದೆ ಎಂದರು.
ಸೆಮಿಫೈನಲ್‌ನಲ್ಲಿ ಭಾರತ, ದಕ್ಷಿಣ ಆಫ್ರಿಕಾ ತಂಡಗಳನ್ನು ಸೋಲಿಸುವುದು ಕಷ್ಟ. ಆದರೆ ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಮತ್ತು ಪರಿಸ್ಥಿತಿಗಳು ನಮಗೆ ಅನುಗುಣವಾಗಿದ್ದರೆ ಖಂಡಿತವಾಗಿಯೂ ಗೆಲ್ಲಬಹುದು ಎನ್ನುವುದು ಸ್ಮಿತ್ ಮಾತು. ಆರಂಭದಲ್ಲಿ ಲೆಗ್ ಸ್ಪಿನ್ನರ್ ಆ್ಯಡಮ್ ಝಂಪಾ ಎಡವಿದರೂ ಸಹ ಬೇಗನೆ ಫಾರ್ಮ್ಗೆ ಮರಳಿದರು. ಮುಖ್ಯವಾಗಿ ಇಂಗ್ಲೆಂಡ್ ವಿರುದ್ಧ ಅವರು ಬೌಲಿಂಗ್ನಲ್ಲಿ ಮಿಂಚಿದರು ಎಂದು ಸ್ಮಿತ್ ಮೆಚ್ಚುಗೆ ವ್ಯಕ್ತಪಡಿಸಿದರು.
- — Afghanistan Cricket Board (@ACBofficials) November 6, 2023 " class="align-text-top noRightClick twitterSection" data="
— Afghanistan Cricket Board (@ACBofficials) November 6, 2023
">— Afghanistan Cricket Board (@ACBofficials) November 6, 2023
ಅಫ್ಘಾನಿಸ್ತಾನ- ಸಂಭಾವ್ಯ ತಂಡ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಹಮತ್ ಷಾ, ನಾಯಕ ಹಶ್ಮತುಲ್ಲಾ ಶಾಹಿದಿ, ಅಜ್ಮತುಲ್ಲಾ ಒಮರ್ಜಾಯ್, ವಿಕೆಟ್ ಕೀಪರ್ ಇಕ್ರಮ್ ಅಲಿಖಿಲ್, ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ, ನೂರ್ ಅಹ್ಮದ್..
ಆಸ್ಟ್ರೇಲಿಯಾ- ಸಂಭಾವ್ಯ ತಂಡ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್/ಮಾರ್ನಸ್ ಲ್ಯಾಬುಸ್ಚಾಗ್ನೆ, ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ನಾಯಕ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಕಮರಿದ ಶ್ರೀಲಂಕಾ ಸೆಮೀಸ್ ಕನಸು.. ಬಾಂಗ್ಲಾಕ್ಕೆ 3 ವಿಕೆಟ್ ಜಯ