ETV Bharat / sports

ಕುತೂಹಲ ಘಟ್ಟದತ್ತ ವಿಶ್ವಕಪ್​ ಲೀಗ್​ ಪಂದ್ಯಗಳು.. ಸೆಮಿಸ್​ ಎಂಟ್ರಿಗೆ ಅಫ್ಘಾನ್​ಗೆ ಸಿಗುತ್ತಾ ಚಾನ್ಸ್​? - ಭಾರತ ತಂಡ ಈಗಾಗಲೇ ಅಧಿಕೃತವಾಗಿ ಸೆಮಿಸ್

ಪ್ರತಿಷ್ಠಿತ ODI ವಿಶ್ವಕಪ್​ನ ಸೆಮಿಸ್ ರೇಸ್ ಸುಗಮವಾಗಿ ಸಾಗುತ್ತಿದೆ. ಇನ್ನುಳಿದ ಲೀಗ್ ಪಂದ್ಯಗಳು ಕೇವಲ 11. ಸೆಮಿಫೈನಲ್‌ಗೆ ಇನ್ನು ಮೂರು ತಂಗಳು ನಿರ್ಧಾರವಾಗಬೇಕಿದ್ದು, ಅಫ್ಘಾನ್​ ಸೇರಿದಂತೆ ಇನ್ನು ಐದು ತಂಡಗಳು ಸೆಮಿಸ್​ ರೇಸ್​ನಲ್ಲಿವೆ.

ICC Cricket World Cup 2023  Afghanistan world cup semi final qualification  world cup semi final  ಹಂತಿಮ ಘಟ್ಟದತ್ತ ವಿಶ್ವಕಪ್​ ಲೀಗ್​ ಪಂದ್ಯಗಳು  ಸೆಮಿಸ್​ ರೇಸ್​ನಲ್ಲಿ ಐದು ತಂಡಗಳ ಮಧ್ಯೆ ಅಗ್ನಿ ಪರೀಕ್ಷೆ  ಪ್ರತಿಷ್ಠಿತ ODI ವಿಶ್ವಕಪ್​ನ ಸೆಮಿಸ್ ರೇಸ್ ಸುಗಮ  ಸೆಮಿಫೈನಲ್‌ಗೆ ಇನ್ನು ಮೂರು ತಂಗಳು ನಿರ್ಧಾರ  ODI ವಿಶ್ವಕಪ್​ನಲ್ಲಿ ಲೀಗ್ ಪಂದ್ಯಗಳು ಅಂತಿಮ  ಭಾರತ ತಂಡ ಈಗಾಗಲೇ ಅಧಿಕೃತ  ಭಾರತ ತಂಡ ಈಗಾಗಲೇ ಅಧಿಕೃತವಾಗಿ ಸೆಮಿಸ್  ಬಾಂಗ್ಲಾದೇಶ ಟೂರ್ನಿಯಿಂದ ಹೊರ ಬಿದ್ದಿದೆ
ಹಂತಿಮ ಘಟ್ಟದತ್ತ ವಿಶ್ವಕಪ್​ ಲೀಗ್​ ಪಂದ್ಯಗಳು
author img

By ETV Bharat Karnataka Team

Published : Nov 4, 2023, 1:45 PM IST

Updated : Nov 4, 2023, 3:23 PM IST

ಹೈದರಾಬಾದ್​, ತೆಲಂಗಾಣ: ODI ವಿಶ್ವಕಪ್​ನಲ್ಲಿ ಲೀಗ್ ಪಂದ್ಯಗಳು ಅಂತಿಮ ಹಂತವನ್ನು ಪ್ರವೇಶಿಸಿದೆ. ಭಾರತ ತಂಡ ಈಗಾಗಲೇ ಅಧಿಕೃತವಾಗಿ ಸೆಮಿಸ್ ಪ್ರವೇಶಿಸಿದೆ. ಈಗಾಗಲೇ ಬಾಂಗ್ಲಾದೇಶ ಟೂರ್ನಿಯಿಂದ ಹೊರ ಬಿದ್ದಿದೆ. ಇಂಗ್ಲೆಂಡ್, ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ಸ್​ ತಂಡಗಳು ಬಹುತೇಕ ಸೆಮಿಸ್​ ರೇಸ್​ನಿಂದ ಹೊರ ಬಿದ್ದಂತೆ. ಉಳಿದ ಮೂರು ಸ್ಥಾನಗಳಿಗಾಗಿ ಐದು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಆ ಐದು ತಂಡಗಳಲ್ಲಿ ಅಫ್ಘಾನಿಸ್ತಾನ ಕೂಡ ಒಂದು. ಏಳು ಪಂದ್ಯಗಳಲ್ಲಿ ನಾಲ್ಕನೇ ಗೆಲುವು ಸಾಧಿಸಿದ ಅಫ್ಘಾನಿಸ್ತಾನ ದೊಡ್ಡ ತಂಡಗಳೊಂದಿಗೆ ಸೆಮಿಸ್ ರೇಸ್‌ನಲ್ಲಿ ಉಳಿಯುವ ಮೂಲಕ ಅಚ್ಚರಿ ಮೂಡಿಸಿದೆ. ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಗೆಲುವು ಸಾಧಿಸಿದಂತೆಯೇ ಸೆಮಿಸ್ ಸ್ಥಾನವನ್ನೂ ತನ್ನದಾಗಿಸಿಕೊಂಡು ಸಂಚಲನ ಮೂಡಿಸುವ ಅವಕಾಶವಿದೆಯೇ? ಎಂಬುದು ತಿಳಿಯೋಣಾ ಬನ್ನಿ..

ಏಳು ಪಂದ್ಯಗಳಲ್ಲಿ ಏಳನ್ನೂ ಗೆದ್ದು ಭಾರತ ಮಾತ್ರ ಸೆಮಿಸ್ ತಲುಪಿದೆ. ಏಳು ಪಂದ್ಯಗಳಲ್ಲಿ ಆರು ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಬಹುತೇಕ ಸೆಮಿಸ್ ತಲುಪಿದೆ. ಆ ತಂಡದ ನೆಟ್ ರನ್ ರೇಟ್ ಸಹ ಉತ್ತಮವಾಗಿರುವುದರಿಂದ ಕೊನೆಯ ಎರಡು ಪಂದ್ಯಗಳಲ್ಲಿ (ಭಾರತ ಮತ್ತು ಅಫ್ಘಾನಿಸ್ತಾನ ವಿರುದ್ಧ) ಸೋತರೂ ಸೆಮಿಸ್​ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ (6 ಪಂದ್ಯಗಳಲ್ಲಿ 4 ಗೆಲುವು) ಮತ್ತು ನ್ಯೂಜಿಲೆಂಡ್ (7 ಪಂದ್ಯಗಳಲ್ಲಿ 4 ಗೆಲುವು) ನಂತರದ ಎರಡು ಸ್ಥಾನಗಳಲ್ಲಿವೆ. 7 ಪಂದ್ಯಗಳ ಪೈಕಿ 3ರಲ್ಲಿ ಗೆದ್ದಿದ್ದ ಪಾಕಿಸ್ತಾನ ನಿನ್ನೆಯವರೆಗೂ ಐದನೇ ಸ್ಥಾನದಲ್ಲಿತ್ತು. ಆದರೆ ಶುಕ್ರವಾರ ಅಫ್ಘಾನಿಸ್ತಾನ ನಾಲ್ಕನೇ ಗೆಲುವಿನೊಂದಿಗೆ (7 ಪಂದ್ಯಗಳನ್ನು ಆಡಿದೆ) ಐದನೇ ಸ್ಥಾನಕ್ಕೆ ಏರಿತು. ಟೂರ್ನಿಯ ಅಂತಿಮ ಹಂತದಲ್ಲಿ ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾದಂತಹ ತಂಡಗಳನ್ನು ಹಿಂದಕ್ಕೆ ತಳ್ಳಿ ಅಫ್ಘಾನಿಸ್ತಾನ ಅಗ್ರಸ್ಥಾನದಲ್ಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.

ಹಲವಾರು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನದ ಪ್ರದರ್ಶನವನ್ನು ನೋಡುತ್ತಿರುವವರೆಲ್ಲರೂ ಈ ವಿಶ್ವಕಪ್‌ನಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶದಂತಹ ತಂಡಗಳನ್ನು ಸೋಲಿಸಬಹುದು ಎಂದು ಭಾವಿಸಿದ್ದರು. ಆದರೆ ತಂಡ ನಿರೀಕ್ಷೆಗೂ ಮೀರಿ ಹಾಲಿ ಚಾಂಪಿಯನ್ ಇಂಗ್ಲೆಂಡ್, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳಿಗೆ ಆಘಾತ ನೀಡಿತು. ಪಂದ್ಯಾವಳಿಯನ್ನು ಎಂದಿನಂತೆ ಆರಂಭಿಸಿದ ತಂಡ, ನಂತರ ಅನಿರೀಕ್ಷಿತ ಪ್ರದರ್ಶನ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತು.

ಪಾಕಿಸ್ತಾನ, ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ಸ್ ಅನ್ನು ಸೋಲಿಸಿದ ನಂತರ ಎಲ್ಲರೂ ಈಗ ಅಫ್ಘಾನಿಸ್ತಾನವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ. ಇದೇ ಪ್ರದರ್ಶನ ಮುಂದುವರಿಯಲಿದ್ದು, ಅದೃಷ್ಟ ಕೈಹಿಡಿದ್ರೆ ಮುನ್ನಡೆ ಸಾಧಿಸುವ ನಿರೀಕ್ಷೆ ಇದೆ. ನ್ಯೂಜಿಲೆಂಡ್ ಸತತ ಮೂರು ಪಂದ್ಯಗಳಲ್ಲಿ ಸೋತಿರುವುದು ಅಫ್ಘಾನಿಸ್ತಾನದಲ್ಲಿ ಭರವಸೆ ಮೂಡಿಸಿದೆ. ದಕ್ಷಿಣ ಆಫ್ರಿಕಾ ಜೊತೆಗೆ ಉತ್ತಮ ವೇಗದಲ್ಲಿರುವ ಆಸ್ಟ್ರೇಲಿಯಾ ಸೆಮಿಫೈನಲ್ ಅವಕಾಶ ಪಡೆಯಲು ಶ್ರಮ ವಹಿಸುತ್ತಿದೆ.

ಅಫ್ಘಾನ ತಂಡವು ಕೊನೆಯ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಎರಡು ತಂಡಗಳನ್ನು ಸೋಲಿಸುವುದು ತುಂಬಾ ಕಷ್ಟವಾದರೂ.. ಅಫ್ಘಾನಿಸ್ತಾನ ಒಂದು ಪಂದ್ಯದಲ್ಲಿ ಗೆದ್ದು ಸಂಚಲನ ಮೂಡಿಸಿದರೆ ಸೆಮಿಸ್​ ಕನಸು ಜೀವಂತವಿದ್ದಂತೆ. ಅದೇ ಹೊತ್ತಿಗೆ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡವನ್ನು ಎದುರಿಸಲಿರುವ ಕಿವೀಸ್ ಎರಡೂ ಪಂದ್ಯಗಳಲ್ಲಿ ಸೋಲಲೇಬೇಕು. ಒಂದು ಪಂದ್ಯ ಸೋತರೂ ಸಹ ನೆಟ್ ರನ್ ರೇಟ್​ನಲ್ಲಿ ಅಫ್ಘಾನಿಸ್ತಾನಕ್ಕಿಂತ ಹಿಂದೆ ಇರಬೇಕು. ಮತ್ತೊಂದೆಡೆ ಆಸ್ಟ್ರೇಲಿಯಾ ಸತತ ಸೋತರೂ ಅಫ್ಘಾನಿಸ್ತಾನಕ್ಕೆ ಅವಕಾಶ ಸಿಗಲಿದೆ.

ಸದ್ಯ ಅಫ್ಘಾನಿಸ್ತಾನದ ನೆಟ್ ರನ್ ರೇಟ್ ಮೈನಸ್ ಆಗಿದೆ. ಇತರ ತಂಡಗಳನ್ನು ಸೋಲಿಸುವುದು ಸುಲಭವಲ್ಲ. ಹಾಗಾಗಿಯೇ ಈ ಎಲ್ಲ ಲೆಕ್ಕಾಚಾರ ಗಮನಿಸಿದ್ರೆ ಅಫ್ಘಾನಿಸ್ತಾನಕ್ಕೆ ಸೆಮೀಸ್ ತಲುಪುವುದು ತುಂಬಾ ಕಷ್ಟ ಎನಿಸುತ್ತಿದೆ. ಆದರೆ ಇಲ್ಲಿಯವರೆಗೆ ನಡೆದ ಪಂದ್ಯಗಳ ಫಲಿತಾಂಶಗಳನ್ನು ನೋಡಿದರೆ ಮುಂದೆ ಏನು ಬೇಕಾದ್ರೂ ಆಗಬಹುದು ಎಂದು ಕಾಣುತ್ತದೆ.

ಓದಿ: ಏಕದಿನ ಪಂದ್ಯಗಳಲ್ಲಿ 100 ವಿಕೆಟ್ ಪಡೆದ ಅಫ್ಘಾನಿಸ್ತಾನದ ನಾಲ್ಕನೇ ಬೌಲರ್ ಮುಜೀಬ್

Last Updated : Nov 4, 2023, 3:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.