ಅಹಮದಾಬಾದ್, ಗುಜರಾತ್: ಅಫ್ಘಾನಿಸ್ತಾ ಕ್ರಿಕೆಟಿಗರಿಗೆ ಭಾರತೀಯ ಅಭಿಮಾನಿಗಳಿಂದ ಬೆಂಬಲ ಸಿಗುತ್ತಿದೆ. ಈಗಾಗಲೇ ವಿಶ್ವಕಪ್‌ನಲ್ಲಿ ಆ ತಂಡ ಆಡಿದ ಪಂದ್ಯಗಳನ್ನು ನೋಡಿದರೆ ಅವರ ಉತ್ತಮ ಪ್ರದರ್ಶನ ಅರ್ಥವಾಗುತ್ತದೆ. ಅಫ್ಘಾನ್ ಕ್ರಿಕೆಟಿಗರು ತಮ್ಮ ದೇಶದ ಕ್ರಿಕೆಟ್ ಬೆಳವಣಿಗೆಗೆ ಟೀಂ ಇಂಡಿಯಾದ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹಲವು ಸಂದರ್ಭಗಳಲ್ಲಿ ಬಹಿರಂಗಪಡಿಸಿದ್ದು ಗೊತ್ತೇ ಇದೆ. ಈ ಅನುಕ್ರಮದಲ್ಲಿ, ಯುವ ಅಫ್ಘಾನಿಸ್ತಾನದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
-
अफगानिस्तान से आया एक फरिश्ता 🥹
— KolkataKnightRiders (@KKRiders) November 12, 2023 " class="align-text-top noRightClick twitterSection" data="
RJ Love Shah spotted @RGurbaz_21 near his home in Ahmedabad, quietly spreading some love ahead of Diwali, hours before the Afghanistan team returned home after their heartwarming World Cup journey ended on Friday night.
🎥: RJ Love Shah |… pic.twitter.com/TOeUBKwXwh
">अफगानिस्तान से आया एक फरिश्ता 🥹
— KolkataKnightRiders (@KKRiders) November 12, 2023
RJ Love Shah spotted @RGurbaz_21 near his home in Ahmedabad, quietly spreading some love ahead of Diwali, hours before the Afghanistan team returned home after their heartwarming World Cup journey ended on Friday night.
🎥: RJ Love Shah |… pic.twitter.com/TOeUBKwXwhअफगानिस्तान से आया एक फरिश्ता 🥹
— KolkataKnightRiders (@KKRiders) November 12, 2023
RJ Love Shah spotted @RGurbaz_21 near his home in Ahmedabad, quietly spreading some love ahead of Diwali, hours before the Afghanistan team returned home after their heartwarming World Cup journey ended on Friday night.
🎥: RJ Love Shah |… pic.twitter.com/TOeUBKwXwh
ಹೌದು, ರಹಮಾನುಲ್ಲಾ ಗುರ್ಬಾಜ್ ಅವರು ಅಹಮದಾಬಾದ್ ಬೀದಿಗಳ ನಿರಾಶ್ರಿತರಿಗೆ ತಮ್ಮ ಹಣಕಾಸಿನ ನೆರವು ನೀಡಿದರು. ಆಗ ಸಮಯ ಮಧ್ಯರಾತ್ರಿ 3 ಗಂಟೆಯಾಗಿರುವುದು ಎಂಬುದು ಗಮನಾರ್ಹ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುರ್ಬಾಜ್ ಅಹಮದಾಬಾದ್‌ನ ಫುಟ್‌ಪಾತ್‌ಗಳಲ್ಲಿ ಮಲಗಿದ್ದವರಿಗೆ ಹಣ ವಿತರಿಸಲು ಮುಂದಾದರು. ಈ ವಿಡಿಯೋವನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಗುರ್ಬಾಜ್ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವುದು ಗೊತ್ತೇ ಇದೆ.
ಕಳೆದ ತಿಂಗಳು ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭಾರಿ ಭೂಕಂಪದ ಸಂತ್ರಸ್ತರಿಗೆ ನಿಧಿ ಸಂಗ್ರಹಿಸುವ ಮೂಲಕ ಕ್ರಿಕೆಟಿಗ ಗುರ್ಬಾಜ್ ಮತ್ತೊಮ್ಮೆ ತಮ್ಮ ಒಳ್ಳೆಯ ಹೃದಯವನ್ನು ತೋರಿಸಿದ್ದಾರೆ. ಈ ಕಾರ್ಯದಿಂದ ನೀವು ಎಲ್ಲರಿಗೂ ಸ್ಫೂರ್ತಿ ನೀಡಿದ್ದೀರಿ. ಹೀಗೆಯೇ ಮುಂದುವರೆಯಿರಿ. ವಿಶ್ವಕಪ್ ಬಳಿಕ ತಂಡ ತವರಿಗೆ ಹೊರಡುವ ಮುನ್ನ ದೀಪಾವಳಿ ಸಂದರ್ಭದಲ್ಲಿ ಗುರ್ಬಾಜ್ ಈ ಅಚ್ಚರಿ ಮೂಡಿಸಿದ್ದಾರೆ ಎಂದು ಕೆಕೆಆರ್ ವಿಡಿಯೋ ಹರಿಬಿಟ್ಟ ವೇಳೆ ಬರೆದುಕೊಂಡಿದೆ. ನೆಟಿಜನ್‌ಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗುರ್ಬಾಜ್ ಅವರ ಉತ್ತಮ ಕಾರ್ಯಕ್ಕಾಗಿ ಅಭಿನಂದನೆಗಳ ಸುರಿಮಳೆಯಾಗಿದೆ.
ವಿಶ್ವಕಪ್‌ನಲ್ಲಿ ಅಫ್ಘಾನ್ ಉತ್ತಮ ಪ್ರದರ್ಶನ: ವಿಶ್ವಕಪ್ಗೂ ಮುನ್ನ ಅಫ್ಘಾನಿಸ್ತಾನವು ಬೌಲಿಂಗ್‌ನಲ್ಲಿ ಉತ್ತಮ ಮತ್ತು ಬ್ಯಾಟಿಂಗ್‌ನಲ್ಲಿ ದುರ್ಬಲ ತಂಡ ಎಂದು ಹೆಸರಾಗಿತ್ತು. ಆದರೆ, ಈ ವಿಶ್ವಕಪ್‌ನೊಂದಿಗೆ ಆ ಕಪ್ಪುಚುಕ್ಕೆ ಅಳಿಸಿ ಹೋಗಿದೆ. ಇಷ್ಟು ದಿನ ದುರ್ಬಲವಾಗಿದ್ದ ಬ್ಯಾಟಿಂಗ್ ಈಗ ಬಲಿಷ್ಠವಾಗಿದೆ. ಅಫ್ಘಾನಿಸ್ತಾನದ ಐತಿಹಾಸಿಕ ಪ್ರದರ್ಶನ ಸಾಕಾರಗೊಂಡಿದೆ. ಮುಖ್ಯವಾಗಿ ಅಫ್ಘಾನ್ ಆಟಗಾರರು ತೋರಿದ ವ್ಯಕ್ತಿತ್ವ ಮತ್ತು ಹೋರಾಟದ ಸ್ಪೂರ್ತಿ ಬಗ್ಗೆ ಎಷ್ಟೇ ಹೇಳಿದರೂ ಕಡಿಮೆ. ದೊಡ್ಡ ತಂಡಗಳು ನೋಡಿ ಹಿಂದೆ ಹೆಜ್ಜೆ ಇಡುವ ತಂಡವಲ್ಲ. ಸವಾಲೊಡ್ಡಿ ಹೋರಾಟದಿಂದ ಗೆಲುವು ಸಾಧಿಸುವ ಛಲ ಬೆಳೆಸಿಕೊಳ್ಳುತ್ತಿದ್ದಾರೆ. ಮೂರು ದೊಡ್ಡ ತಂಡಗಳ ವಿರುದ್ಧ ಏಕಕಾಲದಲ್ಲಿ ಅಫ್ಘಾನಿಸ್ತಾನ ಜಯ ಸಾಧಿಸಿರುವುದು ಅದಕ್ಕೆ ಸಾಕ್ಷಿಯಾಗಿದೆ.
ಅಫ್ಘಾನಿಸ್ತಾನದ ಈ ಸಾಧನೆಗಳು ಸುಳ್ಳಲ್ಲ. ಸಂಪೂರ್ಣ ಪ್ರಾಬಲ್ಯ ಮತ್ತು ಹೋರಾಟದೊಂದಿಗೆ ಸಾಧಿಸಲಾಗಿದೆ. ಇಂಗ್ಲೆಂಡ್ ತಂಡವನ್ನು 69 ರನ್‌ಗಳಿಂದ ಸೋಲಿಸಿದ್ದು, ಸಂಚಲನ ಮೂಡಿಸಿದೆ. ಅಫ್ಘಾನಿಸ್ತಾನ ಕೊನೆಯವರೆಗೂ ಆಸ್ಟ್ರೇಲಿಯಾವನ್ನು ಹೆದರಿಸಿತು. ಮ್ಯಾಕ್ಸ್ ವೆಲ್ ಅವರ ವಿರೋಚಿತ ಇನ್ನಿಂಗ್ಸ್ ಇಲ್ಲದಿದ್ದರೆ ಅಫ್ಘಾನಿಸ್ತಾನ ಮತ್ತೊಂದು ಸಂಭ್ರಮದೊಂದಿಗೆ ಸೆಮಿಸ್ ಪ್ರವೇಶಿಸುತ್ತಿತ್ತು. ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸಹ ಅಫ್ಘಾನ್ ವಿರುದ್ಧ ಗೆಲುವು ಸಾಧಿಸಲು ಕಷ್ಟಪಡಬೇಕಾಯಿತು. ಬೌಲಿಂಗ್‌ನಲ್ಲಿ ಸ್ಪಿನ್ ದಾಳಿ ಮತ್ತು ಬ್ಯಾಟಿಂಗ್‌ನಲ್ಲಿ ಅಗ್ರ ಕ್ರಮಾಂಕದ ಸ್ಥಿರತೆಯೊಂದಿಗೆ ತಂಡವು ಪ್ರಗತಿ ಸಾಧಿಸಿತು. ಅದರಲ್ಲೂ ಅಧಿಕ ಒತ್ತಡದ ಇನ್ನಿಂಗ್ಸ್‌ನಲ್ಲಿ ಅಫ್ಘಾನ್ ಬ್ಯಾಟ್ಸ್‌ಮನ್‌ಗಳ ದೃಢತೆ ಅದ್ಭುತವಾಗಿತ್ತು.
ಈ ಬಾರಿಯ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಒಂದಲ್ಲ ಎಲ್ಲ ವಿಭಾಗದಲ್ಲೂ ಬಲಿಷ್ಠವಾಗಿದೆ. ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಅದ್ಭುತ. ಬ್ಯಾಟಿಂಗ್‌ನಲ್ಲಿ ವಿಶೇಷವಾಗಿ ಅಗ್ರ ಕ್ರಮಾಂಕದ ಆಟಗಾರರು ಪ್ರಭಾವಿತರಾಗಿದ್ದರು. ರಹಮಾನುಲ್ಲಾ ಗುರ್ಬಾಜ್ ಅವರು ಈ ವಿಶ್ವಕಪ್‌ನಲ್ಲಿ 280 ರನ್ ಕಲೆ ಹಾಕುವ ಮೂಲಕ ಆಕರ್ಷಕವಾಗಿ ಆಡಿದ್ದಾರೆ.
ಬೌಲಿಂಗ್‌ನಲ್ಲಿ ರಶೀದ್ ಖಾನ್, ಮೊಹಮ್ಮದ್ ನಬಿ, ನವೀನ್ ಉಲ್ ಹಕ್, ಮುಜಿಬುರ್ ರೆಹಮಾನ್, ಅಜ್ಮತುಲ್ಲಾ , ಫಾರೂಕಿ, ನೂರ್ ಅಹ್ಮದ್ ಕೂಡ ಸ್ಥಿರವಾಗಿ ಮಿಂಚಿದರು. ಅದರಲ್ಲೂ ನಾಲ್ವರು ಸ್ಪಿನ್ನರ್‌ಗಳೊಂದಿಗೆ ದಾಳಿ ಮುಂದುವರಿಸಿದ ಅಫ್ಘಾನಿಸ್ತಾನಕ್ಕೆ ಫಲಿತಾಂಶ ಸಿಕ್ಕಿದೆ. ತಂಡವು ಯಾವುದೇ ಒಬ್ಬ ಆಟಗಾರನ ಮೇಲೆ ಅವಲಂಬಿತವಾಗಿಲ್ಲದಿರುವುದು ಅಫ್ಘಾನಿಸ್ತಾನಕ್ಕೆ ಉತ್ತಮವಾಗಿದೆ.
ಓದಿ: ಅಫ್ಘಾನ್ ಕ್ರಿಕೆಟ್‌ಗೆ ಮುಂದಿವೆ ಒಳ್ಳೆಯ ದಿನಗಳು: ವಿಶ್ವಕಪ್ ಪ್ರದರ್ಶನದೊಂದಿಗೆ ಭವಿಷ್ಯದ ಮೇಲೆ ಆಸೆ