ETV Bharat / sports

World cup 2023: ಭಾರತ ಪಾಕ್​ ಪಂದ್ಯಕ್ಕೆ ಕ್ಷಣಗಣನೆ.. ಹೇಗಿದೆ ಪಿಚ್​, ಹವಾಮಾನ ವರದಿ - ಭಾರತಕ್ಕೆ ಬಲ ಹೆಚ್ಚಿಸಲಿರುವ ಆಟಗಾರರು

2023ರ ವಿಶ್ವಕಪ್‌ನಲ್ಲಿ ಇಂದು 12ನೇ ಪಂದ್ಯ ನಡೆಯಲಿದೆ. ಎಲ್ಲ ಕ್ರಿಕೆಟ್ ಅಭಿಮಾನಿಗಳ ಕಣ್ಣು ಇಂದಿನ ಪಂದ್ಯದ ಮೇಲಿದೆ. ಈ ಹೈವೋಲ್ಟೇಜ್ ಪಂದ್ಯ ಇಂದು ಮಧ್ಯಾಹ್ನ 2 ಗಂಟೆಯಿಂದ ನಡೆಯಲಿದೆ.

cricket world cup 2023  icc world cup 2023  ind vs pak  india vs pakistan match preview  ind vs pak weather pitch report rediction  ಭಾರತ ಪಾಕ್​ ಪಂದ್ಯಕ್ಕೆ ಕ್ಷಣಗಣನೆ  ಹವಾಮಾನ ವರದಿ  2023ರ ವಿಶ್ವಕಪ್‌ನಲ್ಲಿ ಇಂದು 12ನೇ ಪಂದ್ಯ  ಕ್ರಿಕೆಟ್ ಅಭಿಮಾನಿಗಳ ಕಣ್ಣು  ಹೈವೋಲ್ಟೇಜ್ ಪಂದ್ಯ ಇಂದು ಮಧ್ಯಾಹ್ನ 2 ಗಂಟೆ  ನರೇಂದ್ರ ಮೋದಿ ಸ್ಟೇಡಿಯಂ ಪಿಚ್​ ಹೇಗಿದೆ  ಭಾರತಕ್ಕೆ ಬಲ ಹೆಚ್ಚಿಸಲಿರುವ ಆಟಗಾರರು  ಅಹಮದಾಬಾದ್‌ನಲ್ಲಿ ಹವಾಮಾನ ಹೇಗಿದೆ
world cup 2023: ಭಾರತ ಪಾಕ್​ ಪಂದ್ಯಕ್ಕೆ ಕ್ಷಣಗಣನೆ
author img

By ETV Bharat Karnataka Team

Published : Oct 14, 2023, 10:11 AM IST

ಅಹಮದಾಬಾದ್, ಗುಜರಾತ್​: ವಿಶ್ವಕಪ್ 2023 ರ 12ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪೈಪೋಟಿ ನಡೆಸಲಿವೆ. ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂದು ಕ್ರೀಡಾಂಗಣ ಕಿಕ್ಕಿರಿದು ತುಂಬಿರುತ್ತದೆ. ಇದಲ್ಲದೇ ಕೋಟ್ಯಂತರ ಜನರ ಕಣ್ಣು ಟಿವಿ ಮೇಲಿರುತ್ತದೆ.

ಈ ಅಮೋಘ ಪಂದ್ಯದಲ್ಲಿ ಭಾರತ ತಂಡವು ಗೆಲ್ಲುವುದನ್ನು ಎಲ್ಲ ಭಾರತೀಯ ಅಭಿಮಾನಿಗಳು ಬಯಸುತ್ತಾರೆ. ಭಾರತ ತಂಡ ಇದುವರೆಗೆ ವಿಶ್ವಕಪ್‌ನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತು. ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ ಹೀನಾಯ ಸೋಲುಂಟಾಯಿತು. ಪಾಕಿಸ್ತಾನದ ಬಗ್ಗೆ ಮಾತನಾಡುವುದಾದರೆ, ಪಾಕಿಸ್ತಾನವು ತನ್ನ ಮೊದಲ ಎರಡು ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಪಾಕಿಸ್ತಾನ ತಂಡದ ಆತ್ಮವಿಶ್ವಾಸವೂ ಹೆಚ್ಚಿರುತ್ತದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಇದುವರೆಗೆ 134 ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ 56 ಮತ್ತು ಪಾಕಿಸ್ತಾನ 73 ಪಂದ್ಯಗಳನ್ನು ಗೆದ್ದಿದ್ದು, 5 ಪಂದ್ಯಗಳು ಟೈ ಆಗಿವೆ. 1 ಅಕ್ಟೋಬರ್ 1978 ರಂದು ಪಾಕಿಸ್ತಾನ ಮತ್ತು ಭಾರತ ನಡುವೆ ಮೊದಲ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯಿತು. ಭಾರತ ಮತ್ತು ಪಾಕಿಸ್ತಾನ ನಡುವಿನ ಕೊನೆಯ ಪಂದ್ಯವು 10 ಸೆಪ್ಟೆಂಬರ್ 2023 ರಂದು ಏಷ್ಯಾ ಕಪ್‌ನಲ್ಲಿ ನಡೆಯಿತು.

ಶುಭಮನ್ ಗಿಲ್ ವಾಪಸ್​ ಸಾಧ್ಯ: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪುನರಾಗಮನ ಮಾಡಬಹುದಾಗಿದೆ. ಆಸ್ಟ್ರೇಲಿಯ ವಿರುದ್ಧದ ಪಂದ್ಯಕ್ಕೂ ಮುನ್ನ ಶುಭ್‌ಮನ್ ಗಿಲ್‌ಗೆ ಡೆಂಘೀ ಸೋಂಕು ತಗುಲಿತ್ತು. ಇದರಿಂದಾಗಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಶುಬ್ಮನ್ ಗಿಲ್ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಶುಬ್ಮನ್ ಗಿಲ್ 99 ರಷ್ಟು ಪಂದ್ಯಗಳನ್ನು ಆಡಲಿದ್ದಾರೆ ಎಂದು ರೋಹಿತ್ ಶರ್ಮಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಭರವಸೆ ವ್ಯಕ್ತಪಡಿಸಿದ್ದರು.

  • ITS INDIA VS PAKISTAN DAY....!!!

    Narendra Modi Stadium will be house full today with over 1,00,000 people witnessing greatness. The biggest match of the year in Ahmedabad. pic.twitter.com/Xg0rFktpE0

    — Mufaddal Vohra (@mufaddal_vohra) October 13, 2023 " class="align-text-top noRightClick twitterSection" data=" ">

ಭಾರತಕ್ಕೆ ಬಲ ಹೆಚ್ಚಿಸಲಿರುವ ಆಟಗಾರರು: ರೋಹಿತ್ ಶರ್ಮಾ: ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಜೋಶ್ ಹೇಜಲ್‌ವುಡ್ ಬಲೆಗೆ ಬಿದ್ದು, ಆರು ಎಸೆತಗಳಲ್ಲಿ ಡಕ್‌ ಆದರು ಭಾರತೀಯ ನಾಯಕ ರೋಹಿತ್​ ಶರ್ಮಾ. ಆದರೆ, ಅವರು ಅಫ್ಘಾನಿಸ್ತಾನ ವಿರುದ್ಧ ಅದ್ಭುತ ಶತಕ ಗಳಿಸುವ ಮೂಲಕ ಮತ್ತೆ ಫಾರ್ಮ್​ಗೆ ಬಂದರು. ಈ ಪಂದ್ಯದಲ್ಲಿ ಭಾರತದ ಯಶಸ್ಸಿಗೆ ಅವರು ಪ್ರಮುಖ ಬ್ಯಾಟ್ಸ್‌ಮನ್ ಆಗಲಿದ್ದಾರೆ ಎಂಬ ಭರವಸೆ ಇದೆ.

ರವೀಂದ್ರ ಜಡೇಜಾ: ಎಡಗೈ ಸ್ಪಿನ್ನರ್ ಮೊದಲ ಪಂದ್ಯದಲ್ಲಿ ಉತ್ತಮ ಆರಂಭ ನೀಡಿರುವುದು ಗೊತ್ತಿರುವ ಸಂಗತಿ. 10 ಓವರ್‌ಗಳಲ್ಲಿ 28 ರನ್‌ಗಳಿಗೆ ಮೂರು ವಿಕೆಟ್ ಪಡೆದರು. ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಜಡೇಜಾ ಕೂಡ ಅದ್ಭುತವಾಗಿ ಪ್ರದರ್ಶನ ತೋರಿದರೂ ಸಹ ಅವರು ಯಾವುದೇ ವಿಕೆಟ್ ಪಡೆಯಲಿಲ್ಲ.

ನರೇಂದ್ರ ಮೋದಿ ಸ್ಟೇಡಿಯಂ ಪಿಚ್​ ಹೇಗಿದೆ?: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿನ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವೆ ಉತ್ತಮ ಸಮತೋಲನ​ ಹೊಂದಿದೆ. ಸ್ಪಿನ್ನರ್‌ಗಳಿಗೆ ಅನುಕೂಲವಿದೆ. ವಿಶೇಷವಾಗಿ ಹಗಲಿನಲ್ಲಿ ಸ್ಪಿನ್ನರ್‌ಗಳಿಗೆ ಪಿಚ್‌ನಿಂದ ಸ್ವಲ್ಪ ಸಹಾಯ ಸಿಗುತ್ತದೆ. ಆದರೆ ಪಂದ್ಯವು ಮುಂದುವರೆದಂತೆ ಇಬ್ಬನಿ ಬೀಳಲು ಪ್ರಾರಂಭಿಸಿದಾಗ ಬ್ಯಾಟಿಂಗ್​ ಮಾಡಲು ಇಲ್ಲಿ ಸುಲಭವಾಗುತ್ತದೆ. ಆಗ ಬ್ಯಾಟ್ಸ್‌ಮನ್‌ಗಳು ಭರ್ಜರಿಯಾಗಿ ಬ್ಯಾಟ್​ ಬೀಸಬಹುದು.

ಅಹಮದಾಬಾದ್‌ನಲ್ಲಿ ಹವಾಮಾನ ಹೇಗಿದೆ?: ಅಹಮದಾಬಾದ್‌ನಲ್ಲಿ ಇಂದು ಮಳೆಯ ಸಾಧ್ಯತೆ ತೀರಾ ಕಡಿಮೆ ಆಗಿದೆ. ಆದರೆ, ಅಹಮದಾಬಾದ್‌ನ ಹವಾಮಾನ ಕೇಂದ್ರದ ಪ್ರಕಾರ, ಪಂದ್ಯದ ಸಮಯದಲ್ಲಿ ಗಂಟೆಗಟ್ಟಲೆ ಮೋಡ ಕವಿದ ವಾತಾವರಣ ಇರುತ್ತದೆ. ತಾಪಮಾನ 30-35 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಅಹಮದಾಬಾದ್‌ನಲ್ಲಿ ಹುಮಿಡಿಟಿ ಶೇ 50 ಪ್ರತಿಶತದಷ್ಟು ಇರಬಹುದೆಂದು ನಿರೀಕ್ಷಿಸಲಾಗಿದೆ, ಆದರೆ ದಿನದ ತಾಪಮಾನವು 35 ಡಿಗ್ರಿ ಸೆಲ್ಸಿಯಸ್​ವರೆಗೆ ತಲುಪುತ್ತದೆ. ಹೀಗಾಗಿ ಅಭಿಮಾನಿಗಳು ಮೈದಾನದಲ್ಲಿ ಸನ್‌ಸ್ಕ್ರೀನ್ ಬಳಸುವುದು ಉತ್ತಮ.

ಭಾರತದ ಸಂಭಾವ್ಯ ತಂಡ:- ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಪಾಕಿಸ್ತಾನದ ಸಂಭಾವ್ಯ ತಂಡ:- ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.

ಓದಿ: Cricket World Cup: ರೋಹಿತ್ ಬ್ಯಾಟಿಂಗ್​ನಲ್ಲಿ ಸುಧಾರಣೆ.. ಬಾಲ್ಯದ ಕೋಚ್ ಹೇಳಿದ ಗುಟ್ಟೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.