ನವದೆಹಲಿ: ವಿಶ್ವಕಪ್‌ನ 24ನೇ ಪಂದ್ಯ ಇಂದಿನ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲಿಗೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ. ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದ ಕಾಂಗರೂ ಪಡೆ ಮುಂದಿನ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸುವ ಮೂಲಕ ಅದ್ಭುತ ಕಮ್ಬ್ಯಾಕ್ ಮಾಡಿದೆ.
- " class="align-text-top noRightClick twitterSection" data="">
ಇಂದಿನ ಪಂದ್ಯದಲ್ಲೂ ಉತ್ತಮ ರನ್ರೇಟ್ನೊಂದಿಗೆ ಗೆಲುವು ದಾಖಲಿಸಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಆಸಿಸ್ ಸಜ್ಜಾಗಿದೆ. ಮತ್ತೊಂದೆಡೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿರುವ ನೆದರ್ಲೆಂಡ್ ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸಬಾರದು ಎಂಬ ಸಂದೇಶವನ್ನು ನೀಡಿತ್ತು. ಹಿಂದಿನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಕಠಿಣ ಪೈಪೋಟಿ ನೀಡಿ ಸೋಲು ಕಂಡಿರುವ ಡಚ್ಚರು, ಇಂದಿನ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೇಲೇರಲು ಯೋಜನೆ ರೂಪಿಸಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಉಭಯ ತಂಡಗಳು ತಲಾ 4 ಪಂದ್ಯಗಳನ್ನು ಆಡಿವೆ. ಈ ಪೈಕಿ ಆಸ್ಟ್ರೇಲಿಯಾ 2ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ನೆದರ್ಲೆಂಡ್ ಒಂದರಲ್ಲಿ ಗೆದ್ದು ಏಳನೇ ಸ್ಥಾನದಲ್ಲಿದೆ.
ಪಿಚ್ ರಿಪೋರ್ಟ್: ಅರುಣ್ ಜೇಟ್ಲಿ ಮೈದಾನ ಬ್ಯಾಟಿಂಗ್ ಪಿಚ್ ಆಗಿದ್ದು, ಇಲ್ಲಿ ಬ್ಯಾಟಿಂಗ್ ಸುಲಭವಾಗಿರಲಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಪಿಚ್ ಸ್ಪಿನ್ನರ್ಗಳಿಗೆ ಸಹಾಯಕವಾಗಿರಲಿದೆ. ಬೌಂಡರಿ ಲೆಂತ್ ಕಡಿಮೆ ಇರುವುದರಿಂದ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ಬೌಂಡರಿಗಳನ್ನು ಸಿಡಿಸುವುದನ್ನ ಕಾಣಬಹುದಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡಲು ಬಯಸುತ್ತವೆ. ಕಾರಣ ದೊಡ್ಡ ಸ್ಕೋರ್ ಕಲೆ ಹಾಕುವ ಮೂಲಕ ಎರಡನೇ ಇನ್ನಿಂಗ್ಸ್‌ನಲ್ಲಿ ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಬಯಸುತ್ತವೆ.
-
A Delhi-cious contest on the cards as we go up against the Aussies tomorrow. 👊#CWC23 pic.twitter.com/ebQJzTS21H
— Cricket🏏Netherlands (@KNCBcricket) October 24, 2023 " class="align-text-top noRightClick twitterSection" data="
">A Delhi-cious contest on the cards as we go up against the Aussies tomorrow. 👊#CWC23 pic.twitter.com/ebQJzTS21H
— Cricket🏏Netherlands (@KNCBcricket) October 24, 2023A Delhi-cious contest on the cards as we go up against the Aussies tomorrow. 👊#CWC23 pic.twitter.com/ebQJzTS21H
— Cricket🏏Netherlands (@KNCBcricket) October 24, 2023
ಹವಾಮಾನ: ದೆಹಲಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನವು 24 ಡಿಗ್ರಿ ಸೆಲ್ಸಿಯಸ್ ಗಳಷ್ಟು ಇರಲಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲ ಎಂದು ಹವಮಾನ ಇಲಾಖೆ ವರದಿ ತಿಳಿಸಿವೆ.
ಸ್ಟೇಡಿಯಂ ಅಂಕಿ - ಅಂಶ: ಅರುಣ್ ಜೇಟ್ಲಿ ಮೈದಾನದಲ್ಲಿ ಈವರೆಗೂ ಒಟ್ಟು 31 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಮತ್ತು ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ತಂಡಗಳು ತಲಾ 15 ಪಂದ್ಯಗಳಲ್ಲಿ ಗೆಲುವು ದಾಖಲಿಸಿವೆ. ಒಂದು ಪಂದ್ಯ ರದ್ದಾಗಿದೆ. ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 233, ಎರಡನೇ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 210 ಆಗಿರಲಿದೆ. 428 ಈ ಸ್ಟೇಡಿಯಂನಲ್ಲಿ ದಾಖಲಾದ ಅತ್ಯಧಿಕ ಸ್ಕೋರ್ ಆಗಿದ್ದರೆ, 83 ಕನಿಷ್ಠ ಸ್ಕೋರ್ ಆಗಿದೆ.
ಹೆಡ್ ಟೂ ಹೆಡ್: ವಿಶ್ವಕಪ್‌ನ ಇತಿಹಾಸದಲ್ಲಿ ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ ತಂಡಗಳು ಈ ವರೆಗೂ ಎರಡು ಬಾರಿ ಮುಖಾಮುಖಿಯಾಗಿವೆ. ಆಡಿದ ಎರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ.
ತಂಡಗಳು ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್ (ವಿ.ಕೀ), ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಆಡಮ್ ಝಂಪಾ
ನೆದರ್ಲೆಂಡ್: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡ್, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್(ನಾಯಕ ಮತ್ತು ವಿ.ಕೀ), ಸೈಬ್ರಾಂಡ್ ಎಂಗಲ್‌ಬ್ರೆಕ್ಟ್, ಲೋಗನ್ ವ್ಯಾನ್ ಬೀಕ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್
ಪಂದ್ಯ ಆರಂಭ : ಮಧ್ಯಾಹ್ನ 2 ಗಂಟೆಗೆ
ನೇರ ಪ್ರಸಾರ : ಸ್ಟಾರ್ ಸ್ಪೋರ್ಟ್ಸ್, ಹಾಟ್ ಸ್ಟಾರ್
ಇದನ್ನೂ ಓದಿ: ವಿಶ್ವಕಪ್ 2023: ಮಥೀಷ ಪತಿರಾಣ ಸ್ಥಾನಕ್ಕೆ ಅನುಭವಿ ಆಲ್ರೌಂಡರ್ ಏಂಜಿಲೊ ಮ್ಯಾಥ್ಯೂಸ್