ನವದೆಹಲಿ: 2023ರಲ್ಲಿ ಕ್ರಿಕೆಟ್ ಅಭಿಮಾನಿಗಳು ಎದುರು ನೋಡುತ್ತಿರುವುದು ವಿಶ್ವಕಪ್ ಪಂದ್ಯಗಳಿಗಾಗಿ. ಇಂತರ ಅಭಿಮಾನಿಗಳಿಗೆ ಬಿಸಿಸಿಐ ಸಂತಸದ ಸುದ್ದಿಯೊಂದನ್ನು ನೀಡಿದ್ದು, ಇದೇ ವರ್ಷಾಂತ್ಯದಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಗಳ ಟಿಕೆಟ್ಗಳ ಆನ್ಲೈನ್ ಮಾರಾಟವನ್ನು ಆಗಸ್ಟ್ 10ರಿಂದ ಮಾಡಲಾಗುವುದು ಎಂದು ತಿಳಿದು ಬಂದಿದೆ. ವಿಶ್ವಕಪ್ ಪಂದ್ಯದ ವೇಳೆ ಉಚಿತ ನೀರು ಒದಗಿಸುವ ಸೌಲಭ್ಯದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇತ್ತಿಚೆಗೆ ಹೇಳಿದ್ದಾರೆ.
-
Updates on World Cup 2023:- (To Indian Express)
— CricketMAN2 (@ImTanujSingh) July 28, 2023 " class="align-text-top noRightClick twitterSection" data="
•Tickets sale set to start on 10th Aug.
•Entire ground covered in the rain time.
•BCCI tied up with Coca-Cola to provide free water.
•ICC & BCCI will get 300 hospitality tickets per game.
•State provide tickets to BCCI & ICC. pic.twitter.com/3gyXwzrKIl
">Updates on World Cup 2023:- (To Indian Express)
— CricketMAN2 (@ImTanujSingh) July 28, 2023
•Tickets sale set to start on 10th Aug.
•Entire ground covered in the rain time.
•BCCI tied up with Coca-Cola to provide free water.
•ICC & BCCI will get 300 hospitality tickets per game.
•State provide tickets to BCCI & ICC. pic.twitter.com/3gyXwzrKIlUpdates on World Cup 2023:- (To Indian Express)
— CricketMAN2 (@ImTanujSingh) July 28, 2023
•Tickets sale set to start on 10th Aug.
•Entire ground covered in the rain time.
•BCCI tied up with Coca-Cola to provide free water.
•ICC & BCCI will get 300 hospitality tickets per game.
•State provide tickets to BCCI & ICC. pic.twitter.com/3gyXwzrKIl
2023ರ ವಿಶ್ವಕಪ್ ಕುರಿತು ಬಿಸಿಸಿಐ ಮಾಡಿರುವ ಈ ಘೋಷಣೆಯಿಂದ ಕ್ರೀಡಾ ಪ್ರೇಮಿಗಳಿಗೆ ಸಾಕಷ್ಟು ಸಮಾಧಾನ ಸಿಗಲಿದೆ. ಅಲ್ಲದೇ ಪಂದ್ಯಗಳ ವೇಳೆ ಉಚಿತ ಕುಡಿಯುವ ನೀರು ಒದಗಿಸುವ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 2023ರ ವಿಶ್ವಕಪ್ 5 ಅಕ್ಟೋಬರ್ ನಿಂದ 19 ನವೆಂಬರ್ ವರೆಗೆ ಭಾರತ ಆಯೋಜಿಸಲಾಗುತ್ತದೆ. ಈ ನಡುವೆ ವೇಳಾ ಪಟ್ಟಿ ನವೀಕರಣದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಶಾ ಹೇಳಿದ್ದಾರೆ. ಆದರೆ, ನವೀಕರಣದಲ್ಲಿ ಮೈದಾನಗಳು ಬದಲಾಗುವುದಿಲ್ಲ ಎಂಬ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಅದರಂತೆ ಈಗಾಗಲೇ ತಿಳಿಸಿರುವ ಮೈದಾನದಲ್ಲೇ ಪಂದ್ಯ ನಡೆಯಲಿದ್ದು ದಿನಾಂಕಗಳು ಬದಲಾಗುವ ಸಾಧ್ಯತೆ ಇದೆ.
-
The tickets of World Cup 2023 sale in online set to start on 10th August. (To Indian Express) pic.twitter.com/WYHtmDYQEO
— CricketMAN2 (@ImTanujSingh) July 28, 2023 " class="align-text-top noRightClick twitterSection" data="
">The tickets of World Cup 2023 sale in online set to start on 10th August. (To Indian Express) pic.twitter.com/WYHtmDYQEO
— CricketMAN2 (@ImTanujSingh) July 28, 2023The tickets of World Cup 2023 sale in online set to start on 10th August. (To Indian Express) pic.twitter.com/WYHtmDYQEO
— CricketMAN2 (@ImTanujSingh) July 28, 2023
ಸುದ್ದಿ ಸಂಸ್ಥೆ ಒಂದ್ಕಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೀಡುರುವ ಮಾಹಿತಿಯಂತೆ, ವೀಕ್ಷಕರಿಗೆ ಉಚಿತ ಕುಡಿಯುವ ನೀರನ್ನು ಒದಗಿಸಲು ಮಂಡಳಿಯು ಕಾರ್ಯನಿರ್ವಹಿಸುತ್ತಿದೆ. ಅಭಿಮಾನಿಗಳಿಗೆ ಉಚಿತ ಕುಡಿಯುವ ನೀರನ್ನು ಒದಗಿಸಲು ಬಿಸಿಸಿಐ ಕೋಕಾ ಕೋಲಾ ಜೊತೆ ಪಾಲುದಾರಿಕೆಯನ್ನು ಎದುರು ನೋಡುತ್ತಿದೆ ಎಂದಿದ್ದಾರೆ. ರಾಜ್ಯದ ವಿವಿಧ ಸಂಘಗಳ ಮುಖ್ಯಸ್ಥರೊಂದಿಗೆ ಜಯ್ ಶಾ ಅವರು ಸಭೆ ನಡೆಸಿದ್ದು, ವೇಳಾಪಟ್ಟಿಯ ಬದಲಾವಣೆ ಬಗ್ಗೆ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ.
ಸೌಲಭ್ಯಗಳ ಕಡೆ ಹೆಚ್ಚು ಒತ್ತು: ಸಣೆಯಲ್ಲಿ ಉಚಿತ ಕುಡಿಯುವ ನೀರಿನ ಜೊತೆಗೆ ಶೌಚಾಲಯ, ಕ್ರಿಕೆಟ್ ಸ್ಟೇಡಿಯಂಗಳ ಸ್ವಚ್ಛತೆ ಕಾಪಾಡುವ ಬಗ್ಗೆಯೂ ಚರ್ಚಿಸಲಾಗಿದೆ. ಅಲ್ಲದೇ ಟಿಕೆಟ್ ದರ ಮತ್ತು ವೇಳಾಪಟ್ಟಿಯ ಬಗ್ಗೆಯೂ ಚರ್ಚಿಸಲಾಗಿದೆ. ವೇಳಾಪಟ್ಟಿ ಬದಲಾವಣೆಯಿಂದ ಕ್ರೀಡಾ ಪ್ರೇಮಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಈ ವೇಳೆ ತಿಳಿಸಿದ್ದಾರೆ.
ಈ ಹಿಂದೆ ಮೈದಾನದ ಸ್ವಚ್ಛತೆ ಮತ್ತು ಸೌಲಭ್ಯಗಳ ಬಗ್ಗೆ ಅಭಿಮಾನಿಗಳು ಬೇಸರ ಹೊರಹಾಕಿದ್ದರು. ಶೌಚಾಲಯದ ಬಗ್ಗೆ ಕೆಲ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕೆಲ ಚರ್ಚೆಯನ್ನೂ ಮಾಡಿದ್ದರು. ಇದರಿಂದ ಇದರತ್ತ ಹೆಚ್ಚು ಗಮನ ಹರಿಸುವಂತೆ ರಾಜ್ಯದ ಕ್ರಿಕೆಟ್ ಮಂಡಳಿಗಳಿಗೆ ಸಭೆಯಲ್ಲಿ ತಿಳಿಸಲಾಗಿದೆ ಎನ್ನಾಗಿದೆ. ಇನ್ನು ಎರಡು, ಮೂರು ದಿನಗಳನ್ನು ನವೀಕೃತ ವೇಳಾಪಟ್ಟಿ ಬಿಡುಗಡೆ ಆಗುವ ನಿರೀಕ್ಷೆ ಇದೆ.
ವರ್ಲ್ಡ್ ಕಪ್ 2023 ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 5ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗುತ್ತದೆ ಮತ್ತು 19 ನವೆಂಬರ್ನಂದು ಫೈನಲ್ ಕೂಡ ಇದೇ ಮೈದಾನದಲ್ಲಿ ನಡೆಯಲಿದೆ.