ETV Bharat / sports

ಕಳೆದ ವಿಶ್ವಕಪ್​ ಪಂದ್ಯದಲ್ಲಿ ಟೀಕೆಗೊಳಗಾದ ನಿಯಮಕ್ಕೆ ತಿದ್ದುಪಡಿ: ಹೊಸ ರೂಲ್‌​ ಹೀಗಿದೆ.. - ETV Bharath Kannada news

2019ರ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಉಂಟಾದ ನಿಯಮದ ಗೊಂದಲಕ್ಕೆ ಈ ಬಾರಿ ಐಸಿಸಿ ತೆರೆ ಎಳೆದಿದೆ.

ICC World Cup 2023
ICC World Cup 2023
author img

By ETV Bharat Karnataka Team

Published : Oct 4, 2023, 9:49 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): 13ನೇ ಏಕದಿನ ಕ್ರಿಕೆಟ್ ವಿಶ್ವಕಪ್​ ಇನ್ನೇನು ಬಂದೇ ಬಿಡ್ತು. 10 ತಂಡಗಳ ನಾಯಕರು ಇಂದು ಗುಜರಾತ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೋಟೋ ಶೂಟ್​ ಮಾಡಿಸಿಕೊಂಡರು. ನಾಳೆ (ಗುರುವಾರ) 12ನೇ ಆವೃತ್ತಿಯ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್‌ಅಪ್ ನ್ಯೂಜಿಲೆಂಡ್ ನಡುವಿನ ಮುಖಾಮುಖಿಯಿಂದ ಪಂದ್ಯಾವಳಿ ಅಧಿಕೃತ ಆರಂಭ ಪಡೆಯಲಿದೆ. 46 ದಿನ 48 ಪಂದ್ಯಗಳು 10 ಮೈದಾನದಲ್ಲಿ ನಡೆಯಲಿವೆ. ಇವುಗಳನ್ನು ವೀಕ್ಷಿಸುವ ಮೊದಲು ನಿಯಮಗಳಲ್ಲಾಗಿರುವ ಬದಲಾವಣೆಯ ಬಗ್ಗೆ ತಿಳಿದುಕೊಳ್ಳೋಣ..

1. ಪಂದ್ಯ ಟೈ ಆದರೆ ಫಲಿತಾಂಶ ಹೇಗೆ?: ಎರಡೂ ತಂಡ ಒಂದೇ ಮೊತ್ತ ಗಳಿಸಿದರೆ ಅದನ್ನು ಟೈ ಎಂದು ಕರೆಯಲಾಗುತ್ತದೆ. ಬದಲಾವಣೆಗೆ ಒಳಗಾದ ಅತ್ಯಂತ ಗಮನಾರ್ಹ ನಿಯಮವೆಂದರೆ ಟೈ ಪಂದ್ಯ. ಕಳೆದ ವರ್ಷಕ್ಕಿಂತ ಭಿನ್ನವಾಗಿ, ಈ ವರ್ಷ ಬಹು ಸೂಪರ್ ಓವರ್‌ಗಳಿರುತ್ತವೆ. ಕಳೆದ ವರ್ಷ, ಒಂದು ಸೂಪರ್ ಓವರ್‌ನ ನಂತರ ತಂಡವು ಹೊಡೆದ ಬೌಂಡರಿಗಳ ಸಂಖ್ಯೆಯ ಆಧಾರದ ಮೇಲೆ ಟೈ ಗ್ರ್ಯಾಂಡ್ ಫಿನಾಲೆ ವಿಜೇತರನ್ನು ನಿರ್ಧರಿಸಿತು. 2023ರ ಆವೃತ್ತಿಯಲ್ಲಿ ಸ್ಪಷ್ಟವಾದ ವಿಜೇತರನ್ನು ನಿರ್ಧರಿಸುವವರೆಗೆ ಸೂಪರ್ ಓವರ್‌ಗಳನ್ನು ಆಡಿಸಲಾಗುವುದು. ಸಿಕ್ಸರ್​, ಬೌಂಡರಿಗಳ ಎಣಿಕೆ ಇರುವುದಿಲ್ಲ.

ಆದರೆ ಈ ನಿಮಯ ಅನ್ವಯವಾಗುವುದು ಸೆಮಿ ಫೈನಲ್ ಅಥವಾ ಫೈನಲ್​ನಲ್ಲಿ ಟೈ ಆದರೆ ಮಾತ್ರ. ಗ್ರೂಪ್ ಲೀಗ್ ಪಂದ್ಯಗಳಲ್ಲಿ 50 ಓವರ್‌ಗಳ ಪೂರ್ಣ ಕೋಟಾದ ನಂತರ ಎರಡು ತಂಡಗಳು ರನ್‌ಗಳಲ್ಲಿ ಸಮನಾಗಿದ್ದರೆ, ಪಂದ್ಯವನ್ನು 'ಟೈ' ಎಂದು ಘೋಷಿಸಲಾಗುತ್ತದೆ.

2019ರ ವಿಶ್ವಕಪ್​ ಫೈನಲ್​ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಪಂದ್ಯದಲ್ಲಿ ಮತ್ತು ಸೂಪರ್​ ಓವರ್‌ನಲ್ಲಿ ಟೈ ಮಾಡಿಕೊಂಡಿತ್ತು. ಫಲಿತಾಂಶದಲ್ಲಿ ಸಂಪೂರ್ಣ ಗೊಂದಲ ಉಂಟಾಯಿತು. ಆಂಗ್ಲರು ಹೊಡೆದ ಬೌಂಡರಿಗಳ ಆಧಾರದ ಮೇಲೆ ಇಂಗ್ಲೆಂಡ್​ ತಂಡವನ್ನು ವಿಜೇತ ಎಂದು ನಿರ್ಣಯಿಸಲಾಯಿತು. ಇದು ಪ್ರಪಂಚಾದ್ಯಂತ ಕ್ರಿಕೆಟ್ ಅಭಿಮಾನಿಗಳ ಕಟುವಾದ ಟೀಕೆಗೆ ಗುರಿಯಾಯಿತು. ಆದರೆ ನ್ಯೂಜಿಲೆಂಡ್​ ಇದರ ಬಗ್ಗೆ ಯಾವುದೇ ಕೆಟ್ಟ ಕಾಮೆಂಟ್​ ಮಾಡಿರಲಿಲ್ಲ.

ಭಾರತ-ಪಾಕಿಸ್ತಾನಕ್ಕೆ ವಿಶೇಷ ಮಾನ್ಯತೆ: ಸಾಮಾನ್ಯವಾಗಿ ಪಂದ್ಯಕ್ಕೆ ಮಳೆ ಅಡ್ಡ ಬಂದರೆ ಡಕ್ವರ್ತ್ ಲೂಯಿಸ್ ಸ್ಟರ್ನ್ ವಿಧಾನದ ಮೂಲಕ ರನ್​ ರೇಟ್​ ಆಧಾರದಲ್ಲಿ ನವೀಕೃತ ಗುರಿಯೊಂದಿಗೆ ಪಂದ್ಯವನ್ನು ಆಡಿಸಿ ಫಲಿತಾಂಶ ಕಂಡುಕೊಳ್ಳಲಾಗುತ್ತದೆ. ಆದರೆ ಈಗ ಸಾಂಪ್ರದಾಯಿಕ ಎದುರಾಳಿಗಳ ಕುತೂಹಲಕಾರಿ ಮತ್ತು ಜನಪ್ರಿಯ ಪಂದ್ಯವಾದ ಭಾರತ-ಪಾಕಿಸ್ತಾನ ಮುಖಾಮುಖಿಗೆ ಮೀಸಲು ದಿನ ಘೋಷಿಸಲಾಗಿದೆ. ಸೆಮೀಸ್​ ಹಂತದಲ್ಲಿ ಈ ಎರಡು ತಂಡಗಳು ಮೈದಾನದಲ್ಲಿ ಎದುರಾದಾಗ ಮಳೆ ಬಂದರೆ ಪಂದ್ಯವನ್ನು ಮೀಸಲು ದಿನದಂದು ಆಡಿಸಲಾಗುತ್ತದೆ.

ಒಂದು ಲೆಕ್ಕಾಚಾರದಂತೆ, ಸೆಮಿಫೈನಲ್ ಹಂತದಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾದರೆ ಆ ಪಂದ್ಯ ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ನಡೆಯಲಿದೆ. ಇಲ್ಲವಾದಲ್ಲಿ ಮುಂಬೈನಲ್ಲಿ ಭಾರತ ತನ್ನ ಸೆಮೀಸ್​ ಆಡಲಿದೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್‌, ಜಾವೆಲಿನ್‌ ಥ್ರೋ: ನೀರಜ್‌ ಚೋಪ್ರಾಗೆ ಚಿನ್ನ, ಬೆಳ್ಳಿ ಗೆದ್ದ ಕಿಶೋರ್‌; 4x400 ಮೀ ರಿಲೇಯಲ್ಲಿ ಚಿನ್ನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.