ಹ್ಯಾಮಿಲ್ಟನ್(ನ್ಯೂಜಿಲ್ಯಾಂಡ್): ಐಸಿಸಿ ಮಹಿಳಾ ಏಕದಿನ ವಿಶ್ವಕಪ್ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಾಟ ನಡೆಸುತ್ತಿದ್ದು, ಟಾಸ್ ಗೆದ್ದ ಮಿಥಾಲಿ ಪಡೆ ಬೌಲಿಂಗ್ ಆಯ್ದುಕೊಂಡಿದೆ.
ಈಗಾಗಲೇ ತಾನು ಆಡಿರುವ ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿರುವ ಟೀಂ ಇಂಡಿಯಾ, ಇಂದಿನ ಪಂದ್ಯದಲ್ಲಿ ಜಯ ಸಾಧಿಸುವ ಇರಾದೆಯಲ್ಲಿದೆ. ಇತ್ತ ತಾನಾಡಿರುವ ಎರಡು ಪಂದ್ಯಗಳ ಪೈಕಿ ಒಂದು ಗೆಲುವು, ಮತ್ತೊಂದು ಪಂದ್ಯದಲ್ಲಿ ಸೋತ ನ್ಯೂಜಿಲ್ಯಾಂಡ್ ತಂಡಕ್ಕೆ ಇಂದಿನ ಪಂದ್ಯ ಮಹತ್ವ ಪಡೆದುಕೊಂಡಿದೆ. ಇಂದಿನ ಪಂದ್ಯಕ್ಕಾಗಿ ಸ್ಫೋಟಕ ಬ್ಯಾಟರ್ ಶಫಾಲಿ ಸ್ಥಾನದಲ್ಲಿ ಯಸ್ತಿಕ್ ಕಣಕ್ಕಿಳಿಯಲಿದ್ದಾರೆ. ಆದರೆ, ನ್ಯೂಜಿಲ್ಯಾಂಡ್ ತಂಡದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಕೊಂಡಿಲ್ಲ.
ಇದನ್ನೂ ಓದಿರಿ: ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ 'ಕೇರಳ ಎಕ್ಸ್ಪ್ರೆಸ್' ಎಸ್. ಶ್ರೀಶಾಂತ್
ಆಡುವ 11ರ ಬಳಗ
ಟೀಂ ಇಂಡಿಯಾ: ಸ್ಮತಿ ಮಂದಾನಾ, ಯಸ್ತಿಕ್ ಬಾಟಿಯಾ, ದೀಪ್ತಿ ಶರ್ಮಾ, ಮಿಥಾಲಿ ರಾಜ್(ಕ್ಯಾಪ್ಟನ್), ಹರ್ಮನ್ಪ್ರೀತ್ ಕೌರ್, ರಿಚಾ ಘೋಷ್(ವಿ.ಕೀ), ಸ್ನೇಹಾ ರಾಣಿ, ಪೂಜಾ ವಸ್ತ್ರಕರ್,ಜೂಲನ್ ಗೋಸ್ವಾಮಿ, ಮೇಘ್ನಾ ಸಿಂಗ್ ,ರಾಜೇಶ್ವರಿ ಗಾಯ್ಕವಾಡ್
ನ್ಯೂಜಿಲ್ಯಾಂಡ್ ತಂಡ: ಸೋಫಿ ಡಿವೈನ್ (ಕ್ಯಾಪ್ಟನ್), ಸುಜಿ ಬೇಟ್ಸ್, ಅಮೆಲಿಯಾ ಕೆರ್, ಆಮಿ ಸ್ಯಾಟರ್ಥ್‌ವೈಟ್, ಮ್ಯಾಡಿ ಗ್ರೀನ್, ಫ್ರಾನ್ಸಿಸ್ ಮ್ಯಾಕೆ, ಕೇಟಿ ಮಾರ್ಟಿನ್ (ವಿ.ಕೀ), ಹೇಲಿ ಜೆನ್ಸನ್, ಲಿಯಾ ತಹುಹು, ಜೆಸ್ ಕೆರ್, ಹನ್ನಾ ರೋವ್