ETV Bharat / sports

ವನಿತೆಯರ ವಿಶ್ವಕಪ್ ಕ್ರಿಕೆಟ್‌​: ಪಾಕ್‌ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ

ಭಾರತದ ಬೌಲರ್‌ಗಳ ಆಕ್ರಮಣಕಾರಿ ಆಟದ ಫಲವಾಗಿ ಪಾಕಿಸ್ತಾನ ತಂಡವು 107 ರನ್​ಗಳ ಅಂತರದ ಸೋಲು ಅನುಭವಿಸಿದೆ.

ICC Women's World Cup: India beat Pakistan by 107 runs
ವನಿತೆಯರ ವಿಶ್ವಕಪ್​: ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಗೆಲುವು
author img

By

Published : Mar 6, 2022, 1:33 PM IST

Updated : Mar 6, 2022, 1:48 PM IST

ಮೌಂಟ್ ಮೌಂಗನೂಯಿ(ನ್ಯೂಜಿಲ್ಯಾಂಡ್)​: ವನಿತೆಯರ ಏಕದಿನ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಮಿಥಾಲಿ ರಾಜ್‌ ನೇತೃತ್ವದ ಭಾರತೀಯ ತಂಡ ಭರ್ಜರಿ ಗೆಲುವು ದಾಖಲಿಸಿದ್ದು, ವಿಶ್ವಕಪ್‌ ಅಭಿಯಾನದಲ್ಲಿ ಶುಭಾರಂಭ ಮಾಡಿತು.

ನ್ಯೂಜಿಲ್ಯಾಂಡ್​ನ ಬೇ ಓವಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿದ್ದು, ಭಾರತೀಯ ವನಿತೆಯರ ತಂಡ 43 ಓವರ್​ಗಳಲ್ಲಿ 137 ರನ್​ಗಳಿಗೆ ಪಾಕಿಸ್ತಾನ ತಂಡವನ್ನು ಆಲ್​ ಔಟ್ ಮಾಡಿದೆ. ರಾಜೇಶ್ವರಿ ಗಾಯಕ್ವಾಡ್ ಮಿಂಚಿನ ಬೌಲಿಂಗ್​ಗೆ ಪಾಕ್​ ತಂಡ ತತ್ತರಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ತಂಡ 50 ಓವರ್​ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿದ ಟೀಂ ಇಂಡಿಯಾ ಸಾಧಾರಣ ಮೊತ್ತದ ಗುರಿಯನ್ನೇ ಪಾಕ್​ ತಂಡಕ್ಕೆ ನೀಡಿತ್ತು. ಭಾರತ ತಂಡದ ಪರ ಪೂಜಾ ವಸ್ತ್ರಾಕರ್ 67, ಸ್ಮೃತಿ ಮಂಧಾನಾ 52, ಸ್ನೇಹ್ ರಾಣಾ 53, ದೀಪ್ತಿ ಶರ್ಮ 40 ರನ್ ಗಳಿಸಿ ತಂಡಕ್ಕೆ ಒಳ್ಳೆಯ ಅಡಿಪಾಯ ಹಾಕಿಕೊಟ್ಟಿದ್ದರು.

244 ರನ್​ಗಳ ಗುರಿಯನ್ನು ಬೆನ್ನತ್ತಿದ ಪಾಕ್ ತಂಡ ಭಾರತೀಯ ವನಿತೆಯ ದಾಳಿಗೆ ತತ್ತರಿಸಿದರು. ಸಿದ್ರಾ ಅಮೀನ್ 30, ಡಯಾನಾ ಬೇಗ್ 24, ಫಾತಿಮಾ ಸನಾ 17, ನಾಯಕಿ ಬಿಸ್ಮಾ ಮರೂಫ್ 15 ರನ್​ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಭಾರತ ತಂಡದ ರಾಜೇಶ್ವರಿ ಗಾಯಕ್ವಾಡ್ ನಾಲ್ಕು ವಿಕೆಟ್​, ಜೂಲನ್ ಗೋಸ್ವಾಮಿ ಮತ್ತು ಸ್ನೇಹ್ ರಾಣಾ ತಲಾ ಎರಡು ವಿಕೆಟ್, ಮೇಘನಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ ಒಂದು ವಿಕೆಟ್ ಗಳಿಸಿ, ಪಾಕ್ ತಂಡವನ್ನು 137 ರನ್​ಗಳಿಗೆ ಆಲ್​ಔಟ್ ಮಾಡುವಲ್ಲಿ ಸಫಲರಾದರು.

ಇದನ್ನೂ ಓದಿ: 'ಜಡೇಜಾ ಟೆಸ್ಟ್‌'! ಲೀಲಾಜಾಲ ಬ್ಯಾಟಿಂಗ್‌ ಪ್ರದರ್ಶನದ ಬಳಿಕ 5 ವಿಕೆಟ್ ಕಬಳಿಸಿದ 'ಸರ್‌ ಜಡೇಜಾ'!

ಈ ಮೂಲಕ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಭಾರತ ಮೊದಲ ಪಂದ್ಯದಲ್ಲಿಯೇ ಗೆದ್ದು ಶುಭಾರಂಭ ಮಾಡಿದೆ. ಮುಂದಿನ ಪಂದ್ಯ ಮಾರ್ಚ್ 10ರಂದು ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾ ಆಡಲಿದೆ.

Last Updated : Mar 6, 2022, 1:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.