ETV Bharat / sports

ವನಿತೆಯರ ವಿಶ್ವಕಪ್ ಕ್ರಿಕೆಟ್‌ : ಅಬ್ಬರಿಸಿ ನೆಲಕಚ್ಚಿದ ವೆಸ್ಟ್​ಇಂಡೀಸ್​, ಭಾರತಕ್ಕೆ 155 ರನ್​ಗಳ ಭರ್ಜರಿ ಗೆಲುವು! - ಐಸಿಸಿ ಮಹಿಳಾ ವಿಶ್ವಕಪ್ 2022 ನ್ಯೂಜಿಲೆಂಡ್

ಉತ್ತಮವಾಗಿಯೇ ಪ್ರದರ್ಶನ ನೀಡುತ್ತಿದ್ದ ವೆಸ್ಟ್​ಇಂಡೀಸ್​ ವನಿತೆಯರ ತಂಡ 100 ರನ್​ಗಳ ಬಳಿಕ ತನ್ನ ಶಕ್ತಿಯುತ ಆಟವನ್ನು ಕಳೆದುಕೊಂಡಿತು. 62 ರನ್​ಗಳಿಸಿದ್ದ ಡಿಯಾಂಡ್ರಾ ಡಾಟಿನ್ ಮತ್ತು ಹೇಲಿ ಮ್ಯಾಥ್ಯೂಸ್ ಔಟಾದ ಬಳಿಕ ಯಾವ ಆಟಗಾರ್ತಿಯೂ ಉತ್ತಮ ಪ್ರದರ್ಶನ ತೋರದೇ ಪೆವಿಲಿಯನ್​ ಹಾದಿ ಹಿಡಿದರು..

ICC Womens World Cup 2022, ICC Womens World Cup 2022 in New Zealand, India Women won the match against West Indies Women, ಐಸಿಸಿ ಮಹಿಳಾ ವಿಶ್ವಕಪ್ 2022, ಐಸಿಸಿ ಮಹಿಳಾ ವಿಶ್ವಕಪ್ 2022 ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮಹಿಳೆಯರ ವಿರುದ್ಧ ಗೆದ್ದ ಭಾರತೀಯ ಮಹಿಳೆಯರು,
ಕೃಪೆ: Twitter/icc
author img

By

Published : Mar 12, 2022, 1:46 PM IST

ಹ್ಯಾಮಿಲ್ಟನ್,(ನ್ಯೂಜಿಲೆಂಡ್): ವೆಸ್ಟ್​ಇಂಡೀಸ್​ ವಿರುದ್ಧ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ 155 ರನ್​ಗಳ ಭರ್ಜರಿ ಜಯ ಸಾಧಿಸಿದೆ. ನ್ಯೂಜಿಲ್ಯಾಂಡ್​ ವಿರುದ್ಧ ಹೀನಾಯ ಸೋಲಿನ ಬಳಿಕ ಭಾರತೀಯ ವನಿತೆಯರು ಮತ್ತೆ ಫಾರ್ಮ್​ಗೆ ಮರಳಿದ್ದಾರೆ.

ಭಾರತ ವನಿತೆಯರ ಇನ್ನಿಂಗ್ಸ್​ : ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಭಾರತದ ವನಿತೆಯರು ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಲೇ ಬಂದರು. ಭಾರತ ತಂಡ 78 ರನ್​ಗಳನ್ನು ಕಲೆ ಹಾಕಿದ್ದಾಗ ಬಾಟಿಯಾ, ಮಿಥಾಲಿ ರಾಜ್ ಮತ್ತು ದೀಪ್ತಿ ಶರ್ಮಾ​ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಬಂದ ಹರ್ಮನ್​ ಪ್ರೀತ್​ ಕೌರ್​ ಮತ್ತು ಸ್ಮೃತಿ ಮಂಧಾನ ವೆಸ್ಟ್​ ಇಂಡೀಸ್ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದರು.

ಓದಿ: ಬೇಟೆಯಾಡಿ ಚಿರತೆ ಮಾಂಸವನ್ನೇ ತಿಂದರು.. ಚರ್ಮ ಮಾರಲೆತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದ ಖದೀಮರು!

ಕೌರ್​ ಮತ್ತು ಮಂಧಾನ ಇಬ್ಬರು ವೆಸ್ಟ್​ಇಂಡೀಸ್​ ಬೌಲರ್​ಗಳನ್ನು ದಂಡಿಸಿದಲ್ಲದೇ ಭಾರತ ತಂಡದ ಮೊತ್ತವನ್ನು ಬೃಹತ್​ ಮಟ್ಟಕ್ಕೇರಿಸಿದರು. ಕೌರ್​ ಮತ್ತು ಮಂಧಾನ 184 ರನ್​ಗಳ ಜೊತೆಯಾಟವಾಡಿ ಉತ್ತಮ ಪ್ರದರ್ಶನ ತೋರಿದರು. ಭಾರತ ತಂಡ ನಿಗದಿತ 50 ಓವರ್​ಗಳಿಗೆ 8 ವಿಕೆಟ್​ಗಳನ್ನು ಕಳೆದುಕೊಂಡು 317 ರನ್​ಗಳ ಬೃಹತ್​ ಮೊತ್ತ ಕಲೆ ಹಾಕಿತು.

ಭಾರತ ತಂಡದ ಪರ : ಯಸ್ತಿಕಾ ಬಾಟಿಯಾ 31 ರನ್​, ನಾಯಕಿ ಮಿಥಾಲಿ ರಾಜ್​ 5 ರನ್​, ದೀಪ್ತಿ ಶರ್ಮಾ 15 ರನ್​, ಸ್ಮೃತಿ ಮಂಧಾನ 123 ರನ್​, ಹರ್ಮನ್​ ಪ್ರೀತ್​ ಕೌರ್​ 109, ಪೂಜಾ ವಾಸ್ತ್ರಾಕರ್​ 10 ರನ್​, ಗೋಸ್ವಾಮಿ 2 ರನ್​, ಸ್ನೇಹಾ ರಾಣಾ 2 ರನ್​ ಮತ್ತು ಮೇಘನಾ ಸಿಂಗ್​ 1 ರನ್​ ಕಲೆ ಹಾಕಿ ಅಜೇಯರಾಗಿ ಉಳಿದರು.

ಓದಿ: ಉಕ್ರೇನ್​ ಪರ ಹೋರಾಡುತ್ತಿದ್ದ ತಮಿಳುನಾಡು ಯುವಕನಿಗೆ ದೇಶಕ್ಕೆ ಮರಳುವ ಬಯಕೆ

ವೆಸ್ಟ್​ಇಂಡೀಸ್‌ ಪರ : ಅನಿಸಾ ಮೊಹಮ್ಮದ್ 2 ವಿಕೆಟ್​ಗಳನ್ನು ಕಬಳಿಸಿದ್ರೆ, ಶಾಮಿಲಿಯಾ ಕಾನ್ನೆಲ್, ಹೇಲಿ ಮ್ಯಾಥ್ಯೂಸ್, ಷಕೇರಾ ಸೆಲ್ಮನ್, ಡಿಯಾಂಡ್ರಾ ಡಾಟಿನ್, ಆಲಿಯಾ ಅಲೀನ್ ತಲಾ ಒಂದೊಂದು ವಿಕೆಟ್​ ಪಡೆದು ಮಿಂಚಿದರು.

ವೆಸ್ಟ್​ಇಂಡೀಸ್​ ಇನ್ನಿಂಗ್ಸ್ : ಇನ್ನು ಭಾರತ ನೀಡಿದ ಬೃಹತ್​ ಮೊತ್ತವನ್ನು ಬೆನ್ನತ್ತಿದ್ದ ವೆಸ್ಟ್​ಇಂಡೀಸ್ ವನಿತೆಯರ ತಂಡ ಆರಂಭದಲ್ಲಿ ಭರ್ಜರಿಯಾಗಿಯೇ ಅಬ್ಬರಿಸಿತು. ಆರಂಭಿಕ ಆಟಗಾರರಾದ ಡಿಯಾಂಡ್ರಾ ಡಾಟಿನ್ ಮತ್ತು ಹೇಲಿ ಮ್ಯಾಥ್ಯೂಸ್ ಶತಕದ ಜೊತೆಯಾಟವಾಡಿ ಭಾರತ ತಂಡದ ಬೌಲರ್​ಗಳನ್ನು ದಂಡಿಸುತ್ತಿದ್ದರು.

ಉತ್ತಮವಾಗಿಯೇ ಪ್ರದರ್ಶನ ನೀಡುತ್ತಿದ್ದ ವೆಸ್ಟ್​ಇಂಡೀಸ್​ ವನಿತೆಯರ ತಂಡ 100 ರನ್​ಗಳ ಬಳಿಕ ತನ್ನ ಶಕ್ತಿಯುತ ಆಟವನ್ನು ಕಳೆದುಕೊಂಡಿತು. 62 ರನ್​ಗಳಿಸಿದ್ದ ಡಿಯಾಂಡ್ರಾ ಡಾಟಿನ್ ಮತ್ತು ಹೇಲಿ ಮ್ಯಾಥ್ಯೂಸ್ ಔಟಾದ ಬಳಿಕ ಯಾವ ಆಟಗಾರ್ತಿಯೂ ಉತ್ತಮ ಪ್ರದರ್ಶನ ತೋರದೇ ಪೆವಿಲಿಯನ್​ ಹಾದಿ ಹಿಡಿದರು.

ಓದಿ: ತಾಯಿ ನಿದ್ರಿಸುತ್ತಿದ್ದಾಳೆ ಎಂದು ಭಾವಿಸಿ, ಮೃತದೇಹದೊಂದಿಗೆ ನಾಲ್ಕು ದಿನ ಕಳೆದ ಬಾಲಕ

ವೆಸ್ಟ್​ಇಂಡೀಸ್​ ಪರ : ಡಿಯಾಂಡ್ರಾ ಡಾಟಿನ್ 62 ರನ್​, ಹೇಲಿ ಮ್ಯಾಥ್ಯೂಸ್ 43 ರನ್​, ಕಿಸಿಯಾ ನೈಟ್ 5 ರನ್​, ನಾಯಕಿ ಸ್ಟಾಫನಿ ಟೇಲರ್ 1 ರನ್​, ಶೆಮೈನ್ ಕ್ಯಾಂಪ್‌ಬೆಲ್ಲೆ 11 ರನ್​, ಚೆಡಿಯನ್ ನೇಷನ್ 19 ರನ್​, ಚಿನೆಲ್ಲೆ ಹೆನ್ರಿ 7 ರನ್​, ಆಲಿಯಾ ಅಲೀನ್ 4 ರನ್​, ಶಾಮಿಲಿಯಾ ಕಾನ್ನೆಲ್ 0, ಅನಿಸಾ ಮೊಹಮ್ಮದ್ 2, 7 ರನ್​ ಕಲೆ ಹಾಕಿರುವ ಶಕೆರಾ ಸೆಲ್ಮನ್ ಅಜೇರಾಗಿ ಉಳಿದರು.

ಭಾರತ ತಂಡ ಪರ : ಉತ್ತಮ ಬೌಲಿಂಗ್​ ದಾಳಿ ನಡೆಸಿದ ಸ್ನೇಹ್​ ರಾಣಾ 3 ವಿಕೆಟ್​ಗಳನ್ನು ಪಡೆದು ಮಿಂಚಿದ್ರೆ, ಮೇಘನಾ ಸಿಂಗ್​ 2 ವಿಕೆಟ್​ ಕಬಳಿಸಿದರು. ಇನ್ನು ಗೋಸ್ವಾಮಿ, ರಾಜೇಶ್ವರಿ ಗಾಯಕ್ವಾಡ್​ ಮತ್ತು ಪೂಜಾ ತಲಾ ಒಂದೊಂದು ವಿಕೆಟ್​ ಪಡೆದು ತಂಡದ ಗೆಲುವಿಗೆ ಆಸರೆಯಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.