ಹ್ಯಾಮಿಲ್ಟನ್ (ನ್ಯೂಜಿಲ್ಯಾಂಡ್ ): ವನಿತೆಯರ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ವನಿತೆಯರ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಭಾರತದ ಸೆಮಿ ಕನಸು ಇನ್ನು ಜೀವಂತವಾಗಿ ಉಳಿದಿದೆ.
ಭಾರತ ವನಿತೆಯರ ಇನ್ನಿಂಗ್ಸ್: ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಭಾರತ ವನಿತೆಯರ ತಂಡಕ್ಕೆ ಉತ್ತಮ ಆರಂಭ ದೊರೆತಿತ್ತು. ಆರಂಭಿಕ ಬ್ಯಾಟರ್ಸ್ಗಳಾದ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಜೊತೆಗೂಡಿ 74 ರನ್ಗಳನ್ನು ಕಲೆ ಹಾಕಿದ್ದರು. ಆದರೆ, ಇವರ ಜೋಡಿಯನ್ನು ನಹಿದಾ ಅಕ್ತೆರ್ ಮತ್ತು ರಿತು ಮೊನಿ ಮುರಿದಿದ್ದಾರೆ.
-
A magnificent win for #TeamIndia 🙌
— ICC Cricket World Cup (@cricketworldcup) March 22, 2022 " class="align-text-top noRightClick twitterSection" data="
They beat Bangladesh by 110 runs to keep their semi-finals qualification hopes alive. #CWC22 pic.twitter.com/WiVq4VNyNW
">A magnificent win for #TeamIndia 🙌
— ICC Cricket World Cup (@cricketworldcup) March 22, 2022
They beat Bangladesh by 110 runs to keep their semi-finals qualification hopes alive. #CWC22 pic.twitter.com/WiVq4VNyNWA magnificent win for #TeamIndia 🙌
— ICC Cricket World Cup (@cricketworldcup) March 22, 2022
They beat Bangladesh by 110 runs to keep their semi-finals qualification hopes alive. #CWC22 pic.twitter.com/WiVq4VNyNW
ನಹಿದಾ ಅಕ್ತೆರ್ ಎಸೆತದಲ್ಲಿ 30 ರನ್ಗಳನ್ನು ಗಳಿಸಿದ್ದ ಸ್ಮೃತಿ ಮಂಧಾನ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. ಇದಾದ ಮುಂದಿನ ರಿತು ಮೊನಿ ಓವರ್ನಲ್ಲಿ ಶೆಫಾಲಿ ಸ್ಟಂಪ್ ಔಟ್ ಆದರು. ಕಣಕ್ಕಿಳಿದ ನಾಯಕಿ ಮಿಥಾಲಿ ರಾಜ್ ಸಹ ಗೊಲ್ಡನ್ ಡೆಕ್ ಆದರು. ಮೇಲಿಂದ ಮೇಲೆ ಮೂರು ವಿಕೆಟ್ಗಳನ್ನು ಕಳೆದುಕೊಂಡು, ಭಾರತ ತಂಡ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ಬಳಿಕ ಬಂದ ಯಸ್ತಿಕಾ ಭಾಟಿಯಾ ಬಾಂಗ್ಲಾ ಬೌಲರ್ಸ್ರ ಬೆವರಿಳಿಸಿದರು.
ಜವಾಬ್ದಾರಿಯುತ ಆಟ ಪ್ರದರ್ಶಿಸಿದ್ದ ಯಸ್ತಿಕಾ ಭಾಟಿಯಾ ಅರ್ಧ ಶತಕ ಪೂರೈಸಿ ಪೆವಲಿಯನ್ ಹಾದಿ ಹಿಡಿದರು. ನಿಗದಿತ 50 ಓವರ್ಗಳಿಗೆ ಭಾರತ ವನಿತೆಯರ ತಂಡ ಏಳು ವಿಕೆಟ್ ಕಳೆದುಕೊಂಡು 229 ರನ್ಗಳನ್ನು ಕಲೆ ಹಾಕಿ ಬಾಂಗ್ಲಾದೇಶದ ಗೆಲುವಿಗೆ 230 ರನ್ಗಳ ಟಾರ್ಗೆಟ್ ನೀಡಿತು. ಭಾರತದ ಪರ ಸ್ಮೃತಿ ಮಂಧಾನ 30 ರನ್, ಶಫಾಲಿ ವರ್ಮಾ 42 ರನ್, ಯಸ್ತಿಕಾ ಭಾಟಿಯಾ 50 ರನ್, ಮಿಥಾಲಿ ರಾಜ್ (ನಾಯಕಿ) ಡೆಕ್ ಔಟ್, ಹರ್ಮನ್‌ಪ್ರೀತ್ ಕೌರ್ 14 ರನ್ , ಸ್ನೇಹ ರಾಣಾ 27 ರನ್, ರಿಚಾ ಘೋಷ್ (ವಿಕೀ) 26 ರನ್ ಗಳಿಸಿದ್ರೆ, ಪೂಜಾ ವಸ್ತ್ರಾಕರ್ 30 ರನ್ ಮತ್ತು ಜೂಲನ್ ಗೋಸ್ವಾಮಿ 2 ರನ್ ಕಲೆ ಹಾಕಿ ಅಜೇಯರಾಗಿ ಉಳಿದರು.
ಬಾಂಗ್ಲಾದೇಶ ಪರ ರಿತು ಮೋನಿ 3 ವಿಕೆಟ್ ಪಡೆದರೆ, ನಹಿದಾ 2 ವಿಕೆಟ್ ಪಡೆದು ಮಿಂಚಿದರು. ಇನ್ನು ಜಹಾನಾರಾ ಆಲಂ ಒಂದು ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.
ಬಾಂಗ್ಲಾದೇಶ ಇನ್ನಿಂಗ್ಸ್: ಭಾರತ ನೀಡಿರುವ 230 ರನ್ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ಆರಂಭದಿಂದಲೇ ಎಡವಿತು. ಭಾರತ ವನಿತೆಯರ ಬೌಲಿಂಗ್ ದಾಳಿಗೆ ಬಾಂಗ್ಲಾ ನಾರಿಯರು ತತ್ತರಿಸಿದರು. ಒಬ್ಬರಂತೆ ಒಬ್ಬರು ಪೆವಿಲಿಯನ್ ಹಾದಿ ಹಿಡಿದರು. ನಿಗದಿತ 50 ಓವರ್ಗಳಿಗೆ ಬಾಂಗ್ಲಾ ವನಿತೆಯರು ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 119 ರನ್ಗಳನ್ನು ಕಲೆ ಹಾಕುವ ಮೂಲಕ ಸೋಲನ್ನಪ್ಪಿಕೊಂಡಿತು.
ಬಾಂಗ್ಲಾದೇಶ ಪರ ಶರ್ಮಿನ್ ಅಖ್ತರ್ 5 ರನ್, ಮುರ್ಷಿದಾ ಖಾತುನ್ 19 ರನ್, ಫರ್ಗಾನಾ ಹೊಕ್ ಡೆಕ್ ಔಟ್, ನಿಗರ್ ಸುಲ್ತಾನಾ (ನಾಯಕಿ) 3 ರನ್, ರುಮಾನಾ ಅಹ್ಮದ್ 2 ರನ್, ರಿತು ಮೋನಿ 16 ರನ್, ಲತಾ ಮೊಂಡಲ್ 24 ರನ್, ಸಲ್ಮಾ ಖಾತುನ್ 32 ರನ್, ನಹಿದಾ ಅಕ್ತೆರ್ ಡೆಕ್ ಔಟ್, ಫಾಹಿಮಾ ಖಾತುನ್ 1 ರನ್, ಜಹಾನಾರಾ ಆಲಂ ಔಟಾಗದೇ 11 ರನ್ ಗಳಿಸಿದ್ದಾರೆ.
ಭಾರತದ ಪರ ಸ್ನೇಹ್ ರಾಣಾ 4 ವಿಕೆಟ್ ಪಡೆದು ಮಿಂಚಿದರೆ, ಜೂಲನ್ ಗೋಸ್ವಾಮಿ ಮತ್ತು ಪೂಜಾ ವಸ್ತ್ರಾಕರ್ ತಲಾ ಎರಡು ವಿಕೆಟ್ಗಳು ಪಡೆದ್ರೆ, ಪೂನಮ್ ಯಾದವ್ ಮತ್ತು ರಾಜೇಶ್ವರಿ ಗಾಯ್ಕವಾಡ್ ತಲಾ ಒಂದೊಂದು ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು. ಈ ಗೆಲುವಿನ ಮೂಲಕ ಭಾರತ ಪಾಯಿಂಟ್ ಟೇಬಲ್ನಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಮುಂದಿನ ಪಂದ್ಯ ಭಾನುವಾರ ಸೌತ್ ಆಫ್ರಿಕಾ ವನಿತೆಯರ ತಂಡವನ್ನು ಭಾರತದ ವನಿತೆಯರು ಎದುರಿಸಲಿದ್ದಾರೆ.