ಕೇಪ್ಟೌನ್ (ದಕ್ಷಿಣ ಆಫ್ರಿಕಾ): ವನಿತೆಯರ ಟಿ20 ವಿಶ್ವಕಪ್ನ ಭಾರತದ ಎರಡನೇ ಪಂದ್ಯದಲ್ಲಿ ವುಮೆನ್ ಇನ್ ಬ್ಲೂ ತಂಡ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡ 6 ವಿಕೆಟ್ ನಷ್ಟಕ್ಕೆ 118 ರನ್ಗಳಿಸಿ ಕನಿಷ್ಠ ಮೊತ್ತಕ್ಕೆ ಕುಸಿತ ಕಂಡಿತು. ಸಾಧಾರಣ ಮೊತ್ತವನ್ನು ಬೆನ್ನು ಹತ್ತಿದ ಭಾರತೀಯ ವನಿತೆಯರು ಮತ್ತೊಮ್ಮ 6 ವಿಕೆಟ್ಗಳ ಗೆಲುವು ಸಾಧಿಸಿದರು. ಮತ್ತೆ ಘರ್ಜಸಿದ ರಿಚಾ ಘೋಷ್ 44ರನ್ ಗಳಿಸಿದರು. ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ಅಂತಾರಾಷ್ಟ್ರೀಯ ಟಿ-20 ಯಲ್ಲಿ ಶತಕ ಔಟ್ಗಳನ್ನು ಮಾಡಿದ ದೀಪ್ತಿ ಶರ್ಮಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ ಹುರುಪಿನಲ್ಲಿ ಅದೇ ಕ್ರೀಡಾಂಗಣದಲ್ಲಿ ಕಣಕ್ಕಿಳಿದ ಹರ್ಮನ್‌ಪ್ರೀತ್ ಕೌರ್ ಪಡೆ ಮತ್ತೊಂದು ಜಯ ಸಾಧಿಸಿತು. ಇಂದಿನ ತಂಡಕ್ಕೆ ಗಾಯದಿಂದ ಚೇತರಿಸಿಕೊಂಡ ಸ್ಮೃತಿ ಮಂಧಾನ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಸಾಧಾರಣ ಮೊತ್ತದ ಬೆನ್ನಟ್ಟಿದ ಭಾರತಕ್ಕೆ ಎಂದಿನಂತೆ ಶಫಾಲಿ ವರ್ಮಾ ಬಿರುಸಿನ ಆಟ ಆಡಿದರು. ಅವರ ಜೊತೆ ಸ್ಮೃತಿ ಮಂಧಾನ ಸಾಥ್ ನೀಡಿದರು.
-
Victory for India in Cape Town!
— ICC (@ICC) February 15, 2023 " class="align-text-top noRightClick twitterSection" data="
📝: https://t.co/kJcwkY9K11 #WIvIND | #T20WorldCup | #TurnItUp pic.twitter.com/mDm26V1eiI
">Victory for India in Cape Town!
— ICC (@ICC) February 15, 2023
📝: https://t.co/kJcwkY9K11 #WIvIND | #T20WorldCup | #TurnItUp pic.twitter.com/mDm26V1eiIVictory for India in Cape Town!
— ICC (@ICC) February 15, 2023
📝: https://t.co/kJcwkY9K11 #WIvIND | #T20WorldCup | #TurnItUp pic.twitter.com/mDm26V1eiI
ಶಫಾಲಿ ವರ್ಮಾ ಒಂದೆಡೆ ಬಿರುಸಿನ ಆಟ ಆಡುತ್ತಿದ್ದರೆ, ಕಮ್ ಬ್ಯಾಕ್ ಮಾಡಿದ್ದ ಸ್ಮೃತಿ ಮಂಧಾನ 2 ಬೌಡರಿಯ ಜೊತೆಗೆ 10 ರನ್ಗಳಿಸಿ ಔಟ್ ಆದರು. ಇವರ ಬೆನ್ನಲ್ಲೇ ಪಾಕಿಸ್ತಾನದ ಎದುರು ಅರ್ಧಶತಕ ಗಳಿಸಿದ್ದ ಜೆಮಿಮಾ ರಾಡ್ರಿಗಸ್ 1 ರನ್ಗೆ ವಿಕೆಟ್ ಒಪ್ಪಿಸಿದೆರು. ನಂತರ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ ತಾಳ್ಮೆಯ ಆಟಕ್ಕೆ ಮುಂದಾದರು. ಬಿರುಸಿನ ಆಟ ಆಡುತ್ತಿದ್ದ ಶಫಾಲಿ ವರ್ಮಾ 28 ರನ್ ಔಟ್ ಆದರು.
-
#TeamIndia register their second consecutive victory in the #T20WorldCup! 👌🏻
— BCCI Women (@BCCIWomen) February 15, 2023 " class="align-text-top noRightClick twitterSection" data="
For her economical three-wicket haul, @Deepti_Sharma06 receives the Player of the Match award 👏🏻👏🏻
Scorecard ▶️ https://t.co/OwonYGMAQX…#INDvWI pic.twitter.com/epH7XjwABJ
">#TeamIndia register their second consecutive victory in the #T20WorldCup! 👌🏻
— BCCI Women (@BCCIWomen) February 15, 2023
For her economical three-wicket haul, @Deepti_Sharma06 receives the Player of the Match award 👏🏻👏🏻
Scorecard ▶️ https://t.co/OwonYGMAQX…#INDvWI pic.twitter.com/epH7XjwABJ#TeamIndia register their second consecutive victory in the #T20WorldCup! 👌🏻
— BCCI Women (@BCCIWomen) February 15, 2023
For her economical three-wicket haul, @Deepti_Sharma06 receives the Player of the Match award 👏🏻👏🏻
Scorecard ▶️ https://t.co/OwonYGMAQX…#INDvWI pic.twitter.com/epH7XjwABJ
ನಾಯಕಿ ಹರ್ಮನ್‌ಪ್ರೀತ್ ಕೌರ್ ಸೇರಿಕೊಂಡ ರಿಚಾ ಘೋಷ್ ಪಾಕಿಸ್ತಾನದ ಎದುರಿನ ಫಾರ್ಮ್ನ್ನು ಮುಂದುವರೆಸಿದರು. 43 ಕ್ಕೆ ಮೂರು ವಿಕೆಟ್ ಕಳೆದು ಕೊಂಡಿದ್ದ ಭಾರತಕ್ಕೆ ಈ ಇಬ್ಬರು ಆಟಗಾರ್ತಿಯರು ಸಧೃಡವಾಗಿ ನಿಂತು ತಂಡವನ್ನು ಗೆಲುವಿನತ್ತ ಕೊಂಡೊಯ್ಯದರು. ಗೆಲುವಿನ ನಾಲ್ಕು ರನ್ ಬಾಕಿ ಇರುವಂತೆ ನಾಯಕಿ ಹರ್ಮನ್‌ಪ್ರೀತ್ ಕೌರ್ (33) ವಿಕೆಟ್ ಒಪ್ಪಿಸಿದರು. ರಿಚಾ ಘೋಷ್ ಅಜೇಯ 44 ರನ್ ಗಳಿಸಿದರು. ವೆಸ್ಟ್ ಇಂಡೀಸ್ ಪರ ಕರಿಷ್ಮಾ ರಾಮ್ಹರಾಕ್ 2 ವಿಕೆಟ್ ಮತ್ತು ಹೇಲಿ ಮ್ಯಾಥ್ಯೂಸ್, ಚಿನೆಲ್ಲೆ ಹೆನ್ರಿ ತಲಾ ಒಂದು ವಿಕೆಟ್ ಪಡೆದರು.
ಭಾರತ ಮಹಿಳೆಯರ ಆಡುವ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ದೇವಿಕಾ ವೈದ್ಯ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಠಾಕೂರ್ ಸಿಂಗ್
ವೆಸ್ಟ್ ಇಂಡೀಸ್ ಮಹಿಳೆಯರ ಆಡುವ ತಂಡ: ಹೇಲಿ ಮ್ಯಾಥ್ಯೂಸ್ (ನಾಯಕಿ), ಸ್ಟಾಫಾನಿ ಟೇಲರ್, ಶೆಮೈನ್ ಕ್ಯಾಂಪ್ಬೆಲ್ಲೆ, ಶಬಿಕಾ ಗಜ್ನಾಬಿ, ಚಿನೆಲ್ಲೆ ಹೆನ್ರಿ, ಚೆಡಿಯನ್ ನೇಷನ್, ಅಫಿ ಫ್ಲೆಚರ್, ಶಾಮಿಲಿಯಾ ಕಾನ್ನೆಲ್, ರಶಾದಾ ವಿಲಿಯಮ್ಸ್ (ವಿಕೆಟ್ ಕೀಪರ್), ಕರಿಷ್ಮಾ ರಾಮ್ಹರಾಕ್, ಶಕೆರಾ ಸೆಲ್ಮನ್
ಇದನ್ನೂ ಓದಿ: Women's T20 World Cup: ಭಾರತಕ್ಕೆ 119 ರನ್ ಗುರಿ, ದೀಪ್ತಿ ಶರ್ಮಾಗೆ 100ನೇ ಟಿ20 ವಿಕೆಟ್