ನವದೆಹಲಿ: ಕಿವೀಸ್ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ತಮ್ಮ ಮೊದಲ ಪಂದ್ಯವನ್ನಾಡುತ್ತಿರುವ ಭಾರತ ವನಿತಾ ತಂಡವನ್ನು ಹುರಿದುಂಬಿಸುವಂತೆ ಅಭಿಮಾನಿಗಳಿಗೆ ಟೀಮ್ ಇಂಡಿಯಾ ಕ್ರಿಕೆಟರ್ ವಿರಾಟ್ ಕೊಹ್ಲಿ ಬುಧವಾರ ಕರೆ ನೀಡಿದ್ದಾರೆ.
ಮಾರ್ಚ್ 4 ರಂದು ಮಹಿಳಾ ಏಕದಿನ ವಿಶ್ವಕಪ್ ಆರಂಭವಾಗಲಿದೆ. ಮಿಥಾಲಿ ರಾಜ್ ನೇತೃತ್ವದ ಭಾರತ ತಂಡ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
-
No better time to cheer for the #WomenInBlue and show the strength of #HamaraBlueBandhan than this, ‘cause it’s time for the ICC Women’s World Cup 2022!
— Virat Kohli (@imVkohli) March 2, 2022 " class="align-text-top noRightClick twitterSection" data="
So set your alarms for 6.30 AM on Mar 6, 2022 & watch #PAKvIND on @StarSportsIndia & Disney+Hotstar | ICC #CWC22 #ad https://t.co/OSAvQTmKAm
">No better time to cheer for the #WomenInBlue and show the strength of #HamaraBlueBandhan than this, ‘cause it’s time for the ICC Women’s World Cup 2022!
— Virat Kohli (@imVkohli) March 2, 2022
So set your alarms for 6.30 AM on Mar 6, 2022 & watch #PAKvIND on @StarSportsIndia & Disney+Hotstar | ICC #CWC22 #ad https://t.co/OSAvQTmKAmNo better time to cheer for the #WomenInBlue and show the strength of #HamaraBlueBandhan than this, ‘cause it’s time for the ICC Women’s World Cup 2022!
— Virat Kohli (@imVkohli) March 2, 2022
So set your alarms for 6.30 AM on Mar 6, 2022 & watch #PAKvIND on @StarSportsIndia & Disney+Hotstar | ICC #CWC22 #ad https://t.co/OSAvQTmKAm
100ನೇ ಟೆಸ್ಟ್ ಹೊಸ್ತಿಲಲ್ಲಿರುವ ವಿರಾಟ್ ಕೊಹ್ಲಿ ಬುಧವಾರ ಮಹಿಳಾ ಕ್ರಿಕೆಟಿಗರನ್ನು ಹುರಿದುಂಬಿಸಲು ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿರುವ ವಿಶೇಷ ವಿಡಿಯೋ ಶೇರ್ ಮಾಡಿಕೊಂಡಿದ್ದು, ಎಲ್ಲರೂ ಮಹಿಳಾ ತಂಡವನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ.
'ವಿಮೆನ್ ಇನ್ ಬ್ಲೂ' (#HamaraBlueBandhan) ಅವರನ್ನು ಹುರಿದುಂಬಿಸಲು ಮತ್ತು ನಮ್ಮ ನೀಲಿ ಬಂಧನದ (#HamaraBlueBandhan) ಶಕ್ತಿಯನ್ನು ನಮಗೆ ತೋರಿಸಲು ಇದಕ್ಕಿಂತ ಉತ್ತಮ ಸಮಯವಿಲ್ಲ, ಏಕೆಂದರೆ ಇದು ಐಸಿಸಿ ಮಹಿಳಾ ವಿಶ್ವಕಪ್ 2022ರ ಸಮಯವಾಗಿದೆ ಎಂದು ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಮಾರ್ಚ್ 6, 2022ರಂದು ಬೆಳಿಗ್ಗೆ 6:30ಕ್ಕೆ ನಿಮ್ಮ ಅಲಾರಂ ಅನ್ನು ಹೊಂದಿಸಿಕೊಳ್ಳಿ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಭಾರತ ತಂಡ ವಿಶ್ವಕಪ್ಗೂ ಮುನ್ನ ನಡೆದ ಎರಡೂ ಅಭ್ಯಾಸ ಪಂದ್ಯದಲ್ಲೂ ಗೆಲುವು ಸಾಧಿಸಿ ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
ಪಾಕಿಸ್ತಾನದ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿರುವ ಭಾರತೀಯ ತಂಡ ಆಡಿರುವ 10 ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.
ಇದನ್ನೂ ಓದಿ: ಮಹಿಳಾ ವಿಶ್ವಕಪ್ : 11 ಆವೃತ್ತಿಗಳಲ್ಲಿ ಚಾಂಪಿಯನ್ ಪಟ್ಟಕೇರಿದ್ದು ಮೂರೇ ತಂಡಗಳು!!