ಆ್ಯಂಟಿಗುವಾ(ವೆಸ್ಟ್ ಇಂಡೀಸ್): ಭಾರತದ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿದ ಹಾಲಿ ಚಾಂಪಿಯನ್ಸ್ ಬಾಂಗ್ಲಾದೇಶವು ಐಸಿಸಿ U19 ವಿಶ್ವಕಪ್‌ನ ಸೂಪರ್ ಲೀಗ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿದೆ. 5 ವಿಕೆಟ್ಗಳ ಅಂತರದ ಜಯಭೇರಿ ಬಾರಿಸಿದ ಯಶ್ ದುಲ್ ಪಡೆಯು ಸೆಮಿಫೈನಲ್ ಪ್ರವೇಶಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ ಕೇವಲ 37.1 ಓವರ್ಗಳಲ್ಲಿ 111 ರನ್ಗಳಿಗೆ ಆಲೌಟ್ ಆಯಿತು. ಆರಂಭದಿಂದಲೂ ರನ್ ಗಳಿಸಲು ಪರದಾಡಿದ ಬಾಂಗ್ಲಾ ದಾಂಡಿಗರಲ್ಲಿ ಮೂವರು ಮಾತ್ರ ಎರಡಂಕಿ ಮೊತ್ತ ತಲುಪಿದರು. ಏಚ್ ಮೊಲ್ಹಾ 17, ಮೆಹೆರೊಬ್ 30 ಹಾಗೂ ಅಶಿಕುರ್ ಝಮಾನ್ 16 ರನ್ ಗಳಿಸಿ ಕೊಂಚ ಹೋರಾಟ ನಡೆಸಿದರು. ಭಾರತದ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ರವಿಕುಮಾರ್ 14ಕ್ಕೆ 3, ವಿಕಿ ಒಸ್ತ್ವಾಲ್ 25ಕ್ಕೆ 2 ವಿಕೆಟ್ ಕಬಳಿಸಿ ಗಮನ ಸೆಳೆದರು.
-
All Over: Sealed with a SIX
— BCCI (@BCCI) January 29, 2022 " class="align-text-top noRightClick twitterSection" data="
India U19 have advanced to the semi-final of #U19CWC with a 5-wicket win over Bangladesh U19 in Antigua! #BoysInBlue #INDvBAN
Details - https://t.co/GJsWrPDzdJ pic.twitter.com/tkt6xC3qD9
">All Over: Sealed with a SIX
— BCCI (@BCCI) January 29, 2022
India U19 have advanced to the semi-final of #U19CWC with a 5-wicket win over Bangladesh U19 in Antigua! #BoysInBlue #INDvBAN
Details - https://t.co/GJsWrPDzdJ pic.twitter.com/tkt6xC3qD9All Over: Sealed with a SIX
— BCCI (@BCCI) January 29, 2022
India U19 have advanced to the semi-final of #U19CWC with a 5-wicket win over Bangladesh U19 in Antigua! #BoysInBlue #INDvBAN
Details - https://t.co/GJsWrPDzdJ pic.twitter.com/tkt6xC3qD9
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಬಳಿಕ 112 ರನ್ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಟಗಾರ ರಘುವಂಶಿ 44 ರನ್ ಬಾರಿಸಿ ನೆರವಾದರು. ಬಳಿಕ ಶೇಕ್ ರಶೀದ್ 26, ನಾಯಕ ಯಶ್ ದುಲ್ ಅಜೇಯ 20 ಹಾಗೂ ಕೌಶಲ್ ತಾಂಬೆ 11* ರನ್ ಗಳಿಸಿ 30.1 ಓವರ್ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಈ ಗೆಲುವಿನೊಂದಿಗೆ ಭಾರತವು ಫೆಬ್ರವರಿ 2ರಂದು ಸೂಪರ್ ಲೀಗ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ: 'ನಮ್ಮ ಕಾಲದಲ್ಲಿ ಈ ನಿಯಮ ಜಾರಿಯಲ್ಲಿದ್ದಿದ್ದರೆ ಸಚಿನ್ ಲಕ್ಷ ರನ್ ಸಿಡಿಸುತ್ತಿದ್ರು': ಅಖ್ತರ್!