ETV Bharat / sports

U19W T20 World Cup: ಚೊಚ್ಚಲ ವಿಶ್ವಕಪ್ ಗೆದ್ದ ಭಾರತದ ವನಿತೆಯರು, ತಂಡಕ್ಕೆ 5 ಕೋಟಿ ಬಹುಮಾನ - ETV Bharath Karnataka

ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟ ಭಾರತೀಯ ವನಿತೆಯರು - ಇಂಗ್ಲೆಂಡ್​ನ್ನು 68 ರನ್​ಗೆ ಕಟ್ಟಿ ಹಾಕಿದ ಬೌಲಿಂಗ್​ ಪಡೆ - ಮೂರು ವಿಕೆಟ್​ ನಷ್ಟಕ್ಕೆ ಗುರಿ ತಲುಪಿದ ಭಾರತ.

U19W T20 World Cup
19 ವರ್ಷದೊಳಗಿನ ವನಿತೆಯರ ಮಡಿಲಿಗೆ ಚೊಚ್ಚಲ ವಿಶ್ವಕಪ್​
author img

By

Published : Jan 29, 2023, 8:02 PM IST

Updated : Jan 29, 2023, 9:22 PM IST

ಪೊಚೆಫ್‌ಸ್ಟ್ರೂಮ್(ದಕ್ಷಿಣ ಆಫ್ರಿಕಾ): ಆಂಗ್ಲರ ಎದುರು ಪ್ರಬಲ ಬ್ಯಾಟಿಂಗ್​ ಮತ್ತು ಬೌಲಿಂಗ್​ ಪ್ರದರ್ಶನ ನೀಡಿದ 19 ವರ್ಷದೊಳಗಿನ ವನಿತೆಯರು ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಐಸಿಸಿಯಿಂದ ಮೊದಲ ಬಾರಿಗೆ 19 ವರ್ಷದೊಳಗಿನವರ ವನಿತೆಯರ ವಿಶ್ವಕಪ್​ ಆಯೋಜನೆಗೊಂಡಿದ್ದು, ಮೊದಲ ಆವೃತ್ತಿಯಲ್ಲೇ ಭಾರತದ ವುಮೆನ್​ ಇನ್​ ಬ್ಲೂ ತಂಡ ಜಯ ಸಾಧಿಸಿದೆ.

ಟಾಸ್​ ಗೆದ್ದ ಭಾರತೀಯ ವನಿತೆಯರು ಇಂಗ್ಲೆಂಡ್​ನ್ನು ಬ್ಯಾಟಿಂಗ್​ ಮಾಡುವಂತೆ ಆಹ್ವಾನ ಇತ್ತರು. 17.1 ಓವರ್​ಗೆ 68 ರನ್​ಗೆ ಆಲ್​ ಔಟ್​ ಮಾಡಿದರು. ಈ ಸುಲಭ ಗುರಿಯನ್ನು ಸೌಮ್ಯ ತಿವಾರಿ ಮತ್ತು ತ್ರಿಶಾ 14 ಓವರ್​ನಲ್ಲೇ ಮುಗಿಸಿದರು. ಭಾರತ ತಂಡ ಮೂರು ವಿಕೆಟ್​ ಕಳೆದುಕೊಂಡು 69 ರನ್​ ಪೇರಿಸಿ ವಿಜಯ ಪತಾಕೆ ಹಾರಿಸಿತು.

ಟಾಸ್​ ಗೆದ್ದ ಶೆಫಾಲಿ ವರ್ಮಾ ಬೌಲಿಂಗ್​ ಆಯ್ಕೆ ಮಾಡಿಕೊಂಡರು. ಯೋಜನೆಯಂತೆ ಇಂಗ್ಲೆಂಡ್​ ತಂಡವನ್ನು ಕಟ್ಟಿಹಾಕುವಲ್ಲಿ ತಂಡ ಯಶಸ್ವಿಯಾಯಿತು. ಬ್ರಿಟಿಷರನ್ನು ಬೌಲರ್​ಗಳು ಕೇವಲ 68 ರನ್​ಗೆ ಮಣಿಸಿದರು. 69 ರನ್​ನ ಗುರಿಯನ್ನು ಬೆನ್ನು ಹತ್ತಿದ ಭಾರತದ ವನಿತೆಯರು ಆರಂಭಿ ನಷ್ಟ ಅನುಭವಿಸಿದರು. ಉತ್ತಮ ಫಾರ್ಮ್​ನಲ್ಲಿದ್ದು ಸೆಮಿಸ್​ನಲ್ಲಿ ತಂಡಕ್ಕೆ ಆಸರೆ ಆಗಿದ್ದ ಶ್ವೇತಾ ಸೆಹ್ರಾವತ್ 5 ರನ್​ಗೆ ವಿಕೆಟ್​ ಕಳೆದುಕೊಂಡರು.

ನಂತರ ಬಂದ ಸೌಮ್ಯ ತಿವಾರಿ ಮತ್ತು ಆರಂಭಿಕರಾಗಿ ಬಂದಿದ್ದ ನಾಯಕಿ ಶೆಫಾಲಿ ವರ್ಮಾ ಅವರ ಜೊತೆ ಇನ್ನಿಂಗ್ಸ್​ ಕಟ್ಟಿದರು. ತಂಡದ ಮೊತ್ತ 20 ರನ್​ ಆಗಿದ್ದಾಗ ನಾಯಕಿ ಕ್ಯಾಚ್​ ಔಟ್ ಆಗಿ ಪೆವಿಲಿಯನ್​ಗೆ ಮರಳಿರು. ನಂತರ ಗೊಂಗಡಿ ತ್ರಿಶಾ ಮತ್ತು ತಿವಾರಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯದರು. ಗೆಲುವಿಗೆ ಎರಡು ರನ್​ ಬಾಕಿ ಇರುವಾಗ ತ್ರಿಶಾ (24) ವಿಕೆಟ್​ ಕಳೆದುಕೊಂಡರು. ಸೌಮ್ಯ (24) ಅವರು ಅಜೇಯರಾಗಿ ತಂಡಕ್ಕೆ ಗೆಲುವು ತಂದಿತ್ತರು.

ಇಂಗ್ಲೆಂಡ್​ ಪೆವಿಲಿಯನ್​ ಪರೇಡ್​: ಭಾರತೀಯ ವನಿತೆಯರು ಆರಂಭದಲ್ಲೇ ತಮ್ಮ ಪಾರಮ್ಯ ಸಾಧಿಸಿದರು. ಆಂಗ್ಲರಲ್ಲಿ 4 ಜನ ಮಾತ್ರ ಎರಡಂಕಿ ದಾಟಿದರು. ಉಳಿದ 7 ಜನ ಒಂದಂಕಿಗೆ ಔಟ್​ ಆದರೆ, ಅದರಲ್ಲಿ ಎರಡು ಡಕ್​ ವಿಕೆಟ್​ಗಳಾಗಿದ್ದವು. ರಿಯಾನಾ ಮ್ಯಾಕ್ಡೊನಾಲ್ಡ್ ಗೇ 19, ಅಲೆಕ್ಸಾ ಸ್ಟೋನ್‌ಹೌಸ್ ಮತ್ತು ಸೋಫಿಯಾ ಸ್ಮೇಲ್ ತಲಾ 11 ರನ್​ ಹಾಗೂ ನಿಯಾಮ್ ಫಿಯೋನಾ ಹಾಲೆಂಡ್ 10 ರನ್ ಗಳಿಸಿದ್ದು ಬಿಟ್ಟರೆ ಮತ್ತಾರೂ 5 ರನ್​ ದಾಟಲಿಲ್ಲ. ಭಾರತದ ಪರ ಟಿಟಾಸ್ ಸಾಧು, ಅರ್ಚನಾ ದೇವಿ ಮತ್ತು ಪಾರ್ಶವಿ ಚೋಪ್ರಾ ತಲಾ 2 ವಿಕೆಟ್​ ಕಬಳಿಸಿದರು. ಮನ್ನತ್ ಕಶ್ಯಪ್, ಶಫಾಲಿ ವರ್ಮಾ ಮತ್ತು ಸೋನಮ್ ಯಾದವ್ ತಲಾ 1 ವಿಕೆಟ್​ ಗಳಿಸಿದರು.

ತಂಡಕ್ಕೆ 5 ಕೋಟಿಯ ಬಹುಮಾನ ಘೋಷಣೆ: ಮೊದಲ ಬಾರಿಗೆ 19 ವರ್ಷದೊಳಗಿನ ವನಿತೆಯರ ವಿಶ್ವಕಪ್​ ಗೆಲುವು ದಾಖಲಾದ ಹಿನ್ನೆಲೆಯಲ್ಲಿ ಬಿಸಿಸಿಐನ ಕಾರ್ಯದರ್ಶಿ ಜಯ್​ ಶಾ ಅವರು 5 ಕೋಟಿಯ ಬಹುಮಾನವನ್ನು ತಂಡಕ್ಕೆ ಘೋಷಿಸಿದ್ದಾರೆ. ಫೈನಲ್​ನಲ್ಲಿ ಬ್ರಿಟನ್​ಅನ್ನು 7 ವಿಕೆಟ್​ಗಳಿಂದ ಮಣಿಸಿದ ವನಿತೆಯರು ಮೊದಲ ಬಾರಿಗೆ ವಿಶ್ವ ಕಪ್​ ಗೆದ್ದು ದಾಖಲೆ ನಿರ್ಮಿಸಿದ್ದಾರೆ.

  • Women’s Cricket in India is on the upswing and the World Cup triumph has taken the stature of women’s cricket several notches higher. I am delighted to announce INR 5 crore for the entire team and support staff as prize money. This is surely a path-breaking year.

    — Jay Shah (@JayShah) January 29, 2023 " class="align-text-top noRightClick twitterSection" data=" ">

ಜಯ್​ ಶಾ ಟ್ವೀಟ್ ಮಾಡಿ, ವಿಶ್ವಕಪ್​ನಲ್ಲಿ ಗೆದ್ದ ಭಾರತದ 19 ವರ್ಷದೊಳಗಿನವರ ತಂಡಕ್ಕೆ ಅಭಿನಂದನೆಗಳು. ಇದು ನಮ್ಮ ಯುವ ಕ್ರಿಕೆಟಿಗರು ದೇಶವನ್ನು ಹೆಮ್ಮೆ ಪಡುವಂತೆ ಮಾಡಿರುವ ಅದ್ಭುತ ಸಾಧನೆಯಾಗಿದೆ. ಫೆಬ್ರವರಿ 1 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಮೂರನೇ ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಪಂದ್ಯದಲ್ಲಿ ಸಂಭ್ರಮಾಚರಣೆ ಮಾಡೋಣ ಎಂದಿದ್ದಾರೆ.

ಭಾರತದಲ್ಲಿ ಮಹಿಳಾ ಕ್ರಿಕೆಟ್ ಏರುಗತಿಯಲ್ಲಿದೆ ಮತ್ತು ವಿಶ್ವಕಪ್ ವಿಜಯೋತ್ಸವವು ಮಹಿಳಾ ಕ್ರಿಕೆಟ್‌ನ ಸ್ಥಾನಮಾನವನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ. ಬಹುಮಾನದ ಮೊತ್ತವಾಗಿ ಇಡೀ ತಂಡ ಮತ್ತು ಸಹಾಯಕ ಸಿಬ್ಬಂದಿಗೆ 5 ಕೋಟಿಯನ್ನು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಜಯ್​ ಶಾ ಟ್ವಿಟ್​ ಮಾಡಿದ್ದಾರೆ.

  • Congratulations to the Indian Team for a special win at the @ICC #U19T20WorldCup. They have played excellent cricket and their success will inspire several upcoming cricketers. Best wishes to the team for their future endeavours. https://t.co/BBn5M9abHp

    — Narendra Modi (@narendramodi) January 29, 2023 " class="align-text-top noRightClick twitterSection" data=" ">

ಮೋದಿ, ಶಾ ಶುಭಾಶಯ: 19 ವರ್ಷದೊಳಗಿನ ಮೊದಲ ಬಾರಿಗೆ ಆಯೋಜನೆ ಆದ ವಿಶ್ವಕಪ್​ನಲ್ಲಿ ಪ್ರಥಮ ಕಪ್​ನ್ನು ಗೆದ್ದ ವುಮೆನ್​ ಇನ್​ ಬ್ಲೂ ತಂಡಕ್ಕೆ ಪ್ರಧಾನಿ ಮೋದಿ ಮತ್ತು ಅಮಿತ್​​ ಶಾ ಶುಭಕೋರಿದ್ದಾರೆ. ಮೋದಿ ಟ್ವಿಟ್​ ಮಾಡಿ,'ವಿಶೇಷ ಗೆಲುವು ಸಾಧಿಸಿದ ಭಾರತ ತಂಡಕ್ಕೆ ಅಭಿನಂದನೆಗಳು. ವನಿತೆಯರು ಅತ್ಯುತ್ತಮ ಕ್ರಿಕೆಟ್ ಆಡಿದ್ದಾರೆ ಮತ್ತು ಅವರ ಯಶಸ್ಸು ಹಲವಾರು ಮುಂಬರುವ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡುತ್ತದೆ. ತಂಡದ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು' ಎಂದಿದ್ದಾರೆ.

  • India’s daughters create grand history by lifting the first Women’s #U19T20WorldCup.

    You have shown remarkable energy and passion throughout the series.

    India is proud of you. Your triumph gives wings to the dreams of millions of young girls in India.@BCCIWomen https://t.co/gcKvRiIuBr

    — Amit Shah (@AmitShah) January 29, 2023 " class="align-text-top noRightClick twitterSection" data=" ">

ಶಾ ಟ್ವಿಟ್​ನಲ್ಲಿ, 'ಭಾರತದ ಹೆಣ್ಣುಮಕ್ಕಳು ಮೊದಲ ಮಹಿಳಾ 19 ವರ್ಷದೊಳಗಿನ ವಿಶ್ವಕಪ್ ಅನ್ನು ಎತ್ತಿ ಹಿಡಿಯುವ ಮೂಲಕ ಭವ್ಯ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಸರಣಿಯುದ್ದಕ್ಕೂ ಗಮನಾರ್ಹವಾದ ಪ್ರದರ್ಶನ ತೋರಿ ಶಕ್ತಿ ಮತ್ತು ಉತ್ಸಾಹವನ್ನು ಪ್ರದರ್ಶಿಸಿದ್ದಾರೆ. ಭಾರತ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ. ನಿಮ್ಮ ವಿಜಯವು ಭಾರತದ ಲಕ್ಷಾಂತರ ಯುವತಿಯರ ಕನಸುಗಳಿಗೆ ರೆಕ್ಕೆಗಳನ್ನು ನೀಡುತ್ತದೆ' ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: U19 womens T20 world cup: ಫೈನಲ್​ನಲ್ಲಿ ಭಾರತ - ಇಂಗ್ಲೆಂಡ್​ ಹಣಾಹಣಿ, ಪ್ರಥಮ ಕಪ್​ಗೆ ಇಂಡಿಯನ್ಸ್​ ಪಣ

Last Updated : Jan 29, 2023, 9:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.