ದುಬೈ: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿರುವ ಜಸ್ಪ್ರೀತ್ ಬುಮ್ರಾ ಮತ್ತೆ ಅಗ್ರ 10ರೊಳಗೆ ಪ್ರವೇಶಿಸಿದ್ದಾರೆ. ಆದರೆ ಗೋಲ್ಡನ್ ಡಕ್ ಆಗಿದ್ದ ನಾಯಕ ವಿರಾಟ್ ಕೊಹ್ಲಿ 20 ರೇಟಿಂಗ್ ಪಾಯಿಂಟ್ ಕಳೆದುಕೊಂಡಿದ್ದಲ್ಲದೆ, ಒಂದು ಸ್ಥಾನ ಕುಸಿತ ಕಂಡಿದ್ದಾರೆ.
ಬುಮ್ರಾ ಎರಡೂ ಇನ್ನಿಂಗ್ಸ್ ಸೇರಿ ಮೊದಲ ಟೆಸ್ಟ್ ಪಂದ್ಯದಲ್ಲಿ 110 ರನ್ ನೀಡಿ 9 ವಿಕೆಟ್ ಪಡೆದಿದ್ದರು. ಅವರ ಈ ಪ್ರದರ್ಶನ ಅವರಿಗೆ 10 ಸ್ಥಾನ ಮೇಲೇರಲು ನೆರವಾಗಿದೆ. ಕಳೆದ ವರ್ಷ ವೃತ್ತಿ ಜೀವನದ 3ನೇ ಶ್ರೇಯಾಂಕದಲ್ಲಿದ್ದ ಭಾರತೀಯ ವೇಗಿ ಪ್ರಸ್ತುತ 9ನೇ ಶ್ರೇಯಾಂಕ ಪಡೆದಿದ್ದಾರೆ.
-
↗️ Jasprit Bumrah is back in the top 10
— ICC (@ICC) August 11, 2021 " class="align-text-top noRightClick twitterSection" data="
↗️ James Anderson, Joe Root move up
Players from England and India make gains in the latest @MRFWorldwide ICC Men's Test Rankings.
Full list: https://t.co/OMjjVx5Mgf pic.twitter.com/z2icdZFYpe
">↗️ Jasprit Bumrah is back in the top 10
— ICC (@ICC) August 11, 2021
↗️ James Anderson, Joe Root move up
Players from England and India make gains in the latest @MRFWorldwide ICC Men's Test Rankings.
Full list: https://t.co/OMjjVx5Mgf pic.twitter.com/z2icdZFYpe↗️ Jasprit Bumrah is back in the top 10
— ICC (@ICC) August 11, 2021
↗️ James Anderson, Joe Root move up
Players from England and India make gains in the latest @MRFWorldwide ICC Men's Test Rankings.
Full list: https://t.co/OMjjVx5Mgf pic.twitter.com/z2icdZFYpe
ವಿರಾಟ್ ಕೊಹ್ಲಿ 4 ರಿಂದ 5 ನೇ ಸ್ಥಾನಕ್ಕೆ ಕುಸಿತ ಕಂಡರೆ, ಇಂಗ್ಲೆಂಡ್ ತಂಡ ನಾಯಕ ಕೊಹ್ಲಿಯನ್ನು ಹಿಂದಿಕ್ಕಿ 4ನೇ ಶ್ರೇಯಾಂಕಕ್ಕೇರಿದ್ದಾರೆ. ಅವರು ಮೊದಲ ಇನ್ನಿಂಗ್ಸ್ನಲ್ಲಿ 64 ಮತ್ತು 2ನೇ ಇನ್ನಿಂಗ್ಸ್ನಲ್ಲಿ 109ರನ್ ಗಳಿಸಿದ್ದರಿಂದ, ಒಟ್ಟು 49 ರೇಟಿಂಗ್ ಪಾಯಿಂಟ್ಸ್ ಪಡೆದುಕೊಂಡಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಜೇಮ್ಸ್ ಆ್ಯಂಡರ್ಸನ್ ಒಂದು ಸ್ಥಾನ ಮೇಲೇರಿ 7ಕ್ಕೆ, ಆಲ್ಲಿ ರಾಬಿನ್ಸನ್ 22 ಸ್ಥಾನ ಮೇಲೇರಿ 46ಕ್ಕೆ, ಶಾರ್ದೂಲ್ ಠಾಕೂರ್ 19 ಸ್ಥಾನ ಏರಿಕೆ ಕಂಡು 55ನೇ ಶ್ರೇಯಾಂಕ ಪಡೆದಿದ್ದಾರೆ.
ಕನ್ನಡಿಗ ಕೆ ಎಲ್ ರಾಹುಲ್ ಟೆಸ್ಟ್ ಶ್ರೇಯಾಂಕಕ್ಕೆ ಮರಳಿದ್ದು, 56ನೇ ಸ್ಥಾನ ಪಡೆದಿದ್ದಾರೆ. ಜಡೇಜಾ 3 ಸ್ಥಾನ ಏರಿಕೆ ಕಂಡು 36ನೇ ಶ್ರೇಯಾಂಕ ಪಡೆದಿದ್ದಾರೆ.
ಇದನ್ನು ಓದಿ: ನನ್ನನ್ನು ನಾನು ಹೆಚ್ಚು ನಂಬುತ್ತೇನೆ, ಅದೇ ನನ್ನ ಯಶಸ್ಸಿಗೆ ಕಾರಣ: ರವೀಂದ್ರ ಜಡೇಜಾ