ETV Bharat / sports

ICC T20WorldCup: ದಕ್ಷಿಣ ಆಫ್ರಿಕಾ ಮಾರಕ ಬೌಲಿಂಗ್... ಸಾಧಾರಣ ಮೊತ್ತ ಪೇರಿಸಿದ ಭಾರತ

author img

By

Published : Oct 30, 2022, 4:21 PM IST

Updated : Oct 30, 2022, 7:03 PM IST

ICC T20WorldCup: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಕೇವಲ 133 ರನ್​ ಗಳಿಸಲಷ್ಟೇ ಸಾಧ್ಯವಾಯಿತು.

ICC T20WorldCup
ICC T20WorldCup

ಪರ್ತ್ (ಆಸ್ಟ್ರೇಲಿಯಾ): ಟಿ 20 ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬೌಲರ್​ಗಳು ಟೀಂ ಇಂಡಿಯಾ ಬ್ಯಾಟ್ಸಮನ್​ಗಳನ್ನು ಕಟ್ಟಿ ಹಾಕಿದರು. ಇದರಿಂದಾಗಿ ಭಾರತ ತಂಡ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್​ಗಳನ್ನು ಪೇರಿಸಲಷ್ಟೇ ಸಾಧ್ಯವಾಯಿತು.

ಇಲ್ಲಿನ ಪರ್ತ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಕೆ ಎಲ್ ರಾಹುಲ್ (9) ಮತ್ತು ರೋಹಿತ್ ಶರ್ಮಾ (15) ರನ್​ ಗಳಿಸಿ ಲುಂಗಿ ಇಂಗಿಡಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ವಿರಾಟ್ ಕೊಹ್ಲಿಯನ್ನು ಇದೇ ಬೌಲರ್ ಕೇವಲ 12 ರನ್​ ಗಳಿಗೆ ಔಟ್ ಮಾಡಿದರು.

ಸೂರ್ಯಕುಮಾರ ಯಾದವ್ 40 ಎಸೆತಗಳಲ್ಲಿ 68 ರನ್​ ಗಳಿಸಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಇನ್ನು ದೀಪಕ್ ಹೂಡಾ 0, ಹಾರ್ದಿಕ್ ಪಾಂಡ್ಯಾ 2, ದಿನೇಶ್ ಕಾರ್ತಿಕ್ 6 ರನ್​ ಗಳಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಸಿದರು. ರವಿಚಂದ್ರನ್ ಅಶ್ವಿನ್ 7, ಭುವನೇಶ್ವರ್ ಕುಮಾರ್ 4, ಮೊಹಮ್ಮದ ಶಮಿ 0, ಅರ್ಶದೀಪ್ ಸಿಂಗ್ 2 ರನ್ ಬಾರಿಸಿದರು. ಹರಿಣಗಳ ಪರ ಲುಂಗಿ ಇಂಗಿಡಿ 4, ವೇಯನ್ ಪರ್ನೆಲ್ 3 ವಿಕೆಟ್ ಕಬಳಿಸಿ ಭಾರತ ತಂಡವನ್ನು ಕಟ್ಟಿ ಹಾಕಿದರು.

Last Updated : Oct 30, 2022, 7:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.