ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಬುಧವಾರ ಬಿಡುಗಡೆ ಮಾಡಿದ ಟಿ-20 ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ 14 ನೇ ಸ್ಥಾನಕ್ಕೆ ಜಿಗಿತ ಕಂಡರೆ, ಸೂರ್ಯಕುಮಾರ್ ಯಾದವ್ 4ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಏಷ್ಯಾ ಕಪ್ ಟೂರ್ನಿಯಲ್ಲಿ ಅದ್ಭುತವಾಗಿ ಮುನ್ನುಗ್ಗುತ್ತಿರುವ ಪಾಕಿಸ್ತಾನದ ಮಹಮದ್ ರಿಜ್ವಾನ್ ಅಗ್ರ ಸ್ಥಾನ ಪಡೆದಿದ್ದಾರೆ.
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬಿರುಸಿನ ಬ್ಯಾಟ್ ಮಾಡಿ 72 ರನ್ ಗಳಿಸಿ 612 ರೇಟಿಂಗ್ ಪಾಯಿಂಟ್‌ಗಳೊಂದಿಗೆ 17 ರಲ್ಲಿದ್ದ ರೋಹಿತ್ ಶರ್ಮಾ ಮೂರು ಸ್ಥಾನ ಮೇಲೇರಿ 14ನೇ ಸ್ಥಾನ ಗಳಿಸಿದ್ದಾರೆ. ಟಾಪ್ 10 ರಲ್ಲಿರುವ ಏಕೈಕ ಭಾರತೀಯ ದಾಂಡಿಗ ಸೂರ್ಯಕುಮಾರ್ ಯಾದವ್ 775 ರೇಟಿಂಗ್ ಪಡೆದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 8 ಸ್ಥಾನ ಮೇಲೇರಿ 50ನೇ ಸ್ಥಾನ ಪಡೆದರೆ, ಯುವ ವೇಗಿ ಅರ್ಷದೀಪ್ ಸಿಂಗ್ 28 ಸ್ಥಾನ ಮೇಲೇರಿ 62ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ 5 ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಓದಿ: ಟಿ20 ವಿಶ್ವಕಪ್‌ಗೆ ಭಾರತ ಶೇ. 90-95ರಷ್ಟು ಸಿದ್ಧ, ತಂಡದಲ್ಲಿ ಕೆಲ ಬದಲಾವಣೆ: ರೋಹಿತ್ ಶರ್ಮಾ