ಶಾರ್ಜಾ: ಟಿ-20 ವಿಶ್ವಕಪ್ ಗ್ರೂಪ್ ಹಂತದ ಅಂತಿಮ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿ, ಎದುರಾಳಿ ನೆದರ್ಲ್ಯಾಂಡ್ ತಂಡವನ್ನ ಕೇವಲ 44ರನ್ಗಳಿಗೆ ಕಟ್ಟಿ ಹಾಕಿದ್ದ ಶ್ರೀಲಂಕಾ ಅಧಿಕಾರಯುತ ಜಯದ ನಗೆ ಬೀರಿದೆ. ಈ ಮೂಲಕ ಗ್ರೂಪ್ ಹಂತದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಗೆದ್ದು 'ಹ್ಯಾಟ್ರಿಕ್' ಸಾಧನೆ ಮಾಡಿದೆ. ಜೊತೆಗೆ ಎ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೂಪರ್-12 ಹಂತಕ್ಕೆ ಲಗ್ಗೆ ಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ ತಂಡ ಲಂಕಾ ಬೌಲಿಂಗ್ ದಾಳಿಗೆ ತತ್ತರಿಸಿ 10 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 44ರನ್ಗಳಿಕೆ ಮಾಡಿತು. ತಂಡದ ಪರ ಅಕರ್ಮನ್ 11ರನ್ಗಳಿಕೆ ಮಾಡಿ ಗರಿಷ್ಠ ಸ್ಕೋರರ್ ಎಣಿಸಿಕೊಂಡರೆ, ಉಳಿದಂತೆ ಯಾವೊಬ್ಬ ಪ್ಲೇಯರ್ ಕೂಡ ಎರಡಂಕ್ಕಿ ಮೊತ್ತ ದಾಟಲಿಲ್ಲ.
-
A dominant display by Sri Lanka 💪#T20WorldCup | #SLvNED | https://t.co/3yXqAkjwpm pic.twitter.com/POc4tNr7my
— T20 World Cup (@T20WorldCup) October 22, 2021 " class="align-text-top noRightClick twitterSection" data="
">A dominant display by Sri Lanka 💪#T20WorldCup | #SLvNED | https://t.co/3yXqAkjwpm pic.twitter.com/POc4tNr7my
— T20 World Cup (@T20WorldCup) October 22, 2021A dominant display by Sri Lanka 💪#T20WorldCup | #SLvNED | https://t.co/3yXqAkjwpm pic.twitter.com/POc4tNr7my
— T20 World Cup (@T20WorldCup) October 22, 2021
ಲಂಕಾ ಪರ ಬೌಲಿಂಗ್ನಲ್ಲಿ ಮಿಂಚಿದ ಹಸರಂಗ, ಲಾಹೀರು ತಲಾ 3 ವಿಕೆಟ್ ಪಡೆದುಕೊಂಡರೆ, ತಿಕ್ಷಣ್ 2 ವಿಕೆಟ್ ಹಾಗೂ ಚಮೀರಾ 1 ವಿಕೆಟ್ ಪಡೆದರು.
-
The fantastic four 🙌
— T20 World Cup (@T20WorldCup) October 22, 2021 " class="align-text-top noRightClick twitterSection" data="
Bangladesh, Sri Lanka, Scotland and Namibia - the teams which qualify from Round 1 into the Super 12 👏#T20WorldCup pic.twitter.com/gDeAd5PRYZ
">The fantastic four 🙌
— T20 World Cup (@T20WorldCup) October 22, 2021
Bangladesh, Sri Lanka, Scotland and Namibia - the teams which qualify from Round 1 into the Super 12 👏#T20WorldCup pic.twitter.com/gDeAd5PRYZThe fantastic four 🙌
— T20 World Cup (@T20WorldCup) October 22, 2021
Bangladesh, Sri Lanka, Scotland and Namibia - the teams which qualify from Round 1 into the Super 12 👏#T20WorldCup pic.twitter.com/gDeAd5PRYZ
ಇದನ್ನೂ ಓದಿರಿ: T-20 ವಿಶ್ವಕಪ್ನಲ್ಲಿ ಐರ್ಲೆಂಡ್ ಕನಸು ಭಗ್ನ.. ಸೂಪರ್-12 ಹಂತಕ್ಕೆ ನಮೀಬಿಯಾ ಎಂಟ್ರಿ
45ರನ್ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ಆರಂಭದಲ್ಲೇ ನಿಶಾಂಕ್ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಕುಶಾಲ್ ಪರೇರಾ ಅಜೇಯ 33ರನ್, ಅಸ್ಲಂಕಾ 6ರನ್ ಹಾಗೂ ಫರ್ನಾಡೋ 2ರನ್ಗಳಿಸಿ ತಂಡದ ಗೆಲುವಿನಲ್ಲಿ ಪಾತ್ರರಾದರು. ತಂಡ 7.1 ಓವರ್ಗಳಲ್ಲಿ ಕೇವಲ 2ವಿಕೆಟ್ ಕಳೆದುಕೊಂಡು 45ರನ್ಗಳಿಕೆ ಮಾಡಿ, ಸೂಪರ್-12 ಹಂತಕ್ಕೆ ಲಗ್ಗೆ ಹಾಕಿದೆ.