ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) 2022 ನೇ ಸಾಲಿನ ವರ್ಷದ ಟಿ20 ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಭಾರತದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಮಹಿಳಾ ಟಿ20 ತಂಡವನ್ನೂ ಬಿಡುಗಡೆ ಮಾಡಲಾಗಿದ್ದು, ನಾಲ್ವರು ಆಟಗಾರ್ತಿಯರು ಪಾಲು ಪಡೆದಿದ್ದಾರೆ. ಕಳೆದ ವರ್ಷ ಅತ್ಯಾಕರ್ಷಕ ಆಟ ಪ್ರದರ್ಶಿಸಿದ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ, ಚುಟುಕು ಕ್ರಿಕೆಟ್ನ ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪುರುಷರ ಟಿ20 ತಂಡದ ಭಾಗವಾಗಿದ್ದಾರೆ.
11 ಸದಸ್ಯರ ಪುರುಷರ ತಂಡಕ್ಕೆ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ರನ್ನರ್ ಅಪ್ ಪಾಕಿಸ್ತಾನ ತಂಡದ ಮೊಹಮ್ಮದ್ ರಿಜ್ವಾನ್ ಆರಂಭಿಕರಾಗಿ ಸ್ಥಾನ ಗಳಿಸಿದರೆ, ವೇಗಿ ಹ್ಯಾರಿಸ್ ರೌಫ್ ತಂಡದಲ್ಲಿರುವ ಮತ್ತೊಬ್ಬ ಪಾಕಿಸ್ತಾನಿ ಆಟಗಾರ. ಇದಲ್ಲದೇ, ನ್ಯೂಜಿಲ್ಯಾಂಡ್ನ ಗ್ಲೆನ್ ಫಿಲಿಪ್ಸ್, ಜಿಂಬಾಬ್ವೆ ಆಟಗಾರ ಸಿಕಂದರ್ ರಜಾ, ಇಂಗ್ಲೆಂಡ್ನ ಸ್ಯಾಮ್ ಕರ್ರನ್, ಶ್ರೀಲಂಕಾದ ವನಿಂದು ಹಸರಂಗ, ಐರ್ಲೆಂಡ್ನ ಜೋಶ್ ಲಿಟಲ್ ಅವರಿಗೆ ತಂಡದಲ್ಲಿ ಸ್ಥಾನ ದೊರೆತಿದೆ.
-
Presenting the ICC Men's T20I Team of the Year 2022 🎉#ICCAwards | ✍: https://t.co/JkaUOcGZNR pic.twitter.com/mmi0k5mLzX
— ICC (@ICC) January 23, 2023 " class="align-text-top noRightClick twitterSection" data="
">Presenting the ICC Men's T20I Team of the Year 2022 🎉#ICCAwards | ✍: https://t.co/JkaUOcGZNR pic.twitter.com/mmi0k5mLzX
— ICC (@ICC) January 23, 2023Presenting the ICC Men's T20I Team of the Year 2022 🎉#ICCAwards | ✍: https://t.co/JkaUOcGZNR pic.twitter.com/mmi0k5mLzX
— ICC (@ICC) January 23, 2023
ಭಾರತೀಯರ ಸಾಧನೆ: ಬ್ಯಾಟಿಂಗ್ ಲಯ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಕಳೆದ ವರ್ಷ ಅದ್ಭುತ ಫಾರ್ಮ್ ಕಂಡುಕೊಂಡಿದ್ದರು. ಏಷ್ಯಾ ಕಪ್ನಲ್ಲಿ ಉತ್ತಮ ಬ್ಯಾಟ್ ಮಾಡಿದ ವಿರಾಟ್, ಐದು ಪಂದ್ಯಗಳಲ್ಲಿ 276 ರನ್ ಗಳಿಸುವ ಮೂಲಕ ಎರಡನೇ ಅತ್ಯಧಿಕ ರನ್ ಗಳಿಸಿದ ಆಟಗಾರರಾಗಿದ್ದರು. ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಮೋಘ ಶತಕದೊಂದಿಗೆ ಮೂರು ವರ್ಷಗಳ ಶತಕದ ಬರ ನೀಗಿಸಿಕೊಂಡರು.
ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಅದೇ ಬ್ಯಾಟಿಂಗ್ ಲಯ ಮುಂದುವರಿಸಿದ ಕೊಹ್ಲಿ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 82 ರನ್‌ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದರು. ಇದರೊಂದಿಗೆ ಟೂರ್ನಿಯಲ್ಲಿ ಮೂರು ಅರ್ಧಶತಕಗಳನ್ನು ಬಾರಿಸಿದರು. 296 ರನ್ಗಳಿಸಿದ ಕೊಹ್ಲಿ ಟೂರ್ನಿಯ ಅತ್ಯಧಿಕ ರನ್ನರ್ ಕೂಡ ಆಗಿದ್ದರು.
ಟಿ20 ಯಲ್ಲಿ ಬೆಳಗಿದ ಸೂರ್ಯ: ಸೂರ್ಯಕುಮಾರ್ ಯಾದವ್ ಚುಟುಕು ಕ್ರಿಕೆಟ್ನ ಅಧಿಪತಿಯಾಗಿದ್ದಾರೆ. ವರ್ಷದಲ್ಲಿ 1,000ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಎಂಬ ಶ್ರೇಯಕ್ಕೂ ಪಾತ್ರರಾದರು. 2 ಶತಕಗಳು ಮತ್ತು 9 ಅರ್ಧ ಶತಕಗಳೊಂದಿಗೆ 187.43 ರನ್ರೇಟ್ ಮೂಲಕ ವರ್ಷದಲ್ಲಿ 1164 ರನ್ ಗಳಿಸಿದ ಅಗ್ರ ಆಟಗಾರನಾಗಿದ್ದಾನೆ. ವಿಶ್ವಕಪ್‌ನಲ್ಲಿ 189.68 ಸ್ಟ್ರೈಕ್ ರೇಟ್‌ನಲ್ಲಿ 239 ರನ್ ಗಳಿಸಿದ ಸೂರ್ಯಕುಮಾರ್ ಸದ್ಯ, ಟಿ20 ಕ್ರಿಕೆಟ್ನ ಶ್ರೇಯಾಂಕದಲ್ಲಿ ನಂಬರ್ 1 ಬ್ಯಾಟರ್ ಆಗಿದ್ದಾರೆ.
ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಮಾಡಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಳೆದ ವರ್ಷ ಅದ್ಭುತ ಆಟವಾಡಿದ್ದಾರೆ. 607 ರನ್ ಗಳಿಸಿರುವ ಪಾಂಡ್ಯ 20 ವಿಕೆಟ್‌ಗಳನ್ನು ಪಡೆದಿದ್ದಾರೆ.
-
🚨 ICYMI, the ICC Women's T20I Team of the Year 2022 was revealed!#ICCAwards | ✍: https://t.co/2fNP8t6PT7 pic.twitter.com/Qj7xMVdAVy
— ICC (@ICC) January 23, 2023 " class="align-text-top noRightClick twitterSection" data="
">🚨 ICYMI, the ICC Women's T20I Team of the Year 2022 was revealed!#ICCAwards | ✍: https://t.co/2fNP8t6PT7 pic.twitter.com/Qj7xMVdAVy
— ICC (@ICC) January 23, 2023🚨 ICYMI, the ICC Women's T20I Team of the Year 2022 was revealed!#ICCAwards | ✍: https://t.co/2fNP8t6PT7 pic.twitter.com/Qj7xMVdAVy
— ICC (@ICC) January 23, 2023
4 ನೇ ಸಲ ಮಂದಾನಾಗೆ ಸ್ಥಾನ: ಭಾರತದ ಮಹಿಳಾ ಬ್ಯಾಟಿಂಗ್ ಸೂಪರ್‌ಸ್ಟಾರ್ ಸ್ಮೃತಿ ಮಂಧಾನ ಅವರು ಸತತ ನಾಲ್ಕನೇ ಬಾರಿಗೆ ಐಸಿಸಿ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 33 ರ ಸರಾಸರಿ ಮತ್ತು 133.48 ಸ್ಟ್ರೈಕ್ ರೇಟ್‌ನಲ್ಲಿ 594 ರನ್ ಗಳಿಸಿರುವ ಸ್ಮೃತಿ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ನಾಲ್ಕನೇ ಆಟಗಾರ್ತಿಯಾಗಿದ್ದಾರೆ. ಇದರಲ್ಲಿ 2 ಅರ್ಧ ಶತಕಗಳನ್ನೂ ಬಾರಿಸಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು ಐತಿಹಾಸಿಕ ಬೆಳ್ಳಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆಲ್ ರೌಂಡರ್ ದೀಪ್ತಿ ಶರ್ಮಾ ಅವರು ಅತ್ಯುತ್ತಮ ಲಯದಲ್ಲಿದ್ದಾರೆ. ಏಷ್ಯಾಕಪ್‌ನಲ್ಲಿ ಟೂರ್ನಿಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. 29 ವಿಕೆಟ್‌ಗಳನ್ನು ಪಡೆದಿರುವ ದೀಪ್ತಿ, ಜಂಟಿ ಮೂರನೇ ಅತ್ಯಧಿಕ ಸ್ಥಾನಿಯಾಗಿದ್ದಾರೆ. ಅಲ್ಲದೇ 370 ರನ್‌ಗಳನ್ನೂ ಗಳಿಸಿದ್ದಾರೆ.
ಇನ್ನೊಬ್ಬ ಆಟಗಾರ್ತಿ ರಿಚಾ ಘೋಶ್ ಅವರು 18 ಪಂದ್ಯಗಳಲ್ಲಿ 259 ರನ್ ಗಳಿಸಿದ ಅದ್ಭುತ ವರ್ಷದ ನಂತರ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಆಗಿದ್ದಾರೆ. ಅದ್ಭುತ ಪ್ರದರ್ಶನ ನೀಡಿರುವ ರೇಣುಕಾ ಸಿಂಗ್ 22 ವಿಕೆಟ್‌ಗಳನ್ನು ಪಡೆದಿದ್ದು, ಐಸಿಸಿ ಮಹಿಳಾ ಉದಯೋನ್ಮುಖ ಕ್ರಿಕೆಟಿಗರಾಗಿಯೂ ನಾಮನಿರ್ದೇಶನ ಹೊಂದಿದ್ದರು.
ಪುರುಷರ ತಂಡ: ಜೋಸ್ ಬಟ್ಲರ್ (ನಾಯಕ), ಮೊಹಮ್ಮದ್ ರಿಜ್ವಾನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಗ್ಲೆನ್ ಫಿಲಿಪ್ಸ್, ಸಿಕಂದರ್ ರಜಾ, ಹಾರ್ದಿಕ್ ಪಾಂಡ್ಯ, ಸ್ಯಾಮ್ ಕರ್ರನ್, ವನಿಂದು ಹಸರಂಗ, ಹ್ಯಾರಿಸ್ ರೌಫ್ ಮತ್ತು ಜೋಶ್ ಲಿಟಲ್.
ಮಹಿಳಾ ತಂಡ: ಸೋಫಿ ಡಿವೈನ್ (ನಾಯಕಿ), ಸ್ಮೃತಿ ಮಂಧಾನ, ಬೆತ್ ಮೂನಿ, ಆಶ್ ಗಾರ್ಡನರ್, ತಹ್ಲಿಯಾ ಮೆಕ್‌ಗ್ರಾತ್, ನಿದಾ ದಾರ್, ದೀಪ್ತಿ ಶರ್ಮಾ, ರಿಚಾ ಘೋಷ್, ಸೋಫಿ ಎಕ್ಲೆಸ್ಟೋನ್, ಇನೋಕಾ ರಣವೀರ ಮತ್ತು ರೇಣುಕಾ ಸಿಂಗ್.
ಇದನ್ನೂ ಓದಿ: ಮಹಿಳಾ ಐಪಿಎಲ್: ನಾಳೆ ತಂಡಗಳ ಹರಾಜು; ಬಿಸಿಸಿಐಗೆ ₹4 ಸಾವಿರ ಕೋಟಿ ಆದಾಯ ನಿರೀಕ್ಷೆ