ETV Bharat / sports

ಟಿ20 ವಿಶ್ವಕಪ್ ಯುರೋಪ್ ಕ್ವಾಲಿಫೈಯರ್ ಟೂರ್ನಿ ಸ್ಪೇನ್​ಗೆ ಸ್ಥಳಾಂತರಿಸಿದ ಐಸಿಸಿ - ಸ್ಕಾಟ್ಲೆಂಡ್, ಐರ್ಲೆಂಡ್

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2023ರ ಮಹಿಳಾ ಟಿ20 ವಿಶ್ವಕಪ್​ನ ಯುರೋಪ್ ಕ್ವಾಲಿಫೈಯರ್​ ಟೂರ್ನಿಯ ಮೊದಲ ಇವೆಂಟ್​ ಸ್ಕಾಟ್ಲೆಂಡ್​ನಿಂದ ಸ್ಪೇನ್​ಗೆ ಸ್ಥಳಾಂತರಗೊಂಡಿದೆ ಎಂದು ಐಸಿಸಿ ಪ್ರಕಟಣೆ ಹೊರಡಿಸಿದೆ.

ಟಿ20 ವಿಶ್ವಕಪ್ ಯುರೋಪ್ ಕ್ವಾಲಿಫೈಯರ್
ಟಿ20 ವಿಶ್ವಕಪ್ ಯುರೋಪ್ ಕ್ವಾಲಿಫೈಯರ್
author img

By

Published : Jun 24, 2021, 4:49 PM IST

ದುಬೈ: ಸ್ಕಾಟ್ಲೆಂಡ್​ನಲ್ಲಿ ಕೋವಿಡ್​ 19 ನಿರ್ಬಂಧಗಳಿರುವುದರಿಂದ ಮಿಹಿಳಾ ಟಿ20 ವಿಶ್ವಕಪ್ ಅರ್ಹತಾ ಟೂರ್ನಾಮೆಂಟ್​ಅನ್ನು ಸ್ಕಾಟ್ಲೆಂಡ್​ನಿಂದ ಸ್ಪೇನ್​ಗೆ ಸ್ಥಳಾಂತರಿಸುವುದಾಗಿ ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ಐಸಿಸಿ) ತಿಳಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2023ರ ಮಹಿಳಾ ಟಿ20 ವಿಶ್ವಕಪ್​ನ ಯುರೋಪ್ ಕ್ವಾಲಿಫೈಯರ್​ ಟೂರ್ನಿಯ ಮೊದಲ ಇವೆಂಟ್​ ಸ್ಕಾಟ್ಲೆಂಡ್​ನಿಂದ ಸ್ಪೇನ್​ಗೆ ಸ್ಥಳಾಂತರಗೊಂಡಿದೆ ಎಂದು ಐಸಿಸಿ ಪ್ರಕಟಣೆ ಹೊರಡಿಸಿದೆ.

ವಿಶ್ವಕಪ್​ಗೆ 2 ಹಂತಗಳ ಹಿಂದಿರುವ ಈ ಕ್ವಾಲಿಫೈಯರ್​ ಟೂರ್ನಿಯ ದಿನಾಂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಗಸ್ಟ್​ 26ರಿಂದ 30ರವರೆಗೆ ನಡೆಯಲಿದ್ದು, ಫ್ರಾನ್ಸ್, ಜರ್ಮನಿ, ಐರ್ಲೆಂಡ್, ನೆದರ್ಲೆಂಡ್ಸ್, ಸ್ಕಾಟ್ಲೆಂಡ್ ಮತ್ತು ಟರ್ಕಿ ತಂಡಗಳು ಲಾ ಮಂಗಾದಲ್ಲಿ ಸ್ಪರ್ಧಿಸಲಿವೆ. ಫ್ರಾನ್ಸ್ ಮತ್ತು ಟರ್ಕಿ ಇದೇ ಮೊದಲ ಬಾರಿಗೆ ಐಸಿಸಿ ಇವೆಂಟ್​ನಲ್ಲಿ ಭಾಗವಹಿಸುತ್ತಿವೆ.

2019ರ ಪುರುಷರ ಅಂಡರ್ 19 ವಿಶ್ವಕಪ್ ಕ್ವಾಲಿಫೈಯರ್ ಟೂರ್ನಿ ಕೂಡ ಸ್ಕಾಟ್ಲೆಂಡ್​ನಿಂದ ಸ್ಪೇನ್​ಗೆ ಸ್ಥಳಾಂತರಗೊಂಡಿದೆ. ಸೆಪ್ಟಂಬರ್ 19ರಿಂದ 25ರವರೆಗೆ ಈ ಟೂರ್ನಿ ನಡೆಯಲಿದೆ. ಐರ್ಲೆಂಡ್, ಜರ್ಸಿ, ನೆದರ್ಲೆಂಡ್ಸ್ ಮತ್ತು ಸ್ಕಾಟ್ಲೆಂಡ್​ ಒಂದು ವಿಶ್ವಕಪ್ ಸ್ಥಾನಕ್ಕಾಗಿ ಸೆಣಸಾಡಲಿವೆ.

ಇದನ್ನು ಓದಿ:WTC records: ಅಶ್ವಿನ್, ಲಾಬುಶೇನ್ ಸೇರಿದಂತೆ ಟೂರ್ನಿಯಲ್ಲಿನ ವೈಯಕ್ತಿಕ ದಾಖಲೆಗಳ ವಿವರ ಇಲ್ಲಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.