ದುಬೈ: ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಬುಧವಾರ ಬಿಡುಗಡೆ ಮಾಡಿರುವ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಮೊದಲ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ಉತ್ತಮ ಪ್ರದರ್ಶನ ನೀಡಿದ್ದರಿಂದ ಸಿರಾಜ್ ಸಾಕಷ್ಟು ಸೋಲನ್ನು ಎದುರಿಸಬೇಕಾಯಿತು.
ಇದರ ಪರಿಣಾಮವಾಗಿ, ಅವರು ODI ಬೌಲಿಂಗ್ ಶ್ರೇಯಾಂಕದಲ್ಲಿ ತಮ್ಮ ಅಗ್ರಸ್ಥಾನವನ್ನು ಕಳೆದುಕೊಂಡಿದ್ದಾರೆ ಮತ್ತು ಜೋಶ್ ಹ್ಯಾಜಲ್‌ವುಡ್ ನ್ಯೂಜಿಲೆಂಡ್ ಟ್ರೆಂಟ್ ಬೌಲ್ಟ್ಗಿಂತ 702 ರೇಟಿಂಗ್ ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಹೇಜಲ್‌ವುಡ್ (713 ಅಂಕ) ಮೊದಲ ಬಾರಿಗೆ ಏಕದಿನದ ನಂಬರ್ ಒನ್ ಬೌಲರ್ ಆಗಿದ್ದಾರೆ.
ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಭಾರತದ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಎಂಟು ವಿಕೆಟ್‌ಗಳನ್ನು ಕಬಳಿಸಿದ ನಂತರ ಸಿರಾಜ್ ಅವರೊಂದಿಗೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ. ಇಬ್ಬರಿಗೂ 702 ಅಂಕಗಳಿವೆ. ಇಂದು ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿ ಸಿರಾಜ್ ವಿಕೆಟ್ ಕಬಳಿಸದಿದ್ದರೆ ಮತ್ತು ಮಿಚೆಲ್ ಸ್ಟಾರ್ಕ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ, ಸಿರಾಜ್ ನಾಲ್ಕನೇ ಸ್ಥಾನಕ್ಕೆ ಕುಸಿಯಬಹುದು.
ಇದನ್ನೂ ಓದಿ: ಅಕ್ಬೋಬರ್ 5 ರಿಂದ ಏಕದಿನ ವಿಶ್ವಕಪ್ ಕ್ರಿಕೆಟ್ ಆರಂಭ; ಅಹಮದಾಬಾದ್‌ನಲ್ಲಿ ಫೈನಲ್-ವರದಿ
ಪಾಕಿಸ್ತಾನದ ನಾಯಕ ಬಾಬರ್ ಅಜಮ್ 887 ರೇಟಿಂಗ್ ಅಂಕಗಳೊಂದಿಗೆ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ದಕ್ಷಿಣ ಆಫ್ರಿಕಾದ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (777) ಎರಡನೇ ಸ್ಥಾನದಲ್ಲಿದ್ದಾರೆ. ಆಲ್ ರೌಂಡರ್ ಶ್ರೇಯಾಂಕದಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ 399 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅಫ್ಘಾನಿಸ್ತಾನದ ಮೊಹಮ್ಮದ್ ನಬಿ 310 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
-
A worthy contender has broken into the top five of @MRFWorldwide ICC Men’s Test Player Rankings for batters 📈
— ICC (@ICC) March 22, 2023 " class="align-text-top noRightClick twitterSection" data="
More 👇https://t.co/xXuUqaiAWy
">A worthy contender has broken into the top five of @MRFWorldwide ICC Men’s Test Player Rankings for batters 📈
— ICC (@ICC) March 22, 2023
More 👇https://t.co/xXuUqaiAWyA worthy contender has broken into the top five of @MRFWorldwide ICC Men’s Test Player Rankings for batters 📈
— ICC (@ICC) March 22, 2023
More 👇https://t.co/xXuUqaiAWy
ಅಗ್ರ ಹತ್ತರಲ್ಲಿ ಇರುವ ಭಾರತೀಯ ಆಟಗಾರರು: ದ್ವಿಶತಕ ವೀರ ಶುಭಮನ್ ಗಿಲ್ ಏಕದಿನ ಶ್ರೇಯಾಂಕದಲ್ಲಿ 5ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಆಸಿಸ್ ಪ್ಲೇಯರ್ ಸ್ಟೀವ್ ಸ್ಮಿತ್ 714 ಅಂಕದಿಂದ 7ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. 704 ಅಂಕದಿಂದ ರೋಹಿತ್ ಶರ್ಮಾ 9ನೇ ಸ್ಥಾನಲ್ಲಿದ್ದಾರೆ. ಬೌಲಿಂಗ್ ಪಟ್ಟಿಯಲ್ಲಿ ಸಿರಾಜ್ ಮೂರನೇ ಸ್ಥಾನದಲ್ಲಿರುವುದು ಬಿಟ್ಟು ಮತ್ತಾರು ಟಾಪ್ ಟೆನ್ನಲ್ಲಿಲ್ಲ. ಆಲ್ರೌಂಡರ್ ಪಟ್ಟಿಯಲ್ಲೂ ಯಾವುದೇ ಆಟಗಾರರಿಲ್ಲ.
ನ್ಯೂಜಿಲೆಂಡ್‌ನ ಅಗ್ರ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 215 ರನ್‌ಗಳ ಅದ್ಭುತ ಇನ್ನಿಂಗ್ಸ್‌ನಿಂದ ಅವರು ನಾಲ್ಕು ಸ್ಥಾನಗಳ ಏರಿಕೆ ಕಂಡಿದ್ದಾರೆ. ವಿಲಿಯಮ್ಸನ್ 51 ರೇಟಿಂಗ್ ಪಾಯಿಂಟ್ ಗಳಿಸಿದ್ದು, 883 ಅಂಕಗಳೊಂದಿಗೆ ಆಸ್ಟ್ರೇಲಿಯಾದ ಅಗ್ರ ಶ್ರೇಯಾಂಕದ ಮಾರ್ನಸ್ ಲ್ಯಾಬುಸ್ಚಾಗ್ನೆಗಿಂತ 32 ಪಾಯಿಂಟ್‌ಗಳ ಹಿಂದೆ ಇದ್ದಾರೆ. ಟೆಸ್ಟ್ನ ಬೌಲಿಂಗ್ ಶ್ರೇಯಾಂಕದಲ್ಲಿ ಭಾರತದ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನದಲ್ಲೇ ಮುಂಡುವರೆದಿದ್ದಾರೆ. ಆಲ್ರೌಂಡರ್ ಪಟ್ಟಿಯಲ್ಲಿ ಜಡೇಜ ಸಹ ಅಗ್ರಸ್ಥಾನದಲ್ಲಿ ಮುಂದು ವರೆದಿದ್ದಾರೆ.
ಇದನ್ನೂ ಓದಿ: ಸ್ಟಾರ್ ಆಟಗಾರರಿಗೆ ಗಾಯದ ಸಮಸ್ಯೆ: ಈ ಬಾರಿಯ ಐಪಿಎಲ್ಗೆ ಯಾರೆಲ್ಲಾ ಮಿಸ್ ಆಗುತ್ತಾರೆ?