ಶಾರ್ಜಾ: ಸೆಮಿಫೈನಲ್ ರೇಸ್ನಲ್ಲಿ ಉಳಿಯಲು ನಿರ್ಣಾಯಕವಾಗಿರುವ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಬವೂಮ ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಬ್ಲ್ಯಾಕ್ ಲೈವ್ ಮ್ಯಾಟರ್ಸ್ಗೆ ಬೆಂಬಲ ಸೂಚಿಸಿ ಮಂಡಿಯೂರಿ ಕುಳಿತುಕೊಳ್ಳುವುದನ್ನು ನಿರಾಕರಿಸಿದ ವಿವಾದಕ್ಕೀಡಾಗಿದ್ದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.
ಇತ್ತ ಶ್ರೀಲಂಕಾ ಕಳೆದ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಕಣಕ್ಕಿಳಿಸುತ್ತಿದೆ. ಎರಡೂ ತಂಡಗಳೂ ಸೂಪರ್ 12ನಲ್ಲಿ ತಲಾ 2 ಪಂದ್ಯಗಳನ್ನಾಡಿದ್ದು ತಲಾ ಒಂದು ಗೆಲುವು ಮತ್ತು ಸೋಲು ಕಂಡಿವೆ. ಇಂದಿನ ಪಂದ್ಯ ಗೆದ್ದ ತಂಡ ಸೆಮಿಫೈನಲ್ ರೇಸ್ನಲ್ಲಿ ಉಳಿದುಕೊಂಡಿದೆ.
-
South Africa have won the toss and elected to field 🏏#T20WorldCup | #SAvSL | https://t.co/3nNwp3dBH4 pic.twitter.com/xt884XY5fz
— ICC (@ICC) October 30, 2021 " class="align-text-top noRightClick twitterSection" data="
">South Africa have won the toss and elected to field 🏏#T20WorldCup | #SAvSL | https://t.co/3nNwp3dBH4 pic.twitter.com/xt884XY5fz
— ICC (@ICC) October 30, 2021South Africa have won the toss and elected to field 🏏#T20WorldCup | #SAvSL | https://t.co/3nNwp3dBH4 pic.twitter.com/xt884XY5fz
— ICC (@ICC) October 30, 2021
ಶ್ರೀಲಂಕಾ (ಪ್ಲೇಯಿಂಗ್ XI): ಕುಸಲ್ ಪೆರೆರಾ (ಕೀಪರ್), ಪತುಮ್ ನಿಸ್ಸಾಂಕ, ಚರಿತ್ ಅಸಲಂಕಾ, ಅವಿಷ್ಕಾ ಫೆರ್ನಾಂಡೊ, ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ದುಷ್ಮಂತ ಚಮೀರ, ಮಹೀಶ್ ತೀಕ್ಷಣ, ಲಹಿರು ಕುಮಾರ
ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ XI): ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ಕೀಪರ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಮ್, ರೀಜಾ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಡ್ವೇನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಆ್ಯನ್ರಿಚ್ ನಾರ್ಕಿಯಾ, ತಬ್ರೈಜ್ ಶಮ್ಸಿ