ETV Bharat / sports

ರೋಹಿತ್​, ವಿರಾಟ್​, ಸೂರ್ಯ ಅರ್ಧ ಶತಕ.. ನೆದರ್ಲ್ಯಾಂಡ್ಸ್​ ತಂಡಕ್ಕೆ ಬೃಹತ್​ ಗುರಿ ನೀಡಿದ ಭಾರತ - ವಿರಾಟ್​ ಕೊಹ್ಲಿ ಅಮೋಘ ಅರ್ಧ ಶತಕ

ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತದ ಎರಡನೇ ಪಂದ್ಯದಲ್ಲಿ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಮತ್ತು ಸೂರ್ಯಕುಮಾರ್​ ಯಾದವ್​ ಅಮೋಘ ಅರ್ಧ ಶತಕ ಗಳಿಸಿದ್ದು, ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ರೋಹಿತ್​ ಬಳಗ ಬೃಹತ್​ ಮೊತ್ತದ ಗುರಿಯನ್ನು ನೆದರ್ಲ್ಯಾಂಡ್ಸ್ ತಂಡಕ್ಕೆ ನೀಡಿದೆ.

ICC Mens T20 World Cup 2022  India big target give to Netherlands  Sydney Cricket Ground  ಟಿ20 ವಿಶ್ವಕಪ್​ ಟೂರ್ನಿ  ರೋಹಿತ್​ ಬಳಗ ಬೃಹತ್​ ಮೊತ್ತದ ಗುರಿ  ನೆದರ್ಲ್ಯಾಂಡ್ಸ್​ ತಂಡಕ್ಕೆ ಬೃಹತ್​ ಗುರಿ ನೀಡಿದ ಭಾರತ  ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ನಡೆಯುತ್ತಿರುವ ಹಣಾಹಣಿ  ನೆದರ್ಲ್ಯಾಂಡ್ಸ್​ ವಿರುದ್ಧ ಟಾಸ್​ ಗೆದ್ದ ಭಾರತ  ರೋಹಿತ್​ ಶರ್ಮಾ ಅರ್ಧ ಶತಕ  ವಿರಾಟ್​ ಕೊಹ್ಲಿ ಅಮೋಘ ಅರ್ಧ ಶತಕ  ಸೂರ್ಯಕುಮಾರ್​​ ಯಾದವ್​ ಫಿಫ್ಟಿ
ರೋಹಿತ್​, ವಿರಾಟ್​, ಸೂರ್ಯ ಅರ್ಧ ಶತಕ
author img

By

Published : Oct 27, 2022, 2:28 PM IST

ಸಿಡ್ನಿ, ಆಸ್ಟ್ರೇಲಿಯಾ: ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ ಹಣಾಹಣಿಯಲ್ಲಿ ನೆದರ್ಲ್ಯಾಂಡ್ಸ್​ ವಿರುದ್ಧ ಟಾಸ್​ ಗೆದ್ದ ಭಾರತ ಅಮೋಘ ಬ್ಯಾಟಿಂಗ್​ ಪ್ರದರ್ಶನ ನೀಡಿದೆ. ನೆಂದರ್ಲ್ಯಾಂಡ್ಸ್​ ತಂಡಕ್ಕೆ ಪಂದ್ಯ ಗೆಲ್ಲಲು 180 ರನ್​ಗಳನ್ನು ಗಳಿಸಬೇಕಾಗಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಭಾರತಕ್ಕೆ ನೆದರ್ಲ್ಯಾಂಡ್ಸ್​ ತಂಡ ಆರಂಭಿಕ ಆಘಾತ ನೀಡಿತು. ಆರಂಭಿಕ ಆಟಗಾರನಾದ ಕೆಎಲ್​ ರಾಹುಲ್​ 9 ರನ್​ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಬಳಿಕ ಬಂದ ವಿರಾಟ್​ ಕೊಹ್ಲಿ ನಾಯಕ ರೋಹಿತ್​ ಶರ್ಮಾ ಜೊತೆಗೂಡಿ ಇನ್ನಿಂಗ್ಸ್​​ ಕಟ್ಟಿದರು. ರೋಹಿತ್ ಮತ್ತು ವಿರಾಟ್ ಜೋತೆಗೂಡಿ ಬರೋಬ್ಬರಿ 73 ರನ್​ಗಳನ್ನು ಕಲೆ ಹಾಕಿದರು.

ರೋಹಿತ್​ ಶರ್ಮಾ ಅರ್ಧ ಶತಕ: ನಾಯಕ ರೋಹಿತ್​ ಶರ್ಮಾ ನೆದರ್ಲ್ಯಾಂಡ್ಸ್​ ತಂಡದ ಬೌಲರ್​ಗಳನ್ನು ಬೆವರಿಳಿಸಿದರು. ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್​ಗಳೊಂದಿಗೆ ಕೇವಲ 39 ಎಸೆತಗಳಲ್ಲಿ 53 ರನ್​ಗಳಿಸಿ ಪೆವಿಲಿಯನ್​ ಹಾದಿ ಹಿಡಿದರು. ಬಳಿಕ ವಿರಾಟ್​ ಕೊಹ್ಲಿಗೆ ಸೂರ್ಯಕುಮಾರ್​ ಯಾದವ್​ ಜೊತೆಯಾದರು.

ಸೂರ್ಯಕುಮಾರ್​ ಯಾದವ್​ ಮತ್ತು ವಿರಾಟ್​ ಇಬ್ಬರು ಸೇರಿ ನೆದರ್ಲ್ಯಾಂಡ್ಸ್​ ತಂಡದ ಬೌಲರ್​ಗಳನ್ನು ಬೆಂಡೆತ್ತಿದರು. ವಿಕೆಟ್​ ನೀಡದೇ ಭಾರತ ತಂಡದ ಸ್ಕೋರ್​ನ್ನು ಬೃಹತ್ ಮೊತ್ತಕ್ಕೆ ಏರಿಸುವಲ್ಲಿ ಸಫಲರಾದರು.

ವಿರಾಟ್​ ಕೊಹ್ಲಿ ಅಮೋಘ ಅರ್ಧ ಶತಕ: ವಿರಾಟ್​ ಕೊಹ್ಲಿ ಮತ್ತೆ ಫಾರ್ಮ್​ಗೆ ಮರಳಿದ್ದರಿಂದ ಅಭಿಮಾನಿಗಳಲ್ಲಿ ಸಂತಸ ಮೂಡಿದೆ. ಈ ಪಂದ್ಯದಲ್ಲೂ ವಿರಾಟ್​ ಅರ್ಧ ಶತಕಗಳಿಸಿದರು. ಕೇವಲ ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್ ಸಹಾಯದಿಂದ ರನ್​ಗಳನ್ನು ಕಲೆ ಹಾಕಿದರು.

ಸೂರ್ಯಕುಮಾರ್​​ ಯಾದವ್​ ಫಿಫ್ಟಿ: ವಿರಾಟ್ ಜೊತೆಗೂಡಿದ ಸೂರ್ಯಕುಮಾರ್​ ಯಾದವ್​ ಭರ್ಜರಿ ಬ್ಯಾಟ್​ ಬೀಸಿದರು. ಸೂರ್ಯಕುಮಾರ್​ ಯಾದವ್​ 25 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸುವ ಮೂಲಕ 51 ರನ್​ಗಳನ್ನು ಬಾರಿಸಿದರು.

ಒಟ್ಟಿನಲ್ಲಿ ಭಾರತ ತಂಡ ನಿಗದಿತ 20 ಓವರ್​ಗಳಲ್ಲಿ ಎರಡು ವಿಕೆಟ್​ಗಳ ನಷ್ಟಕ್ಕೆ 179 ರನ್​ಗಳನ್ನು ಕಲೆಹಾಕುವ ಮೂಲಕ ಎದುರಾಳಿ ತಂಡಕ್ಕೆ ಬೃಹತ್​ ಗುರಿ ನೀಡಿದೆ. ನೆದರ್ಲ್ಯಾಂಡ್ಸ್​ ತಂಡದ ಪರ ಪಾಲ್ ವ್ಯಾನ್ ಮೀಕೆರೆನ್ ಮತ್ತು ಫ್ರೆಡ್ ಕ್ಲಾಸೆನ್ ತಲಾ ಒಂದೊಂದು ವಿಕೆಟ್​ಗಳನ್ನು ಪಡೆದರು.

ಇದಕ್ಕೂ ಮುನ್ನ ಇದೇ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ವೇಳೆ ಕೆಲಕಾಲ ಮಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆಟವು ಕೊಂಚ ವಿಳಂಬವಾಗಿ ಮುಕ್ತಾಯವಾಯಿತು. ಹೀಗಾಗಿ ಭಾರತ ಹಾಗೂ ನೆದರ್ಲ್ಯಾಂಡ್ಸ್​ ಪಂದ್ಯವು ನಿಗದಿತ ಸಮಯಕ್ಕಿಂತ ತಡವಾಗಿ ಆರಂಭಗೊಂಡಿದೆ.

ರೋಹಿತ್​ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚುಟುಕು ಕ್ರಿಕೆಟ್​​ ಅಭಿಯಾನದ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್​ ವಿರುದ್ಧ ರೋಚಕ ಗೆಲುವು ಸಾಧಿಸಿದ್ದು, ಆತ್ಮ ವಿಶ್ವಾಸದಲ್ಲಿದೆ. ಇದೇ ತಂಡವನ್ನು ಇಂದಿನ ಪಂದ್ಯಕ್ಕೂ ಮುಂದುವರೆಸಲಾಗಿದೆ. ಇನ್ನೊಂದೆಡೆ ಬಾಂಗ್ಲಾದೇಶ ಜೊತೆಗಿನ ಪ್ರಥಮ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್​ ಸೋತಿದ್ದು, ಇಂದು ಭಾರತದ ಜೊತೆ ಸೆಣೆಸಾಡಲಿದೆ.

ಓದಿ: ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ: ಮಹತ್ವದ ಘೋಷಣೆ ಮಾಡಿದ ಬಿಸಿಸಿಐ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.