ETV Bharat / sports

ವಿಶ್ವಕಪ್ ಕ್ರಿಕೆಟ್‌​ ಸೆಮಿ ಫೈನಲ್, ಫೈನಲ್ ನೋಡುವ ಆಸೆಯೇ?: ಟಿಕೆಟ್ ಲಭ್ಯತೆ ಕುರಿತು ಇಲ್ಲಿದೆ ಮಾಹಿತಿ - ETV Bharath Kannada news

ಮುಂಬರುವ ಏಕದಿನ ಕ್ರಿಕೆಟ್‌ ವಿಶ್ವಕಪ್​ನ ಲೀಗ್​ ಹಂತದ ಟಿಕೆಟ್​ಗಳು ಈಗಾಗಲೇ ಸೋಲ್ಡ್​ಔಟ್​ ಆಗಿವೆ. ಇಂದು ರಾತ್ರಿಯಿಂದ ಸೆಮಿಫೈನಲ್​ ಮತ್ತು ಫೈನಲ್​ ಟಿಕೆಟ್​ಗಳ ಮಾರಾಟ ಆರಂಭವಾಗಲಿದೆ.

Tickets for semi-finals, final to go on sale later today
ಟಿಕೆಟ್ ಲಭ್ಯತೆ ಇಲ್ಲಿದೆ ಸಂರ್ಪೂಣ ಮಾಹಿತಿ
author img

By ETV Bharat Karnataka Team

Published : Sep 15, 2023, 6:14 PM IST

ನವದೆಹಲಿ: ಐಸಿಸಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳ ಟಿಕೆಟ್‌ಗಳು ಇಂದಿನಿಂದ (ಶುಕ್ರವಾರ) ಮಾರಾಟವಾಗಲಿದೆ. ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಸೆಮಿಫೈನಲ್​ ನಡೆದರೆ, ಫೈನಲ್​ ಪಂದ್ಯ ಗುಜರಾತ್​ನ ಅಹಮದಾಬಾದ್​ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂದು ರಾತ್ರಿ 8 ಗಂಟೆಯಿಂದ ಟಿಕೆಟ್​ಗಳು ಲಭ್ಯವಿದೆ.

ಟಿಕೆಟ್​ ಖರೀದಿ ಎಲ್ಲಿ?: https://tickets.cricketworldcup.com ನಲ್ಲಿ ಬುಕಿಂಗ್​ಗಳು ಆರಂಭವಾಗಲಿವೆ. ಈ ಹಿಂದೆ ಭಾರತ ತಂಡ ಪ್ರಮುಖ ಪಂದ್ಯಗಳ ಟಿಕೆಟ್​ ಮಾರಾಟದ ವೇಳೆ ವೆಬ್​ಸೈಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸದೇ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಈ ಬಾರಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕೆಲವು ಸುಧಾರಣೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ. ಕಳೆದ ಬಾರಿ ಟಿಕೆಟ್​ ಮಾರಾಟ ಆರಂಭವಾದ ಗಂಟೆಗೂ ಮುನ್ನವೇ ಸೋಲ್ಡ್​ಔಟ್​ ಎಂದು ಬಂದಿದ್ದು ಅಭಿಮಾನಿಗಳ ನಿರಾಸೆಯಾಗಿತ್ತು.

ಅಂತರರಾಷ್ಟ್ರೀಯ ಅಗ್ರ 10 ಶ್ರೇಯಾಂಕಿತ ತಂಡಗಳು ಲೀಗ್ ಹಂತದಲ್ಲಿ ಪೈಪೋಟಿ ನಡೆಸಿ ಅಂತಿಮ ಘಟ್ಟ ಪ್ರವೇಶಿಸಲಿವೆ. 10 ವರ್ಷಗಳಿಂದ ಐಸಿಸಿ ಪ್ರಶಸ್ತಿ ಗೆಲ್ಲದೇ ಇರುವ ಭಾರತ ತಂಡಕ್ಕೆ ತವರಿನಲ್ಲಿ ಆಯೋಜನೆ ಆಗಿರುವ ವಿಶ್ವಕಪ್​ ಗೆಲ್ಲುವ ಗುರಿ ಇದೆ. ಅಕ್ಟೋಬರ್​ 5 ರಿಂದ ವಿಶ್ವಕಪ್​ ಪಂದ್ಯಗಳು ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ 2019ರ ಫೈನಲ್‌ ಆಡಿದ್ದ ಇಂಗ್ಲೆಂಡ್-ನ್ಯೂಜಿಲೆಂಡ್ ಸೆಣಸಾಡಲಿವೆ. ನೆವೆಂಬರ್​ 19 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್​ ನಡೆಯಲಿದೆ.

"ಪುರುಷರ ಕ್ರಿಕೆಟ್ ವಿಶ್ವಕಪ್ 10 ಸ್ಪರ್ಧಾತ್ಮಕ ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ, ನೆದರ್ಲ್ಯಾಂಡ್ಸ್‌ ನಡುವೆ ನಡೆಯಲಿದೆ. ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಏಕದಿನ ಕ್ರಿಕೆಟ್​ನ ಅತ್ಯುತ್ತಮ ಪಂದ್ಯಗಳನ್ನು ನೋಡಲಿದ್ದೇವೆ. ಭಾರತದಲ್ಲಿ ಎಲ್ಲಾ ಪಂದ್ಯಗಳನ್ನು ಆಯೋಜಿಸಲಾಗಿದ್ದು, ಕ್ರಿಕೆಟ್​ನ ಐತಿಹಾಸಿಕ ಕ್ಷಣಗಳಲ್ಲಿ ಪಾಲ್ಗೊಳ್ಳಲು ಅವಕಾಶಗಳು ತೆರೆದಿವೆ" ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

ಈ ಕೆಳಗಿನ ಪಂದ್ಯಗಳ ಟಿಕೆಟ್‌ಗಳು ಇಂದಿನಿಂದ ಲಭ್ಯ:

ನವೆಂಬರ್ 15 ಬುಧವಾರ - ಸೆಮಿಫೈನಲ್ 1, ಮುಂಬೈನ ವಾಂಖೆಡೆ ಕ್ರೀಡಾಂಗಣ

ನವೆಂಬರ್ 16 ಗುರುವಾರ - ಸೆಮಿಫೈನಲ್ 2, ಕೋಲ್ಕತ್ತಾದ ಈಡನ್ ಗಾರ್ಡನ್ಸ್

ನವೆಂಬರ್ 19 ಭಾನುವಾರ - ಫೈನಲ್​, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ

ಇದನ್ನೂ ಓದಿ: ವಾರಾಣಸಿಯಲ್ಲಿ ಸೆ.23ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.