ETV Bharat / sports

ಯುನಿಸೆಫ್‌ನ ದಕ್ಷಿಣ ಏಷ್ಯಾ ಕೋವಿಡ್ -19 ಪರಿಹಾರ ಕಾರ್ಯಕ್ಕೆ ಬೆಂಬಲಿಸಲು ನಿಧಿ ಸಂಗ್ರಹ ಅಭಿಯಾನ ಆರಂಭಿಸಿದ ಐಸಿಸಿ

ಜೂನ್ 18 ರಿಂದ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವೆ ಸೌತಾಂಪ್ಟನ್‌ನಲ್ಲಿ ನಡೆಯುತ್ತಿರುವ ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಐಸಿಸಿಯ ಕ್ರಿಕೆಟ್ ಫಾರ್ ಗುಡ್ ಉಪಕ್ರಮದ ಮೂಲಕ ಈ ಅಭಿಯಾನ ಪ್ರಾರಂಭಿಸಿದೆ.

http://10.10.50.85:6060///finalout4/karnataka-nle/finalout/17-June-2021/12167899_icc.jpg
ನಿಧಿ ಸಂಗ್ರಹ ಅಭಿಯಾನ ಆರಂಭಿಸಿದ ಐಸಿಸಿ
author img

By

Published : Jun 17, 2021, 10:07 PM IST

ದುಬೈ: ದಕ್ಷಿಣ ಏಷ್ಯಾದಲ್ಲಿ ಯುನಿಸೆಫ್‌ನ ತುರ್ತು ಕೋವಿಡ್​-19 ಪ್ರಕ್ರಿಯೆಗೆ ಬೆಂಬಲಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗುರುವಾರ ನಿಧಿಸಂಗ್ರಹ ಅಭಿಯಾನವನ್ನು ಪ್ರಾರಂಭಿಸಿದೆ.

ಜೂನ್ 18 ರಿಂದ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವೆ ಸೌತಾಂಪ್ಟನ್‌ನಲ್ಲಿ ನಡೆಯುತ್ತಿರುವ ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಐಸಿಸಿಯ ಕ್ರಿಕೆಟ್ ಫಾರ್ ಗುಡ್ ಉಪಕ್ರಮದ ಮೂಲಕ ಈ ಅಭಿಯಾನ ಪ್ರಾರಂಭಿಸಿದೆ.

ಸುಮಾರು ಎರಡು ಶತಕೋಟಿ ಜನರ ಮತ್ತು ವಿಶ್ವದ ಕಾಲು ಭಾಗದಷ್ಟು ಮಕ್ಕಳ ನೆಲೆಯಾಗಿರುವ ದಕ್ಷಿಣ ಏಷ್ಯಾದ ಮೇಲೆ ಕೋವಿಡ್​-19 ​ ವಿನಾಶಕಾರಿ ಪರಿಣಾಮವನ್ನು ಬೀರಿದೆ. ಈ ಪ್ರದೇಶಗಳಲ್ಲಿ ಕೋವಿಡ್​ 19 ರಿಂದ ಹಾನಿಯಾಗುವ ಜೀವಗಳನ್ನು ಉಳಿಸುವುದಕ್ಕೆ ಚಿಕಿತ್ಸೆ ಮತ್ತು ಅಗತ್ಯ ಸೇವೆಗಳನ್ನು ಒದಗಿಸುವುದಕ್ಕೆ ಅಲ್ಲಿನ ದೇಶಗಳ ಸಾಮರ್ಥ್ಯ ಮೀರಿ ಮುಂದೆ ಹೋಗಿದೆ.

ಈ ಪ್ರದೇಶದಲ್ಲಿ ಇಲ್ಲಿಯವರೆಗೆ ಸುಮಾರು 3 ಕೋಟಿಗೂ ಹೆಚ್ಚು ಕೋವಿಡ್​ 19 ಪ್ರಕರಣಗಳು ಮತ್ತು 4,00,000 ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ. ಈ ವೈರಸ್ ಮಕ್ಕಳ ಮೇಲೆ ನೇರ ಪರಿಣಾಮ ಬೀರಿದೆ, ಮೊದಲಿಗಿಂತಲೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮಕ್ಕಳು ತಮ್ಮ ಪೋಷಕರನ್ನು ಮತ್ತು ಪಾಲನೆ ಮಾಡುವವರನ್ನು ವೈರಸ್‌ನಿಂದ ಕಳೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಹಲವರು ಪೋಷಕರ ಆರೈಕೆಯಿಲ್ಲದೇ ದುರ್ಬಲರಾಗಿದ್ದಾರೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

" ತನ್ನ ಕೋವಿಡ್​ 19 ಪ್ರತಿಕ್ರಿಯೆಯ ಭಾಗವಾಗಿ, ಯುನಿಸೆಫ್ ಈ ಪ್ರದೇಶದ ಸರ್ಕಾರ ಮತ್ತು ಪಾಲುದಾರರೊಂದಿಗೆ ಅಲ್ಲಿನ ಕುಟುಂಬಗಳನ್ನು ತಲುಪಲು ಕೆಲಸ ಮಾಡುತ್ತಿದೆ. ಜೊತೆಗೆ ಆರೋಗ್ಯ, ಮಕ್ಕಳ ರಕ್ಷಣೆ ಮತ್ತು ಶಿಕ್ಷಣ, ನೀರು, ನೈರ್ಮಲ್ಯ ಬಗ್ಗೆ ಮಾಹಿತಿ ಮತ್ತು ತಾಂತ್ರಿಕ ನೆರವು ನೀಡುವುದಕ್ಕೆ ಮತ್ತು ಲಸಿಕೆ ಒದಗಿಸಿಕೊಡುವುದಕ್ಕೆ ನೆರವು ನೀಡುವುದಕ್ಕೆ ಐಸಿಸಿ ಈ ನಿರ್ಣಾಯಕ ಸಮಯದಲ್ಲಿ ಯುನಿಸೆಫ್‌ ಜೊತೆಗೆ ಕೈ ಜೋಡಿಸಿದೆ.

ಈ ನಿರ್ಣಾಯಕ ಸಂದರ್ಭದಲ್ಲಿ ಐಸಿಸಿ ಮಕ್ಕಳ ಜೀವನ ಮತ್ತು ಭವಿಷ್ಯ ಕಾಪಾಡಲು ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾದ ಕ್ರಿಕೆಟ್‌ನ ಶಕ್ತಿ ಮತ್ತು ವ್ಯಾಪ್ತಿಯನ್ನು ಬಳಸಿಕೊಳ್ಳುತ್ತದೆ ಎಂದು ವಿಶ್ವ ಕ್ರಿಕೆಟ್ ಬೋರ್ಡ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.