ETV Bharat / sports

ವಿಶ್ವಕಪ್​ ಕ್ರಿಕೆಟ್‌ನಲ್ಲಿ ನೆದರ್ಲೆಂಡ್‌ಗೆ​ ಅಚ್ಚರಿಯ ಗೆಲುವು! ಬಲಿಷ್ಠ ದಕ್ಷಿಣ ಆಫ್ರಿಕಾ ತಂಡಕ್ಕೆ ನಿರಾಶೆ - World Cup 2023

ಹ್ಯಾಟ್ರಿಕ್​ ಜಯದ ನಿರೀಕ್ಷೆಯಲ್ಲಿದ್ದ ದಕ್ಷಿಣ ಆಫ್ರಿಕಾ ತಂಡವು ನೆದರ್ಲೆಂಡ್‌ ವಿರುದ್ಧ ಸೋಲು ಅನುಭವಿಸಿತು.

ICC Cricket World Cup 2023
ICC Cricket World Cup 2023
author img

By ETV Bharat Karnataka Team

Published : Oct 17, 2023, 11:09 PM IST

ಧರ್ಮಶಾಲಾ (ಹಿಮಾಚಲ ಪ್ರದೇಶ): ದೆಹಲಿ ಮೈದಾನದಲ್ಲಿ ಇಂಗ್ಲೆಂಡ್​ ತಂಡ ಅಫ್ಘಾನಿಸ್ತಾನಕ್ಕೆ ಮಣಿದರೆ, ನೆದರ್ಲೆಂಡ್​ ಎದುರು ಬೃಹತ್​ ಹ್ಯಾಟ್ರಿಕ್​ ಜಯದ ಆಸೆಯಲ್ಲಿದ್ದ ದಕ್ಷಿಣ ಆಫ್ರಿಕಾ ಹೀನಾಯ ಸೋಲು ಕಂಡಿತು. ಡಚ್ಚರ ಕರಾರುವಾಕ್ ದಾಳಿಗೆ ಹರಿಣಗಳು ತತ್ತರಿಸಿ ಹೋದರು. ನೆದರ್ಲೆಂಡ್​ ನೀಡಿದ್ದ 246 ರನ್ ಗುರಿ ಬೆನ್ನತ್ತಿದ ಬವುಮಾ ಪಡೆ 42.5 ಓವರ್​ಗಳಲ್ಲಿ 207 ರನ್​ಗಳಿಗೆ ಸರ್ವಪತನ ಕಂಡಿತು. ಇದರಿಂದ ಡಚ್ಚರು 38 ರನ್‌ಗಳಿಂದ ರೋಚಕ ಗೆಲುವು ದಾಖಲಿಸಿದರು. 2023ರ ವಿಶ್ವಕಪ್‌ನಲ್ಲಿದು ಎರಡನೇ ಅಚ್ಚರಿಯ ಫಲಿತಾಂಶವಾಗಿದೆ.

ಮಳೆ ಬಂದ ಕಾರಣ ಎರಡು ಗಂಟೆ ತಡವಾಗಿ ಪಂದ್ಯ ಆರಂಭವಾದ ಕಾರಣ ಡಿಎಲ್​ಎಸ್​ ನಿಯಮದನ್ವಯ 43 ಓವರ್‌ಗಳಿಗೆ ಪಂದ್ಯವನ್ನು ಕಡಿತ ಮಾಡಲಾಯಿತು. ಟಾಸ್​ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ನೆದರ್ಲೆಂಡ್​ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರ ಅರ್ಧಶತಕ ಮತ್ತು ಕೆಳ ಕ್ರಮಾಂಕದ ಬ್ಯಾಟರ್​ಗಳ ನೆರವಿನಿಂದ ನಿಗದಿತ ಓವರ್‌ಗಳ ಅಂತ್ಯದ ವೇಳೆಗೆ 8 ವಿಕೆಟ್​ ನಷ್ಟಕ್ಕೆ ತಂಡ 245 ರನ್​ ಕಲೆಹಾಕಿತು.

ಇದನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾಕ್ಕೆ ಆರಂಭಿಕ ಆಘಾತದ ಜೊತೆ ಸರಣಿ ಆಘಾತವೂ ಆಯಿತು. ಕಳೆದ ಎರಡು ಪಂದ್ಯಗಳಲ್ಲಿ ಅಬ್ಬರದ ಇನ್ನಿಂಗ್ಸ್ ಆಡಿದ್ದ ಆಟಗಾರರು ಬಾಲ ಮುದುರಿಕೊಂಡು ಪೆವಿಲಿಯನ್​ಗೆ ತೆರಳಿದರು. ಎರಡು ಪಂದ್ಯದಲ್ಲಿ ಶತಕದ ಇನ್ನಿಂಗ್ಸ್​ ಆಡಿದ್ದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಇಂದು 20 ರನ್​ಗೆ ಸುಸ್ತಾಗಿದ್ದರು. ಸತತ ಎರಡು ಪಂದ್ಯಗಳಲ್ಲಿ ವಿಫಲತೆ ಕಂಡಿರುವ ಹರಿಣಗಳ ನಾಯಕ ತೆಂಬಾ ಬವುಮಾ (16) ಇಂದು ಸಹ ದೊಡ್ಡ ಇನ್ನಿಂಗ್ಸ್​ ಕಟ್ಟಲಿಲ್ಲ.

ಐಸಿಸಿ 3ನೇ ಶ್ರೇಯಾಂಕಿತ ಆಟಗಾರ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ (4) ಡಚ್ಚರ ಬೌಲಿಂಗ್​ ಮುಂದೆ ಮಂಕಾದರು. ಲಂಕಾ ವಿರುದ್ಧ 54 ಬಾಲ್​ನಲ್ಲಿ ಶತಕ ದಾಖಲಿಸಿ ದಾಖಲೆ ಬರೆದಿದ್ದ ಐಡೆನ್ ಮಾರ್ಕ್ರಾಮ್ 1 ರನ್​ ವಿಕೆಟ್​ ಒಪ್ಪಿಸಿದರು. 5ನೇ ವಿಕೆಟ್​ಗೆ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್​ 45 ರನ್ನ ಜೊತೆಯಾಟ ಮಾಡಿದರು. ಇದು ತಂಡಕ್ಕೆ ಗೆಲುವಿನ ಆಸರೆ ನೀಡಿತಾದರೂ, 28 ರನ್​ ಗಳಿಸಿದ್ದ ಕ್ಲಾಸೆನ್ ವಿಕೆಟ್​ ಪತನದಿಂದ ಭರವಸೆಯೂ ಕುಸಿಯಿತು.

ಮಿಲ್ಲರ್​​ ಏಕಾಂಗಿ ಹೋರಾಟ ವ್ಯರ್ಥ: ಮಾರ್ಕೊ ಜಾನ್ಸೆನ್ 25 ಬಾಲ್​ ಆಡಿ ವಿಕೆಟ್​ ನಿಲ್ಲಿಸಲು ಪ್ರಯತ್ನಿಸಿದರಾದರೂ 9 ರನ್​ಗೆ ವಿಕೆಟ್​ ಕೊಟ್ಟರು. ಇನ್ನೊಂದೆಡೆ ಮಾರ್ಕ್ರಾಮ್​ ನಿಧಾನ ಗತಿಯಲ್ಲಿ ಇನ್ನಿಂಗ್ಸ್​ ಕಟ್ಟುತ್ತಾ ಸಾಗಿದರು. ಜೆರಾಲ್ಡ್ ಕೋಟ್ಜಿ ಮಾರ್ಕ್ರಾಮ್​ಗೆ ಬೆಂಬಲ ನೀಡಿದರು. ಆದರೆ 43 ರನ್​ ಗಳಿಸಿದ್ದ ಮಾರ್ಕ್ರಾಮ್​ ಕ್ಲೀನ್​ ಬೌಲ್ಡ್​ ಆದರು. 22 ರನ್​ ಗಳಿಸಿ ಜೆರಾಲ್ಡ್ ಕೋಟ್ಜಿ ವಿಕೆಟ್​ ಕೊಟ್ಟರೆ, 9 ರನ್​​ಗೆ ರಬಾಡಾ ಪೆವಿಲಿಯನ್​ಗೆ ಮರಳಿದರು. ಕೊನೆಯಲ್ಲಿ ಕೇಶವ್ ಮಹಾರಾಜ್ ಮತ್ತು ಲುಂಗಿ ಎನ್‌ಗಿಡಿ ತಂಡವನ್ನು ಗೆಲ್ಲಿಸಲು ಸಕಲ ಪ್ರಯತ್ನವನ್ನು ಮಾಡಿದರಾದರೂ ಜಯ ದಾಖಲಿಸಲಿಲ್ಲ.

ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್​: ಹ್ಯಾಟ್ರಿಕ್​ ಜಯ ದಾಖಲಿಸಿದ ಭಾರತಕ್ಕೆ ಪುಣೆಯಲ್ಲಿ ಬಾಂಗ್ಲಾ ಸವಾಲು.. ಈ ಆಟಗಾರರ ಮೇಲಿದೆ ಎಲ್ಲರ ಕಣ್ಣು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.