ಮುಂಬೈ (ಮಹಾರಾಷ್ಟ್ರ): ಹರಿಣ ಪಡೆ ನೀಡಿದ ಬೃಹತ್ ಮೊತ್ತಕ್ಕೆ ಬಾಂಗ್ಲಾ ಟೈಗರ್ಸ್ ಬೆಚ್ಚಿ ಬಿದ್ದರು. ಮಹಮ್ಮದುಲ್ಲಾ ಅವರ ಏಕಾಂಗಿ ಶತಕದ ಹೋರಾಟ ಬಾಂಗ್ಲಾ ತಂಡಕ್ಕೆ ಯಾವುದೇ ಫಲ ನೀಡಲಿಲ್ಲ. 46.4 ಓವರ್ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡ ತಂಡ 149 ರನ್‌ಗಳಿಂದ ಸೋಲನುಭವಿಸಿದೆ. ಐದರಲ್ಲಿ ನಾಲ್ಕು ಪಂದ್ಯಗಳನ್ನು ಬೃಹತ್ ರನ್ ಅಂತರದಲ್ಲಿ ಗೆದ್ದ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಕ್ವಿಂಟನ್ ಡಿಕಾಕ್ (174), ಐಡೆನ್ ಮಾರ್ಕ್ರಾಮ್ (60) ಮತ್ತು ಹೆನ್ರಿಚ್ ಕ್ಲಾಸೆನ್ (90) ಇನ್ನಿಂಗ್ಸ್ ನೆರವಿನಿಂದ 382 ರನ್ ಕಲೆ ಹಾಕಿತ್ತು.
- " class="align-text-top noRightClick twitterSection" data="">
15 ಓವರ್ಗೆ 5 ವಿಕೆಟ್ ಪತನ: ರನ್ ಪೇರಿಸುವ ಒತ್ತಡದಲ್ಲಿ ಬಾಂಗ್ಲಾ ಬ್ಯಾಟರ್ಗಳು ಕಂಗಾಲಾದಂತೆ ಕಂಡುಬಂದರು. ಎದುರಾಳಿಗಳ ಬೌಲಿಂಗ್‌ಗೆ ದೊಡ್ಡ ಹಿಟ್ಗಳನ್ನು ಹೊಡೆಯುವುದಿರಲಿ, ಸಣ್ಣ ಪ್ರಮಾಣದ ರನ್ ಕದಿಯಲೂ ಸಾಧ್ಯವಾಗಲಿಲ್ಲ. ಆರಂಭಿಕರಾದ ತಂಝೀದ್ ಹಸನ್ ಮತ್ತು ಲಿಟ್ಟನ್ ದಾಸ್ 30 ರನ್ಗಳ ಜತೆಯಾಟ ಮಾಡಿದರಾದರೂ ಅದನ್ನು ಇನ್ನಷ್ಟು ಬೆಳಸುವಲ್ಲಿ ವಿಫಲರಾದರು.
12 ರನ್‌ಗೆ ತಂಝೀದ್ ಹಸನ್ ವಿಕೆಟ್ ಕೊಟ್ಟರು. ಅವರ ನಂತರ ಸತತ ವಿಕೆಟ್‌ಗಳನ್ನು ಹರಿಣ ಪಡೆಯ ಬೌಲರ್ಗಳು ಕಬಳಿಸಿದರು. ಹಸನ್ ಬಳಿಕ ನಜ್ಮುಲ್ ಹೊಸೈನ್ ಶಾಂಟೊ (0), ಶಕೀಬ್ ಅಲ್ ಹಸನ್(1), ಮುಶ್ಫಿಕರ್ ರಹೀಮ್ (8) ಮತ್ತು ಇನ್ನೋರ್ವ ಆರಂಭಿಕ ಲಿಟ್ಟನ್ ದಾಸ್ (22) ಸಹ ವಿಕೆಟ್ ಕೊಟ್ಟರು. 14.6 ಓವರ್ಗೆ ಬಾಂಗ್ಲಾ 58 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತು.
-
🇿🇦 THE PROTEAS SEAL VICTORY OVER BANGLADESH
— Proteas Men (@ProteasMenCSA) October 24, 2023 " class="align-text-top noRightClick twitterSection" data="
A dominant display from the Protea batters to set up a huge chase for the Tigers led by Quinton de Kock & Heinrich Klaasen 🤝🏏
The bowlers also demonstrated a disciplined line & length to bowl them out 🇧🇩#CWC23 #BePartOfIt pic.twitter.com/3cploSWrN9
">🇿🇦 THE PROTEAS SEAL VICTORY OVER BANGLADESH
— Proteas Men (@ProteasMenCSA) October 24, 2023
A dominant display from the Protea batters to set up a huge chase for the Tigers led by Quinton de Kock & Heinrich Klaasen 🤝🏏
The bowlers also demonstrated a disciplined line & length to bowl them out 🇧🇩#CWC23 #BePartOfIt pic.twitter.com/3cploSWrN9🇿🇦 THE PROTEAS SEAL VICTORY OVER BANGLADESH
— Proteas Men (@ProteasMenCSA) October 24, 2023
A dominant display from the Protea batters to set up a huge chase for the Tigers led by Quinton de Kock & Heinrich Klaasen 🤝🏏
The bowlers also demonstrated a disciplined line & length to bowl them out 🇧🇩#CWC23 #BePartOfIt pic.twitter.com/3cploSWrN9
ಮಹಮ್ಮದುಲ್ಲಾ ಏಕಾಂಗಿ ಹೋರಾಟ: ಅತ್ತ ಐದು ವಿಕೆಟ್ ಉರುಳಿ ತಂಡ ಸಂಕಷ್ಟದಲ್ಲಿದ್ದರೆ, ಮಹಮ್ಮದುಲ್ಲಾ ಏಕಾಂಗಿಯಾಗಿ ತಂಡಕ್ಕೆ ಆಸರೆಯಾದರು. ಕೆಳ ಕ್ರಮಾಂಕದ ಬ್ಯಾಟರ್ಗಳ ಜತೆ ಪಾಲುದಾರಿಕೆ ಮಾಡುತ್ತಾ ಮುಂದುವರೆದ ಅವರು ತಂಡ ಹೀನಾಯವಾಗಿ ಸೋಲು ಕಾಣದಂತೆ ರಕ್ಷಿಸಿದರು. ಅಲ್ಲದೇ ವಿಶ್ವಕಪ್ನಲ್ಲಿ ತಂಡದ ನೆಟ್ ರನ್ರೇಟ್ ಕುಸಿಯದಂತೆ ಹರಿಣ ಪಡೆಯ ದಾಳಿಯನ್ನು ಎದುರಿಸಿ ನಿಂತರು. ಕೆಳ ಕ್ರಮಾಂಕದ ಆಟಗಾರರಾದ ಮೆಹಿದಿ ಹಸನ್ ಮಿರಾಜ್ (11), ನಸುಮ್ ಅಹ್ಮದ್ (19) ಮತ್ತು ಹಸನ್ ಮಹಮ್ಮದ್ (15) ವಿಕೆಟ್ ನಿಲ್ಲಿಸಿ ಮಹಮ್ಮದುಲ್ಲಾಗೆ ನೆರವಾದರು.
ಬಾಲಂಗೋಚಿಗಳ ಸಹಾಯ ಪಡೆದುಕೊಂಡ ಮಹಮ್ಮದುಲ್ಲಾ ತಮ್ಮ ಶತಕ ಪೂರೈಸಿಕೊಂಡರು. ಇನ್ನಿಂಗ್ಸ್ನಲ್ಲಿ 111 ಬಾಲ್ ಎದುರಿಸಿ 11 ಬೌಂಡರಿ, 4 ಸಿಕ್ಸ್ನಿಂದ 111 ಕಲೆಹಾಕಿ ಔಟ್ ಆದರು. ಇವರ ಶತಕದ ಇನ್ನಿಂಗ್ಸ್ನ ನೆರವಿನಿಂದ ಬಾಂಗ್ಲಾ 200ರ ಗಡಿ ದಾಟಿತು. ಮುಸ್ತಫಿಜುರ್ ರೆಹಮಾನ್ (11) ವಿಕೆಟ್ ಪತನದಿಂದ ಬಾಂಗ್ಲಾದೇಶ 46.4 ಓವರ್ಗೆ 233 ರನ್‌ಗೆ ಸರ್ವಪತನ ಕಂಡಿತು.
-
A stupendous 174 helps Quinton de Kock garner his second @aramco #POTM of #CWC23 🎇#SAvBAN pic.twitter.com/3MjsuNYvmH
— ICC Cricket World Cup (@cricketworldcup) October 24, 2023 " class="align-text-top noRightClick twitterSection" data="
">A stupendous 174 helps Quinton de Kock garner his second @aramco #POTM of #CWC23 🎇#SAvBAN pic.twitter.com/3MjsuNYvmH
— ICC Cricket World Cup (@cricketworldcup) October 24, 2023A stupendous 174 helps Quinton de Kock garner his second @aramco #POTM of #CWC23 🎇#SAvBAN pic.twitter.com/3MjsuNYvmH
— ICC Cricket World Cup (@cricketworldcup) October 24, 2023
ಕ್ವಿಂಟನ್ ಡಿ ಕಾಕ್ ಪಂದ್ಯಶ್ರೇಷ್ಠ: ಮೊದಲ 15 ಓವರ್ಗಳಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಂತರ ಅದೇ ಲಯದಲ್ಲಿ ಮುಂದುವರೆಯುವಲ್ಲಿ ಎಡವಿತು. 15ನೇ ಓವರ್ ನಂತರ ಮಹಮ್ಮದುಲ್ಲಾ ವಿಕೆಟ್ ಕಾಯ್ದುಕೊಂಡ ಕಾರಣ 47 ಓವರ್‌ವರೆಗೆ ಪಂದ್ಯ ಸಾಗಿತು. ಜೆರಾಲ್ಡ್ ಕೊಯೆಟ್ಜಿ 3 ಮತ್ತು ಕಗಿಸೊ ರಬಾಡ, ಲಿಜಾಡ್ ವಿಲಿಯಮ್ಸ್, ಮಾರ್ಕೊ ಜಾನ್ಸೆನ್ ತಲಾ 2 ವಿಕೆಟ್ ಪಡೆದರೆ, ಕೇಶವ್ ಮಹಾರಾಜ್ 1 ವಿಕೆಟ್ ಉರುಳಿಸಿದರು. 174 ರನ್ನ ಬೃಹತ್ ಇನ್ನಿಂಗ್ಸ್ ಆಡಿದ ಕ್ವಿಂಟನ್ ಡಿ ಕಾಕ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: 'ಅಫ್ಘಾನಿಸ್ತಾನ ಯಾವುದೇ ದೇಶವನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ'