ETV Bharat / sports

ICC Cricket World Cup 2023: ಹೈದರಾಬಾದ್​ನಲ್ಲಿ ಪಾಕಿಸ್ತಾನ ವಿರುದ್ಧ ಸೆಣಲಿರುವ ಶ್ರೀಲಂಕಾ.. ​1.30ಕ್ಕೆ ಟಾಸ್

author img

By ETV Bharat Karnataka Team

Published : Oct 10, 2023, 11:33 AM IST

ವಿಶ್ವಕಪ್​ 2023ರ 8ನೇ ಪಂದ್ಯ ಇಂದು ಹೈದರಾಬಾದ್​ನಲ್ಲಿ ಆರಂಭಗೊಳ್ಳಲಿದೆ. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಇನ್ನು ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳಲಿದೆ.

Pakistan vs Sri Lanka 8th Match  8th Match in Hyderabad  ICC Cricket World Cup 2023  Rajiv Gandhi International Stadium  ಪಾಕಿಸ್ತಾನ ವಿರುದ್ಧ ಸೆಣಲಿರುವ ಶ್ರೀಲಂಕಾ  ವಿಶ್ವಕಪ್​ 2023ರ 8ನೇ ಪಂದ್ಯ  8ನೇ ಪಂದ್ಯ ಇಂದು ಹೈದರಾಬಾದ್​ನಲ್ಲಿ ಆರಂಭ  ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣ  ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಪಂದ್ಯ  ಒಟ್ಟು 156 ಏಕದಿನ ಪಂದ್ಯ  ವಿಶ್ವಕಪ್‌ನಲ್ಲಿ 8 ಬಾರಿ ಮುಖಾಮುಖಿ
ಹೈದರಾಬಾದ್​ನಲ್ಲಿ ಪಾಕಿಸ್ತಾನ ವಿರುದ್ಧ ಸೆಣಲಿರುವ ಶ್ರೀಲಂಕಾ.. ಟಾಸ್​ 1.30ಕ್ಕೆ

ಹೈದರಾಬಾದ್​, ತೆಲಂಗಾಣ: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇನ್ನು ಕೆಲವೇ ಕ್ಷಣಗಳಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಪಂದ್ಯ ನಡೆಯಲಿದೆ. ಶ್ರೀಲಂಕಾದಿಂದ ಪಾಕಿಸ್ತಾನ ಕಠಿಣ ಸವಾಲು ಎದುರಿಸಬಹುದಾಗಿದೆ. ನೆದರ್ಲೆಂಡ್ಸ್ ವಿರುದ್ಧದ ಗೆಲುವು ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡಕ್ಕೆ ಹೆಚ್ಚು ಭರವಸೆ ನೀಡಿದೆ. ಆದರೂ ದೆಹಲಿಯಲ್ಲಿ ದಕ್ಷಿಣ ಆಫ್ರಿಕಾದಿಂದ 102 ರನ್‌ಗಳಿಂದ ಸೋಲಿಸಲ್ಪಟ್ಟ ಶ್ರೀಲಂಕಾ ಗೆಲುವಿನ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯುತ್ತಿದೆ.

ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಒಟ್ಟು 156 ಏಕದಿನ ಪಂದ್ಯಗಳು ನಡೆದಿದ್ದು, ಇದರಲ್ಲಿ ಪಾಕಿಸ್ತಾನ 92 ಬಾರಿ ಮತ್ತು ಶ್ರೀಲಂಕಾ 59 ಬಾರಿ ಗೆದ್ದಿದೆ. ಇದರಲ್ಲಿ ಒಂದು ಪಂದ್ಯ ಡ್ರಾ ಕಂಡಿದ್ದು, 4 ಪಂದ್ಯಗಳಲ್ಲಿ ಫಲಿತಾಂಶ ಹೊರಬಿದ್ದಿಲ್ಲ. ಇದರ ಹೊರತಾಗಿಯೂ, ಎರಡೂ ತಂಡಗಳು ಏಕದಿನ ವಿಶ್ವಕಪ್‌ನಲ್ಲಿ 8 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಪಾಕಿಸ್ತಾನ 7 ಪಂದ್ಯಗಳನ್ನು ಗೆದ್ದಿದೆ ಮತ್ತು ಒಂದು ಪಂದ್ಯ ಫಲಿತಾಂಶವಿಲ್ಲದೇ ಮುಕ್ತಾಯಗೊಂಡಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣವು ಕಪ್ಪು ಮಣ್ಣು, ಕೆಂಪು ಮಣ್ಣು ಮತ್ತು ಎರಡರ ಸಂಯೋಜನೆ ಸೇರಿದಂತೆ ಮೂರು ವಿಭಿನ್ನ ರೀತಿಯ ಪಿಚ್‌ಗಳನ್ನು ಹೊಂದಿದೆ. ಇತ್ತೀಚಿನ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ಪಂದ್ಯದಲ್ಲಿ ಗಟ್ಟಿಯಾದ ಮತ್ತು ಒಣ ಮೇಲ್ಮೈಯ ಪಿಚ್​ ಅನ್ನು ಬಳಸಲಾಗಿತ್ತು. ಈ ಮೇಲ್ಮೈ ಪಿಚ್​ ವೇಗದ ಬೌಲರ್‌ಗಳಿಗೆ ಸ್ವಲ್ಪ ಬೌನ್ಸ್ ಅನ್ನು ಸೃಷ್ಟಿಸಲು ಅವಕಾಶ ಮಾಡಿಕೊಟ್ಟಿತು. ಆದ್ರೂ ಈ ಪಿಚ್​ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿತ್ತು. ಪಾಕಿಸ್ತಾನ vs ಶ್ರೀಲಂಕಾ ವಿಶ್ವಕಪ್ 2023 ಪಂದ್ಯ ಇಂದು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ 1:30ಕ್ಕೆ ನಡೆಯಲಿದೆ.

ಪಾಕಿಸ್ತಾನ ಬಳಗ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಸಲ್ಮಾನ್ ಅಲಿ ಆಗಾ, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರೌಫ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ.

ಶ್ರೀಲಂಕಾ ಬಳಗ: ದಸುನ್ ಶನಕ (ನಾಯಕ), ಕುಸಲ್ ಮೆಂಡಿಸ್ (ಉಪನಾಯಕ), ಕುಸಲ್ ಪೆರೆರಾ, ಪಾತುಮ್ ನಿಸ್ಸಾಂಕ, ಲಹಿರು ಕುಮಾರ, ದಿಮುತ್ ಕರುಣರತ್ನೆ, ಸದಿರಾ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ್ ಡಿ ಸಿಲ್ವಾ, ಮಹಿಷ್ ತೀಕ್ಷಣ, ದುನಿತ್ ವೆಲ್ಲೆಸ್, ಕಸುನ್ ರಜಿತಾ.

ಓದಿ: Cricket World Cup 2023: ಧರ್ಮಶಾಲಾದಲ್ಲಿ ರನ್​ಗಳ ಹೊಳೆ ಹರಿಸಲಿವೆಯಾ ಇಂಗ್ಲೆಂಡ್​ - ಬಾಂಗ್ಲಾ?.. 10.30ಕ್ಕೆ ಟಾಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.