ETV Bharat / sports

ವಿಶ್ವಕಪ್​ ಕ್ರಿಕೆಟ್​: ಫರ್ಗುಸನ್, ಸ್ಯಾಂಟ್ನರ್ ದಾಳಿಗೆ ಅಫ್ಘಾನ್ ಅಪ್ಪಚ್ಚಿ; ನ್ಯೂಜಿಲೆಂಡ್‌ಗೆ 149 ರನ್​ಗಳ ಗೆಲುವು

ವಿಶ್ವಕಪ್​ನ ಲೀಗ್​ ಹಂತದಲ್ಲಿ ನಾಲ್ಕು ಪಂದ್ಯಗಳನ್ನು ಸರಾಗವಾಗಿ ಗೆದ್ದಿರುವ ನ್ಯೂಜಿಲೆಂಡ್​ ಇಂದಿನ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ICC Cricket World Cup 2023
ICC Cricket World Cup 2023
author img

By ETV Bharat Karnataka Team

Published : Oct 18, 2023, 9:37 PM IST

ಚೆನ್ನೈ (ತಮಿಳುನಾಡು): ಇಂಗ್ಲೆಂಡ್​ ವಿರುದ್ಧ ಅಚ್ಚರಿಯ ಗೆಲುವು ದಾಖಲಿಸಿದ್ದ ಅಫ್ಘಾನಿಸ್ತಾನ ತಂಡ ಇಂದು ನ್ಯೂಜಿಲೆಂಡ್​ ವಿರುದ್ಧ 149 ರನ್​ಗಳಿಂದ ಸೋಲು ಕಂಡಿದೆ. ಮಿಚೆಲ್ ಸ್ಯಾಂಟ್ನರ್ ಮತ್ತು ಲಾಕಿ ಫರ್ಗುಸನ್ ಬಿಗು ದಾಳಿಗೆ ನಲುಗಿದ ಅಫ್ಘನ್​ ತಂಡ 34.4 ಓವರ್​ಗಳಿಗೆ 139 ರನ್‌ ಗಳಿಸಿ ಸರ್ವಪತನ ಕಂಡಿತು. ಸತತ ನಾಲ್ಕು ಗೆಲುವು ದಾಖಲಿಸಿ ಅಜೇಯವಾಗಿರುವ ಕಿವೀಸ್​ ಟೀಂ ಇದೀಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಟಾಸ್​ ಸೋಲು ಮೊದಲು ಬ್ಯಾಟ್​ ಮಾಡಿದ್ದ ಕಿವೀಸ್​ ಟೀಂ, ವಿಲ್ ಯಂಗ್, ಟಾಮ್ ಲ್ಯಾಥಮ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಅರ್ಧಶತಕದ ನೆರವಿನಿಂದ 288 ರನ್​ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನದ ಬ್ಯಾಟರ್​ಗಳು ನ್ಯೂಜಿಲೆಂಡ್ ದಾಳಿಗೆ ನಲುಗಿದರು. ಇಡೀ ತಂಡದಿಂದ ಯಾವುದೇ ದೊಡ್ಡ ಪ್ರಮಾಣದ ಜೊತೆಯಾಟ ನಿರ್ಮಾಣವಾಗಲಿಲ್ಲ. ಕಿವೀಸ್​ನ ಅನುಭವಿ ಬೌಲರ್​ಗಳು ಅಫ್ಘಾನ್​ ಬ್ಯಾಟರ್​ಗಳ ಪೆವಿಲಿಯನ್​ ಪರೇಡ್​ ಮಾಡಿಸಿದರು.

ಅಫ್ಘಾನ್​ ತಂಡದ ಸ್ಟಾರ್​ ಬ್ಯಾಟರ್​ ರಮಾನುಲ್ಲಾ ಗುರ್ಬಾಜ್​ 11 ರನ್​ಗೆ ವಿಕೆಟ್​ ಕೊಟ್ಟರು. ಅವರ ಬೆನ್ನಲ್ಲೇ ಇಬ್ರಾಹಿಂ ಝದ್ರಾನ್ ಸಹ ಔಟಾದರು. ನಾಯಕ ಹಶ್ಮತುಲ್ಲಾ ಶಾಹಿದಿ 8 ರನ್​ ಗಳಿಸಿ ಪೆವಿಲಿಯನ್​ ದಾರಿ ಹಿಡಿದರು. 13.6 ಓವರ್​ಗಳಿಗೆ 3 ವಿಕೆಟ್​ ಕಳೆದುಕೊಂಡ ತಂಡ​ 43 ರನ್ ಕಲೆಹಾಕಿತ್ತು.

ರಹಮತ್ ಷಾ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಕಿವೀಸ್​ ಬೌಲರ್​​ಗಳ ವಿರುದ್ಧ ಹೋರಾಡಿದರು. ಆದರೆ ರನ್​ ಕದಿಯುವಲ್ಲಿ ವಿಫಲರಾದರು. 14 ಓವರ್​ನಿಂದ 26 ಓವರ್‌ವರೆಗೆ ಜೊತೆಯಾಟ ಮಾಡಿದ ಜೋಡಿ 54 ರನ್​ ಪಾಲುದಾರಿಕೆ ಮಾಡಿ ತಂಡವನ್ನು ಶತಕದ ಸನಿಹಕ್ಕೆ ತಂದರು. ಈ ವೇಳೆ 27 ರನ್​ ಗಳಿಸಿದ್ದ ಅಜ್ಮತುಲ್ಲಾ ಒಮರ್ಜಾಯ್ ವಿಕೆಟ್​ ಕೊಟ್ಟರು. ಇದಾದ 10 ರನ್​ ಅಂತರದಲ್ಲಿ ರಹಮತ್ ಷಾ (36) ಕೂಡಾ ವಿಕೆಟ್​ ಕೊಟ್ಟರು.

32 ರನ್​ ಅಂತರದಲ್ಲಿ 5 ವಿಕೆಟ್​ ಪತನ: ರಹಮತ್ ಷಾ ವಿಕೆಟ್​ ಬೆನ್ನಲ್ಲೇ ಅಫ್ಘಾನ್​ ಆಟಗಾರರ ವಿಕೆಟ್​ ಸರಮಾಲೆಯಂತೆ ಉರುಳಿತು. 107ಕ್ಕೆ 5 ವಿಕೆಟ್​ ನಷ್ಟವಾಗಿದ್ದರೆ, 139ಕ್ಕೆ ತಂಡ ಆಲ್​ಔಟ್​ಗೆ ಬಲಿಯಾಗಿತ್ತು. ಕೊನೆಯ ಐದರಲ್ಲಿ ಮಿಚೆಲ್ ಸ್ಯಾಂಟ್ನರ್ ಮೊಹಮ್ಮದ್ ನಬಿ (7), ನವೀನ್-ಉಲ್-ಹಕ್ (0) ಮತ್ತು ಫಜಲ್ಹಕ್ ಫಾರೂಕಿ (0) ವಿಕೆಟ್​ ಉರುಳಿಸಿದರೆ, ಲಾಕಿ ಫರ್ಗುಸನ್ ರಶೀದ್ ಖಾನ್ (8) ಮತ್ತು ಮುಜೀಬ್ ಉರ್ ರಹಮಾನ್ (4) ವಿಕೆಟ್​ ಕಿತ್ತರು. ಇಕ್ರಮ್ ಅಲಿಖಿಲ್ 19 ರನ್​ ಗಳಸಿ ಅಜೇಯವಾಗುಳಿದರು.

ಗ್ಲೆನ್ ಫಿಲಿಫ್ಸ್​ ಪಂದ್ಯಶ್ರೇಷ್ಠ: ಲಾಕಿ ಫರ್ಗುಸನ್ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ 3, ಬೋಲ್ಟ್​ ಎರಡು ಹಾಗೂ ರಚಿನ್ ರವೀಂದ್ರ, ಮ್ಯಾಟ್ ಹೆನ್ರಿ ಒಂದೊಂದು ವಿಕೆಟ್ ಕಿತ್ತರು. 71 ರನ್​ಗಳ ಆಸರೆಯ ಇನ್ನಿಂಗ್ಸ್​ ಕಟ್ಟಿದ ಗ್ಲೆನ್ ಫಿಲಿಫ್ಸ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್: ಯಂಗ್​, ಲ್ಯಾಥಮ್​, ಫಿಲಿಫ್ಸ್​ ಅರ್ಧಶತಕದಾಟ: ಆಫ್ಘನ್ನರಿಗೆ 289 ರನ್​ಗಳ ಗುರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.