ETV Bharat / sports

ವಿಶ್ವಕಪ್​ ಕ್ರಿಕೆಟ್​: ನೆದರ್ಲೆಂಡ್ಸ್​ ವಿರುದ್ಧ 7 ವಿಕೆಟ್​ಗಳ ಜಯ ದಾಖಲಿಸಿದ ಅಫ್ಘಾನ್​.. ಸೆಮೀಸ್​ ಕನಸು ಜೀವಂತ

author img

By ETV Bharat Karnataka Team

Published : Nov 3, 2023, 8:21 PM IST

Updated : Nov 3, 2023, 9:02 PM IST

2023ರ ವಿಶ್ವಕಪ್​ನಲ್ಲಿ ನೆದರ್ಲೆಂಡ್ಸ್​ ಮಣಿಸಿ ನಾಲ್ಕನೇ ಗೆಲುವು ದಾಖಲಿಸಿರುವ ಅಫ್ಘಾನ್​ ಸೆಮೀಸ್​ ಕನಸನ್ನು ಜೀವಂತವಾಗಿ ಉಳಿಸಿಕೊಂಡಿದೆ. ​ ​

ICC Cricket World Cup 2023
ICC Cricket World Cup 2023

ಲಖನೌ (ಉತ್ತರ ಪ್ರದೇಶ): 2019ರ ವಿಶ್ವಕಪ್​ನಲ್ಲಿ ಒಂದು ಗೆಲುವು ಕಾಣದ ಅಫ್ಘಾನಿಸ್ತಾನ 2023ರಲ್ಲಿ ತನ್ನ ನಾಲ್ಕನೇ ಗೆಲುವನ್ನು ದಾಖಲಿಸಿದೆ. ಲಖನೌನ ಏಕನಾ ಕ್ರಿಕೆಟ್ ಸ್ಟೇಡಿಯಂ ನೆದರ್ಲೆಂಡ್ಸ್​ ತಂಡದ ವಿರುದ್ಧ ಅಫ್ಘಾನ್​ 7 ವಿಕೆಟ್​ಗಳ ಗೆಲುವು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಅಫ್ಘಾನ್​ ​ಪರ ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ ತಲಾ ಅರ್ಧಶತಕ ಗಳಿಸಿದ್ದು, ಡಚ್ಚರು​ ನೀಡಿದ್ದ 180 ರನ್​ಗಳ ಗುರಿಯನ್ನು 31.3 ಬಾಲ್​ನಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಂಗ್ಲೆಂಡ್​, ಪಾಕಿಸ್ತಾನ, ಶ್ರೀಲಂಕಾವನ್ನು ಮಣಿಸಿದ್ದ ಅಫ್ಘಾನ್​ ಇಂದು (ಶುಕ್ರವಾರ) ಕ್ರಿಕೆಟ್​ ಶಿಶು ನೆದರ್ಲೆಂಡ್ಸ್​ ಮೇಲೆಯೂ ಜಯ ದಾಖಲಿಸಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಅಫ್ಘಾನ್ ಗೆಲುವು ದಾಖಲಿಸಿದಲ್ಲಿ ಸೆಮೀಸ್​ಗೆ ಪ್ರವೇಶಿಸುವ ಸಾಧ್ಯತೆ ಇದೆ. 2015ರ ವಿಶ್ವಕಪ್​ನಲ್ಲಿ ಒಂದೇ ಒಂದು ಗೆಲುವು ಕಂಡಿದ್ದ ಅಫ್ಘಾನ್​ ವರ್ಷದಿಂದ ವರ್ಷಕ್ಕೆ ತನ್ನ ಪ್ರದರ್ಶನವನ್ನು ಉತ್ತಮಗೊಳಿಸುತ್ತಾ ಸಾಗಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​​ಗೆ ಬಂದ ಡಚ್ಚರು 47 ಓವರ್​ಗಳನ್ನು ಆಡಿ 179ಕ್ಕೆ ಆಲ್​ಔಟ್ ಆದರು. ಒತ್ತಡ ರಹಿತ ಗುರಿಯನ್ನು ಬೆನ್ನಟ್ಟಿದ ಅಫ್ಘಾನ್ನರಿಗೆ ಡಚ್​ ಬೌಲರ್​ಗಳು ಕಾಡಿದರು. 10 ಓವರ್​ಗೆ 1 ವಿಕೆಟ್​ ಕಿತ್ತಿದ್ದಲ್ಲದೇ, 55 ರನ್​ಗಳಿಗೆ ನಿಯಂತ್ರಿಸಿದರು. 11ನೇ ಓವರ್​ನಲ್ಲಿ ಎರಡನೇ ವಿಕೆಟ್ ಅ​ನ್ನೂ ಕಬಳಿಸಿದರು. ಇದರಿಂದ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ 10 ಮತ್ತು ಇಬ್ರಾಹಿಂ ಜದ್ರಾನ್ 20 ರನ್​ಗೆ ಔಟ್​ ಆದರು.

ಮೂರನೇ ವಿಕೆಟ್​ಗೆ ಒಂದಾದ ರಹಮತ್ ಷಾ ಮತ್ತು ನಾಯಕ ಹಶ್ಮತುಲ್ಲಾ ಶಾಹಿದಿ 74 ರನ್​ಗಳ ಜೊತೆಯಾಟ ಮಾಡಿದರು. ಈ ಪಾಲುದಾರಿಕೆ ತಂಡದ ಗೆಲುವಿಗೆ ಆಸರೆ ಆಯಿತು. ರೆಹಮತ್​ ಶಾ ತಮ್ಮ 25ನೇ ಏಕದಿನ ಅರ್ಧಶತಕವನ್ನು ದಾಖಲಿಸಿದರು. ಇನ್ನಿಂಗ್ಸ್​ನಲ್ಲಿ ಅವರು 54 ಬಾಲ್ ಎದುರಿಸಿ 8 ಬೌಂಡರಿ ಸಹಾಯದಿಂದ 52 ರನ್​​ ಗಳಿಸಿದರು. ಗೆಲುವಿಗೆ 50 ರನ್​ಗಳ ಅವಶ್ಯಕತೆ ಇದ್ದಾಗ ಶಾ ವಿಕೆಟ್​ ಕಳೆದುಕೊಂಡರು.

ಕೊನೆಗೆ ಹಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಪಂದ್ಯವನ್ನು ಗೆಲುವಿನ ದಡಕ್ಕೆ ತೆಗೆದುಕೊಂಡು ಹೋದರು. ಈ ನಡುವೆ ನಾಯಕ ತಮ್ಮ ಅರ್ಧಶತಕವನ್ನು ಪೂರೈಸಿಕೊಂಡರು. ಹಶ್ಮತುಲ್ಲಾ ಶಾಹಿದಿ ಇನ್ನಿಂಗ್ಸ್​ನಲ್ಲಿ 64 ಬಾಲ್​ ಎದುರಿಸಿ 6 ಬೌಂಡರಿ ಸಹಾಯದಿಂದ ಅಜೇಯ 56 ರನ್​ ಗಳಿಸಿದರು. ಅಜ್ಮತುಲ್ಲಾ ಒಮರ್ಜಾಯ್ ಗೆಲುವಿಗೆ 31 ರನ್​ನ ಅಜೇಯ ಕೊಡುಗೆ ನೀಡಿದರು. ಅಫ್ಘಾನಿಸ್ತಾನ 31.3 ಓವರ್​ಗೆ 3 ವಿಕೆಟ್​ ನಷ್ಟಕ್ಕೆ 181 ರನ್​ ಕಲೆಹಾಕಿದರು. ಇದರಿಂದ ಅಫ್ಘಾನ್​ 7 ವಿಕೆಟ್​ಗಳ ಜಯ ದಾಖಲಿಸಿತು. ನೆದರ್ಲೆಂಡ್ಸ್​ ಪರ ಸಾಕಿಬ್ ಜುಲ್ಫಿಕರ್, ರೋಲೋಫ್ ವ್ಯಾನ್ ಡೆರ್ ಮೆರ್ವೆ ಮತ್ತು ಲೋಗನ್ ವ್ಯಾನ್ ಬೀಕ್ ತಲಾ ಒಂದೊಂದು ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು.

  • " class="align-text-top noRightClick twitterSection" data="">

ನಬಿ ಪಂದ್ಯ ಶ್ರೇಷ್ಠ: ಮೊದಲ ಇನ್ನಿಂಗ್ಸ್​ನಲ್ಲಿ 9.3 ಓವರ್​ ಬೌಲಿಂಗ್​ ಮಾಡಿ 28 ರನ್​ ಕೊಟ್ಟು 3 ವಿಕೆಟ್​ ಕಬಳಿಸಿದ ಮೊಹಮ್ಮದ್ ನಬಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: ಈಡನ್ ಗಾರ್ಡನ್ಸ್‌ ಟಿಕೆಟ್ ಹಗರಣ: 'ಬುಕ್ ಮೈ ಶೋ' ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ ಕೋಲ್ಕತ್ತಾ ಪೊಲೀಸರು

Last Updated : Nov 3, 2023, 9:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.