ETV Bharat / sports

ವಿಶ್ವಕಪ್​ ಕ್ರಿಕೆಟ್​: ವಿರಾಟ್​ ಶತಕ, ಅಯ್ಯರ್​​ ಅರ್ಧಶತಕ.. ಹರಿಣಗಳಿಗೆ 327 ರನ್​ಗಳ ಗುರಿ - ETV Bharath Karnataka

ICC Cricket World Cup 2023: ಕೋಲ್ಕತ್ತಾದ ಐಕಾನಿಕ್​ ಸ್ಟೇಡಿಯಂ ಈಡನ್​​ಗಾರ್ಡನ್ಸ್​ನಲ್ಲಿ ಟೀಮ್​ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ನಡೆಯುತ್ತಿದೆ. ಟಾಸ್​ ಗೆದ್ದ ಭಾರತ ಬ್ಯಾಟಿಂಗ್​​ ಆಯ್ಕೆ ಮಾಡಿಕೊಂಡಿದೆ.

ICC Cricket World Cup 2023
ICC Cricket World Cup 2023
author img

By ETV Bharat Karnataka Team

Published : Nov 5, 2023, 3:39 PM IST

Updated : Nov 5, 2023, 6:22 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ವಿರಾಟ್​ ಕೊಹ್ಲಿ ಶತಕ ಮತ್ತು ಶ್ರೇಯಸ್​ ಅಯ್ಯರ್​ ಅವರ ಅರ್ಧಶತಕದ ಇನ್ನಿಂಗ್ಸ್​ನ ನೆರವಿನಿಂದ ಟೀಮ್​ ಇಂಡಿಯಾ ಕೋಲ್ಕತ್ತಾದ ಈಡನ್​​ಗಾರ್ಡನ್ಸ್​ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 327 ರನ್​ನ ಸ್ಪರ್ಧಾತ್ಮಕ ಗುರಿಯನ್ನು ನೀಡಿದೆ. ವಿಶ್ವಕಪ್​ ಅಂಕಪಟ್ಟಿಯಲ್ಲಿ ಹರಿಣಗಳು ಅಗ್ರಸ್ಥಾನಕ್ಕೇರಲು ಈ ಗುರಿಯನ್ನು ಭೇದಿಸಬೇಕಿದೆ. ನಿಗದಿತ 50 ಓವರ್​ ಆಡಿದ ಭಾರತ ತಂಡ 5 ವಿಕೆಟ್​ ಕಳೆದುಕೊಂಡು 326 ರನ್​ ಕಲೆಹಾಕಿದೆ.

ನಡೆಯುತ್ತಿರುವ ವಿಶ್ವಕಪ್​ನಲ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ದಕ್ಷಿಣ ಆಫ್ರಿಕಾ ಉತ್ತಮ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಟಾಸ್​ ಗೆದ್ದ ರೋಹಿತ್​ ಶರ್ಮಾ ಮೊದಲು ಬ್ಯಾಟಿಂಗ್​ ಮಾಡುವ ನಿರ್ಣಯವನ್ನು ತೆಗೆದುಕೊಂಡರು. ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್​ನಲ್ಲಿ ಬಲಿಷ್ಠವಾಗಿದ್ದು, ಮೊದಲ ಇನ್ನಿಂಗ್ಸ್​ ಆಡಿದಾಗ 350ಕ್ಕೂ ಹೆಚ್ಚಿನ ರನ್ ಅನ್ನು ಬಹುತೇಕ ಇನ್ನಿಂಗ್ಸ್​ಗಳಲ್ಲಿ ಕಟ್ಟಿದ್ದರು. ಇದರಿಂದ ಭಾರತ ದೊಡ್ಡ ಮೊತ್ತವನ್ನು ಕಲೆಹಾಕುವ ಅಂದಾಜಿನಲ್ಲೇ ಮೈದಾನಕ್ಕೆ ಇಳಿದಂತಿತ್ತು. ಅದರಂತೆ ರೋಹಿತ್​ ಶರ್ಮಾ ಮೈದಾನಕ್ಕಿಳಿಯುತ್ತಿದ್ದಂತೆ ಅಬ್ಬರದ ಬ್ಯಾಟಿಂಗ್​ಗೆ ಮುಂದಾದರು. ಮೊದಲ 6 ಓವರ್​ನಲ್ಲಿ ಬವುಮಾ ಪಡೆಯ ವೇಗದ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು.

ಉತ್ತಮ ಆರಂಭ: ರೋಹಿತ್​ ಶರ್ಮಾ ಮತ್ತು ಶುಭಮನ್​ ಗಿಲ್​ ಟೀಮ್​ ಇಂಡಿಯಾಕ್ಕೆ ಉತ್ತಮ ಆರಂಭವನ್ನು ನೀಡಿದರು. ದೊಡ್ಡ ಗುರಿಯನ್ನು ನೀಡಬೇಕು ಎಂಬ ಮನಸ್ಥಿತಿಯಲ್ಲಿ ಮೈದಾನಕ್ಕೆ ಇಳಿದ ರೋಹಿತ್​ ಎಂದಿನಂತೆ ಬಿರುಸಿನ ಆರಂಭವನ್ನು ನೀಡಿದರು. ಆದರೆ ಈ ಅಬ್ಬರದ ನಡವೆಯೇ ಅವರು ವಿಕೆಟ್​ ಕಳೆದುಕೊಂಡರು. 6ನೇ ಓವರ್​ನಲ್ಲಿ ರೋಹಿತ್​ ಶರ್ಮಾ ದೊಡ್ಡ ಹಿಟ್​ಗೆ ಪ್ರಯತ್ನಿಸಿ ವಿಕೆಟ್​ ಕೊಟ್ಟರು. ಇನ್ನಿಂಗ್ಸ್​ನಲ್ಲಿ 24 ಬಾಲ್​ಗೆ 40 ರನ್​ ಕಲೆಹಾಕಿದ್ದರು. ಶರ್ಮಾ ವಿಕೆಟ್​ ನಷ್ಟವಾದರೂ ನಂತರ ಬಂದ ವಿರಾಟ್​ ಅದೇ ವೇಗವನ್ನು ಮುಂದುವರೆಸಿದರು. ಇದರಿಂದ ತಂಡ 10 ಓವರ್​ಗೆ 91 ರನ್​ ಗಳಿಸಿ 1 ವಿಕೆಟ್​ ಕಳೆದುಕೊಂಡಿತ್ತು. ಈ ವೇಳೆ ತಂಡದ ರನ್​ರೇಟ್​ 8ರ ಆಸುಪಾಸಿನಲ್ಲಿತ್ತು.

ಸ್ಪಿನ್​ನಲ್ಲಿ ನಿಯಂತ್ರಣ ಸಾಧಿಸಿದ ಹರಿಣಗಳು: ಮೊದಲ ಪವರ್​ ಪ್ಲೇ ನಂತರ ದಾಳಿಗಿಳಿದ ಸ್ಪಿನ್ನರ್​ಗಳು ರನ್​ಗೆ ಕಡಿವಾಣ ಹಾಕುವಲ್ಲಿ ಯಶಸ್ವಿ ಆದರು. 11ನೇ ಓವರ್​ನಲ್ಲಿ ಶುಭಮನ್​ ಗಿಲ್​ ಕೇಶವ್​ ಮಹಾರಾಜ್​ ಎಸೆತದಲ್ಲಿ ವಿಕೆಟ್​ ಒಪ್ಪಿಸಿದರು. ಗಿಲ್​ 24 ಬಾಲ್​ನಲ್ಲಿ 23 ರನ್​ ಮಾಡಿ ಔಟ್ ಆಗಿದ್ದರು.

ಅಯ್ಯರ್​ - ವಿರಾಟ್​ ಶತಕದ ಪಾಲುದಾರಿಕೆ: ಮಾಜಿ ನಾಯಕ ವಿರಾಟ್​ ಕೊಹ್ಲಿ ಎಂದಿನಂತೆ ತಂಡಕ್ಕೆ ಆಸರೆ ಆದರು. ಅವರಿಗೆ ಇನ್ನಿಂಗ್ಸ್​ನಲ್ಲಿ ಸಾಥ್​ ನೀಡಿದ್ದು ಶ್ರೇಯಸ್​ ಅಯ್ಯರ್. ​ಮೂರನೇ ವಿಕೆಟ್​ಗೆ 134 ರನ್​ಗಳ ಜೊತೆಯಾಟವನ್ನು ಅಯ್ಯರ್ - ವಿರಾಟ್ ಜೋಡಿ ಮಾಡಿತು. ಇವರ ಶತಕ ಜೊತೆಯಾಟದ ನೆರವಿನಿಂದ ಟೀಮ್​ ಇಂಡಿಯಾ 200 ಗಡಿ ದಾಟಿತು. 87 ಬಾಲ್​ನಲ್ಲಿ 77 ರನ್​ಗಳ ಇನ್ನಿಂಗ್ಸ್​ ಆಡಿದ ಅಯ್ಯರ್​ ವಿಕೆಟ್​ ಕಳೆದುಕೊಂಡ ಪರಿಣಾಮ ಪಾಲುದಾರಿಕೆ ಬ್ರೇಕ್​ ಆಯಿತು.

ದಾಖಲೆಯ ಶತಕ ಗಳಿಸಿದ ವಿರಾಟ್​: ವಿರಾಟ್​ ಕೊನೆಯ ವರೆಗೂ ಅಜೇಯವಾಗಿ ನಿಂತು ಜನ್ಮದಿನದಂದು ವಿಶೇಷ ಮೈಲುಗಲ್ಲನ್ನು ತಲುಪಿದರು. ಏಕದಿನ ಕ್ರಿಕೆಟ್​ನ 49ನೇ ಶತಕ ಗಳಿಸುವ ಮೂಲಕ ಸಚಿನ್​ ತೆಂಡೂಲ್ಕರ್​ ದಾಖಲೆಯನ್ನು ಸರಿಗಟ್ಟಿದರು. ಈ ವೇಳೆ ಸೂರ್ಯಕುಮಾರ್​ ಯಾದವ್​ (22) ಮತ್ತು ರವೀಂದ್ರ ಜಡೇಜ (29*) ವಿರಾಟ್​ ಇನ್ನಿಂಗ್ಸ್​ಗೆ ನೆರವಾದರು. ನಿಗದಿತ ಓವರ್​ ಅಂತ್ಯಕ್ಕೆ ಭಾರತ 5 ವಿಕೆಟ್​ ನಷ್ಟಕ್ಕೆ 326 ರನ್​ ಕಲೆಹಾಕಿತು.

  • " class="align-text-top noRightClick twitterSection" data="">

ದಕ್ಷಿಣ ಆಫ್ರಿಕಾ ಪರ ಐವರು ಬೌಲರ್​ಗಳಾದ ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ ತಲಾ ಒಂದೊಂದು ವಿಕೆಟ್​ ಪಡೆಯುವಲ್ಲಿ ಯಶಸ್ವಿ ಆದರು.

ಇದನ್ನೂ ಓದಿ: ಬರ್ತ್​ಡೇ ಬಾಯ್​ ವಿರಾಟ್​ ಕೊಹ್ಲಿಗೆ ಬೆಂಗಾಲ್​ ಕ್ರಿಕೆಟ್​ ಸಂಸ್ಥೆಯಿಂದ ಚಿನ್ನ ಲೇಪಿತ ಬ್ಯಾಟ್ ಗಿಫ್ಟ್‌

Last Updated : Nov 5, 2023, 6:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.