ETV Bharat / sports

ವಿಶ್ವಕಪ್​ ಕ್ರಿಕೆಟ್​​: ಭಾರತದ ಜೈತ್ರಯಾತ್ರೆಗಿಲ್ಲ ತಡೆ; ಆಫ್ರಿಕಾ ಮಣಿಸಿದ ಭಾರತಕ್ಕೆ ಸತತ 8ನೇ ಜಯ

India vs South Africa; ಕೋಲ್ಕತ್ತಾದಲ್ಲಿ ನಡೆದ ವಿಶ್ವಕಪ್​ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 243 ರನ್​ಗಳ ಬೃಹತ್​ ಗೆಲುವು ದಾಖಲಿಸಿದೆ. ​

ICC Cricket World Cup 2023
ICC Cricket World Cup 2023
author img

By ETV Bharat Karnataka Team

Published : Nov 5, 2023, 8:45 PM IST

Updated : Nov 5, 2023, 10:07 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ವಿಶ್ವಕಪ್​ನಲ್ಲಿ ಭಾರತದ ಬೌಲಿಂಗ್​ ಮಿಂಚುತ್ತಿದ್ದು, ಶ್ರೀಲಂಕಾ ನಂತರ ದಕ್ಷಿಣ ಆಫ್ರಿಕಾವನ್ನು 100ರ ಒಳಗೆ ಭಾರತ ಕಟ್ಟಿಹಾಕಿ ಬೃಹತ್​ ಜಯ ದಾಖಲಿಸಿದೆ. 327 ರನ್​ಗಳ ಗುರಿಯನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 27.1 ಓವರ್​​ಗೆ 83 ರನ್​ ಗಳಿಸಿ ಆಲ್​ಔಟ್​ ಆಯಿತು. ಇದರಿಂದ ಭಾರತ 243 ರನ್​ಗಳ ಬೃಹತ್​ ಜಯ ದಾಖಲಿಸಿದೆ.

ಟಾಸ್​ ಗೆದ್ದ ಭಾರತ ದಕ್ಷಿಣ ಆಫ್ರಿಕಾದ ವೈಫಲ್ಯತೆಯನ್ನು ಆಧಾರವಾಗಿ ಇಟ್ಟಕೊಂಡು ನಿರ್ಣಯವನ್ನು ಮಾಡಿತು. ನಡೆಯುತ್ತಿರುವ ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಲು ಕಷ್ಟ ಪಟ್ಟಿದೆ. ಹೀಗಾಗಿ ಟಾಸ್​ ಗೆದ್ದ ರೋಹಿತ್​ ಶರ್ಮಾ ಟೀಮ್​ ಇಂಡಿಯಾ ಚೇಸಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಬ್ಯಾಟಿಂಗ್​ ಮಾಡುವ ನಿರ್ಧಾರವನ್ನು ಮಾಡಿದರು. ಅಲ್ಲದೇ, ಅದಕ್ಕೆ ತಕ್ಕ ಬ್ಯಾಟಿಂಗ್​ ಪ್ರದರ್ಶನ ನೀಡಿದ ತಂಡ ದೊಡ್ಡ ಮೊತ್ತವನ್ನೇ ಕಲೆಹಾಕಿತು.

ರೋಹಿತ್​ ಶರ್ಮಾ ಅಬ್ಬರದ 40 ರನ್​ ಗಳಿಸಿದರೆ, ವಿರಾಟ್​ ಕೊಹ್ಲಿ ದಾಖಲೆಯ ಶತಕ, ಶ್ರೇಯಸ್​ ಅಯ್ಯರ್​ ಅರ್ಧಶತಕ ಗಳಿಸಿದರು. ಇವರ ಇನ್ನಿಂಗ್ಸ್​ನ ಬಲದಿಂದ ಭಾರತ 50 ಓವರ್​ಗೆ 5 ವಿಕೆಟ್​ ಕಳೆದುಕೊಂಡು 326 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಲು ಮೈದಾನಕ್ಕಿಳಿದ ಹರಿಣಗಳಿಗೆ ಭಾರತದ ಬೌಲರ್​ಗಳು ಕಾಡಿದರು. ಕಳೆದ ಶ್ರೀಲಂಕಾ ವಿರುದ್ಧದ ಬೌಲಿಂಗ್​ ಪ್ರದರ್ಶನವೇ ಇಂದು ಕಂಡು ಬಂತು. ಬಲಿಷ್ಠ ಬ್ಯಾಟಿಂಗ್​ ಬಲ ಹೊಂದಿದ್ದ ದಕ್ಷಿಣ ಆಫ್ರಿಕಾ ಅಲ್ಪಮೊತ್ತಕ್ಕೆ ಕುಸಿಯಿತು.

2023ರ ವಿಶ್ವಕಪ್​ನಲ್ಲಿ ಶತಕಗಳ ಮೇಲೆ ಶತಕ ಗಳಿಸಿದ ಕ್ವಿಂಟನ್ ಡಿ ಕಾಕ್ (5) ವಿಕೆಟ್​ ಪತನದಿಂದ ಹರಿಣಗಳ ಪೆವಿಲಿಯನ್​ ಪರೇಡ್​ ಆರಂಭವಾಯಿತು. ಬೌಲಿಂಗ್​ ಆಲ್​ರೌಂಡರ್​ ಮಾರ್ಕೊ ಜಾನ್ಸೆನ್ 14 ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 13 ರನ್​ ಗಳಿಸಿದ್ದು ಬಿಟ್ಟರೆ ಮತ್ತಾರೂ ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ. ಟೆಂಬಾ ಬವುಮಾ ಮತ್ತು ಡೇವಿಡ್ ಮಿಲ್ಲರ್ 11 ರನ್​ ಗಳಿಸಿ 10ರ ಗಡಿ ದಾಟಿದ ಸಾಧನೆ ಮಾಡಿದರು. ಉಳಿದಂತೆ ಐಡೆನ್ ಮಾರ್ಕ್ರಾಮ್ (9), ಹೆನ್ರಿಚ್ ಕ್ಲಾಸೆನ್ (1), ಕೇಶವ್ ಮಹಾರಾಜ್ (7), ಕಗಿಸೊ ರಬಾಡ (6), ಲುಂಗಿ ಎನ್‌ಗಿಡಿ (0) ಒಂದಂಕಿಗೆ ವಿಕೆಟ್​ ಕೊಟ್ಟರು. ​

ಭಾರತದ ಪರ ರವೀಂದ್ರ ಜಡೇಜ 5 ವಿಕೆಟ್​ ಮತ್ತು ಮೊಹಮ್ಮದ್​ ಶಮಿ, ಕುಲ್ದೀಪ್​ ಯಾದವ್​ ತಲಾ 2 ವಿಕೆಟ್​ ಪಡೆದು ಮಿಂಚಿದರೆ, ಪವರ್​ ಪ್ಲೇನಲ್ಲಿ ಮೊದಲ ವಿಕೆಟ್​ ಕಬಳಿಸುವಲ್ಲಿ ಸಿರಾಜ್​ ಯಶಸ್ವಿ ಆದರು.

ವಿರಾಟ್​ ಪಂದ್ಯ ಶ್ರೇಷ್ಠ: ಏಕದಿನ ಕ್ರಿಕೆಟ್​ನಲ್ಲಿ 49ನೇ ಶತಕ ಗಳಿಸಿ ದಾಖಲೆ ಮಾಡಿದ ವಿರಾಟ್​ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

  • " class="align-text-top noRightClick twitterSection" data="">

ಇದನ್ನೂ ಓದಿ: 49ನೇ ಏಕದಿನ ಶತಕ ಗಳಿಸಿದ ವಿರಾಟ್.. ಸಚಿನ್​ ಸಾಧನೆ ಸರಿಗಟ್ಟಿದ ಕಿಂಗ್​ ಕೊಹ್ಲಿ​

Last Updated : Nov 5, 2023, 10:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.