ಧರ್ಮಶಾಲಾ (ಹಿಮಾಚಲ ಪ್ರದೇಶ): ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಇಂದು ನ್ಯೂಜಿಲೆಂಡ್ ತಂಡವನ್ನು ಮಣಿಸಿದ್ದು, ಪ್ರತಿಷ್ಟಿತ ಟೂರ್ನಿಯಲ್ಲಿ ಸತತ 5ನೇ ಗೆಲುವು ದಾಖಲಿಸಿತು. ಧರ್ಮಶಾಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ತಂಡವು 2 ಓವರ್ ಮತ್ತು 4 ವಿಕೆಟ್ ಉಳಿಸಿಕೊಂಡು ಕಿವೀಸ್ ನೀಡಿದ 274 ರನ್‌ಗಳ ಗುರಿ ಭೇದಿಸಿತು. ಈ ಮೂಲಕ ವಿಶ್ವಕಪ್ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಅಲಂಕರಿಸಿದೆ.
-
India 🇮🇳 make it FIVE in a row!
— BCCI (@BCCI) October 22, 2023 " class="align-text-top noRightClick twitterSection" data="
Ravindra Jadeja with the winning runs 🔥🔥
King Kohli 👑 reigns supreme in yet another run-chase for #TeamIndia 😎#CWC23 | #MenInBlue | #INDvNZ pic.twitter.com/d6pQU7DSra
">India 🇮🇳 make it FIVE in a row!
— BCCI (@BCCI) October 22, 2023
Ravindra Jadeja with the winning runs 🔥🔥
King Kohli 👑 reigns supreme in yet another run-chase for #TeamIndia 😎#CWC23 | #MenInBlue | #INDvNZ pic.twitter.com/d6pQU7DSraIndia 🇮🇳 make it FIVE in a row!
— BCCI (@BCCI) October 22, 2023
Ravindra Jadeja with the winning runs 🔥🔥
King Kohli 👑 reigns supreme in yet another run-chase for #TeamIndia 😎#CWC23 | #MenInBlue | #INDvNZ pic.twitter.com/d6pQU7DSra
ಮೊದಲು ಬ್ಯಾಟ್ ಮಾಡಿದ ಕಿವೀಸ್ ತಂಡ ಡೇರಿಲ್ ಮಿಚೆಲ್ ಶತಕ ಮತ್ತು ರಚಿನ್ ರವೀಂದ್ರ ಅರ್ಧಶತಕದ ಇನ್ನಿಂಗ್ಸ್ ಬಲದಿಂದ 273 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಭಾರತಕ್ಕೆ ಎಂದಿನಂತೆ ನಾಯಕ ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡಿದರು. ಮೊದಲ ವಿಕೆಟ್ಗೆ ಶುಭ್‌ಮನ್ ಗಿಲ್ ಮತ್ತು ರೋಹಿತ್ ಶರ್ಮಾ 71 ರನ್‌ಗಳ ಜತೆಯಾಟ ಮಾಡಿದರು. ಆದರೆ ಸತತ ಎರಡು ವಿಕೆಟ್‌ಗಳ ಪತನ ಭಾರತದ ಆತಂಕಕ್ಕೆ ಕಾರಣವಾಯಿತು. ತಂಡ 71 ರನ್‌ಗಳಿಸಿದ್ದಾಗ ರೋಹಿತ್ ಶರ್ಮಾ (46) 4 ರನ್‌ನಿಂದ ಅರ್ಧಶತಕ ವಂಚಿತರಾಗಿ ಪೆವಿಲಿಯನ್ಗೆ ಮರಳಿದರು. ತಂಡಕ್ಕೆ ಮತ್ತೆ 5 ರನ್ ಸೇರುವಷ್ಟರಲ್ಲಿ ಗಿಲ್ (26) ಔಟಾದರು.
- " class="align-text-top noRightClick twitterSection" data="">
ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್.ರಾಹುಲ್ ಜತೆಗೆ ಅರ್ಧಶತಕದ ಪಾಲುದಾರಿಕೆ ಮಾಡಿದರು. ಶ್ರೇಯಸ್ ಅಯ್ಯರ್ 29 ಬಾಲ್ನಲ್ಲಿ 6 ಬೌಂಡರಿಯಿಂದ 33 ರನ್ ಗಳಿಸಿದರೆ, ಕೆ.ಎಲ್.ರಾಹುಲ್ 35 ಬಾಲ್ನಲ್ಲಿ 27 ರನ್ ಗಳಿಸಿ ವಿಕೆಟ್ ಕೊಟ್ಟರು. ಗಾಯಗೊಂಡ ಹಾರ್ದಿಕ್ ಪಾಂಡ್ಯ ಜಾಗದಲ್ಲಿ ಸ್ಥಾನ ಪಡೆದುಕೊಂಡ ಸೂರ್ಯಕುಮಾರ್ ಯಾದವ್ (2) ರನೌಟ್ಗೆ ಬಲಿಯಾದರು.
ಶತಕ ವಂಚಿತ ಕೊಹ್ಲಿ: ಕೊನೆಯಲ್ಲಿ ರವೀಂದ್ರ ಜಡೇಜಾ ಜತೆಗೆ ವಿರಾಟ್ 78 ರನ್‌ಗಳ ಜೊತೆಯಾಟ ಮಾಡಿದರು. ಗೆಲುವಿಗೆ 5 ರನ್ ಬೇಕಿದ್ದಾಗ ವಿರಾಟ್ ಶತಕಕ್ಕೂ ಅಷ್ಟೇ ರನ್‌ಗಳ ಅಗತ್ಯವಿತ್ತು. ಸಿಕ್ಸ್ ಗಳಿಸುವ ಭರದಲ್ಲಿ ವಿರಾಟ್ ಕ್ಯಾಚ್ ಕೊಟ್ಟರು. 3ನೇ ವಿಕೆಟ್ನಿಂದ 5ನೇ ವಿಕೆಟ್‌ವರೆಗೆ ಮೂರು ಅರ್ಧಶತಕದ ಜತೆಯಾಟ ಮಾಡಿದ ಕೊಹ್ಲಿ 104 ಬಾಲ್ ಎದುರಿಸಿ 8 ಬೌಂಡರಿ ಮತ್ತು 2 ಸಿಕ್ಸ್ ಸಹಾಯದಿಂದ 95 ರನ್ ಕೆಲಹಾಕಿ ಔಟಾದರು. 5 ರನ್ ಗಳಿಸಿ ಶತಕ ಪೂರ್ಣ ಮಾಡಿದ್ದಲ್ಲಿ ಏಕದಿನ ಮಾದರಿಯಲ್ಲಿ ಸಚಿನ್ ದಾಖಲೆ ಸರಿಗಟ್ಟಿದಂತಾಗುತ್ತಿತ್ತು. ಕೊನೆಯಲ್ಲಿ ಜಡೇಜಾ ಬೌಂಡರಿಯ ಮೂಲಕ ವಿಜಯದ ರನ್ ಗಳಿಸಿದರು.
-
First game of the tournament for him and Mohd. Shami receives the Player of the Match award for his outstanding five-wicket haul in Dharamsala 🏆👏
— BCCI (@BCCI) October 22, 2023 " class="align-text-top noRightClick twitterSection" data="
Scorecard ▶️ https://t.co/Ua4oDBM9rn#TeamIndia | #CWC23 | #MenInBlue | #INDvNZ pic.twitter.com/21kegb4VB0
">First game of the tournament for him and Mohd. Shami receives the Player of the Match award for his outstanding five-wicket haul in Dharamsala 🏆👏
— BCCI (@BCCI) October 22, 2023
Scorecard ▶️ https://t.co/Ua4oDBM9rn#TeamIndia | #CWC23 | #MenInBlue | #INDvNZ pic.twitter.com/21kegb4VB0First game of the tournament for him and Mohd. Shami receives the Player of the Match award for his outstanding five-wicket haul in Dharamsala 🏆👏
— BCCI (@BCCI) October 22, 2023
Scorecard ▶️ https://t.co/Ua4oDBM9rn#TeamIndia | #CWC23 | #MenInBlue | #INDvNZ pic.twitter.com/21kegb4VB0
ಮೊಹಮ್ಮದ್ ಶಮಿ ಪಂದ್ಯಶ್ರೇಷ್ಠ: ನ್ಯೂಜಿಲೆಂಡ್ ಪರ ಲಾಕಿ ಫರ್ಗುಸನ್ 2, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಮತ್ತು ಟ್ರೆಂಟ್ ಬೌಲ್ಟ್ ತಲಾ ಒಂದೊಂದು ವಿಕೆಟ್ ಪಡೆದರು. ಕಿವೀಸ್ ವಿರುದ್ಧ 5.4 ಎಕಾನಮಿ ದರದಲ್ಲಿ ಬೌಲಿಂಗ್ ಮಾಡಿ 5 ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: ಏಕದಿನ ಕ್ರಿಕೆಟ್‌ನಲ್ಲಿ 2,000 ರನ್ ಗಡಿ ದಾಟಿದ ಗಿಲ್: ಅತಿ ಕಡಿಮೆ ಇನ್ನಿಂಗ್ಸ್ನಲ್ಲಿ ಸಾಧನೆ