ETV Bharat / sports

ವಿಶ್ವಕಪ್​ ಕ್ರಿಕೆಟ್​: ಆಂಗ್ಲರ ವಿರುದ್ಧ ಭಾರತಕ್ಕೆ 100 ರನ್​ಗಳ ಭರ್ಜರಿ ಗೆಲುವು.. ಸೆಮಿಸ್​ಗೆ ರೋಹಿತ್​​ ಪಡೆ - Cricket World Cup 2023

ಎಕನಾ ಕ್ರಿಡಾಂಗಣದಲ್ಲಿ ಭಾರತೀಯ ಬೌಲರ್​​ಗಳು ಆಂಗ್ಲರ ಎಲ್ಲಾ ವಿಕೆಟ್​ಗಳನ್ನು 129ರನ್​ಗೆ ಕಿತ್ತಿದ್ದು, 100 ರನ್​ಗಳಿಂದ ಗೆದ್ದಿದೆ.

ಪ್ಲೇ ಆಫ್​ಗೆ ರೋಹಿತ್​​ ಪಡೆ
ಪ್ಲೇ ಆಫ್​ಗೆ ರೋಹಿತ್​​ ಪಡೆ
author img

By ETV Bharat Karnataka Team

Published : Oct 29, 2023, 9:33 PM IST

Updated : Oct 29, 2023, 10:50 PM IST

ಲಖನೌ (ಉತ್ತರ ಪ್ರದೇಶ): ಹಾಲಿ ಚಾಂಪಿಯನ್​ ಇಂಗ್ಲೆಂಡ್ 2023ರ ವಿಶ್ವಕಪ್​ನಲ್ಲಿ ಸತತ 5ನೇ ಸೋಲನುಭವಿಸಿದ್ದು ಪ್ಲೇ ಆಪ್​ನಿಂದ ಹೊರ ಬಿದ್ದಿದೆ. ಟೀಮ್​ ಇಂಡಿಯಾ 6ನೇ ಗೆಲುವು ಸಾಧಿಸಿ ಪ್ಲೇ ಆಫ್​ನಲ್ಲಿ ಸ್ಥಾನವನ್ನು ಪಕ್ಕಾ ಮಾಡಿಕೊಂಡಿದೆ. ಭಾರತ ನೀಡಿದ್ದ 230 ರನ್​ನ ಸಂಕ್ಷಿಪ್ತ ಗುರಿಯನ್ನು ಬೆನ್ನತ್ತಿದ್ದ ಇಂಗ್ಲೆಂಡ್​ ಪ್ರಬಲ ಬೌಲಿಂಗ್​ ದಾಳಿಯನ್ನು ಎದುರಿಸಲಾಗದೇ 129ಕ್ಕೆ ಸರ್ವ ಪತನ ಕಂಡಿತು. ಇದರಿಂದ ಭಾರತ 100 ರನ್​ಗಳ ಅಂತರ ಬೃಹತ್​ ಗೆಲುವು ದಾಖಲಿಸಿತು. ಶಮಿ ಸತತ ಎರಡನೇ ಪಂದ್ಯದಲ್ಲಿ 4 ವಿಕೆಟ್​ ಕಿತ್ತರೆ, ಬುಮ್ರಾ 3 ಮತ್ತು ಕುಲ್ದೀಪ್​ 2 ವಿಕೆಟ್​ ಪಡೆದು ಮಿಂಚಿದರು.

230 ರನ್​ ಸಣ್ಣ ಗುರಿಯನ್ನು ಭಾರತೀಯ ಬೌಲರ್​ಗಳು ಯಶಸ್ವಿಯಾಗಿ ನಿಯಂತ್ರಿಸಿದರು. ಈ ಗೆಲುವು ತಂಡ ಬೌಲರ್​ಗೆ ಸಲ್ಲಬೇಕು. 8ರ ವರೆಗೆ ಬಲಿಷ್ಠ ಬ್ಯಾಟಿಂಗ್​ ಬಲವನ್ನು ಹೊಂದಿದ್ದ ತಂಡವನ್ನು 129 ರನ್​ಗೆ ಸರ್ವಪತನ ಕಾಣುವಂತೆ ಮಾಡಿ ಬ್ಲೂ ಬಾಯ್ಸ್, ಮಂಜಿನ ನಡುವೆಯೂ ಯಶಸ್ವಿ ಬೌಲಿಂಗ್​ ಸೂತ್ರವನ್ನು ಹೆಣೆದರು. ಹಾಲಿ ಚಾಂಪಿಯನ್​ ಇಂಗ್ಲೆಂಡ್​ 6 ಪಂದ್ಯದಲ್ಲಿ ಸತತ ಐದು ಸೋಲು ಕಂಡಿದ್ದು ವಿಶ್ವಕಪ್​ನಿಂದ ಹೊರಬಿದ್ದಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ ಆಂಗ್ಲರ ಬೌಲಿಂಗ್​ ದಾಳಿಗೆ ತತ್ತರಿಸಿತ್ತು. ರೋಹಿತ್ ಶರ್ಮಾ (87) ಮತ್ತು ಸೂರ್ಯಕುಮಾರ್​ ಯಾದವ್​ (49) ಅವರ ಇನ್ನಿಂಗ್ಸ್​ನ ನೆರವಿನಿಂದ ಭಾರತ 50 ಓವರ್​ನಲ್ಲಿ 9 ವಿಕೆಟ್​ ಕಳೆದುಕೊಂಡು 230ರನ್​ ಗಳಿಸಿತ್ತು. ಈ ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಭಾರತ ಫಸ್ಟ್​ ಬ್ಯಾಟಿಂಗ್​ ಮಾಡಿತ್ತು. ಕಳೆದ ಐದು ಪಂದ್ಯದಲ್ಲಿ ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ಮಾಡಿ ಜಯಿಸಿತ್ತು.

230 ರನ್​ನ ಸಂಕ್ಷಿಪ್ತ ಗುರಿಯನ್ನು ಬೆನ್ನತ್ತಿದ್ದ ಇಂಗ್ಲೆಂಡ್​ 30ರನ್​ ಜೊತೆಯಾಟದ ಆರಂಭವನ್ನು ಪಡೆಯಿತು. ಆದರೆ ನಂತರ 10 ರನ್​ ಕೆಲೆಹಾಕುವುದರಲ್ಲಿ ತಂಡ 4 ವಿಕೆಟ್​ಗಳನ್ನು ಕಳೆದುಕೊಂಡಿತು. ಡೇವಿಡ್ ಮಲಾನ್ (16), ಜೋ ರೂಟ್ (0), ಬೆನ್ ಸ್ಟೋಕ್ಸ್ (0), ಜಾನಿ ಬೈರ್‌ಸ್ಟೋವ್ (14) ಅವರ ವಿಕೆಟ್​ಗಳು ಬೆನ್ನು ಬೆನ್ನು ಉರುಳಿತು. ನಂತರ ತಂಡವನ್ನು ಭಾರತೀಯ ಬೌಲರ್​ಗಳು ಕಮ್​ಬ್ಯಾಕ್​ ಮಾಡದಂತೆ ನೋಡಿಕೊಂಡರು. ಇದರಿಂದ ಜೋಸ್ ಬಟ್ಲರ್ (10), ಮೊಯಿನ್ ಅಲಿ (15), ಲಿಯಾಮ್ ಲಿವಿಂಗ್‌ಸ್ಟೋನ್ (27), ಕ್ರಿಸ್ ವೋಕ್ಸ್ (10), ಆದಿಲ್ ರಶೀದ್ (13), ಮಾರ್ಕ್ ವುಡ್ (0) ವಿಕೆಟ್​ಗಳು 10 ರನ್​ಗಳ ಅಂತರದಲ್ಲಿ ಉರುಳಿದವು. ಇದರಿಂದ ಆಂಗ್ಲರು ಕೇವಲ 129ಕ್ಕೆ ಆಲ್​ಔಟ್​ ಆದರು.

ಪ್ರಬಲ ಬೌಲಿಂಗ್​ ದಾಳಿ: ಹೊಸ ಬಾಲ್​ನಲ್ಲಿ ಬಿಗಿ ದಾಳಿ ನಡೆಸಿದ ತ್ರಿವಳಿ ವೇಗಿಗಳು ರನ್​ಗೆ ಸಂಪೂರ್ಣ ಕಡಿವಾಣ ಹಾಕಿ ಒತ್ತಡ ತಂದರು. ಮೊದಲ ನಾಲ್ಕು ಬ್ಯಾಟರ್​ಗಳನ್ನು ಶಮಿ ಮತ್ತು ಬುಮ್ರಾ ಕಿತ್ತರು. ಕಳೆದ ಪಂದ್ಯದಿಂದ ತಂಡದಲ್ಲಿ ಸ್ಥಾನ ಪಡೆದ ಮೊಹಮ್ಮದ್​ ಶಮಿ ಸತತ ಎರಡು ಪಂದ್ಯದಲ್ಲಿ ಯಶಸ್ವಿಯಾಗಿ 4 ವಿಕೆಟ್​ಗಳನ್ನು ಕಬಳಿಸಿ ಪ್ರಬಾವ ಬೀರಿದರು. ಇನ್ನಿಂಗ್ಸ್​ನಲ್ಲಿ 7 ಓವರ್​ ಮಾಡಿದ ಶಮಿ 2 ಮೇಡನ್​ ಓವರ್​ ಜೊತೆಗೆ 3.1ರ ಎಕಾನಮಿಯಲ್ಲಿ 4 ವಿಕೆಟ್​ ಕಬಳಿಸಿದರೆ, ಬುಮ್ರಾ 6.5 ಓವರ್​ನಿಂದ 1 ಮೇಡೆನ್​ ಓವರ್​ನಿಂದ 4.7 ಎಕಾಮಿಯಲ್ಲಿ 3 ವಿಕೆಟ್​ ಕಿತ್ತರು.

  • " class="align-text-top noRightClick twitterSection" data="">

ನಾಯಕ ಶರ್ಮಾ ಪಂದ್ಯ ಶ್ರೇಷ್ಠ: 100ನೇ ಪಂದ್ಯದ ನಾಯಕತ್ವವನ್ನು ವಹಿಸಿಕೊಂಡಿರುವ ರೋಹಿತ್ ಶರ್ಮಾ ಜವಾಬ್ದಾರಿಯುತ 87 ರನ್​ನ ಇನ್ನಿಂಗ್ಸ್​ ಆಡಿ ವಿಕೆಟ್​ ಪತನದ ನಡುವೆ ತಂಡಕ್ಕೆ ನೆರವಾದರು. ಅಲ್ಲದೇ 48 ರನ್​ ಗಳಿಸಿದಾಗ ಶರ್ಮಾ 18,000 ಅಂತಾರಾಷ್ಟ್ರೀಯ ರನ್​ ಗಡಿಯನ್ನು ತಲುಪಿದ ಸಾಧನೆಯನ್ನು ಮಾಡಿದರು. ಹೀಗಾಗಿ ರೋಹಿತ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ: ವಿಶ್ವಕಪ್​ನಲ್ಲಿ ಶ್ರೀಲಂಕಾಕ್ಕೆ ಗಾಯದ ಬರೆ; ಲಹಿರು ಕುಮಾರ ಬದಲಿಗೆ ದುಷ್ಮಂತ ಚಮೀರಾ ತಂಡಕ್ಕೆ

Last Updated : Oct 29, 2023, 10:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.