ಅಹಮದಾಬಾದ್ (ಗುಜರಾತ್): ಹಾಲಿ ಚಾಂಪಿಯನ್ ಇಂಗ್ಲೆಂಡ್ನ ಸೋಲಿನ ಸರಣಿ ಮುಂದುವರೆದಿದೆ. ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲೂ ಇಂಗ್ಲೆಂಡ್ ಸಾಂಪ್ರದಾಯಿಕ ಎದುರಾಳಿ ಆದ ಆಸ್ಟ್ರೇಲಿಯಾದ ವಿರುದ್ಧ 33 ರನ್ಗಳಿಂದ ಸೋಲು ಕಂಡಿದೆ. ಕಾಂಗರೂ ಪಡೆ ನೀಡಿದ್ದ 286ರನ್ನ ಗುರಿ ಬೆನ್ನಟ್ಟಿದ ಆಂಗ್ಲರು 48.1 ಓವರ್ಗೆ 253 ರನ್ ಗಳಿಸಿ ಸರ್ವಪತನ ಕಂಡಿದ್ದಾರೆ.
- " class="align-text-top noRightClick twitterSection" data="">
ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ 2023ರ ವಿಶ್ವಕಪ್ನಲ್ಲಿ ಅದೃಷ್ಟದ ಜೊತೆಗೆ ಶ್ರಮವೂ ಕೈಕೊಡುತ್ತಿದೆ. ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ತನ್ನ ಉತ್ತಮ ಪ್ರದರ್ಶನವನ್ನು ಗೆಲುವು ಮಾತ್ರ ಕೈಗೆಟಕುತ್ತಿಲ್ಲ. ಇದಕ್ಕೆ ಕ್ರಿಕೆಟ್ ಶೈಲಿಯನ್ನು ಬೇಸ್ಬಾಲ್ಗೆ ಬದಲಿಸಿದ್ದೇ ಕಾರಣವಾ ಎಂಬುದನ್ನು ತಂಡವೇ ವಿಮರ್ಶೆ ಮಾಡಿಕೊಳ್ಳಬೇಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಸ್ಟೀವನ್ ಸ್ಮಿತ್ (44), ಮಾರ್ನಸ್ ಲ್ಯಾಬುಶೇನ್ (71) ಮತ್ತು ಕ್ಯಾಮೆರಾನ್ ಗ್ರೀನ್ (47) ಇನ್ನಿಂಗ್ಸ್ನ ಸಹಾಯದಿಂದ 49.3 ಓವರ್ಗೆ 286 ರನ್ ಗಳಿಸಿ ಆಲ್ಔಟ್ ಆಗಿತ್ತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾದರು. ಶೂನ್ಯಕ್ಕೆ ಮೊದಲ ವಿಕೆಟ್ ಪತನ ಕಂಡಿತು. ಜಾನಿ ಬೈರ್‌ಸ್ಟೋವ್ ಖಾತೆ ತೆರೆಯದೇ ವಿಕೆಟ್ ಕೊಟ್ಟರೆ ನಂತರ ಬಂದ ಜೋ ರೂಟ್ 13 ರನ್ಗೆ ಸುಸ್ತಾದರು.
-
Adam Zampa shined in all three departments to take home the @aramco #POTM 👊#CWC23 | #ENGvAUS pic.twitter.com/t6pCWQe31Q
— ICC Cricket World Cup (@cricketworldcup) November 4, 2023 " class="align-text-top noRightClick twitterSection" data="
">Adam Zampa shined in all three departments to take home the @aramco #POTM 👊#CWC23 | #ENGvAUS pic.twitter.com/t6pCWQe31Q
— ICC Cricket World Cup (@cricketworldcup) November 4, 2023Adam Zampa shined in all three departments to take home the @aramco #POTM 👊#CWC23 | #ENGvAUS pic.twitter.com/t6pCWQe31Q
— ICC Cricket World Cup (@cricketworldcup) November 4, 2023
ಮೂರನೇ ವಿಕೆಟ್ಗೆ ಡೇವಿಡ್ ಮಲನ್ ಮತ್ತು ಬೆನ್ ಸ್ಟೋಕ್ಸ್ ಜೋಡಿ 84 ರನ್ಗಳ ಪಾಲುದಾರಿಕೆಯನ್ನು ಮಾಡಿತು. 2019ರ ವಿಶ್ವಕಪ್ ಗೆಲುವಿಗೆ ಪ್ರಮುಖ ಕಾರಣರಾದ ಬೆನ್ ಸ್ಟೋಕ್ಸ್ ನಿವೃತ್ತಿ ಹಿಂಪಡೆದು ಬಂದ ನಂತರ ಒಂದು ಉತ್ತಮ ಇನ್ನಿಂಗ್ಸ್ ಆಡಿದರು. 50 ರನ್ ಗಳಿಸಿ ಆಡುತ್ತಿದ್ದ ಡೇವಿಡ್ ಮಲನ್ ವಿಕೆಟ್ ಕಳೆದುಕೊಂಡರು. ಬೆನ್ ಸ್ಟೋಕ್ಸ್ 64 ರನ್ನ ಇನ್ನಿಂಗ್ಸ್ ಆಡಿ ಔಟ್ ಆದರು. ನಂತರ ಜೋಸ್ ಬಟ್ಲರ್(1), ಮೊಯಿನ್ ಅಲಿ (42), ಲಿಯಾಮ್ ಲಿವಿಂಗ್‌ಸ್ಟೋನ್ (2), ಕ್ರಿಸ್ ವೋಕ್ಸ್ (32), ಡೇವಿಡ್ ವಿಲ್ಲಿ (15) ಮತ್ತು ಆದಿಲ್ ರಶೀದ್ (20) ಅವರ ಹೋರಾಟವೂ ವ್ಯರ್ಥ್ಯವಾಯಿತು.
-
England are knocked out as Australia continue their march towards a #CWC23 semi-final spot ⚡#ENGvAUS 📝: https://t.co/mEnntQMFQp pic.twitter.com/SbCu9Vbrj4
— ICC Cricket World Cup (@cricketworldcup) November 4, 2023 " class="align-text-top noRightClick twitterSection" data="
">England are knocked out as Australia continue their march towards a #CWC23 semi-final spot ⚡#ENGvAUS 📝: https://t.co/mEnntQMFQp pic.twitter.com/SbCu9Vbrj4
— ICC Cricket World Cup (@cricketworldcup) November 4, 2023England are knocked out as Australia continue their march towards a #CWC23 semi-final spot ⚡#ENGvAUS 📝: https://t.co/mEnntQMFQp pic.twitter.com/SbCu9Vbrj4
— ICC Cricket World Cup (@cricketworldcup) November 4, 2023
ಆಸ್ಟ್ರೇಲಿಯಾ ಪರ ಆಡಮ್ ಝಂಪಾ 3, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಜಲ್‌ವುಡ್ ತಲಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿ ಆದರು.
ಪಂದ್ಯ ಶ್ರೇಷ್ಠ: ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಕೊಡುಗೆ ನೀಡಿದ ಆಡಮ್ ಝಂಪಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: ಆರನೇ ಬೌಲರ್ ಕೊರತೆಯನ್ನು ವಿರಾಟ್, ರೋಹಿತ್, ಸೂರ್ಯ ನೀಗಿಸಬಲ್ಲರು: ರಾಹುಲ್ ದ್ರಾವಿಡ್