ಬೆಂಗಳೂರು: 5 ಬಾರಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡ ಈ ವರ್ಷ ಮೊದಲೆರಡು ಪಂದ್ಯಗಳನ್ನು ಬ್ಯಾಟಿಂಗ್ ವೈಫಲ್ಯದಿಂದ ಸೋತರೆ, ಮೂರನೇ ಪಂದ್ಯದಲ್ಲಿ ಸಾಧಾರಣ ಪ್ರದರ್ಶನದಿಂದ ಗೆಲುವು ದಾಖಲಿಸಿತ್ತು. ಆದರೆ ಇಂದಿನ ನಾಲ್ಕನೇ ಪಂದ್ಯದಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದ್ದು, ಪಾಕಿಸ್ತಾನದ ವಿರುದ್ಧ ದೊಡ್ಡ ಇನ್ನಿಂಗ್ಸ್ ಕಟ್ಟಿದೆ. ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಅವರ ಅಬ್ಬರದ ಶತಕದ ನೆರವಿನಿಂದ ತಂಡವು ನಿಗದಿತ ಓವರ್‌ಗಳ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 367 ರನ್ ಗಳಿಸಿತು.
- " class="align-text-top noRightClick twitterSection" data="">
ಟಾಸ್ ಗೆದ್ದ ಪಾಕ್ ನಾಯಕ ಆಸ್ಟ್ರೇಲಿಯಾಕ್ಕೆ ಬ್ಯಾಟಿಂಗ್ ಆಹ್ವಾನವಿತ್ತರು. ಟಿ20ಗೆ ಕ್ರಿಕೆಟ್ನ ಅಚ್ಚುಮೆಚ್ಚಿನ ಮೈದಾನವಾದ ಚಿನ್ನಸ್ವಾಮಿಯಲ್ಲಿ ಆಸ್ಟ್ರೇಲಿಯಾ ಆರಂಭಿಕರು ಅಬ್ಬರದ ಇನ್ನಿಂಗ್ಸ್ ಆಡಿದರು. ಪುಟ್ಟ ಮೈದಾನದಲ್ಲಿ ಬೌಂಡರಿ, ಸಿಕ್ಸರ್ಗಳ ಮಳೆಗೈದರು. ಪಾಕ್ ಬೌಲರ್ಗಳನ್ನು ಅನುಭವಿ ವಾರ್ನರ್ ಹಾಗೂ ಮಾರ್ಷ್ ಬೆಂಡೆತ್ತಿದರು. ಐಪಿಎಲ್ನಲ್ಲಿ ಆಡಿದ ಅನುಭವವನ್ನು ವಾರ್ನರ್ ಸಂಪೂರ್ಣವಾಗಿ ಬಳಸಿಕೊಂಡರು.
-
David Warner's 21st ODI century leads the Australia charge in Bengaluru 🔥@mastercardindia Milestones 🏏#CWC23 | #PAKvAUS pic.twitter.com/TwxPUydS5W
— ICC Cricket World Cup (@cricketworldcup) October 20, 2023 " class="align-text-top noRightClick twitterSection" data="
">David Warner's 21st ODI century leads the Australia charge in Bengaluru 🔥@mastercardindia Milestones 🏏#CWC23 | #PAKvAUS pic.twitter.com/TwxPUydS5W
— ICC Cricket World Cup (@cricketworldcup) October 20, 2023David Warner's 21st ODI century leads the Australia charge in Bengaluru 🔥@mastercardindia Milestones 🏏#CWC23 | #PAKvAUS pic.twitter.com/TwxPUydS5W
— ICC Cricket World Cup (@cricketworldcup) October 20, 2023
ಆರಂಭಿಕರ ದ್ವಿಶತಕ: ಪಾಕಿಸ್ತಾನಕ್ಕೆ ವಾರ್ನರ್ ಮತ್ತು ಮಾರ್ಷ್ ಜೊತೆಯಾಟವನ್ನು ಬೇರ್ಪಡಿಸುವುದು ಕಠಿಣ ಸವಾಲಾಯಿತು. ವಾರ್ನರ್ ವಿಶ್ವಕಪ್‌ನ 5ನೇ ಶತಕ ದಾಖಲಿಸಿದರೆ, ಜನ್ಮದಿನದಂದೇ ಮಾರ್ಷ್ ಸ್ಮರಣೀಯ 100 ರನ್ ಸಾಧಿಸಿದರು. 34ನೇ ಓವರ್‌ವರೆಗೂ ಈ ಜೋಡಿ ಪಾಲುದಾರಿಕೆ ಮಾಡಿತು. 33.5ನೇ ಓವರ್ನಲ್ಲಿ 121 ರನ್ ಗಳಿಸಿದ್ದ ಮಿಚೆಲ್ ಮಾರ್ಷ್ ವಿಕೆಟ್ ಕಳೆದುಕೊಂಡರು. ಇದರಿಂದ 259 ರನ್‌ಗಳ ಪಾಲುದಾರಿಕೆ ಅಂತ್ಯವಾಯಿತು. ವಾರ್ನರ್ ತಮ್ಮ ಬ್ಯಾಟಿಂಗ್ ಮುಂದುವರೆಸಿದರು. ಮಧ್ಯಮ ಕ್ರಮಾಂಕದಲ್ಲಿ ಅವರಿಗೆ ಜತೆಯಾಟ ಸಿಗದಿದ್ದರೂ 150 ರನ್ ಗಡಿ ದಾಟಿಸಿದರು. 14 ಬೌಂಡರಿ, 9 ಸಿಕ್ಸ್ನಿಂದ 163 ರನ್‌ಗಳ ಇನ್ನಿಂಗ್ಸ್ ಆಡಿ ವಾರ್ನರ್ ಔಟ್ ಆದರು.
-
Mitchell Marsh celebrates his birthday with a scintillating ton 🎉@mastercardindia Milestones 🏏#CWC23 | #AUSvPAK pic.twitter.com/fQLZ44TwV2
— ICC Cricket World Cup (@cricketworldcup) October 20, 2023 " class="align-text-top noRightClick twitterSection" data="
">Mitchell Marsh celebrates his birthday with a scintillating ton 🎉@mastercardindia Milestones 🏏#CWC23 | #AUSvPAK pic.twitter.com/fQLZ44TwV2
— ICC Cricket World Cup (@cricketworldcup) October 20, 2023Mitchell Marsh celebrates his birthday with a scintillating ton 🎉@mastercardindia Milestones 🏏#CWC23 | #AUSvPAK pic.twitter.com/fQLZ44TwV2
— ICC Cricket World Cup (@cricketworldcup) October 20, 2023
ಮಧ್ಯಮ, ಕೆಳ ಕ್ರಮಾಂಕ ವಿಫಲ: ಆರಂಭಿಕರಿಂದ ಬೃಹತ್ ಜತೆಯಾಟ ಬಂದರೂ ಮಧ್ಯಮ ಕ್ರಮಾಂಕದಲ್ಲಿ ಮತ್ತು ಕೆಳ ಕ್ರಮಾಂಕದಲ್ಲಿ ಆಸ್ಟ್ರೇಲಿಯಾ ಬ್ಯಾಟರ್ಗಳು ವಿಫಲರಾದರು. 34ನೇ ಓವರ್‌ನ ನಂತರ ಪಾಕಿಸ್ತಾನ ಪಂದ್ಯವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾ ಸಾಗಿತು. 400 ರನ್ ಗಡಿ ದಾಟಿಸುವ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಆಸ್ಟ್ರೇಲಿಯಾ 367 ರನ್ಗಳಿಗೆ ಕುಸಿಯಿತು. ಗ್ಲೆನ್ ಮ್ಯಾಕ್ಸ್‌ವೆಲ್ (0) ಸ್ಟೀವನ್ ಸ್ಮಿತ್ (7), ಮಾರ್ಕಸ್ ಸ್ಟೊಯಿನಿಸ್ (21), ಜೋಶ್ ಇಂಗ್ಲಿಸ್ (13) ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ (8) ತಂಡಕ್ಕೆ ಆಸರೆ ಆಗಲಿಲ್ಲ. ಕೊನೆಯಲ್ಲಿ ಬಾಲಂಗೋಚಿಗಳಾದ ಮಿಚೆಲ್ ಸ್ಟಾರ್ಕ್ (2), ಆ್ಯಡಮ್ ಝಂಪಾ (0) ಸಹ ವಿಕೆಟ್ ಕಳೆದುಕೊಂಡರು.
-
Shaheen Afridi closes out the Australian innings in style, picking up the 2nd five wicket haul of #CWC23 🖐️ @mastercardindia Milestones 🏏 #CWC23 | #AUSvPAK pic.twitter.com/Wv2iueOXrM
— ICC Cricket World Cup (@cricketworldcup) October 20, 2023 " class="align-text-top noRightClick twitterSection" data="
">Shaheen Afridi closes out the Australian innings in style, picking up the 2nd five wicket haul of #CWC23 🖐️ @mastercardindia Milestones 🏏 #CWC23 | #AUSvPAK pic.twitter.com/Wv2iueOXrM
— ICC Cricket World Cup (@cricketworldcup) October 20, 2023Shaheen Afridi closes out the Australian innings in style, picking up the 2nd five wicket haul of #CWC23 🖐️ @mastercardindia Milestones 🏏 #CWC23 | #AUSvPAK pic.twitter.com/Wv2iueOXrM
— ICC Cricket World Cup (@cricketworldcup) October 20, 2023
ಅಫ್ರಿದಿ 5 ವಿಕೆಟ್ ಸಾಧನೆ: ವಿಶ್ವಕಪ್ನಲ್ಲಿ ಶಾಹಿನ್ ಶಾ ಅಫ್ರಿದಿ 5 ವಿಕೆಟ್ ಕಬಳಿಸಿದರು. ಆರಂಭದಲ್ಲಿ ರನ್ ನಿಯಂತ್ರಣ ಸಾಧಿಸುವಲ್ಲಿ ಎಡವಿದರೂ ಕೊನೆಯಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡುವಲ್ಲಿ ಯಶಸ್ವಿಯಾದರು. ಈ ವಿಶ್ವಕಪ್ನಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆದ ಆಟಗಾರ ಎಂಬ ದಾಖಲೆ ಬರೆದರು. ಉಳಿದಂತೆ ಹ್ಯಾರಿಸ್ ರೌಫ್ 3, ಉಸಾಮಾ ಮಿರ್ 1 ವಿಕೆಟ್ ಪಡೆದರು.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ವಾರ್ನರ್ 163, ಮಾರ್ಷ್ 121 ರನ್! ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ದಾಖಲೆಯ ಜತೆಯಾಟ