ನವದೆಹಲಿ: ಡೇವಿಡ್ ವಾರ್ನರ್, ಮ್ಯಾಕ್ಸ್ ವೆಲ್ ಅಬ್ಬರದ ಶತಕ ಮತ್ತು ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ 50 ಓವರ್ಗೆ 8 ವಿಕೆಟ್ ನಷ್ಟಕ್ಕೆ 399 ರನ್ ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಮುಂದಾದ ಆಸ್ಟ್ರೇಲಿಯಾ ಬ್ಯಾಟಿಂಗ್ ಸ್ನೇಹಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ದೊಡ್ಡ ಮೊತ್ತವನ್ನು ಒಗ್ಗೂಡಿಸುವ ಲೆಕ್ಕಾಚಾರದಲ್ಲೇ ಮೈದಾನಕ್ಕಿಳಿದಂತಿತ್ತು. ಏಕೆಂದರೆ ಮೊದಲ ಎರಡು ಪಂದ್ಯವನ್ನು ಸೋತಿರುವ ಆಸ್ಟ್ರೇಲಿಯಾಕ್ಕೆ ಪ್ಲೇ ಆಫ್ ಪ್ರವೇಶಕ್ಕೆ ರನ್ರೇಟ್ ತೊಡಕಾಗದಂತೆ ಮಾಡಲು ನೆದರ್ಲೆಂಡ್ಸ್ ವಿರುದ್ಧ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿ ತಂಡ ಇದ್ದಂತೆ ಕಾಣುತ್ತಿತ್ತು.
-
Glenn Maxwell, 106 (44) 💥
— ICC (@ICC) October 25, 2023 " class="align-text-top noRightClick twitterSection" data="
David Warner, 104 (93) 💯
Just the 400 runs required for Netherlands 😲
Read the live report 📝⬇️#AUSvNED #CWC23https://t.co/pS9ostDwgt
">Glenn Maxwell, 106 (44) 💥
— ICC (@ICC) October 25, 2023
David Warner, 104 (93) 💯
Just the 400 runs required for Netherlands 😲
Read the live report 📝⬇️#AUSvNED #CWC23https://t.co/pS9ostDwgtGlenn Maxwell, 106 (44) 💥
— ICC (@ICC) October 25, 2023
David Warner, 104 (93) 💯
Just the 400 runs required for Netherlands 😲
Read the live report 📝⬇️#AUSvNED #CWC23https://t.co/pS9ostDwgt
ಈ ಲೆಕ್ಕಾಚಾರದಲ್ಲಿ ಮೈದಾನಕ್ಕಿಳಿದ ಕಾಂಗರೂ ಪಡೆಗೆ ಆರಂಭಿಕ ಆಘಾತವನ್ನು ಡಚ್ಚರು ನೀಡಿದರು. ಪಾಕಿಸ್ತಾನದ ವಿರುದ್ಧ ಕಳೆದ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಮತ್ತು ಡೇವಿಡ್ ವಾರ್ನರ್ 259 ರನ್ನ ಬೃಹತ್ ಜತೆಯಾಟ ಮಾಡಿದ್ದರು. ಆದರೆ ಡಚ್ಚರು 9 ರನ್ ಗಳಿಸಿದ್ದ ಮಾರ್ಷ್ ವಿಕೆಟ್ ಪಡೆಯುವ ಮೂಲಕ ಮತ್ತೊಂದು ದೊಡ್ಡ ಪಾಲುದಾರಿಕೆಗೆ ಬ್ರೇಕ್ ಹಾಕಿದರು. ಆದರೆ ಎರಡನೇ ವಿಕೆಟ್ಗೆ ಆಸ್ಟ್ರೇಲಿಯನ್ ಬ್ಯಾಟರ್ಗಳು ಜತೆಯಾಟವನ್ನು ಹಂಚಿಕೊಂಡರು. ತಂಡ ಅನುಭವಿ ಬ್ಯಾಟರ್ಗಳಾದ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ 132 ರನ್ ಜೊತೆಯಾಗಿ ರನ್ ಕಲೆಹಾಕಿದರು. ಇಬ್ಬರು ಆಟಗಾರರು ಅರ್ಧಶತಕ ಪೂರೈಸಿಕೊಂಡರು.
-
David Warner is inevitable 💯 Back-to-back centuries for the Australian opener 👏@mastercardindia Milestones 🏏#CWC23 #AUSvNED pic.twitter.com/sr4Sn9xHPi
— ICC (@ICC) October 25, 2023 " class="align-text-top noRightClick twitterSection" data="
">David Warner is inevitable 💯 Back-to-back centuries for the Australian opener 👏@mastercardindia Milestones 🏏#CWC23 #AUSvNED pic.twitter.com/sr4Sn9xHPi
— ICC (@ICC) October 25, 2023David Warner is inevitable 💯 Back-to-back centuries for the Australian opener 👏@mastercardindia Milestones 🏏#CWC23 #AUSvNED pic.twitter.com/sr4Sn9xHPi
— ICC (@ICC) October 25, 2023
ಶತಕದ ಲೆಕ್ಕಾಚಾದಲ್ಲಿದ್ದ ಆಸಿಸ್ ಮಾಜಿ ನಾಯಕ ಸ್ಮಿತ್ 71 ರನ್ ಕ್ಯಾಚ್ ಕೊಟ್ಟು ಪೆವಿಲಿಯನ್ ದಾರಿ ಹಿಡಿದರು. ಅವರ ನಂತರ ಬಂದ ಮಾರ್ನಸ್ ಲ್ಯಾಬುಶೇನ್ ವಾರ್ನರ್ ಜೊತೆ ಮತ್ತೊಂದು ಪಾಲುದಾರಿಕೆಯನ್ನು ಮಾಡಿದರು. ಈ ಜೋಡಿ 3ನೇ ವಿಕೆಟ್ಗೆ 84 ರನ್ ಸೇರಿಸಿತು. ಇದರಿಂದ ತಂಡ 250 ಗಡಿ ಸಮೀಪಿಸಿತು. ಈ ವೇಳೆ ಮಾರ್ನಸ್ (62) ವಿಕೆಟ್ ಕೊಟ್ಟರೆ, ಅವರ ಬೆನ್ನಲ್ಲೇ ಬಂದ ಜೋಶ್ ಇಂಗ್ಲಿಸ್ (14) ವಿಶ್ವಕಪ್ನಲ್ಲಿ ಮತ್ತೆ ವಿಫಲರಾದರು.
-
Glenn Maxwell has smashed the record for the fastest @cricketworldcup hundred in some style 💥@mastercardindia Milestones 🏏#CWC23 #AUSvNED pic.twitter.com/ntxbFlynOE
— ICC (@ICC) October 25, 2023 " class="align-text-top noRightClick twitterSection" data="
">Glenn Maxwell has smashed the record for the fastest @cricketworldcup hundred in some style 💥@mastercardindia Milestones 🏏#CWC23 #AUSvNED pic.twitter.com/ntxbFlynOE
— ICC (@ICC) October 25, 2023Glenn Maxwell has smashed the record for the fastest @cricketworldcup hundred in some style 💥@mastercardindia Milestones 🏏#CWC23 #AUSvNED pic.twitter.com/ntxbFlynOE
— ICC (@ICC) October 25, 2023
ವಾರ್ನರ್ ದಾಖಲೆಯ ಶತಕ: ಅನುಭವಿ ಡೇವಿಡ್ ವಾರ್ನರ್ ಈ ವಿಶ್ವಕಪ್ನ ಎರಡನೇ ಶತಕವನ್ನು ದಾಖಲಿಸಿ ದಾಖಲೆ ಬರೆದರು. ತಮ್ಮ ವೈಯುಕ್ತಿಕ ಏಕದಿನದ 22ನೇ ಶತಕ ಹಾಗೂ ವಿಶ್ವಕಪ್ನಲ್ಲಿ 6ನೇ ಶತಕ ಗಳಿಸಿದರು. ವಿಶ್ವಕಪ್ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಶತಕವನ್ನು ಸಮ ಮಾಡಿದರು. ಇನ್ನಿಂಗ್ಸ್ನಲ್ಲಿ 93 ಬಾಲ್ ಆಡಿದ ಅವರು 11 ಬೌಂಡರಿ ಮತ್ತು 3 ಸಿಕ್ಸ್ ಸಹಾಯದಿಂದ 104 ರನ್ ಗಳಿಸಿ ಔಟ್ ಆದರು.
- " class="align-text-top noRightClick twitterSection" data="">
ಮ್ಯಾಕ್ಸ್ವೆಲ್ ಅಬ್ಬರ: ವಾರ್ನರ್ ವಿಕೆಟ್ ಕಳೆದುಕೊಂಡ ನಂತರ ಮ್ಯಾಕ್ಸ್ವೆಲ್ ತಂಡದ ರನ್ನ ಗತಿ ಹೆಚ್ಚಿಸಲು ಅಬ್ಬರದ ಬ್ಯಾಟಿಂಗ್ ಮಾಡಿದರು. ಡೆತ್ ಓವರ್ನಲ್ಲಿ ಟಿ10 ಆಟವನ್ನು ಪ್ರದರ್ಶಿಸಿದ ಮ್ಯಾಕ್ಸಿ ಸಿಕ್ಸ್, ಬೌಂಡರಿಗಳ ಮಳೆಗೈದರು. ಎಬಿ ಡಿ ವಿಲಿಯರ್ಸ್ ರೀತಿಯಲ್ಲಿ ಮೈದಾನದ ಸುತ್ತ ರನ್ ಗಳಿಸಿದ ಅವರು ವಿಶ್ವಕಪ್ನಲ್ಲಿ ವೇಗದ ಶತಕವನ್ನು ಪೂರೈಸಿದರು. ಕೇವಲ 40 ಬಾಲ್ ಅಡಿದ 100 ರನ್ ಗಳಿಸಿ ದಾಖಲೆ ಬರೆದರು. 44 ಎಸೆತ ಎದುರಿಸಿದ ಅವರು 9 ಬೌಂಡರಿ, 8 ಸಿಕ್ಸ್ನ ಸಹಾಯದಿಂದ 106 ರನ್ ಗಳಿಸಿ ವಿಕೆಟ್ ಕೊಟ್ಟರು. ಮ್ಯಾಕ್ಸ್ವೆಲ್ ನಂತರ ಸತತ ಎರಡು ವಿಕೆಟ್ ತಂಡ ಕಳೆದುಕೊಂಡಿತಾದರೂ, 50 ಓವರ್ ಮುಕ್ತಾಯಕ್ಕೆ 8 ವಿಕೆಟ್ ನಷ್ಟಕ್ಕೆ 399 ರನ್ ಕಲೆಹಾಕಿತು.
ದುಬಾರಿ ಬೌಲಿಂಗ್ ನಡುವೆಯೂ ಲೋಗನ್ ವ್ಯಾನ್ ಬೀಕ್ 4, ಬಾಸ್ ಡಿ ಲೀಡೆ 2 ಮತ್ತು ಆರ್ಯನ್ ದತ್ತ್ ಒಂದು ವಿಕೆಟ್ ಕಬಳಿಸಿದರು.
ಇದನ್ನೂ ಓದಿ: ನೆದರ್ಲೆಂಡ್ ವಿರುದ್ಧ ವಾರ್ನರ್ ಶತಕ: ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ಡೇವಿಡ್