ಪುಣೆ (ಮಹಾರಾಷ್ಟ್ರ): ಮಿಚೆಲ್ ಮಾರ್ಷ್ ಶತಕ, ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅರ್ಧಶತಕದ ನೆರವಿನಿಂದ ಬಾಂಗ್ಲಾ ನೀಡಿದ್ದ 307 ರನ್ಗಳ ಗುರಿಯನ್ನು 5.2 ಓವರ್ ಉಳಿಕೊಂಡು 8 ವಿಕೆಟ್ನಿಂದ ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಇದರಿಂದ ಎರಡನೇ ಸೆಮಿಫೈನಲ್ಸ್ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಕೋಲ್ಕತ್ತಾದ ಮೈದಾನದಲ್ಲಿ ನವೆಂಬರ್ 16ರಂದು ಮುಖಾಮುಖಿ ಆಗಲಿದೆ ಎಂಬುದು ಖಚಿತವಾಗಿದೆ. ಸೋಲು ಕಂಡರೂ ಬಾಂಗ್ಲಾದ 2025ರ ಚಾಂಪಿಯನ್ಸ್ ಟ್ರೋಫಿ ಪ್ರವೇಶದ ಕನಸು ನನಸಾಗಿಯೇ ಇದೆ.
-
A seventh-successive win for Australia ahead of the #CWC23 semi-finals 👊#AUSvBAN 📝: https://t.co/VmuFC5Ge9y pic.twitter.com/YM7wykmjPl
— ICC Cricket World Cup (@cricketworldcup) November 11, 2023 " class="align-text-top noRightClick twitterSection" data="
">A seventh-successive win for Australia ahead of the #CWC23 semi-finals 👊#AUSvBAN 📝: https://t.co/VmuFC5Ge9y pic.twitter.com/YM7wykmjPl
— ICC Cricket World Cup (@cricketworldcup) November 11, 2023A seventh-successive win for Australia ahead of the #CWC23 semi-finals 👊#AUSvBAN 📝: https://t.co/VmuFC5Ge9y pic.twitter.com/YM7wykmjPl
— ICC Cricket World Cup (@cricketworldcup) November 11, 2023
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಬಾಂಗ್ಲಾದೇಶ ತೌಹಿದ್ ಹೃದಯೊಯ್ ಅರ್ಧಶತಕ ಮತ್ತು ನಜ್ಮುಲ್ ಹೊಸೈನ್ ಶಾಂಟೊ ಅವರ ಇನ್ನಿಂಗ್ಸ್ ಬಲದಿಂದ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 306 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ವಿಕೆಟ್ ಕಳೆದುಕೊಂಡು 8 ವಿಕೆಟ್ಗಳಿಂದ ಗೆದ್ದುಕೊಂಡಿತು.
-
An imperious 177* from Mitchell Marsh helps him win the @aramco #POTM 🔥#CWC23 | #AUSvBAN pic.twitter.com/7SLJtm05Ro
— ICC Cricket World Cup (@cricketworldcup) November 11, 2023 " class="align-text-top noRightClick twitterSection" data="
">An imperious 177* from Mitchell Marsh helps him win the @aramco #POTM 🔥#CWC23 | #AUSvBAN pic.twitter.com/7SLJtm05Ro
— ICC Cricket World Cup (@cricketworldcup) November 11, 2023An imperious 177* from Mitchell Marsh helps him win the @aramco #POTM 🔥#CWC23 | #AUSvBAN pic.twitter.com/7SLJtm05Ro
— ICC Cricket World Cup (@cricketworldcup) November 11, 2023
ಟ್ರಾವಿಸ್ ಹೆಡ್ 10 ರನ್ಗೆ ವಿಕೆಟ್ ಕಳೆದುಕೊಂಡರು. ಇದರಿಂದ 12ಕ ರನ್ಗೆ ಮೊದಲ ವಿಕೆಟ್ ಜೊತೆಯಾಟ ಮುರಿಯಿತು. ಆದರೆ ಅನುಭವಿ ಆಟಗಾರ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಎರಡನೇ ವಿಕೆಟ್ಗೆ 120 ರನ್ಗಳ ಬೃಹತ್ ಜೊತೆಯಾಟವಾಡಿದರು. ಇದರಿಂದ ತಂಡ ಒತ್ತಡ ರಹಿತವಾಗಿ ಗುರಿ ಸಮೀಪಿಸಿತು. 33ನೇ ಏಕದಿನ ಅರ್ಧಶತಕ ಗಳಿಸಿದ ವಾರ್ನರ್ ವಿಕೆಟ್ ಒಪ್ಪಿಸಿದರು. ಇನ್ನಿಂಗ್ಸ್ನಲ್ಲಿ ವಾರ್ನರ್ 61 ಬಾಲ್ ಎದುರಿಸಿ 6 ಬೌಂಡರಿಯಿಂದ 53 ರನ್ ಕಲೆಹಾಕಿದರು.
3ನೇ ವಿಕೆಟ್ಗೆ ಒಂದಾದ ಮಿಚೆಲ್ ಮಾರ್ಷ್ ಮತ್ತು ಸ್ಟೀವನ್ ಸ್ಮಿತ್ 175 ರನ್ಗಳ ಅಜೇಯ ಪಾಲುದಾರಿಕೆ ಮಾಡಿ ಪಂದ್ಯವನ್ನು ಗೆಲ್ಲಿಸಿದರು. ಮಿಚೆಲ್ ಮಾರ್ಷ್ 132 ಬಾಲ್ ಆಡಿ 17 ಬೌಂಡರಿ, 9 ಸಿಕ್ಸ್ನಿಂದ ಅಜೇಯ 177 ರನ್ ಕಲೆಹಾಕಿದರು. ಸ್ಟೀವನ್ ಸ್ಮಿತ್ 64 ಬಾಲ್ನಲ್ಲಿ 4 ಬೌಂಡರಿ, 1 ಸಿಕ್ಸ್ನಿಂದ 63 ರನ್ ಗಳಿಸಿದರು. ಇದರಿಂದ ಆಸ್ಟ್ರೇಲಿಯಾ 44.4 ಓವರ್ಗೆ 2 ವಿಕೆಟ್ ಕಳೆದುಕೊಂಡು 307 ರನ್ ಕೆಲೆಹಾಕಿತು. ಬಾಂಗ್ಲಾ ಪರ ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರಹಮಾನ್ ತಲಾ ಒಂದೊಂದು ವಿಕೆಟ್ ಪಡೆದರು.
- " class="align-text-top noRightClick twitterSection" data="">
ಮಾರ್ಷ್ ಪಂದ್ಯ ಶ್ರೇಷ್ಠ: ಆಸ್ಟ್ರೇಲಿಯಾ ಆಲ್ರೌಂಡರ್ ಮಿಚೆಲ್ ಮಾರ್ಷ್ ಇಂದಿನ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೊದಲ ಇನ್ನಿಂಗ್ಸ್ನಲ್ಲಿ 4 ಓವರ್ ಮಾಡಿ 12 ಎಕಾನಮಿಯಲ್ಲಿ ರನ್ ಕೊಟ್ಟು ಕಳಪೆ ಬೌಲಿಂಗ್ ಮಾಡಿದರೂ, ಬ್ಯಾಟಿಂಗ್ನಲ್ಲಿ ಅಜೇಯ 177 ರನ್ಗಳ ಇನ್ನಿಂಗ್ಸ್ ಆಡಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದನ್ನೂ ಓದಿ: ವಿಶ್ವಕಪ್ಗೆ ಕ್ರಿಕೆಟ್ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್: ಮೈದಾನಕ್ಕೆ ದಾಖಲೆಯ ವೀಕ್ಷಕರ ಭೇಟಿ