ETV Bharat / sports

ವಿಶ್ವಕಪ್​ ಕ್ರಿಕೆಟ್​: ಇಬ್ರಾಹಿಂ ಜದ್ರಾನ್ ಭರ್ಜರಿ ಶತಕ.. ಕಾಂಗರೂ ಪಡೆಗೆ 292 ರನ್​ಗಳ ಗುರಿ

ಮುಂಬೈನ ವಾಂಖೆಡೆ ಮೈದಾನಲ್ಲಿ ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ಮುಖಾಮುಖಿ ಆಗಿದ್ದು, ಮೊದಲು ಬ್ಯಾಟ್​ ಮಾಡಿದ ಅಫ್ಘಾನ್ 291 ರನ್​ ಗಳಿಸಿದೆ.

ICC Cricket World Cup 2023
ವಿಶ್ವಕಪ್​ ಕ್ರಿಕೆಟ್​
author img

By ETV Bharat Karnataka Team

Published : Nov 7, 2023, 5:54 PM IST

Updated : Nov 7, 2023, 6:38 PM IST

ಮುಂಬೈ (ಮಹಾರಾಷ್ಟ್ರ): ಪ್ರಸ್ತುತ ವಿಶ್ವಕಪ್​ನಲ್ಲಿ 4 ಪಂದ್ಯಗಳನ್ನು ಗೆದ್ದು ಸೆಮೀಸ್​ ಪ್ರವೇಶಕ್ಕೆ ಅವಕಾಶಗಳನ್ನು ಉಳಿಸಿಕೊಂಡಿರುವ ಅಫ್ಫಾನಿಸ್ತಾನ ಇಲ್ಲಿನ ಐಕಾನಿಕ್​ ವಾಂಖೆಡೆ ಕ್ರಿಡಾಂಗಣದಲ್ಲಿ ಐದು ಬಾರಿ ಚಾಂಪಿಯನ್​ ಆಗಿದ್ದ ಆಸ್ಟ್ರೇಲಿಯಾವನ್ನು ಎದುರಿಸಿದೆ. ಮೊದಲು ಬ್ಯಾಟಿಂಗ್​ ಮಾಡಿದ ಅಫ್ಘಾನ್​​ ಇಬ್ರಾಹಿಂ ಜದ್ರಾನ್​ ಅವರ ಅಜೇಯ ಶತಕದ ಆಟದ ನೆರವಿನಿಂದ ನಿಗದಿತ ಓವರ್​ ಅಂತ್ಯಕ್ಕೆ 5 ವಿಕೆಟ್​ ಕಳೆದುಕೊಂಡು 291 ರನ್​​ಗಳನ್ನು ಕಲೆ ಹಾಕಿದೆ.

2023ರ ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನ ತಂಡ ನಿರೀಕ್ಷೆಗೂ ಮೀರಿದ ಪ್ರದರ್ಶನ ಮತ್ತು ಫಲಿತಾಂಶವನ್ನು ನೀಡುತ್ತಿದೆ. ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡ ಅಫ್ಘಾನ್​ ನಂತರ ಪಾಕಿಸ್ತಾನ, ಶ್ರೀಲಂಕಾ ಮತ್ತು ನೆದರ್ಲೆಂಡ್ಸ್​ನ್ನು ಮಣಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನವನ್ನು ಉಳಿಸಿಕೊಂಡು, ಸೆಮೀಸ್​ ಅವಕಾಶವನ್ನು ಎದುರು ನೋಡುತ್ತಿದೆ. ಕಳೆದ (2019) ವಿಶ್ವಕಪ್​ನಲ್ಲಿ ಒಂದೂ ಗೆಲುವು ಕಾಣದ ತಂಡ ಈ ಬಾರಿ ಯಶಸ್ವಿ ಪ್ರದರ್ಶನ ನೀಡುತ್ತಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ಅಫ್ಘನ್​ಗೆ ಮೊದಲ ವಿಕೆಟ್​ಗೆ ದೊಡ್ಡ ಜೊತೆಯಾಟ ಸಿಗಲಿಲ್ಲ. ವಿಶ್ವಕಪ್​ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ರಹಮಾನುಲ್ಲಾ ಗುರ್ಬಾಜ್ ಇತ್ತೀಚಿನ ಪಂದ್ಯಗಳಲ್ಲಿ ವೈಫಲ್ಯತೆ ಎದುರಿಸುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧವೂ ರಹಮಾನುಲ್ಲಾ ಗುರ್ಬಾಜ್ (21) ದೊಡ್ಡ ಇನ್ನಿಂಗ್ಸ್ ಆಡುವುದರಲ್ಲಿ ಎಡವಿದರು.

ಇಬ್ರಾಹಿಂ ಜದ್ರಾನ್ ಏಕಾಂಗಿ ಪ್ರದರ್ಶನ: ಇನ್ನೋರ್ವ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ ಕಾಂಗರೂ ಪಡೆಯ ಬೌಲರ್​ಗಳ ದಾಳಿಯ ವಿರುದ್ಧ ಸೆಟೆದುನಿಂತು ಆಡಿದರು. ಎರಡನೇ ವಿಕೆಟ್​ಗೆ ಇಬ್ರಾಹಿಂ ಜದ್ರಾನ್ ಮತ್ತು ರಹಮತ್ ಶಾ 83 ರನ್​ಗಳ ಪಾಲುದಾರಿಕೆ ಮಾಡಿದರು. ರಹಮತ್ ಶಾ (30), ಹಶ್ಮತುಲ್ಲಾ ಶಾಹಿದಿ(26), ಅಜ್ಮತುಲ್ಲಾ ಒಮರ್ಜಾಯ್ (22), ಮೊಹಮ್ಮದ್ ನಬಿ (12) ಇವರೊಂದಿಗೆ ಪಾಲುದಾರಿಕೆಯನ್ನು ಹಂಚಿಕೊಂಡರು. ಇವರೆಲ್ಲರ ಜೊತೆ ಆಡಿದ ಇಬ್ರಾಹಿಂ ಜದ್ರಾನ್ ತಮ್ಮ ಶತಕವನ್ನು ಪೂರೈಸಿಕೊಂಡರು. ಕೊನೆಯ 5 ಓವರ್​ನಲ್ಲಿ ರಶೀದ್​ ಖಾನ್​ ಮತ್ತು ಇಬ್ರಾಹಿಂ ಜದ್ರಾನ್ ಸೇರಿಕೊಂಡು 58 ರನ್​ಗಳ ಪಾಲುದಾರಿಕೆ ಮಾಡಿದರು. ಇದರಿಂದ ತಂಡ 5 ವಿಕೆಟ್​ ಕಳೆದುಕೊಂಡು 291 ರನ್​ಗಳಿಸಿತು.

ಇನ್ನಿಂಗ್ಸ್​ನಲ್ಲಿ ಇಬ್ರಾಹಿಂ ಜದ್ರಾನ್ 143 ಬಾಲ್ ಎದುರಿಸಿ 8 ಬೌಂಡರಿ, 3 ಸಿಕ್ಸ್​ನಿಂದ ಅಜೇಯ 129 ರನ್​ ಕಲೆಹಾಕಿದರು. ಅಲ್ಲದೇ ಒಂದೆಡೆ ವಿಕೆಟ್ ಪತನ ಆಗುತ್ತಿದ್ದಾಗ ಏಕಾಂಗಿಯಾಗಿ ಎಲ್ಲರ ಜೊತೆ ನಿಧಾನ ಗತಿಯಲ್ಲಿ ಬ್ಯಾಟಿಂಗ್​ ಮಾಡಿ ತಂಡಕ್ಕೆ ಆಸರೆ ಆದರು. 46ನೇ ಓವರ್​ ಬಂದ ಆಲ್​ರೌಂಡರ್​ ರಶೀದ್ ಖಾನ್​ ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್​ ಮಾಡಿದರು. 18 ಬಾಲ್ ಆಡಿದ ಅವರು 3 ಸಿಕ್ಸ್​, 2 ಬೌಂಡರಿ ಸಹಾಯದಿಂದ 35 ರನ್​ ಕಲೆಹಾಕಿದರು.

  • " class="align-text-top noRightClick twitterSection" data="">

ಆಸ್ಟ್ರೇಲಿಯಾ ಪರ 7 ಜನ ಬೌಲರ್​ಗಳು ಆಡಿದರು, ಅಫ್ಘಾನ್​ ಬ್ಯಾಟರ್​ಗಳನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ​ಜೋಶ್ ಹ್ಯಾಜಲ್‌ವುಡ್ 2 ವಿಕೆಟ್​ ಮತ್ತು ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ ತಲಾ ಒಂದೊಂದು ವಿಕೆಟ್​ ಪಡೆದುಕೊಂಡರು.

ಇದನ್ನೂ ಓದಿ: ಭಾರತದ ಎದುರು ರಚಿನ್​ ವಿಶ್ವಕಪ್​ ಫೈನಲ್​ನಲ್ಲಿ ಆಡುವುದನ್ನು ನೋಡಲು ಬಯಸುತ್ತೇನೆ: ಅಜ್ಜ ಬಾಲಕೃಷ್ಣ

Last Updated : Nov 7, 2023, 6:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.