ETV Bharat / sports

ವಿಶ್ವಕಪ್​ ಕ್ರಿಕೆಟ್​​: ಅಫ್ಘನ್​ ದಾಳಿ ಮುಂದೆ ಮಂಕಾದ ಸಿಂಹಳೀಯರು; 241 ರನ್‌ಗಳಿಗೆ ಸರ್ವಪತನ - ETV Bharath Karnataka

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ.

ಅಫ್ಘನ್​ ದಾಳಿ ಮುಂದೆ ಘರ್ಜಿಸದ ಸಿಂಹಳೀಯರು
ಅಫ್ಘನ್​ ದಾಳಿ ಮುಂದೆ ಘರ್ಜಿಸದ ಸಿಂಹಳೀಯರು
author img

By ETV Bharat Karnataka Team

Published : Oct 30, 2023, 6:07 PM IST

ಪುಣೆ (ಮಹಾರಾಷ್ಟ್ರ): ಏಕದಿನ ವಿಶ್ವಕಪ್ ಕ್ರಿಕೆಟ್​​ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯಲು ಗೆಲುವು ಬಯಸಿ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಕ್ರಿಕೆಟ್ ತಂಡಗಳು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಇಂದು ಸೆಣಸಾಡುತ್ತಿವೆ. ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಅಫ್ಘನ್​ ಬೌಲರ್​ಗಳ ವಿರುದ್ಧ ಸಾಧಾರಣ ಪೈಪೋಟಿ ನೀಡಿತು. ಸಿಂಹಳೀಯರು 49.3 ಓವರ್‌ಗಳಿಗೆ​ ಎಲ್ಲಾ ವಿಕೆಟ್​ಗಳನ್ನು ಕಳೆದುಕೊಂಡು 241 ರನ್​ ಗಳಿಸಿದರು.

ಇಂಗ್ಲೆಂಡ್ ಮತ್ತು ಪಾಕಿಸ್ತಾನದ ವಿರುದ್ಧ ಜಯ ದಾಖಲಿಸಿರುವ ಅಫ್ಘನ್​ ಅದೇ ಆತ್ಮವಿಶ್ವಾಸದಲ್ಲಿ ಸಿಂಹಳೀಯರನ್ನು ಕಟ್ಟಿಹಾಕಲು ಚಿಂತಿಸುತ್ತಿದೆ. ಮೊದಲ ಮೂರು ಪಂದ್ಯಗಳನ್ನು ಕಳೆದುಕೊಂಡ ಲಂಕಾ, ನಂತರ ಎರಡರಲ್ಲಿ ವಿಜಯಿಯಾಯಿತು. ಇದೀಗ ಅಫ್ಘನ್​ ವಿರುದ್ಧ ಗೆದ್ದು ಹ್ಯಾಟ್ರಿಕ್​ ವಿಜಯ ದಾಖಲಿಸುವ ಉತ್ಸಾಹದಲ್ಲಿದೆ.

ಪುಣೆ ಪಿಚ್​ನಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ತಂಡ ಸರಾಸರಿಯ ಪ್ರಕಾರ 300 ರನ್​ ಕಲೆಹಾಕಬಹುದು. ಆದರೆ ಮೊದಲು ಬ್ಯಾಟಿಂಗ್​ಗೆ ಮೈದಾನಕ್ಕಿಳಿದ ಸಿಂಹಳೀಯರಿಗೆ ಅಫ್ಘನ್​ ಬೌಲರ್‌ಗಳು ಕಾಡಿದ್ದರಿಂದ 59 ರನ್​ ಕೊರತೆ ಎದುರಿಸಿದೆ. 50 ಓವರ್​ ಮಾದರಿಯಲ್ಲಿ 300 ರನ್​ ತಲುಪಲು ಒಂದು ದೊಡ್ಡ ಜತೆಯಾಟ ಅಥವಾ ಎರಡು ಅರ್ಧಶತಕದ ಪಾಲುದಾರಿಕೆಯಾದರೂ ಬರಬೇಕು. ಆದರೆ ಶ್ರೀಲಂಕಾದ ಬ್ಯಾಟರ್​ಗಳು ಪಿಚ್​ಗೆ ನೆಲೆ ನಿಲ್ಲದಂತೆ ಅಫ್ಘನ್​ ಬೌಲರ್​ಗಳು ನೋಡಿಕೊಂಡರು. ಇದರಿಂದ ಸಿಂಹಳೀಯರಿಂದ ಯಾವುದೇ ದೊಡ್ಡ ಜೊತೆಯಾಟವಾಗಲಿ, ಒಬ್ಬ ಬ್ಯಾಟರ್​ನ ಪ್ರದರ್ಶನವಾಗಲೀ ಮೂಡಿ ಬರಲಿಲ್ಲ.

  • " class="align-text-top noRightClick twitterSection" data="">

ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕ 46 ರನ್​ ಗಳಿಸಿದ್ದೇ ತಂಡದ ದೊಡ್ಡ ಮೊತ್ತವಾಯಿತು. ನಿಸ್ಸಾಂಕ ಬಿಟ್ಟು ಕುಸಾಲ್ ಮೆಂಡಿಸ್ (39) ಮತ್ತು ಸದೀರ ಸಮರವಿಕ್ರಮ (36) ಸಾಧಾರಣ ಇನ್ನಿಂಗ್ಸ್​ ಆಡಿದರು. ದಿಮುತ್ ಕರುಣಾರತ್ನ (15), ಚರಿತ್ ಅಸಲಂಕಾ (22), ಧನಂಜಯ ಡಿ ಸಿಲ್ವಾ (14), ದುಷ್ಮಂತ ಚಮೀರ (1) ತಂಡಕ್ಕೆ ದೊಡ್ಡ ಇನ್ನಿಂಗ್ಸ್​ ಆಡಲಿಲ್ಲ.

ಕೊನೆಯಲ್ಲಿ, ಮಹೇಶ್ ತೀಕ್ಷಣ (29) ಮತ್ತು ಅನುಭವಿ ಏಂಜೆಲೊ ಮ್ಯಾಥ್ಯೂಸ್ (23) ಮಾಡಿದ 45 ರನ್​ ಜೊತೆಯಾಟದ ನೆರವಿನಿಂದ ತಂಡ 200ರ ಗಡಿ ದಾಟಿತು. 241 ರನ್​ ಗಳಿಸಿದ ತಂಡ 49.3 ಓವರ್‌ಗಳಿಗೆ ಸರ್ವಪತನ ಕಂಡಿತು.

ಅಫ್ಘನ್​ ಪರ ಫಜಲ್ಹಕ್ ಫಾರೂಕಿ 4, ಮುಜೀಬ್ ಉರ್ ರಹಮಾನ್ 2 ವಿಕೆಟ್​ ಪಡೆದರೆ, ಅಜ್ಮತುಲ್ಲಾ ಒಮರ್ಜಾಯ್ ಮತ್ತು ರಶೀದ್ ಖಾನ್ ತಲಾ ಒಂದೊಂದು ವಿಕೆಟ್​ ಕಿತ್ತರು.

ಇದನ್ನೂ ಓದಿ: ಮುಂಬೈಗೆ ಬಂದಿಳಿದ ಅಜೇಯ ಭಾರತ; ಮುಂದಿನ ಟಾರ್ಗೆಟ್ ಲಂಕಾ, ವಾಂಖೆಡೆಯಲ್ಲಿ ಪಂದ್ಯ-ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.