ನವದೆಹಲಿ : ಭಾರತಕ್ಕೆ ಮೊದಲ ವಿಶ್ವಕಪ್ ತಂದುಕೊಟ್ಟಿದ್ದ ಕಪಿಲ್ ದೇವ್ ಅವರ ಸಾಧನೆಯನ್ನು ಐಸಿಸಿ ಸೋಮವಾರ್ ಟ್ವೀಟ್ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದೆ.
1978ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಕಪಿಲ್ ದೇವ್ ಭಾರತದ ಪರ 131 ಟೆಸ್ಟ್ ಮತ್ತು 225 ಏಕದಿನ ಪಂದ್ಯವನ್ನಾಡಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಆಟಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದ ಕಪಿಲ್ ದೇವ್, ಟೆಸ್ಟ್ನಲ್ಲಿ 434 ವಿಕೆಟ್ ಮತ್ತು 5248 ರನ್ಗಳಿಸಿದ್ದಾರೆ. 225 ಏಕದಿನ ಪಂದ್ಯಗಳಲ್ಲಿ 253 ವಿಕೆಟ್ ಮತ್ತು 3783 ರನ್ಗಳಿಸಿದ್ದಾರೆ.
ಭಾರತದಲ್ಲಿ ವೇಗದ ಬೌಲಿಂಗ್ ವಿಭಾಗದಲ್ಲಿ ಕ್ರಾಂತಿ ಎಬ್ಬಿಸಿದ್ದ ಅವರು ವಿಶ್ವ ಕಂಡಂತಹ ಸರ್ವಶ್ರೇಷ್ಠ ಆಲ್ರೌಂಡರ್ಗಳಲ್ಲಿ ಅಗ್ರಗಣ್ಯರಾಗಿದ್ದಾರೆ. 1983ರ ಏಕದಿನ ವಿಶ್ವಕಪ್ನಲ್ಲಿ ಭಾರತ ಕಪ್ ಎತ್ತಿ ಹಿಡಿಯುವಲ್ಲಿ ಇವರ ಪಾತ್ರ ಮಹತ್ವದಾಗಿತ್ತು.
-
Kapil Dev, India’s finest all-rounder, is considered as the true game-changer 🌟
— ICC (@ICC) May 24, 2021 " class="align-text-top noRightClick twitterSection" data="
We celebrate him on #ICCHallOfFame today.
More 📽️ https://t.co/PzDGRwvlDH pic.twitter.com/AOeFiWMovc
">Kapil Dev, India’s finest all-rounder, is considered as the true game-changer 🌟
— ICC (@ICC) May 24, 2021
We celebrate him on #ICCHallOfFame today.
More 📽️ https://t.co/PzDGRwvlDH pic.twitter.com/AOeFiWMovcKapil Dev, India’s finest all-rounder, is considered as the true game-changer 🌟
— ICC (@ICC) May 24, 2021
We celebrate him on #ICCHallOfFame today.
More 📽️ https://t.co/PzDGRwvlDH pic.twitter.com/AOeFiWMovc
2010ರಲ್ಲಿ ಕಪಿಲ್ ದೇವ್ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದರು. ಐಸಿಸಿ ತನ್ನ ವೆಬ್ಸೈಟ್ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ಭಾರತದಲ್ಲಿ ಕ್ರಿಕೆಟ್ ಬದಲಾಯಿಸಿದ ದಿಗ್ಗಜನನ್ನು ನೆನಪಿಸಿಕೊಂಡಿದೆ.
ಈ ವಿಡಿಯೋದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸೀಮ್ ಅಕ್ರಮ್, ನ್ಯೂಜಿಲ್ಯಾಂಡ್ ತಂಡದ ನಾಯಕ ಸ್ಟೀಫನ್ ಫ್ಲೆಮಿಂಗ್ ಹಾಗೂ ಕೆಲವು ಪತ್ರಕರ್ತರು ಕಪಿಲ್ ದೇವ್ ಆಟವನ್ನು ವಿವರಿಸಿದ್ದಾರೆ.
ಇದನ್ನು ಓದಿ:ಕುಂಬ್ಳೆಯಿಂದ ನಾನು ನಿದ್ದೆಯಿಲ್ಲದ ಕೆಲವು ರಾತ್ರಿ ಕಳೆದಿದ್ದೇನೆ : ಜಂಬೊ ಹೊಗಳಿದ ಸಂಗಕ್ಕಾರ