ETV Bharat / sports

ಇನ್ಮುಂದೆ ಕ್ರಿಕೆಟ್​ ಹೀಗೆ ಆಡುವಂತಿಲ್ಲ! ಶೀಘ್ರದಲ್ಲೇ ಹೊಸ ನಿಯಮ ಜಾರಿಗೆ

ಕ್ರಿಕೆಟ್‌ ಆಟದ ನೀತಿ ನಿಯಮಗಳನ್ನು ರೂಪಿಸುವ ಹಾಗೂ ಬದಲಾವಣೆಗಳನ್ನು ತರುವ ಹಕ್ಕು ಹೊಂದಿರುವ ಪ್ರತಿಷ್ಠಿತ ಮೆರಿಲೆಬೋನ್‌ ಕ್ರಿಕೆಟ್‌ ಕ್ಲಬ್‌ ಇತ್ತೀಚೆಗೆ ಕೆಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.

ICC ANNOUNCED NEW CRICKET RULES AND MANKADING
ಸಂಗ್ರಹ ಚಿತ್ರ
author img

By

Published : Jul 14, 2022, 2:30 PM IST

ಹೈದರಾಬಾದ್​: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಇತ್ತೀಚೆಗೆ ಕ್ರಿಕೆಟ್‌ನಲ್ಲಿ ಕೆಲವು ಹೊಸ ನಿಯಮಗಳನ್ನು ಗುರುತಿಸಿದೆ. ಈ ನಿಯಮಗಳು ಅಧಿಕೃತವಾಗಿ 01 ಅಕ್ಟೋಬರ್ 2022 ರಿಂದ ಜಾರಿಗೆ ಬರಲಿವೆಯಂತೆ. ಕ್ರಿಕೆಟ್ ನಿಯಮಗಳನ್ನು ರೂಪಿಸುವ ಮೇರಿಲ್ ಬೋನ್ ಕ್ರಿಕೆಟ್ ಕ್ಲಬ್ ನಿಯಮಗಳನ್ನು ಗುರುತಿಸಿದ್ದು ಕೆಳಗಿನಂತೆ ಹಲವಾರು ಗಮನಾರ್ಹ ಬದಲಾವಣೆಗಳಿವೆ.

ICC ANNOUNCED NEW CRICKET RULES AND MANKADING
ಐಪಿಎಲ್‌ನಲ್ಲಿ ಆರ್‌.ಅಶ್ವಿನ್ ಅವರಿಂದ ಮಂಕಡ್‌ ಔಟ್‌(ಸಂಗ್ರಹ ಚಿತ್ರ)

ಮಂಕಡ್​ಗೆ ಅವಕಾಶ: ವಿವಾದಿತ ಮಂಕಡ್ ಇನ್ನು ಮುಂದೆ ನ್ಯಾಯಯುತ ರನೌಟ್ ಎಂದು ತೀರ್ಮಾನಿಸಲಾಗಿದೆ.

(ಸಂಗ್ರಹ ಚಿತ್ರ)

ಏನಿದು ಮಂಕಡ್? ಬೌಲರ್ ಬೌಲಿಂಗ್ ಮಾಡುವ ಮೊದಲು ನಾನ್ ಸ್ಟ್ರೈಕ್​​ನಲ್ಲಿರುವ ಆಟಗಾರ ಕ್ರೀಸ್ ಬಿಟ್ಟು ಹೋದಾಗ ಬೌಲರ್ ಔಟ್ ಮಾಡುವುದನ್ನು ಮಂಕಡ್​ ಎನ್ನುವರು. ಇನ್ನು ಮುಂದೆ ಇದನ್ನು ಅಧಿಕೃತವಾಗಿ ರನೌಟ್ ಎಂದೇ ಪರಿಗಣಿಸಲಾಗುತ್ತದೆ. ಮತ್ತು ಅದು ನ್ಯಾಯಯುತ ಆಟ (ಫೇರ್ ಪ್ಲೇ) ಎಂದೂ ಸಹ ಪರಿಗಣಿಸಲಾಗುತ್ತದೆ. ನಾನ್ ಸ್ಟ್ರೈಕ್​​ನಲ್ಲಿರುವ ಬ್ಯಾಟರ್ ಕೆಲವೊಮ್ಮೆ ರನ್​ ಮಾಡುವ ಉದ್ದೇಶದಿಂದ ಕ್ರೀಸ್ ದಾಟುವ ಸಾಧ್ಯತೆ ಇರುತ್ತದೆ. ಇದರಿಂದ ವಿರೋಧಿ ತಂಡ ಅನ್ಯಾಯವಾಗಿ ಸೋಲಬಹುದು. ಹೀಗಾಗಿ ಇನ್ನು ಮುಂದೆ ಬೌಲರ್ ಮಾಡಿದ ಮಂಕಡ್ ಅನ್ನು ರನ್ ಔಟ್ ಎಂದೇ ಪರಿಗಣಿಸಲಾಗುವುದು ಎಂದಿದೆ.

ಸ್ಟ್ರೈಕಿಂಗ್ ಬದಲಾವಣೆ: ಸ್ಟ್ರೈಕ್‌ನಲ್ಲಿರುವ ಬ್ಯಾಟರ್ ಆಗಲಿ ಅಥವಾ ನಾನ್ ಸ್ಟ್ರೈಕ್​​ನಲ್ಲಿರುವ ಆಟಗಾರನೇ ಆಗಲಿ ಯಾರೇ ಔಟಾದರೂ ಹೊಸ ಆಟಗಾರ ನೇರವಾಗಿ ಸ್ಟ್ರೈಕ್​ಗೆ ಬರಬೇಕು. ಆತನೇ ಮುಂದಿನ ಎಸೆತ ಎದುರಿಸಬೇಕು. ಈ ಹಿಂದೆ ಕ್ಯಾಚ್ ಪಡೆಯುವ ಮೊದಲು ನಾನ್ ಸ್ಟ್ರೈಕರ್ ಕ್ರಾಸ್ ಆಗಿದ್ದರೆ ಆತ ಮುಂದಿನ ಎಸೆತ ಎದುರಿಸುತ್ತಿದ್ದ. ಆದರೆ ಇನ್ನು ಮುಂದೆ ನಿಯಮ ಬದಲಾಗಲಿದೆ.

ಕೋವಿಡ್ ನಿಯಮ: ಕೋವಿಡ್‌ನಿಂದಾಗಿ ಚೆಂಡಿನ ಮೇಲೆ ಲಾಲಾರಸ (ಎಂಜಲು) ಸವರುವ ಅಭ್ಯಾಸವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸಂಪೂರ್ಣವಾಗಿ ನಿಷೇಧಿಸಿದೆ. ಒಂದು ವೇಳೆ ಹಾಗೆ ಮಾಡಿದರೆ ಅಥವಾ ನಿಯಮ ಈ ಮುರಿದರೆ ಬೌಲರ್ ಅಥವಾ ತಂಡಕ್ಕೆ ದಂಡ ವಿಧಿಸಬಹುದು. ಸಲೈವಾ ಬಳಕೆಯಿಂದ ಟ್ಯಾಂಪರ್ ಆಗುವ ಸಂಭವವಿರುವುದರಿಂದ ಇದನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.

ರನ್ ಔಟ್: ಈ ಹಿಂದೆ ರನ್ ಔಟ್ ನಿರ್ಧರಿಸುವಾಗ ಬ್ಯಾಟರ್ ಕ್ರೀಸ್​ಗೆ ಬಂದರೂ ಆತನ ಬ್ಯಾಟ್ ನೆಲಕ್ಕೆ ಸ್ಪರ್ಶಿಸದೇ ಇದ್ದರೆ (ಭೂಮಿಯಿಂದ ಅಂತರ ಕಾಯ್ದುಕೊಂಡಿದ್ದರೆ) ಅದನ್ನು ಔಟ್ ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಈ ನಿಯಮ ಬದಲಾಗಲಿದೆ. ಈಗ ಬ್ಯಾಟರ್ ಒಮ್ಮೆ ಕ್ರೀಸ್‌ನೊಳಗೆ ಪ್ರವೇಶಿಸಿದರೆ ಸಾಕು ಅದನ್ನು ನಾಟೌಟ್​ ಎಂದು ಪರಿಗಣಿಸಲಾಗುವುದು ಎಂದು ತಿಳಿಸಿದೆ.

ಈ ರೀತಿಯ ಬ್ಯಾಟ್​ಗಳಿಗೆ ನಿರ್ಬಂಧ: ಬ್ಯಾಟ್‌ಗಳ ತಯಾರಿಕೆಗೆ ಐಸಿಸಿ ಹೊಸ ನಿರ್ಬಂಧಗಳನ್ನು ವಿಧಿಸಿದೆ. ಇನ್ನು ಮುಂದೆ ಯಾವುದೇ ಬ್ಯಾಟ್​​ನ ಅಂಚು 40mm ಮತ್ತು ಅದರ ದಪ್ಪ 67mm ಯಾವುದೇ ಸಂದರ್ಭದಲ್ಲಿ ಮೀರಬಾರದು. ಒಂದುವೇಳೆ ಅಂಥದ್ದೇನಾದರೂ ಕಂಡುಬಂದಲ್ಲಿ ಬ್ಯಾಟರ್‌​ಗೆ ದಂಡ ವಿಧಿಸಬಹುದು ಅಥವಾ ಸರಣಿಯಿಂದ ಹೊರಗಿಡಬಹುದು.

ಡೆಡ್ ಬಾಲ್: ಮೈದಾನದೊಳಗೆ ವ್ಯಕ್ತಿಯಾಗಲಿ (ಅಂಪೈರ್​ ಒಳಗೊಂಡಂತೆ ಹೊರಗಿನ ವ್ಯಕ್ತಿ), ಯಾವುದೇ ಪ್ರಾಣಿ-ಪಕ್ಷಿಯಾಗಲಿ ಅಥವಾ ಇತರೆ ವಸ್ತು (ಉದಾ: ಡ್ರೋನ್​)ಗಳಿಂದ ಚೆಂಡು ತಾಗಿದ್ದರೆ ಹಾಗೂ ಇದರಿಂದ ಎರಡೂ ತಂಡಗಳ ಕಡೆ ಅನಾನುಕೂಲವಾಗಿದ್ದರೆ ಅದನ್ನು ಡೆಡ್ ಬಾಲ್ ಎಂದು ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ತಿದ್ದುಪಡಿ ಸೂಚಿಸುತ್ತದೆ. ಪಿಚ್ ಕಡೆಗೆ ಓಡಿಬರುವವರಿಂದ ಹಿಡಿದು ಮೈದಾನದ ಮೇಲೆ ಓಡಿ ಬರುವ ನಾಯಿ ಅಥವಾ ಇತರೆ ಪ್ರಾಣಿ-ಪಕ್ಷಿ ಹಾಗೆಯೇ ಕೆಲವೊಮ್ಮೆ ಹೊರಗಿನಿಂದ ಬಿದ್ದ ವಸ್ತುವಿನಿಂದ ಆಟದ ಮೇಲೆ ಪರಿಣಾಮ ಬೀರಿದರೆ ಅಂಪೈರ್‌ಗಳು ಡೆಡ್ ಬಾಲ್ ಎಂದು ಕರೆಯಬಹುದು ಎಂದು ತಿದ್ದುಪಡಿ ಮಾಡಲಾಗಿದೆ.

ಬೌಲಿಂಗ್ ಸಮಯ: ತಂಡವೊಂದು ಇನಿಂಗ್ಸ್ ಕೊನೆಯ ಓವರಿನ ಮೊದಲ ಎಸೆತ ಎಸೆಯುವಾಗ ನಿಗದಿತ ಅವಧಿಯಲ್ಲಿ ಇನಿಂಗ್ಸ್ ಮುಗಿಸುವ ಸ್ಥಿತಿಯಲ್ಲಿರಬೇಕು. ಒಂದು ವೇಳೆ ಹೀಗಿರದಿದ್ದಲ್ಲಿ ಇನಿಂಗ್ಸ್ ಓವರ್‌ಗಳನ್ನು ಎಸೆಯುವಾಗ 30 ಯಾರ್ಡ್ ಹೊರಗಡೆ 5 ಕ್ಷೇತ್ರ ರಕ್ಷಕರ (ಫೀಲ್ಡರ್​) ಬದಲಿಗೆ ಕೇವಲ ನಾಲ್ಕು ಕ್ಷೇತ್ರ ರಕ್ಷಕರಿಗೆ (ಫೀಲ್ಡರ್) ​ಮಾತ್ರ ಅವಕಾಶ ನೀಡಲಾಗುತ್ತದೆ. ಬ್ಯಾಟರ್‌​ಗೆ ಮುಕ್ತವಾಗಿ ರನ್​ ಗಳಿಸಲು ಅವಕಾಶ ನೀಡುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ.

ಡ್ರಿಂಕ್ಸ್ ಬ್ರೇಕ್: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ ಸರಣಿಯಲ್ಲಿ ಎರಡೂವರೆ ನಿಮಿಷಗಳ ಡ್ರಿಂಕ್ಸ್ ಬ್ರೇಕ್ ಪರಿಚಯಿಸಲಾಗಿದೆ. (ಐಪಿಎಲ್​ನಲ್ಲಿ ಈ ನಿಯಮ ಈಗಾಗಲೇ ಇದೆ.) ಆದರೆ, ಸರಣಿ ಆರಂಭ ಆಗುವುದಕ್ಕೂ ಮುನ್ನವೇ ಯಾರಾದರೊಬ್ಬರು ತಾವು ತಮ್ಮ ಬ್ರೇಕ್ ನಿಗದಿಪಡಿಸಬೇಕು. ಆ ಸಮಯದಲ್ಲಿ ಪಾನೀಯಗಳ ವಿರಾಮ ತೆಗೆದುಕೊಳ್ಳಬೇಕು.

(ಸಾಂದರ್ಭಿಕ ಚಿತ್ರ)

ವೈಡ್ ಬಾಲ್​: ಬೌಲರ್​ ಎಸೆದ ಬಾಲ್​​ ಮಾನದಂಡದ ಗೆರೆ ದಾಟಿ ಹೋಗಿದ್ದರೆ ಸಾಮಾನ್ಯವಾಗಿ ವೈಡ್​ ಆಗುತ್ತಿತ್ತು. ಆದರೆ, ಇದೀಗ ಪರಿಚಯಿಸಲಾಗಿರುವ ಹೊಸ ನಿಯಮದಂತೆ ಬ್ಯಾಟರ್‌​ ಬ್ಯಾಟಿಂಗ್ ಸ್ಥಾನದಿಂದ ಮುಂದೆ ಅಥವಾ ಹಿಂದೆ ಸರಿದ ಬಳಿಕವೂ ಬಾಲ್​ ಮಾನದಂಡದ ಗೆರೆ ದಾಟಿ ಹೋಗಿದ್ದರೆ ಅದನ್ನು ಸಹ ವೈಡ್​ ಎಂದು ಪರಿಗಣಿಸಲಾಗುತ್ತದೆ. ಈ ಮೊದಲು ಬ್ಯಾಟ್ಸಮನ್​ ತನ್ನ ಸ್ಥಾನಪಲ್ಲಟ ಮಾಡಿದ್ದರೆ (ಮುಂದೆ ಅಥವಾ ಹಿಂದೆ ಸರಿದಿದ್ದರೆ) ಬೌಲರ್ ಎಸೆದ ಎಸೆತವು ಮಾನದಂಡದ ಗೆರೆ ದಾಟಿ ಹೋಗಿದ್ದರೆ ಅದನ್ನು ವೈಡ್ ಎಂದು ನೀಡುತ್ತಿರಲಿಲ್ಲ.

ನಿವೃತ್ತ ಹರ್ಟ್: ಓರ್ವ ಬ್ಯಾಟರ್ ಈ ಹಿಂದೆ ಅನಾರೋಗ್ಯವಾದಾಗ ಅಥವಾ ಗಾಯಗೊಂಡಾಗ ಮಾತ್ರ ಮೈದಾನದಿಂದ ನಿವೃತ್ತಿ ಹೊಂದಬಹುದಿತ್ತು. ಆದರೆ, ಈಗ ಓರ್ವ ಬ್ಯಾಟ್ಸಮನ್ ಯಾವುದೇ ಗಾಯವಿಲ್ಲದಿದ್ದರೂ ಮತ್ತೊಬ್ಬ ಬ್ಯಾಟ್ಸಮನ್​ಗೆ ಅವಕಾಶ ನೀಡಲು ಸ್ವಯಂಪ್ರೇರಣೆಯಿಂದ ಮೈದಾನವನ್ನು ತೊರೆಯಬಹುದು.

ಬದಲಿ ಆಟಗಾರ: ಯಾವುದೇ ಸಂದರ್ಭದಲ್ಲಿ ಓರ್ವ ಆಟಗಾರ ಇನ್ನೊಬ್ಬ ಆಟಗಾರನನ್ನು ಬದಲಾಯಿಸಿದರೆ, ಹಿಂದಿನ ಆಟಗಾರನಿಗೆ ಸಂಬಂಧಿಸಿದ ಎಲ್ಲ ನಿರ್ಬಂಧಗಳು, ದಂಡಗಳು ಇತ್ಯಾದಿಗಳನ್ನು ಹೊಸ ಆಟಗಾರನಿಗೂ ಅನ್ವಯಿಸುವ ನಿಯಮವನ್ನು ಜಾರಿಗೆ ತರಲಾಗುತ್ತದೆ. ಈ ಮೊದಲು ತಪ್ಪು ಮಾಡಿದ ಆಟಗಾರ ಕಾರಣಾಂತರಗಳಿಂದ ಬದಲಾಣೆ ಬಯಸಿದ್ದರೆ ಅವನ ಜಾಗಕ್ಕೆ ಬಂದ ಆಟಗಾರನಿಗೆ ಯಾವುದೇ ಮಾನದಂಡಗಳು, ಶಿಕ್ಷೆಗಳು ಅನ್ವಯಿಸುತ್ತಿರಲಿಲ್ಲ. ಇದೀಗ ಅದನ್ನು ಬದಲಾವಣೆ ಮಾಡಲಾಗುತ್ತದೆ. (ಉದಾ-ಬೌಲಿಂಗ್​ ಮಾಡದಂತೆ ಶಿಕ್ಷೆ ವಿಧಿಸಿದ್ದರೆ ಬದಲಾಣೆಯಾದ ಆಟಗಾರನೂ ಸಹ ಇದೀಗ ಬೌಲಿಂಗ್ ಮಾಡುವಂತಿಲ್ಲ)

ICC ANNOUNCED NEW CRICKET RULES AND MANKADING
ಸಂಗ್ರಹ ಚಿತ್ರ

ದಂಡದ ನಿಯಮ: ವಿಕೆಟ್ ಕೀಪರ್ ತನ್ನ ಹೆಲ್ಮೆಟ್ ಅನ್ನು ತನ್ನ ಹಿಂದೆ ಇಟ್ಟಾಗ (ಅಂಪೈರ್​ ಸೂಚಿಸಿದ ಸ್ಥಳ) ಬಾಲ್​ ಒಂದುವೇಳೆ ಅದಕ್ಕೆ ತಾಗಿದ್ದರೆ ಫೀಲ್ಡಿಂಗ್ ತಂಡಕ್ಕೆ ಐದು ರನ್ ದಂಡ ವಿಧಿಸಲಾಗುತ್ತದೆ. ಇದನ್ನು ಬ್ಯಾಟಿಂಗ್ ಮಾಡುವ ತಂಡದ ಸ್ಕೋರ್‌ಗೆ ಸೇರಿಸಲಾಗುತ್ತದೆ. ಈ ಮೊದಲು ಈ ನಿಯಮ ಕಡ್ಡಾಯವಿರಲಿಲ್ಲ.

ಸಾಂದರ್ಭಿಕ ಚಿತ್ರ

ಮೂರು ನಿಮಿಷಗಳ ನಿಯಮ: ಈ ನಿಯಮದ ಪ್ರಕಾರ, ಒಬ್ಬ ಬ್ಯಾಟ್ಸ್‌ಮನ್ ಔಟಾದ ನಂತರ ಮತ್ತೊಬ್ಬ ಆಟಗಾರನಿಗೆ ಮೈದಾನ ಪ್ರವೇಶಿಸಲು ಮೂರು ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಅಷ್ಟರೊಳಗೆ ಅವರು ಪಿಚ್‌ಗೆ ಬರದಿದ್ದರೆ, ಅವರನ್ನು ನಿವೃತ್ತ ಹರ್ಟ್ ಎಂದು ಘೋಷಿಸಲಾಗುತ್ತದೆ. ಸಾಮಾನ್ಯವಾಗಿ ಈ ಸಮಯವನ್ನು ಹ್ಯಾಟ್ರಿಕ್‌ನಂತಹ ಸಮಯಗಳನ್ನು ಹೊರತುಪಡಿಸಿ ಪ್ರತಿ ಬಾರಿಯೂ ಅನುಸರಿಸಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.