ಮುಂಬೈ (ಮಹಾರಾಷ್ಟ್ರ): ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ವಾಂಖೆಡೆ ಕ್ರಿಡಾಂಗಣದಲ್ಲಿ ಇಬ್ರಾಹಿಂ ಜದ್ರಾನ್ ಅವರು ಅಫ್ಘಾನಿಸ್ತಾನ ಪರ ವಿಶ್ವಕಪ್ ಪಂದ್ಯದಲ್ಲಿ ಶತಕ ದಾಖಲಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಶತಕಕ್ಕೆ ಸಚಿನ್ ತೆಂಡೂಲ್ಕರ್ ಕಾರಣ ಎಂದು ಇಬ್ರಾಹಿಂ ಜದ್ರಾನ್ ಹೇಳಿಕೊಂಡಿದ್ದಾರೆ.
-
Ibrahim Zadran said, "after the knock against Pakistan, I had the belief that I'll score a century in the next 3 matches". pic.twitter.com/6iJU6ODy76
— Mufaddal Vohra (@mufaddal_vohra) November 7, 2023 " class="align-text-top noRightClick twitterSection" data="
">Ibrahim Zadran said, "after the knock against Pakistan, I had the belief that I'll score a century in the next 3 matches". pic.twitter.com/6iJU6ODy76
— Mufaddal Vohra (@mufaddal_vohra) November 7, 2023Ibrahim Zadran said, "after the knock against Pakistan, I had the belief that I'll score a century in the next 3 matches". pic.twitter.com/6iJU6ODy76
— Mufaddal Vohra (@mufaddal_vohra) November 7, 2023
ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದ ಮುನ್ನಾದಿನದಂದು ಸಚಿನ್ ತೆಂಡೂಲ್ಕರ್ ಅವರೊಂದಿಗೆ ವಾಂಖೆಡೆ ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಟಿಪ್ಸ್ ಪಡೆದುಕೊಂಡಿದ್ದೇನೆ ಎಂದರು. ಅಫ್ಘಾನಿಸ್ತಾನದ ಆಟಗಾರರು ಸೋಮವಾರ ವಾಂಖೆಡೆಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಸಮಯ ಕಳೆದರು.
ಮೊದಲ ಇನ್ನಿಂಗ್ಸ್ ಮುಕ್ತಾಯದ ನಂತರ ಮಾತನಾಡಿದ ಜದ್ರಾನ್,"ನಾನು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಉತ್ತಮವಾದ ಮಾತುಕತೆ ನಡೆಸಿದ್ದೇನೆ. ಅವರು ತಮ್ಮ ಅನುಭವವನ್ನು ಹಂಚಿಕೊಂಡರು ಮತ್ತು ನಾನು ಪಂದ್ಯದ ಮೊದಲು ನಾನು ಸಚಿನ್ ತೆಂಡೂಲ್ಕರ್ ಅವರಂತೆ ಬ್ಯಾಟಿಂಗ್ ಮಾಡುತ್ತೇನೆ ಎಂದು ಹೇಳಿದ್ದೆ. ಅವರು ನನಗೆ ಸಾಕಷ್ಟು ಶಕ್ತಿ ಮತ್ತು ಆತ್ಮವಿಶ್ವಾಸವನ್ನು ನೀಡಿದರು" ಎಂದು ಹೇಳಿದ್ದಾರೆ.
"ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಚೊಚ್ಚಲ ಶತಕವನ್ನು ಗಳಿಸಲು ನನಗೆ ತುಂಬಾ ಸಂತೋಷವಾಗಿದೆ. ನಾನು ಈ ಪಂದ್ಯಾವಳಿಗಾಗಿ ನಿಜವಾಗಿಯೂ ಶ್ರಮಿಸಿದೆ. ಪಾಕಿಸ್ತಾನದ ವಿರುದ್ಧ ಶತಕವನ್ನು ಕಳೆದುಕೊಂಡಿದ್ದೇನೆ, ಆದರೆ ಇಂದು ಅದನ್ನು ಮಾಡಿದೆ. ನಾನು ನನ್ನ ಕೋಚಿಂಗ್ ಸಿಬ್ಬಂದಿಯೊಂದಿಗೆ ಮಾತನಾಡುವಾಗ ಮುಂದಿನ ಮೂರು ಪಂದ್ಯಗಳಲ್ಲಿ ನಾನು ಶತಕ ಗಳಿಸುತ್ತೇನೆ ಎಂದು ಹೇಳಿದ್ದೆ" ಎಂದು ತಿಳಿಸಿದರು.
"ವಿಕೆಟ್ ಚೆನ್ನಾಗಿ ಕಾಣುತ್ತಿದೆ, ಚೆಂಡು ತುಂಬಾ ಚೆನ್ನಾಗಿ ಬರುತ್ತಿದೆ. ನಾವು ಉತ್ತಮ ಜೊತೆಯಾಟಗಳನ್ನು ಮಾಡಿ ವಿಕೆಟ್‌ಗಳನ್ನು ಕೈಯಲ್ಲಿ ಇಟ್ಟುಕೊಂಡಿದ್ದರೆ, 330 ರನ್ ಗಳಿಸುತ್ತಿದ್ದೆವು. ಆದರೆ, ನಾವು ಕೆಲವು ವಿಕೆಟ್‌ಗಳನ್ನು ಬೇಗ ಕಳೆದುಕೊಂಡೆವು ಮತ್ತು ಅಂತಹ ಪಾಲುದಾರಿಕೆಯನ್ನು ಪಡೆಯಲಿಲ್ಲ. ಆದರೆ ಕೊನೆಯಲ್ಲಿ ರಶೀದ್ ಖಾನ್ ಕೊನೆಯಲ್ಲಿ ಉತ್ತಮವಾಗಿ ಆಡಿದರು," ಎಂದು ಹೇಳಿದ್ದಾರೆ.
-
Ibrahim Zadran said, "I met Sachin Tendulkar yesterday and his inputs helped me alot. He played for 24 years, I'm thankful he shared the experience with us". pic.twitter.com/ZsLc3qmvOz
— Mufaddal Vohra (@mufaddal_vohra) November 7, 2023 " class="align-text-top noRightClick twitterSection" data="
">Ibrahim Zadran said, "I met Sachin Tendulkar yesterday and his inputs helped me alot. He played for 24 years, I'm thankful he shared the experience with us". pic.twitter.com/ZsLc3qmvOz
— Mufaddal Vohra (@mufaddal_vohra) November 7, 2023Ibrahim Zadran said, "I met Sachin Tendulkar yesterday and his inputs helped me alot. He played for 24 years, I'm thankful he shared the experience with us". pic.twitter.com/ZsLc3qmvOz
— Mufaddal Vohra (@mufaddal_vohra) November 7, 2023
ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನ್ ಇಬ್ರಾಹಿಂ ಜದ್ರಾನ್ ಅವರ ಏಕಾಂಗಿ ಆಟದ ಸಹಕಾರದಿಂದ 5 ವಿಕೆಟ್ ನಷ್ಟಕ್ಕೆ 291 ರನ್ ಕಲೆಹಾಕಿತು. ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಮತ್ತು ಆಡಮ್ ಝಂಪಾ ದಾಳಿಯನ್ನು ಅಫ್ಘಾನಿಸ್ತಾನ ಯಶಸ್ವಿಯಾಗಿ ಎದುರಿಸಿತು.
ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್, ಪಾಕಿಸ್ತಾನ, ಶ್ರೀಲಂಕಾ ಮತ್ತು ನೆದರ್ಲೆಂಡ್ ಮಣಿಸಿ ಸೆಮೀಸ್ ಅವಕಾಶವನ್ನು ಜೀವಂತವಾಗಿ ಉಳಿಸಿಕೊಂಡಿದೆ. ಇಂದು ಆಸ್ಟ್ರೇಲಿಯಾ ವಿರುದ್ಧ ಮತ್ತು ನವೆಂಬರ್ 10 ರಂದು ದಕ್ಷಿಣ ಆಫ್ರಿಕಾವನ್ನು ಮಣಿಸಿದಲ್ಲಿ ತಂಡ 3ನೇ ತಂಡವಾಗಿ ಸೆಮೀಸ್ ಆಡಲಿದೆ.
ಇದನ್ನೂ ಓದಿ: ಗಾಯಗೊಂಡ ಶಕೀಬ್ ಅಂತಿಮ ಲೀಗ್ ಪಂದ್ಯದಿಂದ ಔಟ್; ಅನಾಮುಲ್ ಹಕ್ ಬಿಜೋಯ್ ಆಯ್ಕೆ