ಹೈದರಾಬಾದ್: ತಂದೆ ನಿಧನದ ನಂತರವೂ ತವರಿಗೆ ಮರಳದೇ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿ ಭಾರತ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿ ಟೆಸ್ಟ್ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದ ಮೊಹಮ್ಮದ್ ಸಿರಾಜ್, ಇದಕ್ಕೆಲ್ಲಾ ನಾಯಕ ವಿರಾಟ್ ನೀಡಿದ ಬೆಂಬಲವೇ ಕಾರಣ ಎಂದು ತಿಳಿಸಿದ್ದಾರೆ.
ಭಾರತ ತಂಡದ ಸ್ಟಾರ್ ಬೌಲರ್ಗಳ ಅನುಪಸ್ಥಿತಿಯಲ್ಲಿ ಪದಾರ್ಪಣೆ ಮಾಡಿದ್ದ ಅವರು ಅದೇ ಸರಣಿಯಲ್ಲಿ ತಂಡದ ಬೌಲಿಂಗ್ ವಿಭಾಗವನ್ನು ಮುಂದೆ ನಿಂತು ಮುನ್ನಡೆಸಿದ್ದರು. ಅದರಲ್ಲೂ ಗಬ್ಬಾದ ವಿಜಯದಲ್ಲಿ ಸಿರಾಜ್ ಪಾತ್ರ ಮಹತ್ವದ್ದಾಗಿತ್ತು. ಹೈದರಾಬಾದ್ ಬೌಲರ್ ಈ ವಿಜಯ ತಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ತಿಳಿಸಿದ್ದಾರೆ.
ಸಿರಾಜ್ 2017ರಲ್ಲೇ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ, ವೈಟ್ ಬಾಲ್ ಮಾದರಿಯಲ್ಲಿ ಅವರು ನಿರೀಕ್ಷಿತ ಪ್ರದರ್ಶನ ತೋರದೇ ತಂಡದಿಂದ ಹೊರಬಿದ್ದರು. ದೇಶಿಯ ಕ್ರಿಕೆಟ್ನಲ್ಲಿ ಅವರು ಉತ್ತಮ ಪ್ರದರ್ಶನವನ್ನು ಮುಂದುವರಿಸಿ 2020ರಲ್ಲಿ ಟೆಸ್ಟ್ ತಂಡಕ್ಕೆ ಮರಳಿದರು. ಇದೀಗ ತಂಡದಲ್ಲಿ ಖಾಯಂ ಬೌಲರ್ ಆಗಿ ಉಳಿದುಕೊಂಡಿದ್ದಾರೆ. ಅವರ ಪ್ರಕಾರ ಇದಕ್ಕೆಲ್ಲಾ ಕೊಹ್ಲಿ ಕಾರಣರಾಗಿದ್ದು, ತಮ್ಮ ವೃತ್ತಿಜೀವನಕ್ಕೆ ಋಣಿಯಾಗಿರುವುದಾಗಿ ತಿಳಿಸಿದ್ದಾರೆ.
" ವಿರಾಟ್ ಭಯ್ಯಾ, ನಿನ್ನಲ್ಲಿ ಪ್ರತಿಭೆಯಿದೆ, ಯಾವುದೇ ಪಿಚ್ನಲ್ಲಾದರೂ ಆಡುವ ಸಾಮರ್ಥ್ಯವಿದೆ, ಯಾವುದೇ ಬ್ಯಾಟ್ಸ್ಮನ್ ರನ್ನು ಔಟ್ ಮಾಡಬಲ್ಲೇ" ಎಂದು ಯಾವಾಗಲೂ ಹೇಳುತ್ತಿರುತ್ತಾರೆ.
"ನಾನು ಆಸ್ಟ್ರೇಲಿಯಾ ಸರಣಿ ವೇಳೆ ತಂದೆಯನ್ನು ಕಳೆದುಕೊಂಡೆ. ಆ ಸಂದರ್ಭದಲ್ಲಿ ನಾನು ಚೂರು ಚೂರಾಗಿತ್ತು. ಆದರೆ, ವಿರಾಟ್ ಭಯ್ಯಾ ನನ್ನಲ್ಲಿ ಬಲ ತುಂಬಿದರು, ಬೆಂಬಲ ನೀಡಿದರು. ನನ್ನ ಈ ವೃತ್ತಿಜೀವನಕ್ಕೆ ನಾನು ಕೊಹ್ಲಿಗೆ ಋಣಿಯಾಗಿರುತ್ತೇನೆ" ಎಂದು ಸಿರಾಜ್ ಖಾಸಗಿ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನು ಓದಿ:ಕೊಹ್ಲಿಪಡೆ ಖಂಡಿತ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲುವ ಸಾಮರ್ಥ್ಯ ಹೊಂದಿದೆ