ಹೈದರಾಬಾದ್: ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಎಬಿ ಡಿವಿಲಿಯರ್ಸ್ (AB de Villiers) ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿದ್ದಾರೆ. ಅವರು ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ಟೀಂ ಇಂಡಿಯಾದ ವಿರಾಟ್ ಕೊಹ್ಲಿ, ಆರ್ಸಿಬಿ(RCB) ಸೇರಿದಂತೆ ಅನೇಕರು ಶುಭ ಹಾರೈಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿಶೇಷ ವಿಡಿಯೋ ಹಂಚಿಕೊಂಡಿರುವ ಮಿಸ್ಟರ್ 360 ಭಾರತದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
-
“I’m going to be an RCBian for life. Every single person in the RCB set-up has become family to me. People come & go, but the spirit & the love we have for each other at RCB will always remain. I’ve become half Indian now & I’m proud of that.” - @ABdeVilliers17 #ThankYouAB pic.twitter.com/5b6RUYfjDY
— Royal Challengers Bangalore (@RCBTweets) November 19, 2021 " class="align-text-top noRightClick twitterSection" data="
">“I’m going to be an RCBian for life. Every single person in the RCB set-up has become family to me. People come & go, but the spirit & the love we have for each other at RCB will always remain. I’ve become half Indian now & I’m proud of that.” - @ABdeVilliers17 #ThankYouAB pic.twitter.com/5b6RUYfjDY
— Royal Challengers Bangalore (@RCBTweets) November 19, 2021“I’m going to be an RCBian for life. Every single person in the RCB set-up has become family to me. People come & go, but the spirit & the love we have for each other at RCB will always remain. I’ve become half Indian now & I’m proud of that.” - @ABdeVilliers17 #ThankYouAB pic.twitter.com/5b6RUYfjDY
— Royal Challengers Bangalore (@RCBTweets) November 19, 2021
ನಾನು ಅರ್ಧ ಭಾರತೀಯ. ಅರ್ಧ ದಕ್ಷಿಣ ಆಫ್ರಿಕಾದವನು. ಭಾರತ ನನ್ನ ಹೃದಯದಲ್ಲಿ ವಿಶೇಷವಾಗಿ ನೆಲೆಸಿದೆ ಎಂದಿದ್ದಾರೆ. ನಾನು ಕೊನೆಯವರೆಗೂ ಆರ್ಸಿಬಿಯನ್ ಆಗಿರುತ್ತೇನೆ. ಆರ್ಸಿಬಿ ಕುಟುಂಬದಲ್ಲಿರುವ ಪ್ರತಿಯೊಬ್ಬರು ನನಗೆ ಕುಟುಂಬ ಇದ್ದ ಹಾಗೆ. ನಮ್ಮ ಜೀವನದಲ್ಲಿ ಜನರು ಬರುತ್ತಾರೆ, ಹೋಗುತ್ತಾರೆ. ಆದರೆ ಆರ್ಸಿಬಿಯಲ್ಲಿ ನಾವು ಪರಸ್ಪರ ಹೊಂದಾಣಿಕೆ ಮನೋಭಾವ ಮತ್ತು ಪ್ರೀತಿ ಹೊಂದಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿರಿ: ಪದಾರ್ಪಣೆ ಪಂದ್ಯದಲ್ಲಿ ಹರ್ಷಲ್ಗೆ 2 ವಿಕೆಟ್... ಟೀಂ ಇಂಡಿಯಾ ಗೆಲುವಿಗೆ 154ರನ್ ಟಾರ್ಗೆಟ್
2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದಿದ್ದ ಎಬಿಡಿ ಇಲ್ಲಿಯವರೆಗೆ 10 ಆವೃತ್ತಿಗಳಲ್ಲಿ ಆರ್ಸಿಬಿ ಪರ ಆಡಿದ್ದು, ಇದೀಗ ಆರ್ಸಿಬಿ ತಂಡದ ಆಟಗಾರನಾಗಿಯೇ ಕ್ರಿಕೆಟ್ಗೆ ವಿದಾಯ ಸಹ ಘೋಷಣೆ ಮಾಡಿದ್ದಾರೆ. ನನ್ನದೊಂದು ಅದ್ಭುತ ಪ್ರಯಾಣ. ಎಲ್ಲಾ ಕ್ರಿಕೆಟ್ನಿಂದ ವಿದಾಯ ಘೋಷಣೆ ಮಾಡಲು ನಿರ್ಧರಿಸಿದ್ದೇನೆ. ನಾನು ತೆಗೆದುಕೊಂಡಿರುವ ನಿರ್ಧಾರ ದಿಢೀರ್ ಆಗಿ ಕಂಡರೂ ಸಹ ಈ ಘೋಷಣೆ ಮಾಡುತ್ತಿದ್ದೇನೆ ಎಂದು ಎಬಿಡಿ ಟ್ವೀಟ್ ಮಾಡಿದ್ದರು.