ETV Bharat / sports

ಆಟದ ಬಗ್ಗೆ ಗ್ಯಾರಂಟಿ ಕೊಡಲಾರೆ, ಫಿಟ್ನೆಸ್​ ಬಗ್ಗೆ ನೀಡಬಹುದು: ಧೋನಿ - ಮಹೇಂದ್ರ ಸಿಂಗ್ ಧೋನಿ ಫಿಟ್ನೆಸ್

ಐಪಿಎಲ್​ ಪಂದ್ಯಾವಳಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದ ಬಳಿಕ ಸಿಎಸ್​ಕೆ ತಂಡದ ನಾಯಕ ಧೋನಿ ಮಾತನಾಡಿದರು.

I don't want anyone to say I'm unfit
ಫಿಟ್ನೆಸ್​ ಬಗ್ಗೆ ಧೋನಿ ಮಾತು
author img

By

Published : Apr 20, 2021, 11:00 AM IST

ಮುಂಬೈ: ತಂಡದಲ್ಲಿ ಕಿರಿಯ ಆಟಗಾರರೊಂದಿಗೆ ಮುಂದುವರೆಯುವುದು ಕಷ್ಟ. ಆದರೂ 39 ವರ್ಷದವನಾದ ನನಗೆ ಇದೊಂದು ದೊಡ್ಡ ಪಾಸಿಟಿವ್ ವಿಷಯ. ಯಾಕೆಂದರೆ, ಅವರು ನನ್ನ ಫಿಟ್ನೆಸ್​ ಬಗ್ಗೆ ಬೆರಳು ತೋರಿಸಲು ಆಗುವುದಿಲ್ಲ ಎಂದು ಚೆನ್ನೈ ಸೂಪರ್​ ಕಿಂಗ್ ತಂಡ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ 39 ವರ್ಷದ ಧೋನಿ, ವಯಸ್ಸಾಗುವುದು ಮತ್ತು ಫಿಟ್‌ ಆಗಿರುವುದು ಎರಡೂ ಕಷ್ಟದ ಸಂಗತಿ ಎಂದರು.

ನೀವು ಆಡುತ್ತಿರುವಾಗ, ಅವನು ಅನ್​​ಫಿಟ್​ ಎಂದು ಯಾರಾದರೂ ಹೇಳುವುದನ್ನು ನೀವು ನಿಜವಾಗಿಯೂ ಬಯಸುವುದಿಲ್ಲ. ನಾನು ಕಿರಿಯ ಹುಡುಗರೊಂದಿಗೆ ಮುಂದುವರಿಯಬೇಕು, ಅವರು ತುಂಬಾ ಫಾಸ್ಟ್ ಇದ್ದಾರೆ, ಅವರಿಗೆ ಸವಾಲು ಹಾಕುವುದು ಒಂದು ರೀತಿ ಒಳ್ಳೆಯ ವಿಷಯ ಎಂದು ಧೋನಿ ಹೇಳುತ್ತಾರೆ.

ಆಟದಲ್ಲಿ ಉತ್ತಮ ಪ್ರದರ್ಶನ ಒಂದು ರೀತಿಯ ನಂಬಿಕೆ. ನಾನು 24 ವರ್ಷವನಿದ್ದಾಗ ನೀಡಿದ ಪ್ರದರ್ಶನದ ರೀತಿ ನಾನು 40 ವರ್ಷದವನಾದಾಗ ನೀಡುತ್ತೇನೆಂಬ ನಂಬಿಕೆ ಇಲ್ಲ. ಇದಕ್ಕಾಗಿ ಜನರು ನನ್ನ ಕಡೆ ಬೆರಳು ತೋರಿಸಿ ಅವನು ಅನ್​​ಫಿಟ್​ ಅಂದರೆ, ಅದು ನನಗೆ ದೊಡ್ಡ ಪಾಸಿಟಿವ್ ಇದ್ದ ಹಾಗೆ" ಎಂದು ಮಾಹಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.