ETV Bharat / sports

IPL ಪಂದ್ಯದ ವೇಳೆ ಕ್ರೀಡಾ ಸ್ಫೂರ್ತಿ ವಿವಾದ: ನಾನು ತಪ್ಪು ಮಾಡಿಲ್ಲ- ಅಶ್ವಿನ್ ಸ್ಪಷ್ಟನೆ

ಮಂಗಳವಾರ ನಡೆದ ಕೆಕೆಆರ್ ಪಂದ್ಯದ ವೇಳೆ ಪಂತ್​ ಜೊತೆ ಸಿಂಗಲ್​ ರನ್ ಪೂರ್ಣಗೊಳಿಸಿದ್ದ ಅಶ್ವಿನ್, ಫೀಲ್ಡರ್​ ಚೆಂಡನ್ನು ಥ್ರೋ ಮಾಡಿದ ನಂತರ ಮತ್ತೊಂದು ಸಿಂಗಲ್ ರನ್ ತೆಗೆದುಕೊಂಡಿದ್ದರು. ಆದರೆ ಚೆಂಡು ಡೆಲ್ಲಿ ನಾಯಕ ಪಂತ್​ಗೆ ತಾಗಿದ್ದರಿಂದ ಕೆಕೆಆರ್​ ನಾಯಕ ಮಾರ್ಗನ್, ಅಶ್ವಿನ್​ 2ನೇ ರನ್​ ತೆಗೆದುಕೊಂಡಿದ್ದನ್ನು ಪ್ರಶ್ನಿಸಿದ್ದರು.

Ashwin wades into the 'spirit of game' debate
ರವಿಚಂದ್ರನ್ ಅಶ್ವಿನ್
author img

By

Published : Sep 30, 2021, 5:34 PM IST

ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಅನುಭವಿ ಸ್ಪಿನ್ನರ್ ಅಶ್ವಿನ್​ ಚೆಂಡು ಬ್ಯಾಟರ್​ಗೆ ತಾಗಿದ ನಂತರವೂ ರನ್​ ತೆಗೆದುಕೊಂಡಿದ್ದ ವಿಚಾರವಾಗಿ ಭಾರತೀಯ ಸ್ಪಿನ್ನರ್​ ಮೇಲೆ ಕ್ರೀಡಾಸ್ಫೂರ್ತಿ ಮರೆತ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಸ್ಪಷ್ಟನೆ ನೀಡಿರುವ ಅಶ್ವಿನ್,​ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸರಣಿ ಟ್ವೀಟ್​ಗಳ​ ಮೂಲಕ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮಂಗಳವಾರ ನಡೆದ ಕೆಕೆಆರ್ ಪಂದ್ಯದ ವೇಳೆ ಪಂತ್​ ಜೊತೆ ಸಿಂಗಲ್ ರನ್​ ಪೂರ್ಣಗೊಳಿಸಿದ್ದ ಅಶ್ವಿನ್, ಫೀಲ್ಡರ್​ ಚೆಂಡನ್ನು ಥ್ರೋ ಮಾಡಿದ ನಂತರ ಮತ್ತೊಂದು ಸಿಂಗಲ್ ತೆಗೆದುಕೊಂಡಿದ್ದರು. ಆದರೆ ಚೆಂಡು ಡೆಲ್ಲಿ ನಾಯಕ ಪಂತ್​ಗೆ ತಾಗಿದ್ದರಿಂದ ಕೆಕೆಆರ್​ ನಾಯಕ ಮಾರ್ಗನ್, ಅಶ್ವಿನ್​ 2ನೇ ರನ್​ ತೆಗೆದುಕೊಂಡಿದ್ದನ್ನು ಪ್ರಶ್ನಿಸಿದ್ದರು. ನಂತರದ ಓವರ್​ನಲ್ಲಿ ಅಶ್ವಿನ್ ಔಟಾಗುತ್ತಿದ್ದಂತೆ ಮಾರ್ಗನ್ ಮತ್ತು ಸೌಥಿ ಇಬ್ಬರು ಅಶ್ವಿನ್​ ಜೊತೆಗೆ ಮಾತಿನ ಚಕಮಕಿ ನಡೆಸಿದ್ದರು. ಈ ಘಟನೆ ಅಂದು ಅಂತ್ಯವಾದರೂ ಅಶ್ವಿನ್ 2ನೇ ರನ್​ ತೆಗೆದುಕೊಂಡ ನಡೆಯನ್ನು ಶೇನ್​ವಾರ್ನ್​ ಸೇರಿದಂತೆ ಹಲವರು ಪ್ರಶ್ನಿಸಿ ಕ್ರೀಡಾಸ್ಫೂರ್ತಿ ಮರೆತು ವರ್ತಿಸಿದ್ದಾರೆ ಎಂದು ಹೇಳಿದ್ದರು.

  • 4. Did I fight?
    No, I stood up for myself and that’s what my teachers and parents taught me to do and pls teach your children to stand up for themselves.
    In Morgan or Southee’s world of cricket they can choose and stick to what they believe is right or wrong but do not have the

    — Mask up and take your vaccine🙏🙏🇮🇳 (@ashwinravi99) September 30, 2021 " class="align-text-top noRightClick twitterSection" data=" ">

ವಿವಾದ ಅತಿರೇಕಕ್ಕೆ ಹೋಗುತ್ತಿದ್ದಂತೆ ಅಶ್ವಿನ್​ ಸರಣಿ ಟ್ವೀಟ್​ಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಫೀಲ್ಡರ್​ ಚೆಂಡು ಎಸೆದಿದ್ದನ್ನು ನೋಡಿ 2ನೇ ರನ್​ಗಾಗಿ ನಾನು ತಿರುಗಿದೆ. ಆದರೆ ಚೆಂಡು ರಿಷಭ್​ ಪಂತ್​ಗೆ ತಾಗಿದೆ ಎಂಬುದು ನನಗೆ ಗೊತ್ತಿರಲಿಲ್ಲ. ನಾನು ನೋಡಿದರೆ ಓಡುತ್ತೇನೆಯೇ? ಸಹಜವಾಗಿಯೇ ನಾನು ಓಡಿದೆ ಮತ್ತು ಅದನ್ನು ನಾನು ಅನುಮತಿಸುತ್ತೇನೆ. ಮಾರ್ಗನ್​ ಹೇಳಿದ ಹಾಗೆ ನಾನು ನಾಚಿಕೆಗೇಡಿನವನಾ?. ಖಂಡಿತ ಇಲ್ಲ. ಎಂದು ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಇನ್ನು ಮಾರ್ಗನ್​ ಮತ್ತು ಸೌಥಿ ಜೊತೆಗೆ ಮಾತಿನ ಚಕಮಕಿ ನಡೆಸಿದ್ದರ ಬಗ್ಗೆ ಮತ್ತೊಂದು ಟ್ವೀಟ್​ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ನಾನು ಫೈಟ್ ಮಾಡಿದೆನಾ? ಇಲ್ಲ. ನನ್ನನ್ನು ನಾನು ಡಿಫೆಂಡ್​ ಮಾಡಿಕೊಳ್ಳಲು ಅವರೆದುರು ನಿಂತೆ. ನನ್ನ ಪೋಷಕರು ಮತ್ತು ಶಿಕ್ಷಕರು ಹೇಳಿಕೊಟ್ಟಿದ್ದನ್ನು ನಾನು ಮಾಡಿದ್ದೇನೆ. ನೀವು ಕೂಡ ನಿಮ್ಮ ಮಕ್ಕಳಿಗೆ ಅವರಿಗಾಗಿ ಅವರು ಯಾವಾಗಲು ನಿಲ್ಲುವುದನ್ನು ಕಲಿಸಿ. ಮಾರ್ಗನ್ ಮತ್ತು ಸೌಥಿ ಕ್ರಿಕೆಟ್ ಜಗತ್ತಿನಲ್ಲಿ ಅವರಿಗೆ ಸರಿ ಅಥವಾ ತಪ್ಪು ಎಂದು ನಂಬುವುದನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಅಂಟಿಕೊಳ್ಳಬಹುದು. ಆದರೆ ಅವಹೇಳನಕಾರಿ ಪದಗಳನ್ನು ಬಳಸುವ ಹಕ್ಕನ್ನು ಅವರು ಹೊಂದಿಲ್ಲ ಎಂದು ಮತ್ತೊಂದು ಟ್ವೀಟ್​ನಲ್ಲಿ ತಾವೂ ಮಾತಿನ ಚಕಮಕಿ ನಡೆಸಿದ್ದಕ್ಕೆ ಕಾರಣ ಬಹಿರಂಗಪಡಿಸಿದ್ದಾರೆ.

ವಾರ್ನ್ ಅವರು​ ಅಶ್ವಿನ್ ಕ್ರೀಡಾ ಸ್ಫೂರ್ತಿಯನ್ನು ಕಡೆಗಣಿಸಿದ್ದಾರೆ ಎಂದು ಟ್ವೀಟ್ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ ಪರ್ತ್​ ಜಿಂದಾಲ್ ಮತ್ತು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, 2019ರ ಫೈನಲ್​ನಲ್ಲಿ ಫಿಲ್ಡರ್​ ಎಸೆದ ಚೆಂಡು ಬೆನ್​ ಸ್ಟೋಕ್ಸ್​ ಬ್ಯಾಟ್​ಗೆ ಬಡಿದು ಬೌಂಡರಿ ಸೇರಿದಾಗ ಏಕೆ 5 ತೆಗೆದುಕೊಂಡಿರಿ. ಅವಾಗ ಕೂಡ ಮಾರ್ಗನ್​ ಅವರೇ ನಾಯಕರಾಗಿದ್ದರಲ್ಲವೇ?. ಕ್ರೀಡಾ ಸ್ಪೂರ್ತಿಯಿಂದ 4 ರನ್​ ಅನ್ನು ಹಿಂತಿರುಗಿಸಬೇಕಾಗಿತ್ತು ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಟಿ-20 ವಿಶ್ವಕಪ್‌ಗೆ ರೋಹಿತ್ ಶರ್ಮಾ ನಾಯಕನಾಗುವುದು ಉತ್ತಮ: ಗವಾಸ್ಕರ್ ಅಭಿಪ್ರಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.