ETV Bharat / sports

ಮಹಾರಾಜ ಟ್ರೋಫಿ: ಅಭಿಮನ್ಯು ಮಿಥುನ್‌ ಘರ್ಜನೆಗೆ ಗೆದ್ದ ಟೈಗರ್ಸ್‌

author img

By

Published : Aug 10, 2022, 11:55 AM IST

maharaja cricket trophy: ಮಳೆಯ ಅಡ್ಡಿಯ ನಡುವೆಯೂ ಬೆಂಗಳೂರು ಬ್ಲಾಸ್ಟರ್ಸ್​ ವಿರುದ್ಧದ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್​ ತಂಡ 6 ವಿಕೆಟ್​ಗಳ ಜಯ ಸಾಧಿಸಿತು.

hubballi-tigers-win-against-bangalore-blasters
ಮಹಾರಾಜ ಟ್ರೋಫಿ

ಮೈಸೂರು: ಅಭಿಮನ್ಯುವಿನಂತೆ ಹೋರಾಡಿದ ಮಿಥುನ್‌ ಬಾರಿಸಿದ ಅಜೇಯ ಅರ್ಧಶತಕದ ಸಾಹಸದಿಂದ ಹುಬ್ಬಳ್ಳಿ ಟೈಗರ್ಸ್‌ ತಂಡ ಮಹಾರಾಜ ಟ್ರೋಫಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ 4 ವಿಕೆಟ್‌ ಅಂತರದಲ್ಲಿ ಜಯ ಗಳಿಸಿದೆ. ನಾಯಕ ಮಿಥುನ್‌ 22 ಎಸೆತಗಳನ್ನು ಎದುರಿಸಿ 5 ಸಿಕ್ಸರ್‌ ಹಾಗೂ 2 ಬೌಂಡರಿ ನೆರವಿನಿಂದ ಮಿಂಚಿನ 51 ರನ್‌ ಗಳಿಸಿ ಜಯದ ರೂವಾರಿ ಎನಿಸಿದರು. ಮಳೆಯ ಕಾರಣಕ್ಕಾಗಿ ವಿಜೆಡಿ ನಿಯಮದಂತೆ ಹುಬ್ಬಳ್ಳಿ ಟೈಗರ್ಸ್‌ಗೆ 16 ಓವರ್‌ಗಳಲ್ಲಿ 137 ರನ್‌ ಗುರಿ ನೀಡಲಾಗಿತ್ತು. ಟೈಗರ್ಸ್ 15.5 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಿತು.

maharaja cricket trophy: 137 ರನ್‌ ಜಯದ ಗುರಿ ಹೊತ್ತ ಹುಬ್ಬಳ್ಳಿ ಟೈಗರ್ಸ್‌ ಆರಂಭ ಉತ್ತಮವಾಗಿರಲಿಲ್ಲ. 18 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ತಂಡಕ್ಕೆ ಶಿಶಿರ್‌ ಭವಾನೆ ಮತ್ತು ಶಿವಕುಮಾರ್‌ ಕೆಲ ಹೊತ್ತು ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ ಜೊತೆಯಾಟದ ಭರವಸೆ ಮೂಡಿಸಿದ್ದರು. ಆದರೆ, 16 ರನ್‌ ಗಳಿಸಿ ಆಡುತ್ತಿದ್ದ ಭವಾನೆ ಬೆಂಗಳೂರಿನ ಸುಚಿತ್‌ ಎಸೆತದಲ್ಲಿ ಸ್ಟಂಪ್‌ ಆಗುವ ಮೂಲಕ ತಂಡ ಮತ್ತೊಂದು ಆಘಾತ ಅನುಭವಿಸಿತು. 4 ಬೌಂಡರಿ ಸಿಡಿಸುವ ಮೂಲಕ ಶಿವಕುಮಾರ್‌ ಜಯದ ಹಾದಿಯನ್ನು ತೋರಿಸಿದ್ದರು. ಆದರೆ, ಸುಚಿತ್‌ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಲೀನ್‌ ಬೌಲ್ಡ್‌ ಆಗುವ ಮೂಲಕ ಪೆವಿಲಿಯನ್‌ ಸೇರಿದರು. ಶಿವಕುಮಾರ್‌ 30 ರನ್‌ ಗಳಿಸಿದರು.

ಬೆಂಗಳೂರು ಸಾಧಾರಣ ಮೊತ್ತ: ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಬೆಂಗಳೂರು ಬ್ಲಾಸ್ಟರ್ಸ್‌ ಪರ ನಾಯಕ ಮಯಾಂಕ್‌ ಅಗರವಾಲ್‌ (43) ಹೊರತುಪಡಿಸಿದರೆ ಉಳಿದ ಆಟಗಾರರು ನಿರೀಕ್ಷಿತ ಪ್ರಮಾಣದಲ್ಲಿ ಪ್ರದರ್ಶನ ತೋರಲಿಲ್ಲ. ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಮಯಾಂಕ್‌ ಅಗರ್​ವಾಲ್​ 38 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 43 ರನ್‌ ಗಳಿಸಿದರು.

ಜಗದೀಶ್‌ ಸುಚಿತ್‌ (12*) ಮತ್ತು ಶಿವಕುಮಾರ್‌ ರಕ್ಷಿತ್‌ (15*) ಗಳಿಸಿ ಆಡುತ್ತಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿತು. ಬೆಂಗಳೂರು 119 ರನ್‌ಗಳಿಸಿತ್ತು. ಪಂದ್ಯವನ್ನು 16 ಓವರ್‌ಗಳಿಗೆ ಇಳಿಸಿ, 137 ರನ್​ಗಳ ಗುರಿ ನೀಡಲಾಯಿತು.

ಹುಬ್ಬಳ್ಳಿ ಟೈಗರ್ಸ್‌ ಪರ ಸೌರಭ್‌ ಶ್ರೀವಾಸ್ತವ್‌ 31ಕ್ಕೆ 2 ವಿಕೆಟ್‌ ಗಳಿಸಿದರೆ, ವಾಸುಕಿ ಕೌಶಿಕ್‌, ಜಹೂರ್‌ ಫಾರೂಖಿ ಮತ್ತು ಶಿವಕುಮಾರ್‌ ತಲಾ 1 ವಿಕೆಟ್‌ ಗಳಿಸಿ ಬೆಂಗಳೂರಿನ ರನ್‌ ಗಳಿಕೆಗೆ ಕಡಿವಾಣ ಹಾಕಿದರು.

ಸಂಕ್ಷಿಪ್ತ ಸ್ಕೋರ್:‌ ಬೆಂಗಳೂರು ಬ್ಲಾಸ್ಟರ್ಸ್‌: 16 ಓವರ್‌ಗಳಲ್ಲಿ 5 ವಿಕೆಟ್‌ಗೆ 119. (ಮಯಾಂಕ್‌ ಅಗರ್ವಾಲ್‌ 43, ಅನೀಶ್‌ 14, ಸೂರಜ್‌ ಅಹುಜಾ 20, ಸುಚಿತ್‌ 12*, ರಕ್ಷಿತ್‌ 15*, ಶ್ರೀವಾಸ್ತವ್‌ 31ಕ್ಕೆ 2)

ಹುಬ್ಬಳ್ಳಿ ಟೈಗರ್ಸ್‌: 15.5 ಓವರ್‌ಗಳಲ್ಲಿ 139, (ಅಭಿಮನ್ಯು ಮಿಥುನ್‌ 51*, ಶಿವಕುಮಾರ್‌ 30, ಭವಾನೆ 16, ಸೋಲಂಕಿ 13, ಸುಚಿತ್‌ 21ಕ್ಕೆ 2)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.