ಬೆಂಗಳೂರು : ರೋಚಕ ಫೈನಲ್ ಕಾದಾಟದಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು 8 ರನ್‌ಗಳಿಂದ ಸೋಲಿಸಿದ ಹುಬ್ಬಳ್ಳಿ ಟೈಗರ್ಸ್ ಮಹಾರಾಜ ಟ್ರೋಫಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೈಸೂರು ಬೌಲರ್‌ಗಳ ವಿರುದ್ಧ ಬ್ಯಾಟಿಂಗ್ನಲ್ಲಿ ಮೇಲುಗೈ ಸಾಧಿಸಿದ ಮೊಹಮ್ಮದ್ ತಾಹಾ, ಮನೀಶ್ ಪಾಂಡೆ ಹಾಗೂ ಮನ್ವಂತ್ ಕುಮಾರ್ ಉತ್ತಮ ಬೌಲಿಂಗ್ ನೆರವಿನಿಂದ ಹುಬ್ಬಳ್ಳಿ ಗೆದ್ದು ಬೀಗಿತು.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಹುಬ್ಬಳ್ಳಿ ಟೈಗರ್ಸ್ ಮೊದಲು ಬ್ಯಾಟ್ ಮಾಡಿತು. ಎರಡನೇ ಎಸೆತದಲ್ಲೇ ಲವನಿತ್ ಸಿಸೋಡಿಯಾ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಆದರೆ, ಆರಂಭಿಕರಾದ ಮೊಹಮ್ಮದ್ ತಾಹಾ ಹಾಗೂ ಕೆ.ಎಲ್ ಶ್ರೀಜಿತ್ ಜೋಡಿ 6 ಓವರ್‌ಗಳಲ್ಲಿ 7 ಬೌಂಡರಿಗಳೊಂದಿಗೆ 59 ರನ್ ಗಳಿಸಿ ಪವರ್‌ಪ್ಲೇನ ಸಂಪೂರ್ಣ ಲಾಭ ಪಡೆಯಿತು. ಈ ಹಂತದಲ್ಲಿ 31 ಎಸೆತಗಳಲ್ಲಿ 38 ರನ್ ಗಳಿಸಿದ್ದ ಕೆಎಲ್ ಶ್ರೀಜಿತ್ರನ್ನ 12ನೇ ಓವರ್‌ನಲ್ಲಿ ಜೆ.ಸುಚಿತ್ ಪೆವಿಲಿಯನ್ಗೆ ಕಳುಹಿಸಿದರು.
-
ಹುಲಿಗಳೇ ಕಾಡಿನ ಹೊಸ ರಾಜರು! 🐯🔥#TheFinal #IlliGeddavareRaja #MaharajaTrophy #KSCA #Karnataka pic.twitter.com/5K3DBP7DgV
— Maharaja Trophy T20 (@maharaja_t20) August 29, 2023 " class="align-text-top noRightClick twitterSection" data="
">ಹುಲಿಗಳೇ ಕಾಡಿನ ಹೊಸ ರಾಜರು! 🐯🔥#TheFinal #IlliGeddavareRaja #MaharajaTrophy #KSCA #Karnataka pic.twitter.com/5K3DBP7DgV
— Maharaja Trophy T20 (@maharaja_t20) August 29, 2023ಹುಲಿಗಳೇ ಕಾಡಿನ ಹೊಸ ರಾಜರು! 🐯🔥#TheFinal #IlliGeddavareRaja #MaharajaTrophy #KSCA #Karnataka pic.twitter.com/5K3DBP7DgV
— Maharaja Trophy T20 (@maharaja_t20) August 29, 2023
ಮತ್ತೊಂದೆಡೆ 27 ಎಸೆತಗಳಲ್ಲಿ ಅರ್ಧ ಶತಕವನ್ನು ಗಳಿಸಿದ ತಾಹಾ 70 ರನ್ ಗಳಿಸಿದ್ದಾಗ ಕುಶಾಲ್ ವಾಧ್ವಾನಿಗೆ ವಿಕೆಟ್ ನೀಡಿದರು. ನಂತರ ಅಖಾಡಕ್ಕಿಳಿದ ನಾಯಕ ಮನೀಶ್ ಪಾಂಡೆ 23 ಎಸೆತಗಳಲ್ಲಿ 50* ರನ್ ಗಳಿಸುವ ಮೂಲಕ ಹುಬ್ಬಳ್ಳಿಯ ರನ್ ದ್ವಿಶತಕ ತಲುಪುವಂತೆ ಮಾಡಿದರು. ಸಂಜಯ್ ಅಶ್ವಿನ್ (16) ಗಾಯಗೊಂಡು ಹೊರ ನಡೆದರೆ, ಪ್ರವೀಣ್ ದುಬೆ 4 ಮನ್ವಂತ್ ಕುಮಾರ್ 14 ರನ್ ಗಳಿಸಿ ಔಟಾದರು. ಮನೀಶ್ ಪಾಂಡೆ ಅಜೇಯರಾಗಿ ಉಳಿಯುವ ಮೂಲಕ ಹಬ್ಬಳ್ಳಿ ತಂಡವು 8 ವಿಕೆಟ್ ನಷ್ಟಕ್ಕೆ 203 ರನ್ ಬಾರಿಸಿತು.
-
𝗧𝗛𝗔𝗧 𝗖𝗛𝗔𝗠𝗣𝗜𝗢𝗡 𝗙𝗘𝗘𝗟𝗜𝗡𝗚 🏆#TheFinal #IlliGeddavareRaja #MaharajaTrophy #KSCA #Karnataka pic.twitter.com/rDU08un6uJ
— Maharaja Trophy T20 (@maharaja_t20) August 29, 2023 " class="align-text-top noRightClick twitterSection" data="
">𝗧𝗛𝗔𝗧 𝗖𝗛𝗔𝗠𝗣𝗜𝗢𝗡 𝗙𝗘𝗘𝗟𝗜𝗡𝗚 🏆#TheFinal #IlliGeddavareRaja #MaharajaTrophy #KSCA #Karnataka pic.twitter.com/rDU08un6uJ
— Maharaja Trophy T20 (@maharaja_t20) August 29, 2023𝗧𝗛𝗔𝗧 𝗖𝗛𝗔𝗠𝗣𝗜𝗢𝗡 𝗙𝗘𝗘𝗟𝗜𝗡𝗚 🏆#TheFinal #IlliGeddavareRaja #MaharajaTrophy #KSCA #Karnataka pic.twitter.com/rDU08un6uJ
— Maharaja Trophy T20 (@maharaja_t20) August 29, 2023
ಚಾಂಪಿಯನ್ ಪಟ್ಟಕ್ಕಾಗಿ 204 ರನ್‌ಗಳ ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್ ಮೊದಲ 5 ಓವರ್‌ಗಳಲ್ಲಿ 56 ರನ್ ಗಳಿಸುವ ಮೂಲಕ ಹುಬ್ಬಳ್ಳಿಗೆ ತಕ್ಕ ತಿರುಗೇಟು ನೀಡಿತು. ಬಳಿಕ ಎಸ್‌ಯು ಕಾರ್ತಿಕ್ (28) ರನ್ ಗಳಿಸಿದ್ದಾಗ ಮಿತ್ರಕಾಂತ್ ಯಾದವ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ನಾಯಕ ಕರುಣ್ ನಾಯರ್, ರವಿಕುಮಾರ್ ಸಮರ್ಥ್ ಜೊತೆಗೂಡಿ ಉತ್ತಮ ಜೊತೆಯಾಟವಾಡಿದರು. ಈ ಹಂತದಲ್ಲಿ ಸಮರ್ಥ್ ಅರ್ಧಶತಕ ಪೂರೈಸಿದರು. ಆದರೆ, 12ನೇ ಓವರ್‌ನಲ್ಲಿ ಮನ್ವಂತ್ ಕುಮಾರ್ ಬೌಲಿಂಗ್‌ನಲ್ಲಿ ಅದ್ಭುತ ರನ್ ಔಟಿಗೆ ಸಮರ್ಥ್ (63) ಬಲಿಯಾದರು. ಕರುಣ್ ನಾಯರ್ (37) ಕೆ.ಸಿ ಕಾರಿಯಪ್ಪ ಅವರ ಓವರ್‌ನಲ್ಲಿ ಔಟಾದರು.
ಕೊನೆಯಲ್ಲಿ ಮೈಸೂರು ತಂಡದ ಗೆಲುವಿಗೆ 7 ಓವರ್‌ಗಳಲ್ಲಿ 69 ರನ್‌ಗಳ ಅಗತ್ಯವಿತ್ತು. ಕೆಎಸ್ ಲಂಕೇಶ್ (13), ಮನೋಜ್ ಭಾಂಡಗೆ (0) ಮತ್ತು ಸಿಎ ಕಾರ್ತಿಕ್ (18) ಕ್ರಮವಾಗಿ 16, 17 ಮತ್ತು 18ನೇ ಓವರ್‌ಗಳಲ್ಲಿ ವಿಕೆಟ್ ಒಪ್ಪಿಸಿದರು. ಮೈಸೂರು ತಂಡಕ್ಕೆ ಕೊನೆಯ ಎರಡು ಓವರ್‌ಗಳಲ್ಲಿ ಗೆಲುವಿಗೆ 26 ರನ್ ಅಗತ್ಯವಿತ್ತು. ಅಂತಿಮ ಓವರ್‌ನಲ್ಲಿ ಕೇವಲ 3 ರನ್ ನೀಡಿ 2 ವಿಕೆಟ್ ಪಡೆದ ಮನ್ವಂತ್ ಕುಮಾರ್ ಉತ್ತಮವಾಗಿ ನಿಭಾಯಿಸಿದರು.
ನಾಯಕ ಮನೀಶ್ ಅದ್ಭುತ ಫೀಲ್ಡಿಂಗ್: ಕೊನೆಯ ಓವರ್‌ನಲ್ಲಿ ಮನೀಶ್ ಪಾಂಡೆಯ ಅದ್ಭುತ ಫೀಲ್ಡಿಂಗ್ ಅಭಿಮಾನಿಗಳ ಹರ್ಷೋದ್ಗಾರಕ್ಕೆ ಕಾರಣವಾಯಿತು. ಬೌಂಡರಿ ಲೈನ್ನಲ್ಲಿ ಜಿಗಿದು ಚೆಂಡು ತಡೆಯುವ ಮೂಲಕ ಸಿಕ್ಸರ್ ಉಳಿಸಿದ ಮನೀಶ್ ಪಾಂಡೆಯ ಪಂದ್ಯದ ಗತಿಯನ್ನೇ ಬದಲಿಸಿದರು. ಅಂತಿಮವಾಗಿ ಹುಬ್ಬಳ್ಳಿ ಟೈಗರ್ಸ್ ಮೈಸೂರು ವಾರಿಯರ್ಸ್ ಅನ್ನು 8 ರನ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಸಂಕ್ಷಿಪ್ತ ಸ್ಕೋರ್: ಹುಬ್ಬಳ್ಳಿ ಟೈಗರ್ಸ್ - 203/8 (20 ಓವರ್); ಮೊಹಮ್ಮದ್ ತಾಹಾ - 72 (40), ಮನೀಶ್ ಪಾಂಡೆ - 50* (23), ಸಿ.ಎ ಕಾರ್ತಿಕ್ - 2/33-3, ಜಗದೀಶ ಸುಚಿತ್ - 1/24-4
ಮೈಸೂರು ವಾರಿಯರ್ಸ್ - 195/8 (20), ರವಿಕುಮಾರ್ ಸಮರ್ಥ್ - 63 (35), ಕರುಣ್ ನಾಯರ್ - 37 (20), ಮನ್ವಂತ್ ಕುಮಾರ್.ಎಲ್ - 3/32-4, ವಿದ್ವತ್ ಕಾವೇರಪ್ಪ - 2/40-4; ಪಂದ್ಯ ಶ್ರೇಷ್ಠ - ಮನೀಶ್ ಪಾಂಡೆ; ಸರಣಿ ಶ್ರೇಷ್ಠ - ಮೊಹಮ್ಮದ್ ತಾಹಾ
ಇದನ್ನೂ ಓದಿ: Asia Cup 2023: ಇಂದಿನಿಂದ ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನ.. ಕಪ್ ಗೆಲ್ಲುವಲ್ಲಿ ಯಾರು ಫೇವ್ರೆಟ್?